ಮೈಸೂರು: ಮೈಸೂರಿನ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ವರ್ಗಾವಣೆಯಾಗಿದ್ದು, ಇವರ ಜಾಗಕ್ಕೆ ಸ್ಥಳ ನಿರೀಕ್ಷಣೆಯಲ್ಲಿದ್ದ ಹಿರಿಯ ಕೆಎಎಸ್ ಅಧಿಕಾರಿ ಬಿ.ಆರ್.ಪೂರ್ಣಿಮ ಅವರನ್ನು ನೇಮಿಸ ಲಾಗಿದೆ. ಇವರೊಂದಿಗೆ ಬಾಗಲ ಕೋಟೆ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಅವರನ್ನು ಬೆಳಗಾವಿ ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ, ಬಾಗಲಕೋಟೆ ಜಿಪಂ ಉಪ ಕಾರ್ಯದರ್ಶಿ ದುರಗೇಶ್‍ರನ್ನು ಬಾಗಲಕೋಟೆ ಅಪರ ಜಿಲ್ಲಾಧಿಕಾರಿಯಾಗಿ, ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ರಾಜಶೇಖರ ಡಂಬಳ ಅವರನ್ನು ಲಿಂಗಸಗೂರು ಉಪ ವಿಭಾಗಾಧಿಕಾರಿಯಾಗಿಯಾಗಿ, ಆ ಸ್ಥಾನದಲ್ಲಿದ್ದ ಎಂ.ಪಿ.ಮಾರುತಿ ಅವರನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರಧಾನ ವ್ಯವ ಸ್ಥಾಪಕರಾಗಿ ವರ್ಗಾವಣೆ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ.