ಶಿಕ್ಷಣಾಧಿಕಾರಿಗಳ ವರ್ಗಾವರ್ಗಿ
ಮೈಸೂರು

ಶಿಕ್ಷಣಾಧಿಕಾರಿಗಳ ವರ್ಗಾವರ್ಗಿ

January 18, 2019

ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವರ್ಗಿಯಾಗಿದೆ.

ಮೈಸೂರು ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಡಿ.ಉದಯ್‍ಕುಮಾರ್, ಮೈಸೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಆ ಸ್ಥಾನದಲ್ಲಿದ್ದ ಶಿವರಾಂ ಉಪ ನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿಯಾಗಿ ವರ್ಗಾವರ್ಗಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲಾ ಸರ್ವ ಶಿಕ್ಷಣಾ ಅಭಿಯಾನದ ಉಪ ಯೋಜನಾ ಸಮನ್ವಯಾಧಿಕಾರಿ ಎನ್.ಗುರುಲಿಂಗಯ್ಯ ಮಂಗಳೂರು ಡಯಟ್ ಹಿರಿಯ ಉಪ ನ್ಯಾಸಕರಾಗಿ, ಕೊಡಗು ಜಿಲ್ಲೆಯ ಕೂಡಿಗೆ ಡಯಟ್ ಉಪನ್ಯಾಸಕಿ ಶ್ರೀಶೈಲ ಬೀಳಗಿ ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಚಿಕ್ಕಮಗಳೂರು ಡಯಟ್ ಹಿರಿಯ ಉಪನ್ಯಾಸಕ ಸಿ.ಎಂ.ಹೊನ್ನರಾಜು ಮಂಡ್ಯ ಡಯಟ್‍ಗೆ, ಮಂಗಳೂರು ಹಂಪನ ಕಟ್ಟೆ ಸರ್ಕಾರಿ ಶಿಕ್ಷಕ ಶಿಕ್ಷಣ ಉಪನ್ಯಾಸಕ ಮರಿಸ್ವಾಮಿ, ಮೈಸೂರು ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯಕ್ಕೆ ವರ್ಗಾವಣೆಯಾಗಿದ್ದಾರೆ.

Translate »