ಸಣ್ಣ ಕತೆಗಳ ಸಂಕಲನ ‘ಎಲಿಫಾಂಟ್  ಆನ್ ದ ಮೈಂಡ್’ ಬಿಡುಗಡೆ
ಮೈಸೂರು

ಸಣ್ಣ ಕತೆಗಳ ಸಂಕಲನ ‘ಎಲಿಫಾಂಟ್ ಆನ್ ದ ಮೈಂಡ್’ ಬಿಡುಗಡೆ

January 7, 2019

ಮೈಸೂರು: ಲೇಖಕ ಕೆ.ಆರ್.ಎಸ್.ಕೃಷ್ಣ ಅವರ ‘ಎಲಿಫಾಂಟ್ ಆನ್ ದ ಮೈಂಡ್’ ಕೃತಿಯನ್ನು ಸಾಹಿತಿ ಪ್ರೊ.ಸಿ.ನಾಗಣ್ಣ ಬಿಡುಗಡೆ ಮಾಡಿದರು.
ಮೈಸೂರಿನ ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಶಾಲೆ ಸಭಾಂಗಣದಲ್ಲಿ ಮೈಸೂರು ಲಿಟರರಿ ಆಸೋಸಿಯೇಷನ್ ವತಿ ಯಿಂದ ಆಯೋಜಿಸಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನಸ್ಸಿನಲ್ಲಿರುವ ಆನೆಯಷ್ಟು ಭಾರವಾದ ನೋವನ್ನು ಲೇಖಕ ಕೃಷ್ಣ ತಮ್ಮ ಬರ ವಣಿಗೆಯ ಮೂಲಕ ಹೊರಹಾಕಿದ್ದಾರೆ. ಸಣ್ಣ ಸಣ್ಣ 8 ಕತೆಗಳನ್ನು ಒಳಗೊಂಡಿರುವ ಪುಸ್ತಕದಲ್ಲಿ ತಮಗೆ ಎದುರಾದ ಕಷ್ಟ ಗಳನ್ನು ಉತ್ತಮ ಸಂಭಾಷಣೆಯ ಮೂಲಕ ವ್ಯಕ್ತಪಡಿಸಿದ್ದಾರೆ.

ಸುಮಾರು 50 ಸಣ್ಣ ಕತೆಗಳನ್ನು ಬರೆದಿ ರುವ ಇವರು ಸಣ್ಣ ಕತೆ ಬರೆಯುವ ಕಲೆಯನ್ನು
ಕರಗತ ಮಾಡಿಕೊಂಡಿದ್ದಾರೆ. ಅವರ ಅನೇಕ ಲೇಖನಗಳು ಅಂತರ ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟ ವಾಗಿವೆ. ಮೂಲತಃ ಆಂಧ್ರಪ್ರದೇಶದವ ರಾದ ಕೃಷ್ಣ ಮೈಸೂರಿನ ಅಳಿಯ. ದೇಶ ದಲ್ಲಿಯೇ ಸಾಂಸ್ಕøತಿಕ ವೈಭವ ಮೈಸೂರಿ ನಲ್ಲಿದೆ ಎಂದು ಹಾಡಿ ಹೊಗಳಿದ್ದಾರೆ ಎಂದರು.

ಸಾಂಸ್ಕøತಿಕ, ಸಾಹಿತ್ಯದ ವಾತಾವರಣ ಮೈಸೂರಿನಲ್ಲಿ ಬಿಟ್ಟರೆ ವಿಶ್ವದ ಯಾವ ನಗರದಲ್ಲಿಯೂ ಇಲ್ಲ ಎಂದಿದ್ದಾರೆ. ಕತೆ ಗಳಲ್ಲಿ ಪಾತ್ರಗಳನ್ನು ಬಲವಂತಗೊಳಿಸದೆ ಸ್ವತಂತ್ರ ಸಂಭಾಷಣೆಗಳ ಮೂಲಕ ಕಟ್ಟಿ ಕೊಟ್ಟಿದ್ದಾರೆ. ಇವರ ಕೃತಿಯು ನಾಟಕಗ ಳನ್ನು ಮಾಡಲು ಸಹಕಾರಿಯೂ ಆಗಿದೆ.

ಯಾರೇ ಓದಿದರೂ ಸುಖ, ಸಂತೋಷ ಪಡೆಯುತ್ತಾರೆ. ಗದ್ಯದ ಮಾದರಿ ಯಲ್ಲಿರುವ ಕತೆಗಳು ಓದುತ್ತಾ ಪದ್ಯದ ರೂಪ ಪಡೆದುಕೊಳುವಂತಹ ಸಂಭಾ ಷಣೆಯನ್ನು ಬಳಸಿದ್ದಾರೆ. ಅವರು, ರಾಜ ಕೀಯ ಸಮಸ್ಯೆಗಳನ್ನು ನೇರವಾಗಿ ಹೇಳದೆ, ವಾಸ್ತವ ಪರಿಸ್ಥಿತಿಯನ್ನು ಪ್ರಸ್ತುತಪಡಿಸಿ ದ್ದಾರೆ ಎಂದು ತಿಳಿಸಿದರು.

ಲೇಖಕ ಕೃಷ್ಣ, ಸೀಮಿತ ವಲಯದಲ್ಲಿ ಕತೆಗಳನ್ನು ಬರೆದಿದ್ದರೂ, ಕೊಟ್ಟಿರುವ ಚಿತ್ರಗಳು ಮನಸ್ಸಿನಲ್ಲಿ ಆಳವಾಗಿ ಉಳಿ ಯುತ್ತವೆ. ಹಾಗಾಗಿ ಲೇಖಕರ ಕಲ್ಪನೆ ನಿಶ್ಚಿತವಾಗಿದೆ. ಪಾತ್ರಗಳ ಪರಕಾಯ ಪ್ರವೇಶ ಎಲ್ಲವೂ ಕೃತಿಯಲ್ಲಿ ಅಡಕವಾ ಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡುವ ಎಲ್ಲಾ ಲಕ್ಷಣಗಳನ್ನು ಲೇಖಕ ಕೃಷ್ಣ ಹೊಂದಿದ್ದಾರೆ ಎಂದು ಅಭಿವ್ಯಕ್ತಪಡಿಸಿದರು.

ಮೈಸೂರು ಲಿಟರರಿ ಅಸೋಸಿಯೇಷನ್ ಅಧ್ಯಕ್ಷ ಕೆ.ಸಿ.ಬೆಳ್ಳಿಯಪ್ಪ, ಕಾರ್ಯದರ್ಶಿ ರಿಜಿಲಾಡ್ ವೆಸ್ಲಿ, ಲೇಖಕ ಕೆ.ಆರ್.ಎಸ್. ಕೃಷ್ಣ ಉಪಸ್ಥಿತರಿದ್ದರು.

Translate »