ಮೈಸೂರಲ್ಲಿ ಮಲೆನಾಡು-ಕರಾವಳಿ ಪಾಕೋತ್ಸವ ‘ಅಮೃತಪಾಕ’
ಮೈಸೂರು

ಮೈಸೂರಲ್ಲಿ ಮಲೆನಾಡು-ಕರಾವಳಿ ಪಾಕೋತ್ಸವ ‘ಅಮೃತಪಾಕ’

January 7, 2019

ಮೈಸೂರು: ಮೈಸೂರಿನ ಅರಸು ಬೋರ್ಡಿಂಗ್ ಶಾಲಾ ಆವರಣ ದಲ್ಲಿ ಹವೀಕ ಸಂಘದ ವತಿಯಿಂದ ಏರ್ಪಡಿಸಿದ್ದ ಎರಡು ದಿನಗಳ `ಅಮೃತಪಾಕ’ ಮಲೆನಾಡು-ಕರಾವಳಿ ಪಾಕೋತ್ಸವವನ್ನು ಕಿರುತೆರೆ ನಟಿ ದೀಪಾ ರವಿಶಂಕರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮನುಷ್ಯ ತನ್ನ ಬದುಕು ಕಟ್ಟಿಕೊಳ್ಳಲು ಜೀವನ ಶೈಲಿ ಮತ್ತು ಆಹಾರ ಬಹುಮುಖ್ಯವಾಗಿದ್ದು, ಇಂದಿಗೂ ನಮ್ಮ ಆಹಾರ ಪದ್ಧತಿ ಸಮಾ ಜದ ವಿಕಾಸಕ್ಕೆ ಅನುಗುಣವಾಗಿ ಬೆಳೆದು ಬಂದಿದೆ. ನಾವು ಸಾಂಸ್ಕøತಿಕವಾಗಿ ಗುರುತಿಸಿ ಕೊಳ್ಳಲು ಆಹಾರ ಕ್ರಮಗಳು ಕೂಡ ಸಹ ಕಾರಿಯಾಗಿದ್ದು, ಸಾಮಾಜಿಕವಾಗಿ ನಮ್ಮನ್ನು ಪ್ರತಿನಿಧಿಸುತ್ತಿವೆ ಎಂದರು.

ಇಂದು ಆಹಾರ ಮತ್ತು ಜೀವನ ಶೈಲಿ ನಿರಂತರ ಬದಲಾಗುತ್ತದೆ. ಹೊಸ ಆಹಾರ ಪದಾರ್ಥ ಮಾರುಕಟ್ಟೆಯಲ್ಲಿ ಲಭ್ಯವಿದೆ. ಪಿಜ್ಜಾ, ಬರ್ಗರ್‍ನಂತಹ ಆಹಾರ ದೇಹ ವನ್ನು ಹಾಳು ಮಾಡುತ್ತದೆ. ಇವುಗಳಿಂ ದಾಗಿ ನಮ್ಮ ದೇಶೀಯ ರುಚಿಯನ್ನು ಮರೆ ಯುತ್ತಿದ್ದೇವೆ. ನಮ್ಮದೇ ಆದ ಆಹಾರ ಪದ್ಧತಿ ಬೆಳೆಸಿ-ಉಳಿಸಿ ಮುಂದಿನ ಪೀಳಿ ಗೆಗೆ ಪರಿಚಯಿಸಬೇಕು ಎಂದು ಹೇಳಿದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ನಾವು ತಿನ್ನುವ ಆಹಾರ ಅಮೃತವಾಗಿರಬೇಕು. ಭಾರತೀಯ ಆಹಾರ ಪದ್ಧತಿ ಮತ್ತು ಯೋಗದಿಂದ ಎಚ್‍ಐವಿ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು. ಭಾರತದ ಆಹಾರ ಪದ್ಧತಿ ಔಷಧಿ ಗುಣವನ್ನು ಹೊಂದಿದೆ. ಇಂದು ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಮನುಷ್ಯರಿಗಷ್ಟೇ ಅಲ್ಲದೆ ಪ್ರಾಣಿಗಳಿಗೂ ಕ್ಯಾನ್ಸರ್ ಬರುತ್ತಿದೆ. ಆಹಾರ ಪದ್ಧತಿಯನ್ನು ರೋಗ ನಿರೋಧಕವಾಗಿ ಬಳಸಿಕೊಳ್ಳಬೇಕು. ನಾವು ತಿನ್ನುವ ಆಹಾರ ಆಯಸ್ಸು ವೃದ್ಧಿಸುವಂತಿ ರಬೇಕು ಎಂದು ತಿಳಿಸಿದರು.

ಗಮನ ಸೆಳೆದ ಮಲೆನಾಡು-ಕರಾವಳಿ ಆಹಾರ ಖಾದ್ಯಗಳು: ಮಲೆನಾಡು, ಕರಾವಳಿ ಹಾಗೂ ಮೈಸೂರು ಭಾಗದ ಪ್ರಸಿದ್ಧ ಆಹಾರ ಖಾದ್ಯಗಳಾದ ಚೋಲೆ ಮಸಾಲ, ಕೊಟ್ಟೆ ಕಡುಬು, ಬಿಳಿಚಟ್ನಿ, ಬಿಳಿ ಹೋಳಿಗೆ, ಎಣ್ಣೆಗಾಯಿ, ಅಕ್ಕಿರೊಟ್ಟಿ, ಹಲಸಿನ ಎಲೆ ಇಡ್ಲಿ, ಉದ್ದಿನ ವಡೆ, ಮಸಾಲ ವಡೆ, ಅಪ್ಪೆಹುಳಿ, ಹಾಲ್‍ಬಾಯಿ, ಗಸಗಸೆ ಪಾಯಸ, ಪುಳಿಯೋಗರೆ, ಸ್ವೀಟ್ ಪೊಂಗಲ್, ಖಾರಾ ಪೊಂಗಲ್, ಮಸಾಲ ಇಡ್ಲಿ, ನುಚ್ಚಿನಉಂಡೆ, ಭಟ್ಸ್ ಬೆಣ್ಣೆ ದೋಸೆ, ಅಕ್ಕಿಕೇಸರಿ ಬಾತ್, ಅಕ್ಕಿ ವಡೆ, ಮಲ್ನಾಡ್ ಹೋಳಿಗೆ ತುಪ್ಪ, ಕುಟ್ಟುಲಕ್ಕಿ, ಗೋಧಿ ಹಲ್ವ ಸೇರಿದಂತೆ ವೈವಿಧ್ಯಮಯ ಪಾಕಗಳು ಆಹಾರ ಪ್ರಿಯರ ಗಮನ ಸೆಳೆದವು.

ಜಿಲ್ಲಾ ಯೂನಿಯನ್ ಅಧ್ಯಕ್ಷ ಹೆಚ್.ವಿ. ರಾಜೀವ್, ಕಾರ್ಪೊರೇಷನ್ ಬ್ಯಾಂಕ್‍ನ ಪ್ರಾದೇಶಿಕ ವ್ಯವಸ್ಥಾಪಕ ನಿರ್ದೇಶಕ ಎಸ್.ಎಲ್.ಗಣಪತಿ, ಶಿರಸಿಯ ವೇದ ವೆಲ್‍ನೆಸ್ ಸೆಂಟರ್ ಮುಖ್ಯಸ್ಥ ಡಾ.ವೆಂಕ ಟ್ರಮಣ ಹೆಗಡೆ, ಪಾಕೋತ್ಸವ ಸಮಿತಿ ಗೌರವಾಧ್ಯಕ್ಷ ಡಿ.ಎನ್.ಕೃಷ್ಣಮೂರ್ತಿ, ಹವೀಕ ಸಂಘದ ಅಧ್ಯಕ್ಷ ಎಲ್.ಎನ್. ಹೆಗಡೆ, ಕಾರ್ಯದರ್ಶಿ ಶಾಂತಾರಾಮ್ ಹೆಗಡೆ, ಶಾಂತಾರಾಮ್ ಭಟ್, ಅರುಣಾ ಚಲ, ಶರ್ಮ, ರವೀಂದ್ರ ಜೋಷಿ, ಜಿ.ಕೆ. ಉಮೇಶ್, ರಮೇಶ್, ಸುರೇಶ್ ಹೆಗಡೆ ಉಪಸ್ಥಿತರಿದ್ದರು.

Translate »