ಅಂಧ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ
ಮೈಸೂರು

ಅಂಧ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ

January 7, 2019

ಮೈಸೂರು: ಬಿ.ಎನ್.ರಸ್ತೆಯಲ್ಲಿರುವ ಜೋಯ್ ಅಲು ಕಾಸ್ ಜ್ಯುವೆಲರ್ಸ್‍ನಲ್ಲಿ ಹೆಲ್ಪ್ ದಿ ಬ್ಲೈಂಡ್ ಫೌಂಡೇಷನ್ ವತಿಯಿಂದ ಅಂಧ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.

ಅಕ್ಷ ಭಾರತ್ ಮಿಷನ್, ಟೀಮ್ ಸ್ವಚ್ಛಂದ, ಇನ್ನರ್ ವ್ಹೀಲ್ ಕ್ಲಬ್ ಆಫ್ ಸೆಂಟ್ರಲ್ ಮೈಸೂರು, ಲಯನ್ಸ್ ಇಂಟರ್ ನ್ಯಾಷ ನಲ್ ಮತ್ತಿತರೆ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕ್ರಾರ್ಯ ಕ್ರಮದಲ್ಲಿ ಜೆಎಸ್‍ಎಸ್ ಪಾಲಿಟೆಕ್ನಿಕ್ ಅಂಧ ಮಕ್ಕಳ ಶಾಲೆ, ಮಹಾರಾಣಿ, ಮಹಾರಾಜ, ಎಸ್‍ಬಿಆರ್‍ಆರ್ ಮಹಾ ಜನ ಕಾಲೇಜು ಮತ್ತು ಪೀಪಲ್ಸ್ ಪಾರ್ಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ವಿದ್ಯಾರ್ಥಿಗಳಾದ ಕಾವೇರಿ, ನೇತ್ರಾ, ಭುವನೇಶ್ವರಿ, ಚೈತ್ರ, ಅಭಿನಂದನಾ, ಸಹನಾ, ಶೈಲಜಾ, ಸುಶ್ಮಿತಾ, ಶಿಲ್ಪ, ಸಹನಾ, ಹಸೀನ್ ತಾಜ್, ಸಕ್ಕುಬಾಯಿ, ವರದ ರಾಜು, ಮಂಜುನಾಥ್, ಮನೋಜ್ ಸೇರಿದಂತೆ 70 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಸೇವಾ ನಿಕೇತನ ಶಾಲೆ ಅಧ್ಯಕ್ಷ ಕೆ.ಎಸ್.ಗುರುರಾಜ್ ವಿದ್ಯಾರ್ಥಿವೇತನ ಚೆಕ್ ವಿತರಿಸಿದರು.
ಹೆಲ್ಪ್ ದಿ ಬ್ಲೈಂಡ್ ಫೌಂಡೇಷನ್ ಟ್ರಸ್ಟಿ ಎನ್.ಶಿವಾಜಿರಾವ್, ಜೆಎಸ್‍ಎಸ್ ಆಸ್ಪತ್ರೆ ವೈದ್ಯೆ ಡಾ.ಮಂಗಳ, ಇನ್ನರ್ ವೀಲ್ಹ್ ಕ್ಲಬ್ ಆಫ್ ಸೆಂಟ್ರಲ್ ಮೈಸೂರು ಅಧ್ಯಕ್ಷೆ ಅನಿತಾ ಸುರೇಶ್, ಜೋಯ್ ಅಲುಕಾಸ್ ಜ್ಯುವೆಲರ್ಸ್ ಶಾಖೆ ವ್ಯವ ಸ್ಥಾಪಕ ಜೋಫಿ ಪಾಲ್ ಮತ್ತಿತರರು ಉಪಸ್ಥಿತರಿದ್ದರು.

Translate »