ಅರ್ಥಶಾಸ್ತ್ರ ಪದವೀಧರರಿಗೆ ಉದ್ಯೋಗಾವಕಾಶ ವಿಫುಲವಾಗಿವೆ
ಮೈಸೂರು

ಅರ್ಥಶಾಸ್ತ್ರ ಪದವೀಧರರಿಗೆ ಉದ್ಯೋಗಾವಕಾಶ ವಿಫುಲವಾಗಿವೆ

January 18, 2019

ಮೈಸೂರು: ಪ್ರಸ್ತುತ ಅರ್ಥಶಾಸ್ತ್ರ ಪದವೀಧರರಿಗೆ ಉದ್ಯೋ ಗಾವಕಾಶಗಳು ವಿಫುಲವಾಗಿವೆ ಎಂದು ಅರ್ಥಶಾಸ್ತ್ರ ಲೇಖಕ ಹಾಗೂ ಸಹಕಾರ ಸಂಘಗಳ ನಿವೃತ್ತ ಜಂಟಿ ನಿಬಂಧಕ ಡಾ.ಹೆಚ್.ಆರ್.ಕೃಷ್ಣಯ್ಯಗೌಡ ಹೇಳಿದರು.

ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂ ಗಣದಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗ, ಐಕ್ಯೂಎಸಿ (ಇಂಟರ್ನಲ್ ಕ್ವಾಲಿಟಿ ಅಶ್ಯೂ ರೆನ್ಸ್ ಸೆಲ್) ಜಂಟಿ ಆಶ್ರಯದಲ್ಲಿ ಹಮ್ಮಿ ಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕ ವಲಯ, ಖಾಸಗಿ ವಲಯ ಹಾಗೂ ಸಹಕಾರ ವಲಯದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಅರ್ಥಶಾಸ್ತ್ರ ಪದವೀ ಧರರಿಗೆ ಲಭ್ಯವಿವೆ. ಜೊತೆಗೆ ಆರ್‍ಬಿಐ ಸಂಸ್ಥೆ ಸೇರಿದಂತೆ ಬ್ಯಾಂಕೋದ್ಯಮದಲ್ಲಿ ಅರ್ಥಶಾಸ್ತ್ರ ಓದಿದವರಿಗೆ ಉದ್ಯೋಗ ದೊರೆ ಯಲಿದೆ. ವಿವಿಧ ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಿದೆ ಎಂದರು.

ಸ್ವ-ಉದ್ಯೋಗ ಕೈಗೊಳ್ಳಲು ಅವಕಾಶ ವಿದ್ದು, ಈಗಿನಿಂದಲೇ ಬೌದ್ಧಿಕ ಸಾಮಥ್ರ್ಯ ವೃದ್ಧಿಸಿಕೊಂಡಲ್ಲಿ ಐಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸ ಬಹುದು. ಪ್ರತಿ ವಿಷಯಕ್ಕೂ ತನ್ನದೇ ಆದ ಮೌಲ್ಯವಿದೆ. ಕೆಲಸದಲ್ಲಿ ತೊಡಗಿಸಿಕೊಂಡು ಅದರಿಂದ ದೊರೆಯುವ ಆದಾಯದಲ್ಲಿ ಜೀವನೋಪಾಯ ಕಂಡುಕೊಳ್ಳಲು ಉದ್ಯೋಗ ಅತ್ಯಗತ್ಯ ಎಂದರು. ಕಾಲೇಜಿನ ಪ್ರಾಂಶು ಪಾಲ ಪ್ರೊ.ಸಿ.ಹೆಚ್.ಪ್ರಕಾಶ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಕೆ.ಎನ್.ರೂಪ, ಐಕ್ಯೂಎಸಿ ಸಂಯೋಜಕ ಡಾ.ಎನ್.ರತ್ನಾ, ಸಹ ಪ್ರಾಧ್ಯಾಪಕರಾದ ಡಾ.ನೇ.ತಿ.ಸೋಮ ಶೇಖರ್, ಡಾ.ರಶ್ಮಿ ಚನ್ನಯ್ಯ, ಡಾ.ಶಶಿ ಕಲಾ, ಡಾ.ಎನ್. ಟಿ.ಕೃಷ್ಣಮೂರ್ತಿ, ಡಾ. ಹೆಚ್.ಎನ್.ಪ್ರಮೀಳಾ ಸೇರಿದಂತೆ ಕಾಲೇ ಜಿನ ವಿದ್ಯಾರ್ಥಿನಿಯರು ಹಾಜರಿದ್ದರು.

Translate »