ಲಿಂಗ ಸಮಾನತೆ ರಾಜಕಾರಣ ಹೆಣ್ಣನ್ನು ಅಪೂರ್ಣತೆ ಚೌಕಟ್ಟಿನಲ್ಲಿಡುವ ತಂತ್ರ
ಮೈಸೂರು

ಲಿಂಗ ಸಮಾನತೆ ರಾಜಕಾರಣ ಹೆಣ್ಣನ್ನು ಅಪೂರ್ಣತೆ ಚೌಕಟ್ಟಿನಲ್ಲಿಡುವ ತಂತ್ರ

January 18, 2019

ಮೈಸೂರು: ಲಿಂಗ ಸಮಾ ನತೆಯ ರಾಜಕಾರಣ ಎಂಬುದು ಹೆಣ್ಣನ್ನು ಒಂದು ಅಪೂರ್ಣತೆಯ ಚೌಕಟ್ಟಿನಲ್ಲಿಡಲು ಬಯಸುತ್ತದೆ. ಆದರೆ, ಹೆಣ್ಣು ತನ್ನ ಆತ್ಮ ಶಕ್ತಿಯಿಂದ ಎಲ್ಲವನ್ನು ಎದುರಿಸುತ್ತಿದ್ದಾಳೆ ಎಂದು ವಿಮರ್ಶಕಿ ಪ್ರೊ.ಎಂ.ಎಸ್. ಆಶಾದೇವಿ ಹೇಳಿದರು.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ದಲ್ಲಿ ‘ಲಿಂಗ ಸಮಾನತೆಯ ರಾಜಕಾರಣ’ ಕುರಿತು ಮಾತನಾಡಿದ ಅವರು, ಸಮಾನತೆ ಹೆಸರಲ್ಲೇ ಹೆಣ್ಣಿನ ಶೋಷಣೆ ನಡೆಯು ತ್ತಿದೆ. ಹೀಗಾಗಿ ‘ಲಿಂಗ ಸಮಾನತೆ’ ಎಂದು ಬಳಸುವುದನ್ನು ಈಚೆಗೆ ಕಡಿಮೆ ಮಾಡ ಲಾಗುತ್ತಿದೆ. ಲಿಂಗ ಅಸಮಾನತೆ ಎಂಬುದು ಸಮಾನತೆಯ ವೇಷ ಧರಿಸಿ ಬರುತ್ತಿದೆ ಎಂದು ತಿಳಿಸಿದರು.

ಸಮಾನತೆ ಎಂದ ತಕ್ಷಣ ಇನ್ನೊಬ್ಬರ ಅವ ಕಾಶ ಕಸಿದುಕೊಳ್ಳುತ್ತಿದ್ದೇವೆ ಎಂಬ ಭಾವನೆ ಬರುತ್ತದೆ. ಹೆಣ್ಣು ಅಪೂರ್ಣಳು ಎಂದು ನೂರು ಬಗೆಯ ಕಾರಣಗಳನ್ನು ಕೊಡ ಲಾಗುತ್ತಿದೆ. ಹೆಣ್ಣನ್ನು ಸುಖದ ಸಾಮಗ್ರಿ ಎಂಬಂತೆ ಅಥವಾ ಅದಕ್ಕೆ ಪೂರಕ ವ್ಯಕ್ತಿತ್ವ ವಾಗಿ ನೋಡಲಾಗುತ್ತಿದೆ ಎಂದು ಅವರು ಟೀಕಿಸಿದರು.

ಮಾಡರ್ನ್, ಆರ್ಥಿಕ ಸಮಾನತೆ ಎಂಬ ಹೆಸರಲ್ಲಿ ಹೆಣ್ಣನ್ನು ನೋಡಿದರೂ ಅಲ್ಲಿ ಪಿತೃಪ್ರಧಾನ ವ್ಯವಸ್ಥೆಯೇ ಅಡಕವಾಗಿರು ತ್ತದೆ. ಹೆಣ್ಣು ಮಕ್ಕಳ ಪರವಾಗಿ ನೂರಾರು ಕಾನೂನುಗಳು ಇದ್ದರೂ, ಆಕೆ ಕುಟುಂಬ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಒಂದು ಯೋಜನೆಗೆ ಮಾತ್ರ ಸೀಮಿತವಾಗಿ ದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾತಿ ಮತ್ತು ವರ್ಗ ರಾಜಕಾರಣಗಳು ಕಣ್ಣಿಗೆ ಕಾಣುತ್ತವೆ. ಆದರೆ, ಲಿಂಗ ರಾಜ ಕಾರಣ ಆಗಲ್ಲ. ಅಮೂರ್ತವಾಗಿ ನಡೆಯು ತ್ತದೆ. ಲಿಂಗ ರಾಜಕಾರಣದ ಸೂತ್ರ ಹಿಡಿ ದವರಿಗೆ ನಿಜವಾಗಿಯೂ ಲಿಂಗ ರಾಜ ಕಾರಣ ಬೇಕಿಲ.್ಲ ಹೆಣ್ಣು ಕುಟುಂಬ ಕೇಂದ್ರ ವನ್ನು ಬಿಟ್ಟು ಹೋಗಬೇಕು ಎಂದಲ್ಲ. ಆದರೆ, ಆಕೆಯೇ ಕುಟುಂಬದ ಕೇಂದ್ರ ಎಂದು ಅಧಿಕೃತತೆ ಅಗತ್ಯ. ಅಧಿಕೃತತೆ ಕೇಳಿದರೆ ಹೆಣ್ಣನ್ನು ಯಾಕೆ ಅಪರಾಧಿಯಂತೆ ನೋಡು ತ್ತೀರಿ? ಎಂದು ಪ್ರಶ್ನಿಸಿದರು.

ಬದಲಾಗುವುದಕ್ಕೆ ನಮ್ಮ ಮುಂದಿರುವ ದೊಡ್ಡ ಮಾದರಿ ಮಹಾತ್ಮ ಗಾಂಧೀಜಿ. ಅವರು, ನಾನು ಅರ್ಧ ಹೆಣ್ಣು ಎಂದು ಹೇಳಿ ಕೊಂಡಿದ್ದರು. ಪ್ರತಿಯೊಂದು ಜೀವಿಯ ಲ್ಲಿಯೂ ಹೆಣ್ಣು ಮತ್ತು ಗಂಡಿನ ಅಂಶವಿರು ತ್ತದೆ. ಅದನ್ನು ಅನಾವರಣ ಮಾಡಿಕೊಳ್ಳ ಬೇಕು ಎಂದು ತಿಳಿಸಿದ್ದರು. ಹೆಣ್ಣು ಗಂಡು ಇಬ್ಬರೂ ಭಿನ್ನರು. ಆದರೆ, ಇಬ್ಬರೂ ಸಮಾ ನರು ಎಂದಿದ್ದರು ಗಾಂಧೀಜಿ. ಆದ್ದರಿಂದ ಇದನ್ನು ಸ್ಪರ್ಧೆ, ಹೋರಾಟ ಎನ್ನುವುದ ಕ್ಕಿಂತ ಪರಿವರ್ತನಾಶೀಲ ಪ್ರಕ್ರಿಯೆ ಎಂದು ಕರೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಶೋಧಕ ಪ್ರೊ.ರಹಮತ್ ತರೀಕೆರೆ ಮಾತನಾಡಿ, ಸಾಮಾನ್ಯವಾಗಿ ನೋಡುವು ದಾದರೆ ದೊಡ್ಡ ಸಾಧಕರು ಪುರುಷರೇ ಆಗಿ ದ್ದಾರೆ. ಆಸ್ತಿಯ ವಿಚಾರದಲ್ಲಿಯೂ ಹೆಣ್ಣನ್ನು ಕಡೆಗಣಿಸಲಾಗಿತ್ತು. ರಾಜಕೀಯದಲ್ಲಿ ಗಂಡನ ಮರಣದ ನಂತರ ಆ ಸ್ಥಾನವನ್ನು ತುಂಬಲು ಮಹಿಳೆಗೆ ಅವಕಾಶ ನೀಡುವುದನ್ನು ಕಾಣು ತ್ತಿದ್ದೇವೆ. ಇಷ್ಟೆಲ್ಲಾ ಅಸಮಾನತೆಗಳಿದ್ದರು ಬಹಳಷ್ಟು ಮಹಿಳೆಯರು ನಮ್ಮ ನಡುವೆ ಸಾಧನೆ ಮಾಡಿದ್ದಾರೆ ಎಂದರು.

Translate »