ಮೈಸೂರಿನ ಉತ್ತರ ಕನ್ನಡ ಸಾಂಸ್ಕøತಿಕ  ಸಂಘದಲ್ಲಿ ಇಂದು ಸಂಗೀತ ಕಾರ್ಯಕ್ರಮ
ಮೈಸೂರು

ಮೈಸೂರಿನ ಉತ್ತರ ಕನ್ನಡ ಸಾಂಸ್ಕøತಿಕ ಸಂಘದಲ್ಲಿ ಇಂದು ಸಂಗೀತ ಕಾರ್ಯಕ್ರಮ

January 18, 2019

ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿರುವ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಆವರಣದಲ್ಲಿ ನಾಳೆ (ಜ.18) ಸಂಜೆ 6ಕ್ಕೆ `ಗ್ರ್ಯಾಂಡ್ ವಲ್ರ್ಡ್ ಮ್ಯೂಸಿಕ್ ಕಾನ್ಸರ್ಟ್’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೂಕಾಂ ಬಿಕಾ ಕ್ರಿಯೇಷನ್ ವ್ಯವಸ್ಥಾಪಕ ಪರಮೇಶ್ವರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ ಹಾಗೂ ಮೂಕಾಂ ಬಿಕಾ ಕ್ರಿಯೇಷನ್ ಸಹಯೋಗದ ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ನಾಳೆ ಸಂಜೆ 6ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಎನ್‍ವೈಎಂಕೆ ರಾಜ್ಯ ನಿರ್ದೇಶಕ ಎಂ.ಎನ್. ನಟರಾಜ್ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸಂಗೀತ ಕಾರ್ಯಕ್ರಮದಲ್ಲಿ ವಯೋಲಿನ್ ವಾದಕ ಡಾ.ಮೈಸೂರು ಮಂಜುನಾಥ್, ಹಾಲೆಂಡ್‍ನ ಫುಲ್‍ವಿಯೋ ಸಿಗುರ್ತಾ ಟ್ರಂಪೇಟ್, ಲಂಡನ್‍ನ ಅಲೈಸ್ ಬರೂನ್ ವಿದೇಶಿ ವಯೋಲಿನ್, ಇಟಲಿಯ ಗಿಲಿಯಾನ ಮೊಡರೆಲ್ಲಿ ಗಿಟಾರ್, ಬಿ.ಸಿ.ಮಂಜು ನಾಥ್ ಮೃದಂಗ, ಪ್ರಥಮ್ ಕಿರಣ್ ಸ್ಪೆಷಲ್ ಪರ್ಕೂಸನ್, ವಿವೇಕ್ ಸಂತೋಷ್ ಪಿಯಾನೋ ಮೂಲಕ ಸಂಗೀತ ಗೋಷ್ಠಿ ನಡೆಸಿಕೊಡಲಿದ್ದಾರೆ. ಮಲೆನಾಡು ಮತ್ತು ಕರಾವಳಿ ತಿನಿಸುಗಳೂ ಲಭ್ಯವಿರಲಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಾನಿಯಾ, ರಾಜೇಶ್, ಮಾಲತೇಶ್, ಡಾ.ನಾರಾಯಣ ಹೆಗಡೆ ಉಪಸ್ಥಿತರಿದ್ದರು.

Translate »