ಯುವಕರ ಒಗ್ಗಟ್ಟಿನಿಂದ ದೇಶದ ಸಮಸ್ಯೆ ನಿವಾರಣೆ
ಕೊಡಗು

ಯುವಕರ ಒಗ್ಗಟ್ಟಿನಿಂದ ದೇಶದ ಸಮಸ್ಯೆ ನಿವಾರಣೆ

January 7, 2019

ವೀರಾಜಪೇಟೆ: ಯುವಕರು ಒಗ್ಗಟ್ಟಾಗಿ ದೃಢ ಸಂಕಲ್ಪ ಮಾಡಿ ಮುಂದುವರಿ ದರೆ ದೇಶದ ಬಹುತೇಕ ಸಮಸ್ಯೆಗಳು ನಿವಾರಣೆಯಾಗಲಿದೆ ಎಂದು ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಎಂ. ನಾಚಪ್ಪ ಅಭಿಪ್ರಾಯಪಟ್ಟರು.

ಸಮೀಪದ ಕಂಡಂಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪಟ್ಟಣದ ಕಾವೇರಿ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿವ್ಯಕ್ತಿಯು ದೇಶ ಹಾಗೂ ಸಂಸ್ಕøತಿಯ ಕುರಿತು ಗಂಭೀರವಾಗಿ ಚಿಂತಿಸುವಂತಾಗ ಬೇಕು. ಎನ್‍ಎಸ್‍ಎಸ್ ನಂತಹ ಯೋಜನೆಗಳ ಸಮರ್ಪಕವಾದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಶಿಬಿರಕ್ಕೆ ಚಾಲನೆ ನೀಡಿದ ಪುಚ್ಚಿಮಂಡ ಎಂ.ಬೆಳ್ಯಯಪ್ಪ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳನ್ನು ದೂರ ಮಾಡಿದರೆ ಬದುಕಿನಲ್ಲಿ ಯಶಸ್ಸು ಸಾಧ್ಯ ಎಂದರು.
ಮುಲ್ಲೆಂಗಡ ಬೇಬಿ ಚೋಂದಮ್ಮ ಮಾತನಾಡಿ, ನಮ್ಮ ದೇಶದಲ್ಲಿನ ಸಂಸ್ಕøತಿ ಹಾಗೂ ವೈವಿಧ್ಯತೆಯನ್ನು ಬೇರೆ ಯಾವುದೇ ದೇಶದಲ್ಲಿ ಕಾಣಲು ಸಾಧ್ಯವಿಲ್ಲ ಎಂದರು. ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯನ್ನು ಜಿಲ್ಲೆಯಾದ್ಯಂತ ಪರಿಚಯಿಸಿದ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕೊಂಗಂಡ ಭೀಮಯ್ಯ, ಬಲ್ಲಡಿಚಂಡ ರವಿ ಸೋಮಯ್ಯ, ಬಲ್ಲಡಿ ಚಂಡ ಸೀತಮ್ಮ, ಕಂಜಿತಂಡ ಮಂದಣ್ಣ, ಬಬ್ಬಿರ ಮನು ಜೋಯಪ್ಪ, ಮುಲ್ಲೇಂಗಡ ನಟು ನಾಚಪ್ಪ ವೇದಿಕೆಯಲ್ಲಿದ್ದರು. ಎನ್‍ಎಸ್‍ಎಸ್ ಅಧಿಕಾರಿ ನಾಗರಾಜ್ ಸ್ವಾಗತಿ ಸಿದರು. ಆನಂದ ಕಾರ್ಲ ವಂದಿಸಿದರು.

Translate »