ಮೈಸೂರು

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ: ಪರೀಕ್ಷೆಗೆ ಮುಗಿಬಿದ್ದ ಜನa
ಮೈಸೂರು

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ: ಪರೀಕ್ಷೆಗೆ ಮುಗಿಬಿದ್ದ ಜನa

January 13, 2022

ಮೈಸೂರು, ಜ.12(ಎಂಟಿವೈ)- ಕಳೆದ ಕೆಲವು ದಿನಗಳಿಂದ ಮೈಸೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗು ತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಮುಂದೆ ಬರುತ್ತಿ ರುವವರ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಕಳೆದ ತಿಂಗಳು ಕೋವಿಡ್ ಪರೀಕ್ಷೆ ಮಾಡಿಸಿ ಕೊಳ್ಳಿ ಎಂದು ಆರೋಗ್ಯ ಇಲಾಖೆ ಮನವಿ ಮಾಡುತ್ತಿದ್ದರೂ ಸ್ವ್ಯಾಬ್ ಪರೀಕ್ಷೆ ಮಾಡಿ ಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಜನರು ಈಗ ಸ್ವಯಂ ಪ್ರೇರಣೆಯಿಂದ ಕೊರೊನಾ ಪರೀಕ್ಷೆಗೆ ಬರುತ್ತಿರುವುದರಿಂದ ಕೊರೊನಾ ಸೋಂಕಿನ ಅಪಾಯದಿಂದ ಜನರನ್ನು ರಕ್ಷಿಸಲು ಸಾಧ್ಯವಾಗುತ್ತಿದೆ. ಶೀತ ಗಾಳಿ, ಮಂಜಿನ ವಾತಾವರಣ,…

ಇಂದು ವೈಕುಂಠ ಏಕಾದಶಿ
ಮೈಸೂರು

ಇಂದು ವೈಕುಂಠ ಏಕಾದಶಿ

January 13, 2022

ಮೈಸೂರು,ಜ.12(ಆರ್‍ಕೆ)- ಕೋವಿಡ್ ಸೋಂಕು ಉಲ್ಬಣವಾಗುತ್ತಿರುವುದ ರಿಂದ ನಾಳೆ (ಜ.13) ನಡೆಯಲಿರುವ ವೈಕುಂಠ ಏಕಾದಶಿ ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಅವಕಾಶವಿಲ್ಲದಂತಾಗಿದೆ. ಮೈಸೂರಿನ ಕೆಆರ್‍ಎಸ್ ರಸ್ತೆಯ ಲ್ಲಿರುವ ವಿ.ವಿ.ಮೊಹಲ್ಲಾದ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ ಹಾಗೂ ಕಾಳಿದಾಸ ರಸ್ತೆಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಗಳಿಗೆ ಗುರುವಾರ ಭಕ್ತಾದಿಗಳ ಪ್ರವೇಶವನ್ನು ನಿಷೇಧಿಸ ಲಾಗಿದೆ. ವೈಕುಂಠ ಏಕಾದಶಿ ಅಂಗವಾಗಿ ಶ್ರೀ ವೆಂಕಟೇಶ್ವರ ಹಾಗೂ ಶ್ರೀ ಲಕ್ಷ್ಮೀ ನರ ಸಿಂಹಸ್ವಾಮಿ ದೇವಸ್ಥಾನದಲ್ಲಿ ಅರ್ಚ ಕರು ಮಾತ್ರ ಪೂಜೆ ನೆರವೇರಿಸುವರು. ಜಿಲ್ಲಾಧಿಕಾರಿಗಳ ಸೂಚನೆ…

ಕೊರೊನಾ ಸ್ಫೋಟದ ಮುನ್ಸೂಚನೆ: ಮೈಸೂರಲ್ಲಿ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳು ಸರ್ವ ಸನ್ನದ್ಧ
ಮೈಸೂರು

ಕೊರೊನಾ ಸ್ಫೋಟದ ಮುನ್ಸೂಚನೆ: ಮೈಸೂರಲ್ಲಿ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳು ಸರ್ವ ಸನ್ನದ್ಧ

January 13, 2022

ಮೈಸೂರು,ಜ.12(ಆರ್‍ಕೆ)-ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವುದರಿಂದ ಎಚ್ಚೆತ್ತ ಜಿಲ್ಲಾಡಳಿ ತವು ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಮೈಸೂರಿನ ಹಲವು ಆಸ್ಪತ್ರೆಗಳಲ್ಲಿ ಸಿದ್ಧತೆ ಮಾಡಿಕೊಂಡಿದೆ. ಜನವರಿ ಅಂತ್ಯದಲ್ಲಿ ಕೊರೊನಾ ಸ್ಫೋಟಗೊಳ್ಳಲಿದೆ ಎಂಬ ಮುನ್ಸೂಚನೆ ಇರುವುದರಿಂದ ಮಹಾಮಾರಿ ಸೋಂಕು ತಗುಲಿದ ರೋಗಿಗಳನ್ನು ದಾಖಲಿಸಲು ಅಗತ್ಯವಾದ ಆಕ್ಸಿಜನೇಟೆಡ್, ವೆಂಟಿಲೇಟರ್ ಬೆಡ್, ಔಷಧಿ, ಆಕ್ಸಿಜನ್, ವೈದ್ಯಕೀಯ ಸಲ ಕರಣೆಗಳು, ಮಾಸ್ಕ್, ಹ್ಯಾಂಡ್ ಗ್ಲೌಸ್, ಪಿಪಿಇ ಕಿಟ್‍ಗಳನ್ನು ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ವ್ಯವಸ್ಥೆ ಮಾಡಿಕೊಂಡು ಸರ್ವ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ….

ಮೈಸೂರಲ್ಲಿ ಬುಧವಾರ 524 ಪ್ರಕರಣ ದಾಖಲು
ಮೈಸೂರು

ಮೈಸೂರಲ್ಲಿ ಬುಧವಾರ 524 ಪ್ರಕರಣ ದಾಖಲು

January 13, 2022

ಮೈಸೂರು,ಜ.12(ಎಸ್‍ಪಿಎನ್)-ಮೈಸೂರು ಜಿಲ್ಲೆಯಲ್ಲಿ ಸತತ 5ನೇ ದಿನವೂ ಕೋವಿಡ್-19 ಸೋಂಕು ಹೆಚ್ಚಾ ಗಿದ್ದು, ಬುಧವಾರ 524 ಪ್ರಕರಣ ದೃಢಪಟ್ಟಿದೆ. ಅಲ್ಲದೆ 114 ಮಂದಿ ಗುಣಮುಖರಾಗಿದ್ದಾರೆ. ಇಂದು ಒಬ್ಬರು ಸಾವ ನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 1.82,725 ಮಂದಿಗೆ ಸೋಂಕು ತಗುಲಿದ್ದು, 1,78,018 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2,277 ಸಕ್ರಿಯ ಪ್ರಕರಣಗಳಿವೆ. ಇಂದು ಒಬ್ಬರು ಸಾವನ್ನಪ್ಪಿದ್ದು, ಈವರೆಗೆ 2,430 ಮಂದಿ ಸಾವನ್ನಪ್ಪಿದ್ಧಾರೆ. ಜಿಲ್ಲೆಯಲ್ಲಿ 1-5 ವರ್ಷದೊಳಗೆ 4, 6-10 ವರ್ಷ ದೊಳಗೆ 4, 11-17 ವರ್ಷದೊಳಗೆ 60 ಪ್ರಕರಣ ಸೇರಿದಂತೆ…

ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹದ ಸೌಲಭ್ಯ ಕಲ್ಪಿಸಿ
ಮೈಸೂರು

ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹದ ಸೌಲಭ್ಯ ಕಲ್ಪಿಸಿ

January 13, 2022

ಮೈಸೂರು,ಜ.12(ಪಿಎಂ)- ಸ್ಥಳೀಯ ಸಂಸ್ಥೆ ಗಳ ಪೌರಕಾರ್ಮಿಕರಿಗೆ ಸೌಲಭ್ಯ ಕಲ್ಪಿಸುವ ಸಂಬಂಧ ಐಪಿಡಿ ಸಾಲಪ್ಪ ಸಮಿತಿ ಶಿಫಾರಸ್ಸು ಗಳನ್ನು ಅನುಷ್ಠಾನಗೊಳಿಸಲು ಹಾಗೂ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ಇದೇ ಮಾರ್ಚ್ ಒಳಗೆ ಕಲ್ಪಿಸಬೇಕೆಂದು ಮಾಜಿ ಸಚಿ ವರೂ ಆದ ಕರ್ನಾಟಕ ರಾಜ್ಯ ಸಫಾಯಿ ಕರ್ಮ ಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಂಗಳೂರಿನ ವಿಕಾಸಸೌಧದಲ್ಲಿ ಐಪಿಡಿ ಸಾಲಪ್ಪ ನವರ ಸಮಿತಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿ ಸುವ ಕುರಿತಂತೆ ನಗರಾಭಿವೃದ್ಧಿ ಇಲಾಖೆ,…

ಡಿಸಿಗೆ ನಗರ ಪಾಲಿಕೆ ಸದಸ್ಯರ ಮನವಿ
ಮೈಸೂರು

ಡಿಸಿಗೆ ನಗರ ಪಾಲಿಕೆ ಸದಸ್ಯರ ಮನವಿ

January 13, 2022

ಮೈಸೂರು,ಜ.12(ಎಂಕೆ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆ ಯಿಂದ ಹಾನಿಗೊಳಗಾದ ರಸ್ತೆಗಳ ರಿಪೇರಿ ಗಾಗಿ ಬಿಡುಗಡೆಯಾಗಿರುವ 25 ಕೋಟಿ ರೂ., ಎಸ್‍ಎಫ್‍ಸಿ ವಿಶೇಷ ಅನುದಾನದ ಕ್ರಿಯಾಯೋಜನೆಯನ್ನು ರದ್ದುಪಡಿಸು ವಂತೆ 30ಕ್ಕೂ ಹೆಚ್ಚ್ಚು ಮಂದಿ ಪಾಲಿಕೆ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕಳೆದ ಬಾರಿ ಸುರಿದ ಧಾರಾಕಾರ ಮಳೆ ಯಿಂದಾಗಿ ಮೈಸೂರು ನಗರ ಪಾಲಿಕೆ ವ್ಯಾಪ್ತಿ ಯಲ್ಲಿನ ಪ್ರಮುಖ ರಸ್ತೆಗಳು ಹಾಳಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗು ತ್ತಿದೆ. ಆದ್ದರಿಂದ ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮತ್ತು ಅಭಿವೃದ್ಧಿಪಡಿಸಲು ಸರ್ಕಾರ ದಿಂದ…

‘ಮಿನುಗುವ ನಕ್ಷತ್ರ-2022’ ಪ್ರಶಸ್ತಿ ಪ್ರದಾನ
ಮೈಸೂರು

‘ಮಿನುಗುವ ನಕ್ಷತ್ರ-2022’ ಪ್ರಶಸ್ತಿ ಪ್ರದಾನ

January 13, 2022

ಮೈಸೂರು,ಜ.12(ಎಂಕೆ)-ಸಮಾಜದ ಅಂಕು-ಡೊಂಕು, ತಾರತಮ್ಯಗಳನ್ನು ತಿದ್ದುವ ಕೆಲಸವನ್ನು ರಂಗಭೂಮಿ ಮಾಡಲಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅಭಿಪ್ರಾಯಪಟ್ಟರು. ಮೈಸೂರು ಕಲಾಮಂದಿರದ ಕಿರುರಂಗಮಂದಿರದಲ್ಲಿ ನಡೆದ ನಕ್ಷತ್ರ ಪೌಂಡೇಶನ್‍ನ ಮಹಿಳಾ ಮತ್ತು ಯುವ ಘಟಕ ಉದ್ಘಾಟನೆ ಹಾಗೂ ‘ಮಿನುಗುವ ನಕ್ಷತ್ರ-2022’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರು ರಂಗಭೂಮಿಯತ್ತ ಹೆಚ್ಚೆಚ್ಚು ಬರುತ್ತಿದ್ದಾರೆ. ಏಕೆಂದರೆ ಯುವಕರಲ್ಲಿ ಕ್ರಿಯೇಟಿವಿಟಿ ಎಂಬುದು ಬೆಳೆಯುವುದೇ ರಂಗಭೂಮಿಯಲ್ಲಿ ಎಂದು ಹೇಳಿದರು. ರಂಗಭೂಮಿಯಲ್ಲಿರುವವರ ಬದುಕು ಕಷ್ಟವಾದರೂ ಅಭಿನಯದ ಹುಚ್ಚು ಅವರನ್ನು…

ಮೈಸೂರಲ್ಲಿ ಇಂದಿನಿಂದ ಶಾಲೆ ಬಂದ್
ಮೈಸೂರು

ಮೈಸೂರಲ್ಲಿ ಇಂದಿನಿಂದ ಶಾಲೆ ಬಂದ್

January 12, 2022

ಮೈಸೂರು, ಜ.11(ಎಸ್‍ಬಿಡಿ)- ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರು ನಗರ ಹಾಗೂ ತಾಲೂಕು ವ್ಯಾಪ್ತಿಯ ಎಲ್ಲಾ ಶಾಲೆಗಳನ್ನು ನಾಳೆ(ಜ.12)ಯಿಂದ ಮುಂದಿನ ಆದೇಶದವರೆಗೆ ಬಂದ್ ಮಾಡಿ, ಆನ್‍ಲೈನ್ ತರಗತಿ ನಡೆಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಇಂದು ಆದೇಶ ಹೊರಡಿಸಿದ್ದಾರೆ. ಮೈಸೂರು ನಗರ ಹಾಗೂ ತಾಲೂಕು ವ್ಯಾಪ್ತಿಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆ ಹಾಗೂ ವಸತಿ ಶಾಲೆಗಳಿಗೂ ಈ ಆದೇಶ ಅನ್ವಯವಾಗಲಿದ್ದು, ಅಂಗನ ವಾಡಿ, ನರ್ಸರಿ ಹಾಗೂ…

ಮೈಸೂರು ಜಿಲ್ಲೆಯಲ್ಲಿ 18 ವರ್ಷದೊಳಗಿನ  130 ಮಕ್ಕಳಿಗೆ ಸೋಂಕು
ಮೈಸೂರು

ಮೈಸೂರು ಜಿಲ್ಲೆಯಲ್ಲಿ 18 ವರ್ಷದೊಳಗಿನ 130 ಮಕ್ಕಳಿಗೆ ಸೋಂಕು

January 12, 2022

ಮೈಸೂರು, ಜ.11(ಆರ್‍ಕೆ)-ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನೇ ದಿನೆ ಹೆಚ್ಚಾಗು ತ್ತಿದ್ದು, 18 ವರ್ಷದೊಳಗಿನ ಮಕ್ಕಳಿಗೂ ಸೋಂಕು ತಗುಲಿದೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯಾ ದ್ಯಂತ 130 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಆ ಪೈಕಿ ರೋಗ ಲಕ್ಷಣಗಳಿರುವ ನಾಲ್ಕು ಮಕ್ಕಳು ಮಾತ್ರ ಆಸ್ಪತ್ರೆಗಳಲ್ಲಿ ದಾಖಲಾಗಿ ದ್ದಾರೆ. ಉಳಿದವರನ್ನು ಹೋಂ ಐಸೋಲೇಷನ್ ಮಾಡಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದು ಜಿಲ್ಲಾ ಆರೋ ಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ತಿಳಿಸಿದ್ದಾರೆ. ಸೋಮವಾರದವರೆಗೆ ಒಟ್ಟು 1,438 ಕೊರೊನಾ ಸಕ್ರಿಯ…

ಬೈಕ್‍ಗಳಿಗೆ ಕಾರು ಡಿಕ್ಕಿ: ಇಬ್ಬರ ಸಾವು, ಮತ್ತಿಬ್ಬರಿಗೆ ಗಾಯ ಹುಣಸೂರು ಬಳಿ ದುರಂತ
ಮೈಸೂರು

ಬೈಕ್‍ಗಳಿಗೆ ಕಾರು ಡಿಕ್ಕಿ: ಇಬ್ಬರ ಸಾವು, ಮತ್ತಿಬ್ಬರಿಗೆ ಗಾಯ ಹುಣಸೂರು ಬಳಿ ದುರಂತ

January 12, 2022

ಹುಣಸೂರು,ಜ.11(ಕೆಕೆ)- ಬೈಕ್‍ಗಳಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಮತ್ತಿಬ್ಬರು ತೀವ್ರವಾಗಿ ಗಾಯ ಗೊಂಡಿರುವ ಘಟನೆ ತಾಲೂಕಿನ ಸೋಮನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ತಾಲೂಕಿನ ಬನ್ನಿಕುಪ್ಪೆ ಗ್ರಾಮ ನಿವಾಸಿ ಹಾಗೂ ಪತ್ರಕರ್ತ ಚಲುವ ರಾಜ್ ಅವರ ಪುತ್ರ ಕೀರ್ತಿರಾಜ್(24), ಮೈಸೂರಿನ ಮಂಡಿ ಮೊಹ ಲ್ಲಾದ ಕೈಲಾಸಪುರಂ ನಿವಾಸಿ ನಾಗರಾಜು ಪುತ್ರ ಹಾಗೂ ಕೆಇಬಿ ಉದ್ಯೋಗಿ ರವಿಕುಮಾರ್(43) ಮೃತಪಟ್ಟವರಾಗಿದ್ದು, ಮೈಸೂರು ಉದಯಗಿರಿ ನಿವಾಸಿ ಇರ್ಫಾನ್ ಹಾಗೂ…

1 116 117 118 119 120 1,611
Translate »