ಜ.22ರಂದು ಶಾಲಾ ವಿಜ್ಞಾನ ಮೇಳ
ಮೈಸೂರು

ಜ.22ರಂದು ಶಾಲಾ ವಿಜ್ಞಾನ ಮೇಳ

January 18, 2019

ಮೈಸೂರು: `ದಿ ಹಿಂದು’ ಪತ್ರಿಕೆಯ ವತಿಯಿಂದ ವಿಜಾÐನ ಮೇಳವನ್ನು ಜನವರಿ 22ರಂದು ಬೆಳಿಗ್ಗೆ 9 ಗಂಟೆಯಿಂದ ಮೈಸೂರು ಯಾದವಗಿರಿಯ ಶ್ರೀ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.

7ರಿಂದ 10ನೇ ತರಗತಿಯೊಳಗಿನ ಇಬ್ಬರನ್ನು ಒಳಗೊಂಡ ತಂಡಗಳು ಭಾಗವಹಿಸ ಬಹುದಾಗಿದೆ. ಪ್ರವೇಶ ಉಚಿತವಾಗಿದ್ದು, ಆಸಕ್ತರು ಸಂಬಂಧಪಟ್ಟ ಶಾಲೆಯ ಮುಖಾಂ ತರ mಟಡಿಛಿiಡಿ@ಣhehiಟಿಜu.ಛಿo.iಟಿಗೆ ಇ-ಮೇಲ್ ಮಾಡುವುದರ ಮೂಲಕ ನೋಂದಾಯಿಸಿಕೊಳ್ಳಬಹುದು. ಸ್ಥಳದಲ್ಲಿ ನೋಂದಾಯಿಸಿಕೊಳ್ಳುವ ತಂಡಗಳು ಬೆಳಿಗ್ಗೆ 8 ಗಂಟೆಗೆ ಹಾಜರಿರಬೇಕಾಗುತ್ತದೆ. ವಿದ್ಯಾರ್ಥಿಗಳು ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ಅಡಿಯಲ್ಲಿ ವಿಜ್ಞಾನದ ಮಾಡೆಲ್‍ಗಳನ್ನು ಪ್ರದರ್ಶಿಸಬೇಕಾಗುತ್ತದೆ. ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ರಾಮನಗರ ಮತ್ತು ಕೊಡಗು ಜಿಲ್ಲೆಗಳ ವಿದ್ಯಾರ್ಥಿಗಳು ಈ ಅಂತರ-ಶಾಲೆ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ ಜನವರಿ 21. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊ. 9448279124 / 8139900021 ಅಥವಾ ಸ್ಥಳೀಯ ದಿ ಹಿಂದು ಕಚೇರಿ ಸಂಖ್ಯೆ ದೂ. 0821-2423249/ 2420744 ಅನ್ನು ಸಂಪರ್ಕಿಸಬಹುದು.

Translate »