ಮೈಸೂರು

ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಶ್ರೀಗಳ ಜಯಂತಿ: ನೂರಾರು ಮಂದಿಯ ಆರೋಗ್ಯ ತಪಾಸಣೆ
ಮೈಸೂರು

ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಶ್ರೀಗಳ ಜಯಂತಿ: ನೂರಾರು ಮಂದಿಯ ಆರೋಗ್ಯ ತಪಾಸಣೆ

January 19, 2022

ಮೈಸೂರು, ಜ.18(ಎಂಟಿವೈ)- ಆದಿ ಚುಂಚನಗಿರಿಯ ಶ್ರೀ ಬಾಲಗಂಗಾ ಧರನಾಥ ಸ್ವಾಮೀಜಿ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಸಹಕಾರ ಸಂಘ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಾರು ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮೈಸೂರಿನ ವಿನಾಯಕ ನಗರದ (ಪಡು ವಾರಹಳ್ಳಿ) ಶ್ರೀ ಮಹದೇಶ್ವರ ದೇವಾ ಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಾಲಗಂಗಾಧರ ಶ್ರೀಗಳ ಜನ್ಮ ದಿನ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಮಾಜಿ…

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಸಂಚಾರ ದಸರಾಗೆ ಮುಕ್ತ
ಮೈಸೂರು

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಸಂಚಾರ ದಸರಾಗೆ ಮುಕ್ತ

January 18, 2022

ಬೆಂಗಳೂರು,ಜ.17(ಕೆಎಂಶಿ)-ವಿಶ್ವದರ್ಜೆಯ ಗುಣ ಮಟ್ಟದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಮುಂಬ ರುವ ದಸರೆಯ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿದೆ. ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಸರಾಗೂ ಮುನ್ನವೇ ರಾಷ್ಟ್ರಕ್ಕೆ ಸಮರ್ಪಣೆ ಮಾಡಲು ತೀರ್ಮಾನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ರಸ್ತೆಯನ್ನು ಉದ್ಘಾಟಿಸಲು ತೀರ್ಮಾನಿಸಿರುವುದಲ್ಲದೆ, ಶೀಘ್ರವೇ ಪ್ರಧಾನಿಯವರಿಗೆ ಆಹ್ವಾನ ನೀಡಲು ನಿರ್ಧರಿಸಲಾಗಿದೆ. 117 ಕಿಲೋಮೀಟರ್ ಉದ್ದದ ರಸ್ತೆ ಕಾಮಗಾರಿ ಈ ವರ್ಷದ ಅಂತ್ಯದ ವೇಳೆಗೆ ಮುಕ್ತಾಯವಾಗುವ ನಿರೀಕ್ಷೆ ಇತ್ತು. ಆದರೆ ದಸರಾಗೆ…

ಮೈಸೂರು ಪಾಲಿಕೆ ವ್ಯಾಪ್ತಿಯ ರೆವಿನ್ಯೂ  ಬಡಾವಣೆಗಳ ಸ್ವತ್ತುಗಳಿಗೆ `ಬಿ ಖಾತೆ’
ಮೈಸೂರು

ಮೈಸೂರು ಪಾಲಿಕೆ ವ್ಯಾಪ್ತಿಯ ರೆವಿನ್ಯೂ ಬಡಾವಣೆಗಳ ಸ್ವತ್ತುಗಳಿಗೆ `ಬಿ ಖಾತೆ’

January 18, 2022

ಮೈಸೂರು, ಜ.17(ಎಸ್‍ಬಿಡಿ)- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕಂದಾಯ(ರೆವಿನ್ಯೂ) ಬಡಾ ವಣೆಗಳಲ್ಲಿನ ಸ್ವತ್ತುಗಳಿಗೆ `ಬಿ-ಖಾತೆ’ ಮಾಡಿಕೊಡಲು ಸೋಮ ವಾರ ನಡೆದ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ರೆವಿನ್ಯೂ ಬಡಾವಣೆಗಳ ಸ್ವತ್ತುಗಳಿಗೆ ಪ್ರತ್ಯೇಕವಾದ `ನಮೂನೆ-ಬಿ’(ಬಿ-ರಿಜಿಸ್ಟರ್) ಆಸ್ತಿ ವಹಿ ನಿರ್ವಹಿಸಿ, ಆಸ್ತಿ ಮಾಲೀಕರಿಗೆ `ಬಿ-ಖಾತೆ’ ಮಾಡಿಕೊಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಇಂದಿನ ಕೌನ್ಸಿಲ್ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದ ಬಳಿಕ, ಸದಸ್ಯರು ವ್ಯಕ್ತಪಡಿಸಿದ ಸಲಹೆ-ಅಭಿಪ್ರಾಯಗಳನ್ನು ಕಾನೂನಾತ್ಮಕ ವಾಗಿ ಅಳವಡಿಸಿಕೊಂಡು, ಪಾಲಿಕೆ ವ್ಯಾಪ್ತಿಯ 61…

40 ರೈಲುಗಳು ಸೈಲೆಂಟ್ ಮೋಡ್‍ನಲ್ಲಿ ಸಂಚಾರ
ಮೈಸೂರು

40 ರೈಲುಗಳು ಸೈಲೆಂಟ್ ಮೋಡ್‍ನಲ್ಲಿ ಸಂಚಾರ

January 18, 2022

ಮೈಸೂರು, ಜ.17-ಸಾಮಾನ್ಯವಾಗಿ, ಅನೇಕ ಜನರು, ವಿಶೇಷವಾಗಿ ರೈಲ್ವೇ ಹಳಿ ಗಳ ಬಳಿ ಇರುವವರು, ರೈಲು ಚಲಿಸು ವಾಗ ನಿರಂತರ ಶಬ್ದದ ಬಗ್ಗೆ ದೂರುತ್ತಾರೆ. ಈಗ ನೈಋತ್ಯ ವಿಭಾಗದ 40ಕ್ಕೂ ಹೆಚ್ಚು ರೈಲುಗಳು ಸೈಲೆಂಟ್ ಮೋಡ್‍ನಲ್ಲಿ ಚಲಿಸುತ್ತಿವೆ. ಹೊಸ ಪರಿಸರ ಸ್ನೇಹಿ ಉಪಕ್ರಮದಲ್ಲಿ, ನೈಋತ್ಯ ರೈಲ್ವೆ ವಿಭಾಗವು ಶಬ್ದವನ್ನು ನಿಶ್ಯಬ್ದ ಗೊಳಿಸಿದೆ ಮತ್ತು ರೈಲುಗಳಲ್ಲಿ ಊಔಉ (ಹೆಡ್-ಆನ್-ಜನರೇಶನ್) ತಂತ್ರಜ್ಞಾನ ವನ್ನು ಪರಿಚಯಿಸುವ ಮೂಲಕ ಅದರ ಇಂಧನ ಬಿಲ್‍ಗಳನ್ನು ಕಡಿತಗೊಳಿಸಿದೆ. ಇಲ್ಲಿವರೆಗೆ, 2019ರಿಂದ 40 ರೈಲುಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲಾಗಿದೆ…

ಕುರಿ-ಮೇಕೆಗಳಿಗೆ ಮಾರಕವಾದ ಹಿರೇಬೇನೆ ತಡೆಗೆ ಲಸಿಕಾ ಕಾರ್ಯಕ್ರಮ ಆರಂಭ
ಮೈಸೂರು

ಕುರಿ-ಮೇಕೆಗಳಿಗೆ ಮಾರಕವಾದ ಹಿರೇಬೇನೆ ತಡೆಗೆ ಲಸಿಕಾ ಕಾರ್ಯಕ್ರಮ ಆರಂಭ

January 18, 2022

ಮೈಸೂರು,ಜ.17(ಪಿಎಂ)- ಕುರಿ-ಮೇಕೆಗಳಿಗೆ ಮಾರಕ ವಾದ ಹಿರೇಬೇನೆ (ಪಿಪಿಆರ್) ಎಂಬ ವೈರಾಣು ತಡೆಗೆ ಮೈಸೂರು ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮ ಆರಂಭ ವಾಗಿದೆ. ನಾಲ್ಕು ಲಕ್ಷ ಮೇಕೆ ಮತ್ತು ಕುರಿಗಳಿಗೆ ಲಸಿಕೆ ನೀಡುವ ಈ ಕಾರ್ಯಕ್ರಮವು ತಿಂಗಳ ಕಾಲ ನಡೆಯಲಿದೆ. ಜಿಲ್ಲೆಯಲ್ಲಿ 2,03,463 ಕುರಿಗಳು ಮತ್ತು 2,08,206 ಮೇಕೆಗಳಿಗೆ (ಒಟ್ಟು 4,11,669) ಲಸಿಕೆ ನೀಡಲು ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಮುಂದಾಗಿದೆ. ಕಾಲು ಮತ್ತು ಬಾಯಿಯಲ್ಲಿ ಹುಣ್ಣು ಆಗುವುದನ್ನು ತಡೆಗಟ್ಟಲು ಪ್ರತಿ 6 ತಿಂಗಳಿಗೊಮ್ಮೆ ಈ ಲಸಿಕೆ…

ಅಯ್ಯಪ್ಪ ಭಕ್ತರಿಗೆ ಹೊದಿಕೆ ವಿತರಣೆ
ಮೈಸೂರು

ಅಯ್ಯಪ್ಪ ಭಕ್ತರಿಗೆ ಹೊದಿಕೆ ವಿತರಣೆ

January 18, 2022

ಮೈಸೂರು, ಜ.17(ಆರ್‍ಕೆಬಿ)- ಕೊರೆಯುವ ಚಳಿಯಲ್ಲಿ ಅಯ್ಯಪ್ಪ ದರ್ಶನಕ್ಕೆಂದು ಶಬರಿಮಲೆಗೆ ತೆರಳುವ 40ಕ್ಕೂ ಹೆಚ್ಚು ಮಂದಿ ಬಡ ವರ್ಗದ ಅಯ್ಯಪ್ಪ ಭಕ್ತರಿಗೆ ಅಭಯಂ ಫೌಂಡೇಷನ್, ಜೀವಧಾರ ರಕ್ತನಿಧಿ ಕೇಂದ್ರ ಮತ್ತು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಹೊದಿಕೆ ನೀಡಿ ಬೀಳ್ಕೊಡಲಾಯಿತು. ಮೈಸೂರು ರಾಘವೇಂದ್ರನಗರದ ಅಯ್ಯಪ್ಪ ದೇವಸ್ಥಾನದಲ್ಲಿ ನಡೆದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹೊದಿಕೆಗಳನ್ನು ವಿತರಿಸಿ ಮಾತನಾಡಿದರು. ಸನಾತನ ಧರ್ಮದ ಪ್ರಕಾರ ಮನುಷ್ಯನು ಭಗವಂತನಲ್ಲಿ ಐಕ್ಯವಾಗಲು ರಾಜಯೋಗ, ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ…

ವಾಹನ ಚಾಲಕರಿಗೆ ಮಾತ್ರವಲ್ಲ; ಪಾದಚಾರಿಗಳಿಗೂ ಆದ್ಯತೆ ನೀಡಬೇಕಲ್ಲವೇ?
ಮೈಸೂರು

ವಾಹನ ಚಾಲಕರಿಗೆ ಮಾತ್ರವಲ್ಲ; ಪಾದಚಾರಿಗಳಿಗೂ ಆದ್ಯತೆ ನೀಡಬೇಕಲ್ಲವೇ?

January 18, 2022

ಮೈಸೂರು, ಜ.17- ರಸ್ತೆಯೇನೋ ಅಭಿವೃದ್ಧಿ ಆಗಿದೆ. ಇದರಿಂದ ವಾಹನ ಚಾಲಕರಿಗೆ ಅನುಕೂಲವಾಯಿತು. ಆದರೆ, ಪಾದಚಾರಿಗಳ ಪಾಡಂತೂ ಹೇಳ ತೀರದಾಗಿದೆ. ಮೈಸೂರು ಹೆಬ್ಬಾಳು ಭಾಗದ ರಿಂಗ್ ರಸ್ತೆ (ಭಾರತ್ ಕ್ಯಾನ್ಸರ್ ಆಸ್ಪತ್ರೆ ಬಳಿ)ಯಿಂದ ಮಂಚೇಗೌಡನಕೊಪ್ಪಲು ಅಭಿಷೇಕ್ ಸ್ಟೋರ್ ಸರ್ಕಲ್‍ವರೆಗೆ ರಸ್ತೆಯನ್ನು ಕಳೆದ ಆರು ತಿಂಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ. ಮುಡಾ ಕಲ್ಯಾಣ ಮಂಟಪದವರೆಗೆ ದ್ವಿಪಥ ರಸ್ತೆ, ಅಲ್ಲಿಂದ ಬಾಕಿ ರಸ್ತೆಯನ್ನು ಸಿಂಗಲ್ ರಸ್ತೆಯಾಗಿ ಅಭಿವೃದ್ಧಿ ಮಾಡಿ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ರಿಂಗ್ ರಸ್ತೆ ಕಡೆಯಿಂದ ಈ ರಸ್ತೆ ಎಡಭಾಗದಲ್ಲಿ ಕೆಲವೆಡೆ…

ಮುಡಾ ನೂತನ ಆಯುಕ್ತ ಜಿ.ಟಿ. ದಿನೇಶ್‍ಕುಮಾರ್ ಅಧಿಕಾರ ಸ್ವೀಕಾರ
ಮೈಸೂರು

ಮುಡಾ ನೂತನ ಆಯುಕ್ತ ಜಿ.ಟಿ. ದಿನೇಶ್‍ಕುಮಾರ್ ಅಧಿಕಾರ ಸ್ವೀಕಾರ

January 18, 2022

ಮೈಸೂರು,ಜ.17(ಎಂಟಿವೈ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಕೆಎಎಸ್ ಅಧಿಕಾರಿ ಜಿ.ಟಿ. ದಿನೇಶ್‍ಕುಮಾರ್ ಸೋಮವಾರ ಅಧಿ ಕಾರ ಸ್ವೀಕರಿಸಿದರು. ಡಾ.ಡಿ.ಬಿ.ನಟೇಶ್ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಘಟಪ್ರಭ ಮತ್ತು ಮಲ ಪ್ರಭ ಅಚ್ಚುಕಟ್ಟು ಪ್ರದೇಶದ ಪ್ರದೇಶಾಭಿ ವೃದ್ಧಿ ಅಧಿಕಾರಿಯಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಕಳೆದ ಶುಕ್ರವಾರ ಸರ್ಕಾರ ಮುಡಾ ಆಯುಕ್ತರಾಗಿ ವರ್ಗಾ ವಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೋಮ ವಾರ ಬೆಳಿಗ್ಗೆ ಮುಡಾ ಕಚೇರಿಗೆ ಆಗಮಿ ಸಿದ ನೂತನ ಆಯುಕ್ತರು ಕಡತಕ್ಕೆ ಸಹಿ ಮಾಡುವ ಮೂಲಕ ವಿದ್ಯುಕ್ತವಾಗಿ ಅಧಿಕಾರ…

ಎರಡನೇ ವಾರಾಂತ್ಯ ಕಫ್ರ್ಯೂಗೆ ಮೈಸೂರಲ್ಲಿ ಉತ್ತಮ ಪ್ರತಿಕ್ರಿಯೆ
ಮೈಸೂರು

ಎರಡನೇ ವಾರಾಂತ್ಯ ಕಫ್ರ್ಯೂಗೆ ಮೈಸೂರಲ್ಲಿ ಉತ್ತಮ ಪ್ರತಿಕ್ರಿಯೆ

January 17, 2022

ಮೈಸೂರು, ಜ.16(ಎಂಟಿವೈ)- ಕೊರೊನಾ ಸೋಂಕು ಹರಡದಂತೆ ತಡೆಯುವ ಸಲುವಾಗಿ ಸರ್ಕಾರ ಜಾರಿಗೆ ತಂದಿದ್ದ ವಾರಾಂತ್ಯ ಕಫ್ರ್ಯೂಗೆ ಭಾನುವಾರವೂ ಮೈಸೂರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಜಾರಿಗೆ ತಂದಿದ್ದ ವಾರಾಂತ್ಯ ಕಫ್ರ್ಯೂಗೆ ಜನರು ಸ್ಪಂದಿಸಿದರು. ಬೆರಳೆಣಿಕೆಯಷ್ಟು ಜನರು ಮತ್ತು ವಾಹನಗಳ ಓಡಾಟ ಮಾತ್ರ ಇತ್ತು. ಅಗತ್ಯ ಸೇವೆಗಳು, ವೈದ್ಯಕೀಯ ಸೇವೆಗಳನ್ನು ಬಿಟ್ಟರೆ ಉಳಿದ ಎಲ್ಲಾ ವ್ಯಾಪಾರ-ವಹಿವಾಟು ಬಂದ್ ಆಗಿತ್ತು. ಮೈಸೂರಿನ ಪ್ರಮುಖ ರಸ್ತೆ, ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ ಸೇರಿದಂತೆ…

ಕೊರೊನಾ ಕಡಿವಾಣಕ್ಕೆ ಇನ್ನೂ ಕಠಿಣ ನಿರ್ಧಾರ ಸಾಧ್ಯವಿಲ್ಲ ಸೋಂಕಿನ ಸಂಗಡ ಬದುಕಬೇಕಿದೆ
News, ಮೈಸೂರು

ಕೊರೊನಾ ಕಡಿವಾಣಕ್ಕೆ ಇನ್ನೂ ಕಠಿಣ ನಿರ್ಧಾರ ಸಾಧ್ಯವಿಲ್ಲ ಸೋಂಕಿನ ಸಂಗಡ ಬದುಕಬೇಕಿದೆ

January 16, 2022

ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟನೆ ರಾಜ್ಯದ ಆರ್ಥಿಕ ಸ್ಥಿತಿ ಈಗಷ್ಟೇ ಸುಧಾರಿಸುತ್ತಿದೆ; ಈಗ ಮತ್ತೆ ಕಠಿಣ ಕ್ರಮ ಕೈಗೊಳ್ಳಲಾಗದು ಬೆಂಗಳೂರು, ಜ.೧೪(ಕೆಎಂಶಿ)-ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕಠಿಣ ತೀರ್ಮಾನ ಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಕೊರೊನಾ ಜೊತೆ ಬದುಕಬೇಕಿದೆ. ಆದರೆ ನಾವು ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮ ತೆಗೆದುಕೊಂಡರೆ ಸೋಂಕು ಎದುರಿಸಬಹುದು. ರಾಜ್ಯದ ಆರ್ಥಿಕ ಪರಿಸ್ಥಿತಿ ಈಗಷ್ಟೇ ಸುಧಾರಿಸುತ್ತಿದೆ. ಜನರ ಜೀವನವೂ ಒಂದು…

1 114 115 116 117 118 1,611
Translate »