ಮಡಿಕೇರಿ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ   ಮಡಿಕೇರಿ ಸ್ಕ್ವೇರ್ ನಿರ್ಮಾಣಕ್ಕೆ ಪ್ರಸ್ತಾವನೆ
ಕೊಡಗು

ಮಡಿಕೇರಿ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಮಡಿಕೇರಿ ಸ್ಕ್ವೇರ್ ನಿರ್ಮಾಣಕ್ಕೆ ಪ್ರಸ್ತಾವನೆ

January 7, 2019

ಮಡಿಕೇರಿ: ಮಡಿಕೇರಿ ಹಳೇ ಖಾಸಗಿ ಬಸ್ ನಿಲ್ದಾಣದ ಖಾಲಿ ನಿವೇ ಶನದಲ್ಲಿ “ಮಡಿಕೇರಿ ಸ್ಕ್ವೇರ್” ನಿರ್ಮಿ ಸಲು ನಗರಸಭೆ ಉತ್ಸುಕತೆ ತೋರಿದೆ. ನಗರಸಭೆ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‍ನ ಸದಸ್ಯರು ಈ ಯೋಜನೆಗೆ ತಮ್ಮ ಬೆಂಬಲ ಸೂಚಿಸಿದರೆ, ಬಿಜೆಪಿ ಸದ ಸ್ಯರು ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ: ಮಡಿಕೇರಿ ಹಳೇ ಖಾಸಗಿ ಬಸ್ ನಿಲ್ದಾಣದ ಖಾಲಿ ನಿವೇ ಶನದಲ್ಲಿ “ಮಡಿಕೇರಿ ಸ್ಕ್ವೇರ್” ನಿರ್ಮಿ ಸಲು ನಗರಸಭೆ ಉತ್ಸುಕತೆ ತೋರಿದೆ. ನಗರಸಭೆ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‍ನ ಸದಸ್ಯರು ಈ ಯೋಜನೆಗೆ ತಮ್ಮ ಬೆಂಬಲ ಸೂಚಿಸಿದರೆ, ಬಿಜೆಪಿ ಸದ ಸ್ಯರು ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ “ಮಡಿಕೇರಿ ಸ್ಕ್ವೇರ್” ಯೋಜನೆ ಕುರಿತು ಚರ್ಚಿಸಲು ವಿಶೇಷ ಸಭೆ ನಡೆಸಲಾಯಿತು. ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಆಯುಕ್ತ ರಮೇಶ್ ಅವರುಗಳು ಯೋಜನೆ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿ, ಹಳೇ ಖಾಸಗಿ ಬಸ್ ನಿಲ್ದಾಣದ ಜಾಗದಲ್ಲಿ ಆಧುನಿಕ ತಂತ್ರ ಜ್ಞಾನದೊಂದಿಗೆ ತಡೆಗೋಡೆ ನಿರ್ಮಿಸಿ ಪ್ರವಾಸಿಗರನ್ನು ಆರ್ಕಷಿಸುವ ಕೇಂದ್ರವಾಗಿ ಮಾಡುವ ನಿಟ್ಟಿನಲ್ಲಿ ಚರ್ಚಿಸಲು ಸಭೆ ಕರೆದಿರುವುದಾಗಿ ವಿವರಿಸಿದರು.

ಆಧುನಿಕ ತಂತ್ರಜ್ಞಾನದೊಂದಿಗೆ ತಡೆ ಗೋಡೆ ನಿರ್ಮಿಸುವ ಬಗ್ಗೆ ಹಿರಿಯ ನಿವೃತ್ತ ಇಂಜಿಯರ್ ಸತ್ಯನಾರಾಯಣರಾವ್ ಪ್ರೊಜೆ ಕ್ಟರ್ ಮೂಲಕ ಮಾಹಿತಿ ನೀಡಿದರು. ನಂತರ ತಡೆಗೋಡೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿ ಸಿದ ಬಿಜೆಪಿ ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ, ಕೆ.ಎಸ್.ರಮೇಶ್, ಉಣ್ಣಿಕೃಷ್ಣ ಅವರುಗಳು ಮಾತನಾಡಿ, ಆಧುನಿಕ ತಂತ್ರ ಜ್ಞಾನದಂತೆ ತಡೆಗೋಡೆ ನಿರ್ಮಾಣ ವಾಗಲಿ. ಆದರೆ, ಪ್ರವಾಸೋದ್ಯಮಕ್ಕೆ ಪೂರಕವಾಗಿ ಯೋಜನೆ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿದೆ. ಇದರ ಬದಲು ಕಾಂಪ್ಲೆಕ್ಸ್ ನಿರ್ಮಿಸಿ ವಾಹನಗಳ ಪಾರ್ಕಿಂ ಗ್‍ಗೆ ಆ ಸ್ಥಳವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಸ್ಥಳವನ್ನು ಪ್ರವಾಸೋದ್ಯಮ ತಾಣ ವಾಗಿ ಅಭಿವೃದ್ದಿಪಡಿಸುವ ಬಗ್ಗೆ ಜಿಲ್ಲಾ ಧಿಕಾರಿಗಳು ಮಾತ್ರವಲ್ಲದೆ ಉಸ್ತುವಾರಿ ಸಚಿವರೂ ಆದ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಆಸಕ್ತಿ ತೋರಿದ್ದಾರೆ ಎಂದು ಕಾವೇರಮ್ಮ ಸೋಮಣ್ಣ ಹಾಗೂ ಸದಸ್ಯ ನಂದಕುಮಾರ್ ಹೇಳಿದರು.

ಸದಸ್ಯರಾದ ಶ್ರೀಮತಿ ಬಂಗೇರ, ತಜಸ್ಸುಂ ಮಾತನಾಡಿ, ಹಳೇ ಖಾಸಗಿ ಬಸ್ ನಿಲ್ದಾಣ ಜಾಗದಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ಯೋಜನೆಯನ್ನು ಜಾರಿಗೆ ತರುವುದು ಒಳ್ಳೆಯ ತೀರ್ಮಾನ ಎಂದು ಹೇಳಿದರು.

ಸಭೆಯಲ್ಲಿ ಯೋಜನೆ ಕುರಿತು ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ನಡೆಸಿ ಚರ್ಚಿ ಸಲು ನಿರ್ಧರಿಸಲಾಯಿತು. ಎರಡೂ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ “ಮಡಿಕೇರಿ ಸ್ಕ್ವೇರ್” ಯೋಜನೆಯ ಬಗ್ಗೆ ನೀಲ ನಕಾಶೆ ಪ್ರದರ್ಶಿಸದಿರುವುದು ಕೆಲವು ಸದಸ್ಯರ ಗೊಂದಲ ಹಾಗೂ ಅಸಮಾ ಧಾನಕ್ಕೆ ಕಾರಣವಾಯಿತು.

ಮಡಿಕೇರಿ ಹಳೇ ಖಾಸಗಿ ಬಸ್ ನಿಲ್ದಾಣದ ಕಟ್ಟಡ ಕೆಡವಲಾದ ಸ್ಥಳದಲ್ಲಿ ಪ್ರವಾಸೋದ್ಯಮ ಪೂರಕವಾದ ತಾಣವನ್ನಾಗಿಸಿ ನಗರದ ಸೌಂದರ್ಯಕ್ಕೆ ಹೊಸ ಭಾಷ್ಯ ಬರೆಯವಂತೆ “ಮೈಸೂರು ಮಿತ್ರ ಮತ್ತು “ಸ್ಟಾರ್ ಆಫ್ ಮೈಸೂರು” ಪತ್ರಿಕೆಯ ಪ್ರಧಾನ ಸಂಪಾದಕ ಕಲ್ಯಾಟಂಡ ಬಿ.ಗಣಪತಿ ಅವರು ತಮ್ಮ ಪ್ರಖ್ಯಾತ ಅಂಕಣ “ಛೂ ಮಂತ್ರ”ದ ಮೂಲಕ ಸಲಹೆ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದ್ದರು. 2018ರ ನವೆಂಬರ್ 1 ರಂದು “ಛೂ ಮಂತ್ರ” ಅಂಕಣದಲ್ಲಿ ಪ್ರಕಟವಾದ “ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಸಂಕೀರ್ಣ ಬೇಡ – ಅಲ್ಲಿ ಬೇಕು ಸಾರ್ವಜನಿಕ ಚೌಕ” ಎಂಬ ಲೇಖನಕ್ಕೆ ರಾಜ್ಯ ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಪೂರಕವಾಗಿ ಸ್ಪಂದಿಸಿ ಕೆಬಿಜಿ ಅವರ ನಿಲುವು, ಸಲಹೆಗಳನ್ನು ಅನುಷ್ಠಾನಗೊಳಿಸಲು ಚಿಂತನೆ ನಡೆಸಿದ್ದರು. ಮಾತ್ರವಲ್ಲದೆ, ನಗರದ ಹೃದಯ ಭಾಗವಾಗಿರುವ ಈ ಸ್ಥಳದಲ್ಲಿ ಸಾರ್ವಜನಿಕ ಚೌಕ ನಿರ್ಮಿಸುವುದು ಉತ್ತಮ ಎಂಬ ನಿಲುವನ್ನು ಶಕ್ತಿ ದಿನ ಪ್ರತಿಕೆಯ ಸಂಪಾದಕ ಜಿ.ಚಿದ್ವಿಲಾಸ್, ಗ್ರೀನ್ ಸಿಟಿ ಫೋರಂನ ಸಂಚಾಲಕ ಚೈಯಂಡ ಸತ್ಯ ಸೇರಿದಂತೆ ಹಲವು ಸಾರ್ವಜನಿಕರು ವ್ಯಕ್ತಪಡಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ನಗರಸಭಾ ಮಾಜಿ ಅಧ್ಯಕ್ಷ ಹಾಲೀ ಸದಸ್ಯ ನಂದಕುಮಾರ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿ ಉದ್ದೇಶಿತ ಪಾರಂಪರಿಕ ತಾಣಕ್ಕೆ ರೂಪುರೇಷೆ ಸಿದ್ದಪಡಿಸುವ ಹೊಣೆಯನ್ನು ವಹಿಸಿದ್ದರು.

Translate »