ಮೈಸೂರಿನಲ್ಲಿ ನಾಳೆಯಿಂದ ಜ.30ರವರೆಗೆ   `ಕಲಾಭಿವರ್ಧನ’ ನೃತ್ಯ, ಸಂಗೀತ ಕಾರ್ಯಕ್ರಮ
ಮೈಸೂರು

ಮೈಸೂರಿನಲ್ಲಿ ನಾಳೆಯಿಂದ ಜ.30ರವರೆಗೆ `ಕಲಾಭಿವರ್ಧನ’ ನೃತ್ಯ, ಸಂಗೀತ ಕಾರ್ಯಕ್ರಮ

January 18, 2019

ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಜ.19ರಿಂದ 30ರವರೆಗೆ `ಕಲಾಭಿವರ್ಧನ-2019′ ಭಾರತೀಯ ಕಲೆಗಳ ಆರಾಧನಾ ಪರ್ವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಲಾಸಂದೇಶ ಪ್ರತಿಷ್ಠಾನದ ಟ್ರಸ್ಟಿ ರಾಧಿಕಾ ಸಂದೇಶ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷವೂ ಕಲಾ ಸಂದೇಶ ಪ್ರತಿಷ್ಠಾನದ ವತಿಯಿಂದ ಕಲಾಭಿವರ್ಧನ ಕಾರ್ಯ ಕ್ರಮ ನಡೆಸಲಾಗುತ್ತಿದ್ದು, ನಾಟ್ಯ ಹಾಗೂ ಸಂಗೀತ ಮೇಳೈಸಲಿದೆ. ಜ.19ರಂದು ಸಂಜೆ 5.30ಕ್ಕೆ ಜಗನ್ಮೋಹನ ಅರಮನೆ ಸಭಾಂ ಗಣದಲ್ಲಿ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಕಲಾಭಿವರ್ಧನ ಹಾಗೂ ಕಲಾ ಶಾಸ್ತ್ರೋ ತ್ತುಂಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಾರಣಾಸಿಯ ಇಂದಿರಾ ಗಾಂಧಿ ರಾಷ್ಟ್ರೀಯ ಸಾಂಸ್ಕøತಿಕ ಸಂಸ್ಥೆ ನಿರ್ದೇಶಕ ಡಾ.ವಿಜಯ ಶಂಕರ್ ಶುಕ್ಲ ಉದ್ಘಾಟಿಸಲಿದ್ದಾರೆ. ಉದ್ಯಮಿ ಕಲಾಸೇವಾರತ್ನ ಕೆ.ವಿ.ಮೂರ್ತಿ ಹಾಗೂ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಖ್ಯಾತ ಸಂಗೀತ ಹಾಗೂ ನೃತ್ಯ ಪ್ರವೀಣ ಪದ್ಮಶ್ರೀ ಪುರಸ್ಕøತ ಡಾ.ರಾ.ಸತ್ಯನಾರಾಯಣ ಅವರಿಗೆ ಕಲಾ ಶಾಸ್ತ್ರೋ ತ್ತುಂಗ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನಂತರ ಡಾ.ರಾ. ಸ.ನಂದಕುಮಾರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಡಾ.ವಸುಂಧರಾ ದೊರೆಸ್ವಾಮಿ ತಂಡದಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ. ಜ.20ರಂದು ಸಂಜೆ 6ಕ್ಕೆ, ಕೆ. ಸಂದೇಶ್ ಭಾರ್ಗವ್ ಅವರಿಂದಏಕವ್ಯಕ್ತಿ ನೃತ್ಯರೂಪಕ: `ಪ್ರಶ್ನಾತೀತ ಕೃಷ್ಣ’ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ನಾದಬ್ರಹ್ಮ ಸಂಗೀತ ಸಭಾ: ಜ.21ರಂದು ಸಂಜೆ 6ಕ್ಕೆ ಗೌತಮಿ ಫೌಂಡೇಷನ್ ಅವರಿಂದ ಮಹಾಪೌರ್ಣಿಮೆ (ಅಮ್ರಪಾಲಿಯ ಕಥೆ) ನಾಟಕ ಪ್ರದರ್ಶನವಾಗಲಿದೆ. 22ರಂದು ಸಂಜೆ 6ಕ್ಕೆ ಬೆಂಗ ಳೂರಿನ ಎನ್.ಗುರುರಾಜ್ ಅವರಿಂದ ಕೂಚಿಪುಡಿ, ನಂತರ ಕೋಲ್ಕತ್ತ ಕೌಶಿಕ್ ದಾಸ್ ತಂಡದಿಂದ ಒಡಿಸ್ಸಿ, ಬೆಂಗಳೂರಿನ ಲಕ್ಷ್ಮಿನಾರಾ ಯಣ ಜೇನ ತಂಡದಿಂದ ಕಥಕ್ ನೃತ್ಯಗಳು ರೂಪಗಳು ಪ್ರದ ರ್ಶನವಾಗಲಿವೆ. ಜ.23ರಂದು ಸಂಜೆ 6ಕ್ಕೆ ಬೆಂಗಳೂರಿನ ಕಾಂಚನ ಸಹೋದರಿಯರು'- ರಂಜಿನಿ ಹಾಗೂ ಶ್ರುತಿ ರಂಜಿನಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, 24ರಂದು ಸಂಜೆ 5.30ಕ್ಕೆ, ಡಾ. ಶೀಲಾ ಶ್ರೀಧರ್ ಹಾಗೂ ತಂಡದಿಂದಚಿಂತನ ರಾಮಾಯಣ’ ನೃತ್ಯರೂಪಕ ನಡೆಯಲಿದೆ. 25ರಂದು ಸಂಜೆ 6ಕ್ಕೆ, ಬೆಂಗಳೂರಿನ ಡಾ.ಎಂ.ಆರ್.ಸತ್ಯನಾರಾಯಣ ತಂಡದಿಂದ ತೊರವೆ ರಾಮಾಯಣದಲ್ಲಿ ಸೀತಾ ಕಲ್ಯಾಣ' ಗಮಕ ಕಾರ್ಯ ಕ್ರಮ ಜರುಗಲಿದ್ದು, ನಂತರ ಶ್ರೇಯ ಕೆ.ಭಟ್ ಹಾಗೂ ನವನೀತ್ ಕೃಷ್ಣನ್ ಅವರಿಂದಭಕ್ತಿ ಸಂಗೀತ’ ಕಾರ್ಯಕ್ರಮ ನಡೆಯಲಿದೆ. ಜ.28ರಂದು ಸಂಜೆ 6ಕ್ಕೆ ಹೆಚ್.ಎಲ್.ಶಿವಶಂಕರಸ್ವಾಮಿ ಮತ್ತು ತಂಡದಿಂದ ಲಯ ಲಹರಿ', 29ರಂದು ಸಂಜೆ 6ಕ್ಕೆ, ಪುತ್ತೂರಿನ ದೀಶಕ್ತಿ ಮಹಿಳಾ ಯಕ್ಷಬಳಗದಿಂದ ಯಕ್ಷಗಾನ ತಾಳಮದ್ದಳೆ:ಭಕ್ತ ಸುಧನ್ವ’ ನಡೆದರೆ. ಜ.30ರಂದು ಸಂಜೆ 6ಕ್ಕೆ ಹಾಸನದ ಏಕತಾರಿ ಸಾಂಸ್ಕøತಿಕ ಸಂಘಟನೆ ಯಿಂದ `ಜಾನಪದ ಗೀತೆ’ ನೃತ್ಯ ರೂಪಕ ನಡೆಯಲಿದೆ ಎಂದರು.

ಶ್ರೀಮತಿ ರಮಾಬಾಯಿ ಗೋವಿಂದ ಭವನ: ಜ.27ರಂದು ಸಂಜೆ 5.30ಕ್ಕೆ, ಗಾನಭಾರತೀ ವೀಣೆ ಶೇಷಣ್ಣ ಭವನದ ಶ್ರೀಮತಿ ರಮಾಬಾಯಿ ಗೋವಿಂದರಾವ್ ರಂಗಮಂದಿರದಲ್ಲಿ ಕೆ.ಸಂದೇಶ್ ಭಾರ್ಗವ್ ಮತ್ತು ತಂಡದಿಂದ `ವಿಶ್ವಾಮಿತ್ರ ಗಾಯತ್ರಿ’ ನೃತ್ಯರೂಪಕ ಪ್ರದರ್ಶನ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಲಾವಿದ ರಾದ ವಸುಂಧರ ಫಣೀಶ್, ನಂಜುಂಡಸ್ವಾಮಿ, ಚಂದ್ರಕಲಾ ಇದ್ದರು.

Translate »