ಮೈಸೂರು ವೆಲ್ಫೇರ್ ಟ್ರಸ್ಟ್‍ನಿಂದ ಸ್ವಚ್ಛತಾ ಅಭಿಯಾನ
ಮೈಸೂರು

ಮೈಸೂರು ವೆಲ್ಫೇರ್ ಟ್ರಸ್ಟ್‍ನಿಂದ ಸ್ವಚ್ಛತಾ ಅಭಿಯಾನ

January 18, 2019

ಮೈಸೂರು: ಸ್ವಚ್ಛ ಅಭಿಯಾನದ ಹಿನ್ನೆಲೆಯಲ್ಲಿ ಮೈಸೂರಿ ನಲ್ಲಿ ಗುರುವಾರ ಮೈಸೂರು ವೆಲ್ಫೇರ್ ಟ್ರಸ್ಟ್ ನೇತೃತ್ವದಲ್ಲಿ ನೂರಾರು ಸ್ವಯಂ ಸೇವಕರು, ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ನಡೆಸಿ ಗಮನ ಸೆಳೆದರು.

ಸ್ವಚ್ಛತಾ ಅಭಿಯಾನಕ್ಕೆ ಇಂದು ಬೆಳಿಗ್ಗೆ ಕೋಟೆ ಆಂಜನೇಯಸ್ವಾಮಿ ದೇವಾಲ ಯದ ಬಳಿ ಚಾಲನೆ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು, ಸಾಂಸ್ಕøತಿಕ ನಗರಿಯೂ ಆಗಿರುವ ಮೈಸೂರು ನಗರ ದೇಶ-ವಿದೇಶಗಳ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. 2 ವರ್ಷಗಳ ಹಿಂದೆ ದೇಶದಲ್ಲಿಯೇ ನಂ.1 ಸ್ವಚ್ಛ ನಗರ ಸ್ಥಾನ ಪಡೆದಿತ್ತು. ಸಾರ್ವಜನಿಕರ ಪಾಲ್ಗೊ ಳ್ಳುವಿಕೆ ಕೊರತೆಯಿಂದಾಗಿ 2 ವರ್ಷದಿಂದ ಕಡಿಮೆ ಅಂಕ ದೊರೆತು ಮೊದಲ ಸ್ಥಾನ ಕಳೆದುಕೊಳ್ಳುವಂತಾಗಿದೆ. ಈ ಹಿನ್ನೆಲೆ ಯಲ್ಲಿ ಪ್ರಸ್ತುತ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ನಗರವೂ ಪಾಲ್ಗೊಂಡಿದ್ದು, ಈ ಬಾರಿ ದೇಶದ ಮೊದಲನೇ ಸ್ವಚ್ಛ ನಗರ ಎಂಬ ಕೀರ್ತಿ ಮೈಸೂರಿಗೆ ದೊರಕಿಸಿ ಕೊಡುವುದಕ್ಕೆ ಪೌರಕಾರ್ಮಿಕರು ಶ್ರಮಿಸು ತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ನಾಗರಿಕರು ತಮ್ಮ ಮನೆ ಹಾಗೂ ಸುತ್ತಮುತ್ತ ಸ್ವಚ್ಛ ಪರಿಸರ ಕಾಪಾಡÀ ಬೇಕು. ಎಲ್ಲೆಂದರಲ್ಲಿ ಕಸ ಬಿಸಾಡಬಾರದು, ಮನೆಗಳಲ್ಲಿ ಹಸಿ ಮತ್ತು ಒಣ ಕಸ ಬೇರ್ಪ ಡಿಸಬೇಕು. ಪ್ಲಾಸ್ಟಿಕ್ ತ್ಯಜಿಸಬೇಕು ಎಂದು ಮನವಿ ಮಾಡಿದರು. ಪಾಲಿಕೆಯೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ವಿವಿಧ ಸಂಘ-ಸಂಸ್ಥೆ ಗಳು ಕೈ ಜೋಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.

ಮೈಸೂರು ವೆಲ್ಫೇರ್ ಟ್ರಸ್ಟ್ ಅಧ್ಯಕ್ಷೆ ಡಾ. ಸಾರಾ ಹಕ್ ಮಾತನಾಡಿ, ಮೈಸೂರಿನ ಪ್ರವಾಸಿ ತಾಣ ಸೇರಿದಂತೆ ವಿವಿಧೆಡೆ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಟ್ರಸ್ಟ್ ಉದ್ದೇಶಿಸಿದ್ದು, ವಿವಿಧ ಕಾಲೇಜುಗಳ ಎನ್‍ಎಸ್‍ಎಸ್ ವಿದ್ಯಾರ್ಥಿಗಳೊಂದಿಗೆ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಇಂದು ಬೆಳಿಗ್ಗೆ 9ರಿಂದ 11.30ರವರೆಗೆ ಅರಮನೆ ಮುಂಭಾಗದಿಂದ ಚಾಮರಾಜೇಂದ್ರ ವೃತ್ತ (ಹಾರ್ಡಿಂಗ್)ದ ಸುತ್ತಮುತ್ತ, ಮಿರ್ಜಾ ಇಸ್ಮಾಯಿಲ್ ರಸ್ತೆ ಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಹತ್ತಾರು ಮೂಟೆ ಪ್ಲಾಸ್ಟಿಕ್ ಹಾಗೂ ಇತರೆ ನಿರುಪ ಯುಕ್ತ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ತಮ್ಮ ಮನೆಗಳ 200 ಮೀಟರ್ ಸುತ್ತ, ಪರಿಸರವನ್ನು ಸುಂದರ ವನ್ನಾಗಿಸುವ ಕಾರ್ಯ ನಡೆಸಲಾಗುತ್ತದೆ ಎಂದರು. ಅಭಿಯಾನದಲ್ಲಿ ಪ್ಲಾಗಿಂಗ್ ಪಾರ್ಟಿ ಮುಖ್ಯಸ್ಥ ಜಾಕೋಬ್ ಚೆರಿನ್, ಮೈಸೂರು ವೆಲ್ಫೇರ್ ಟ್ರಸ್ಟ್ ಕಾರ್ಯದರ್ಶಿ ಮೊಹಮದ್ ತಾಸೀನ್, ಜಂಟಿ ಕಾರ್ಯದರ್ಶಿ ಅರಫತ್, ಸಲಹೆಗಾರರಾದ ಸೌಂದರ್ಯ, ನಿರ್ದೇ ಶಕರಾದ ಶೋಭ ಆನಂದ್, ನಿಖತ್ ಹಬೀಬ್, ಸುಹೇಲ್ ಅಂಜುಮ್, ಖಜಾಂಚಿ ಇಫ್ತೀಕಾರ್ ಶಫಿ ಹಾಗೂ ಸೇಂಟ್ ಫಿಲೋ ಮಿನಾ ಕಾಲೇಜು, ವಿದ್ಯಾವಿಕಾಸ್, ಮೈಕಾ ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿ ಗಳು ಪಾಲ್ಗೊಂಡಿದ್ದರು.

Translate »