ಮೈಸೂರು: ಜಯಂತಿಗಳ ಹೆಸರಿನಲ್ಲಿ ನೀಡುವ ರಜೆಗಳನ್ನು ಕಡ್ಡಾಯವಾಗಿ ರದ್ದುಪಡಿಸಬೇಕು ಎಂಬ ನಿಲುವಿಗೆ ಈಗಲೂ ಬದ್ಧನಾಗಿರುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇಂದಿಲ್ಲಿ ಪುನರುಚ್ಚರಿಸಿದರು. ಮೈಸೂರಿನ ಜೆ.ಕೆ.ಮೈದಾನದ ಎಂಎಂಸಿ ಅಮೃತ ಮಹೋತ್ಸವ ಭವನದಲ್ಲಿ ಕರ್ನಾ ಟಕ ಆರ್ಯ ವೈಶ್ಯ ಮಹಾಮಂಡಲಿ ಭಾನು ವಾರ ಆಯೋಜಿಸಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ವೈಶ್ಯ ಸಮಾವೇಶ ಹಾಗೂ ಚಿಂತನಾ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಹನೀಯರ ಜಯಂತಿಗಳಿಗೆ ರಜೆ ನೀಡುವ ಬದಲು, ಜಯಂತಿ ಹೆಸರಿನಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಸಮಾಜಗಳ ಅಭಿವೃದ್ಧಿಗೆ…
ಸಣ್ಣ ಸಣ್ಣ ವಿಚಾರಕ್ಕೂ ಜಾತಿ ತನ್ನದೇ ಆದ ಪಾತ್ರ ವಹಿಸುತ್ತಿದೆ
January 7, 2019ಮೈಸೂರು: ಸಣ್ಣ ಸಣ್ಣ ವಿಚಾರಗಳಿಗೂ ಜಾತಿ ತನ್ನದೇ ಯಾದ ಪಾತ್ರವಹಿಸುತ್ತಿದೆ ಎಂದು ವಿಷಾದಿ ಸಿದ ಶಾಸಕ ಎಸ್.ಎ.ರಾಮದಾಸ್, ಈ ವೇಳೆ ಕುವೆಂಪುರವರ ವಿಶ್ವ ಮಾನವ ಕಲ್ಪನೆಯನ್ನು ನಾವೆ ಲ್ಲರೂ ಸ್ಮರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಜೆ.ಪಿ.ನಗರದ ಡಾ.ಪುಟ್ಟ ರಾಜಗವಾಯಿ ಕ್ರೀಡಾಂ ಗಣದ ಯೋಗ ಮಂದಿರದಲ್ಲಿ ವಿಶ್ವಮಾನವ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹುತೇಕ ಕವಿಗಳು, ಗಣ್ಯರ ಜನ್ಮದಿನ ವನ್ನು ಆಚರಿಸುತ್ತೇವೆ. ಆದರೆ, ಎಲ್ಲರನ್ನು…
ಹೆಚ್ಚಿನ ಕರೆನ್ಸಿ ಆಸೆಯಿಂದ 14 ಲಕ್ಷ ರೂ. ಕಳೆದುಕೊಂಡ ಮೊಬೈಲ್ ಅಂಗಡಿ ಮಾಲೀಕ
January 7, 2019ಮೈಸೂರು: ಮಡಿಕೇರಿಯ ಮೊಬೈಲ್ ರಿಚಾರ್ಜ್ ಮಳಿಗೆಯೊಂದರ ಮಾಲೀಕ, ಹೆಚ್ಚುವರಿ ಕೊಡುಗೆಯ ಆಫರ್ ನಂಬಿಕೊಂಡು ವಂಚನೆಗೊಳಗಾಗಿ ಭಾರೀ ಮೊತ್ತವನ್ನು ಕಳೆದುಕೊಂಡಿದ್ದಾರೆ. 10 ಲಕ್ಷ ರೂ.ಗೆ ರೀಚಾರ್ಜ್ ಮಾಡಿಸಿದರೆ 10.70 ಲಕ್ಷ ರೂ. ಮೌಲ್ಯದ ಕರೆನ್ಸಿ ಬರುತ್ತದೆ ಎಂಬ ಆಮಿಷವನ್ನು ನಂಬಿ 13.97 ಲಕ್ಷ ರೂ. ಕಳೆದುಕೊಂಡಿದ್ದಾರೆ. ವಂಚನೆಗೊಳಗಾದ ಮಡಿಕೇರಿಯ ಮಹಮದ್ ಆಯೂಬ್ ಈ ಸಂಬಂಧ ಸರಸ್ವತಿ ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಮದ್ ಅಯೂಬ್ ಮಡಿಕೇರಿಯಲ್ಲಿ ಮೊಬೈಲ್ ಸೇಲ್ ಹಾಗೂ ರಿಚಾರ್ಜ್ ಅಂಗಡಿ ಇಟ್ಟುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ…
ಆರಂಭಗೊಂಡಿದೆ ಸ್ವಚ್ಛ ಸರ್ವೇಕ್ಷಣೆ, ನಾಗರಿಕರಿಗೂ ಇದೆ ಹೊಣೆ
January 7, 2019ಮೈಸೂರು: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ 2015 ಮತ್ತು 2016 ರಲ್ಲಿ ನಂ.1 ಸ್ಥಾನಕ್ಕೇರಿದ್ದ ಮೈಸೂರು ನಗರ 2019ರಲ್ಲಿ ಮತ್ತೊಮ್ಮೆ ಸ್ವಚ್ಛ ಸರ್ವೇಕ್ಷಣೆಗೆ ಸಿದ್ಧವಾಗಿದ್ದು, ಈ ಸಾಲಿನಲ್ಲೂ ಮೊದಲ ಸ್ಥಾನ ಗಳಿಸಲು ಮೈಸೂರಿನ ಜನತೆ ಸಹ ಕಾರ ನೀಡಬೇಕೆಂದು ಮೇಯರ್ ಪುಷ್ಪಲತಾ ಜಗನ್ನಾಥ್ ಮನವಿ ಮಾಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪ್ರಸಕ್ತ ಸಾಲಿನ ಸರ್ವೇ ಸರ್ವೇಕ್ಷಣೆ ಜ.4ರಿಂದ ಆರಂಭವಾಗಿದ್ದು, ಜ.31 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಸರ್ವೇಕ್ಷಣಾ ತಂಡ ಮೈಸೂರಿಗೆ…
ಬಸವೇಶ್ವರ ರಸ್ತೆ ನಿವಾಸಿಗಳ ನೀರಿನ ಸಮಸ್ಯೆ ನೀಗಿಸಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್
January 7, 2019ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸವೇಶ್ವರ ರಸ್ತೆಯ 5, 6 ಮತ್ತು 7ನೇ ಕ್ರಾಸ್‍ನಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಸ್ಥಳೀಯರ ಒತ್ತಾಯದ ಮೇರೆಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಬಗೆಹರಿಸಿದರು. ಈ ಸಂದರ್ಭದಲ್ಲಿ ದೂರಿದ ಅಲ್ಲಿನ ನಿವಾಸಿಗಳು, ನಗರಪಾಲಿಕೆ ಸದಸ್ಯರಿಗೆ ದೂರವಾಣಿಯಲ್ಲಿ ಸಮಸ್ಯೆಗಳ ಬಗ್ಗೆ ತಿಳಿಸಿದರೆ, ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೆ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕರ ಮುಂದೆ ತಮ್ಮ…
ಇಲಾಖೆಗಳಲ್ಲಿ ಖಾಲಿ ಇರುವ ಶೇ.40ರಷ್ಟು ಹುದ್ದೆ ಭರ್ತಿಗೆ ಸರ್ಕಾರ ನಿರ್ಲಕ್ಷ್ಯ
January 7, 2019ಮೈಸೂರು: ರಾಜ್ಯ ಸರ್ಕಾರದ ಅನೇಕ ಇಲಾಖೆಗಳಲ್ಲಿ ಶೇ.40 ರಷ್ಟು ಹುದ್ದೆಗಳು ಖಾಲಿ ಉಳಿದಿದ್ದು, ಹುದ್ದೆಗಳ ಭರ್ತಿ ವಿಚಾರದಲ್ಲಿ ಸರ್ಕಾರ ಆಮೆಗತಿಯಲ್ಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಕೆ.ರಾಮು ಬೇಸರ ವ್ಯಕ್ತಪಡಿಸಿದರು. ಮೈಸೂರಿನ ನಜರ್‍ಬಾದಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‍ಗಳ ಸಂಘದ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲಾ ಶಾಖೆ ವತಿಯಿಂದ ಭಾನು ವಾರ ಹಮ್ಮಿಕೊಂಡಿದ್ದ 57ನೇ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ರಾಜ್ಯ ಸರ್ಕಾರದ…
ಬಿಇಎಂಎಲ್ ರಂಗ ಸಂಭ್ರಮದಲ್ಲಿ ‘ಸುಂಟರಗಾಳಿ’
January 7, 2019ಮೈಸೂರು: ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಸಾಂಸ್ಕøತಿಕ ಚಟುವಟಿಕೆ ಗಳಲ್ಲಿ ಭಾಗವಹಿಸಬೇಕು ಎಂದು ಬಿಇಎಂಎಲ್ ಮೈಸೂರು ಘಟಕದ ಪ್ರಧಾನ ವ್ಯವಸ್ಥಾಪಕ ಹೆಚ್.ಎಸ್.ರಂಗನಾಥ್ ಕಿವಿಮಾತು ಹೇಳಿದರು. ಮೈಸೂರಿನ ಕಲಾಮಂದಿರದಲ್ಲಿ ದಕ್ಷಿಣ ಕನ್ನಡಿಗರ ಒಕ್ಕೂಟ ಬಿಇಎಂಎಲ್ ಮೈಸೂರು ಘಟಕ ಭಾನುವಾರ ಆಯೋಜಿಸಿದ್ದ ‘ರಂಗಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬಹುಮುಖ ಪ್ರತಿಭಾವಂತರಾಗಬೇಕು. ಎಲ್ಲಾ ಕ್ಷೇತ್ರದಲ್ಲಿಯೂ ಅಭಿರುಚಿಯನ್ನು ಬೆಳೆಸಿಕೊಂಡಿರಬೇಕು ಎಂದರು. ಇದೇ ವೇಳೆ ‘ರಂಗ ಸವ್ಯ ಸಾಚಿ’ ಪ್ರಶಸ್ತಿ ಪಡೆದ ಸುಳ್ಯದ ವಿದ್ಯಾರ್ಥಿ ಮನುಜ ನೇಹಿಗ, ‘ದಶ ಕಲಾ ಕೌಶಲ್ಯ’ ಪ್ರದರ್ಶಿಸಿ ಪ್ರೇಕ್ಷಕರನ್ನು…
ಜ್ಞಾನದ ಆಧಾರದಿಂದ ಬರುವ ಆದಾಯಕ್ಕೆ ಮಾತ್ರ ಸಮಾಜದಲ್ಲಿ ಬೆಲೆಯಿದೆ
January 7, 2019ಮೈಸೂರು: ಹಣ ಸಂಪಾದಿಸಲು ವಿದ್ಯಾಭ್ಯಾಸ ಅನಿ ವಾರ್ಯವಲ್ಲ. ವಿದ್ಯಾಭ್ಯಾಸ ಮಾಡದ ಮನುಷ್ಯನೂ ಬೇರೆ ಬೇರೆ ದಾರಿಗಳಲ್ಲಿ ಹಣ ಸಂಪಾದಿಸಬಹುದು. ಆದರೆ ಜ್ಞಾನದ ಆಧಾರ ದಿಂದ ಬರುವ ಆದಾಯಕ್ಕೆ ಮಾತ್ರ ಸಮಾಜದಲ್ಲಿ ಬೆಲೆಯಿದೆ ಎನ್ನು ವುದನ್ನು ನಾವು ಅರಿಯಬೇಕು ಎಂದು ಶ್ರೀರಂಗಪಟ್ಟಣದ ಪರಿ ವರ್ತನ ಸಂಸ್ಥೆ ಡೀನ್ ಹಾಗೂ ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಎ. ಚೇತನ್‍ರಾಮ್ ಅಭಿಪ್ರಾಯಪಟ್ಟರು. ನಗರದ ಬಿ.ಎನ್ ರಸ್ತೆಯಲ್ಲಿರುವ ಜೆಎಸ್‍ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ 2018-19ನೇ ಸಾಲಿನ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ…
ಅಂಧ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ
January 7, 2019ಮೈಸೂರು: ಬಿ.ಎನ್.ರಸ್ತೆಯಲ್ಲಿರುವ ಜೋಯ್ ಅಲು ಕಾಸ್ ಜ್ಯುವೆಲರ್ಸ್‍ನಲ್ಲಿ ಹೆಲ್ಪ್ ದಿ ಬ್ಲೈಂಡ್ ಫೌಂಡೇಷನ್ ವತಿಯಿಂದ ಅಂಧ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಅಕ್ಷ ಭಾರತ್ ಮಿಷನ್, ಟೀಮ್ ಸ್ವಚ್ಛಂದ, ಇನ್ನರ್ ವ್ಹೀಲ್ ಕ್ಲಬ್ ಆಫ್ ಸೆಂಟ್ರಲ್ ಮೈಸೂರು, ಲಯನ್ಸ್ ಇಂಟರ್ ನ್ಯಾಷ ನಲ್ ಮತ್ತಿತರೆ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕ್ರಾರ್ಯ ಕ್ರಮದಲ್ಲಿ ಜೆಎಸ್‍ಎಸ್ ಪಾಲಿಟೆಕ್ನಿಕ್ ಅಂಧ ಮಕ್ಕಳ ಶಾಲೆ, ಮಹಾರಾಣಿ, ಮಹಾರಾಜ, ಎಸ್‍ಬಿಆರ್‍ಆರ್ ಮಹಾ ಜನ ಕಾಲೇಜು ಮತ್ತು ಪೀಪಲ್ಸ್ ಪಾರ್ಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿಪೂರ್ವ ಮತ್ತು…
ಸಣ್ಣ ಕತೆಗಳ ಸಂಕಲನ ‘ಎಲಿಫಾಂಟ್ ಆನ್ ದ ಮೈಂಡ್’ ಬಿಡುಗಡೆ
January 7, 2019ಮೈಸೂರು: ಲೇಖಕ ಕೆ.ಆರ್.ಎಸ್.ಕೃಷ್ಣ ಅವರ ‘ಎಲಿಫಾಂಟ್ ಆನ್ ದ ಮೈಂಡ್’ ಕೃತಿಯನ್ನು ಸಾಹಿತಿ ಪ್ರೊ.ಸಿ.ನಾಗಣ್ಣ ಬಿಡುಗಡೆ ಮಾಡಿದರು. ಮೈಸೂರಿನ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಶಾಲೆ ಸಭಾಂಗಣದಲ್ಲಿ ಮೈಸೂರು ಲಿಟರರಿ ಆಸೋಸಿಯೇಷನ್ ವತಿ ಯಿಂದ ಆಯೋಜಿಸಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನಸ್ಸಿನಲ್ಲಿರುವ ಆನೆಯಷ್ಟು ಭಾರವಾದ ನೋವನ್ನು ಲೇಖಕ ಕೃಷ್ಣ ತಮ್ಮ ಬರ ವಣಿಗೆಯ ಮೂಲಕ ಹೊರಹಾಕಿದ್ದಾರೆ. ಸಣ್ಣ ಸಣ್ಣ 8 ಕತೆಗಳನ್ನು ಒಳಗೊಂಡಿರುವ ಪುಸ್ತಕದಲ್ಲಿ ತಮಗೆ ಎದುರಾದ ಕಷ್ಟ ಗಳನ್ನು ಉತ್ತಮ ಸಂಭಾಷಣೆಯ ಮೂಲಕ ವ್ಯಕ್ತಪಡಿಸಿದ್ದಾರೆ….










