ಮೈಸೂರು: ಜಯಂತಿಗಳ ಹೆಸರಿನಲ್ಲಿ ನೀಡುವ ರಜೆಗಳನ್ನು ಕಡ್ಡಾಯವಾಗಿ ರದ್ದುಪಡಿಸಬೇಕು ಎಂಬ ನಿಲುವಿಗೆ ಈಗಲೂ ಬದ್ಧನಾಗಿರುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇಂದಿಲ್ಲಿ ಪುನರುಚ್ಚರಿಸಿದರು.
ಮೈಸೂರಿನ ಜೆ.ಕೆ.ಮೈದಾನದ ಎಂಎಂಸಿ ಅಮೃತ ಮಹೋತ್ಸವ ಭವನದಲ್ಲಿ ಕರ್ನಾ ಟಕ ಆರ್ಯ ವೈಶ್ಯ ಮಹಾಮಂಡಲಿ ಭಾನು ವಾರ ಆಯೋಜಿಸಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ವೈಶ್ಯ ಸಮಾವೇಶ ಹಾಗೂ ಚಿಂತನಾ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಹನೀಯರ ಜಯಂತಿಗಳಿಗೆ ರಜೆ ನೀಡುವ ಬದಲು, ಜಯಂತಿ ಹೆಸರಿನಲ್ಲಿ ಸೂಕ್ಷ್ಮಾತಿ ಸೂಕ್ಷ್ಮ ಸಮಾಜಗಳ ಅಭಿವೃದ್ಧಿಗೆ ಕಾರ್ಯ ಕ್ರಮಗಳನ್ನು ರೂಪಿಸಬೇಕು. ರಜೆ ನೀಡುವು ದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ತಪ್ಪಿದ್ದಲ್ಲ ಎಂದು ಹೇಳಿದರು.
ಆರ್ಯ ವೈಶ್ಯ ಸಮಾಜದವರು ಒಗ್ಗಟ್ಟಿ ನಿಂದ ಹೋರಾಟ ಮಾಡಿದರೆ ನಿಮ್ಮ ಸೌಲಭ್ಯ ಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದು ಸಲಹೆ ನೀಡಿದರು.
ಆರ್ಯವೈಶ್ಯ ಮಹಾಮಂಡಲದ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಆರ್ಯ ವೈಶ್ಯರು ಪ್ರಾಮಾಣಿಕರು, ನಂಬಿಕಸ್ತರು, ಯಾವು ದಕ್ಕೂ ತಲೆ ಕೆಡಿಸಿಕೊಳ್ಳದೆ ರೋಟರಿ, ವಾಸವಿ ಕ್ಲಬ್, ಭಜನಾ ಮಂಡಳಿಗಳ ಮೂಲಕ ಸೇವೆ ಸಲ್ಲಿಸುತ್ತಿರುವವರು. ವ್ಯಾಪಾರ ವಹಿವಾಟಿ ನಲ್ಲಿ ತಮ್ಮ ಕೆಲಸ ಏನಿದೆಯೋ ಅಷ್ಟೇ ಸಾಕು ಎಂಬಂತಿದ್ದಾರೆ. ಹೀಗಾಗಿ `ನಮ್ಮ ನಡೆ ಸಮಾಜದ ಕಡೆ’ ಎಂಬ ಸಂಕಲ್ಪದೊಂದಿಗೆ ತಾವು 8 ತಿಂಗಳ ಕಾಲ ರಾಜ್ಯಾದ್ಯಂತ 178 ತಾಲೂಕುಗಳಲ್ಲಿ ಸಂಚರಿಸಿದಾಗ ನಮ್ಮ ಸಮಾಜದಲ್ಲೂ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಕಷ್ಟದಿಂದ ಜೀವನ ನಿರ್ವ ಹಿಸುತ್ತಿರುವವರು ಇದ್ದಾರೆ ಎಂಬುದರ ಅರಿವಾಯಿತು. ಹೀಗಾಗಿ ಬೆಂಗಳೂರಿನಲ್ಲಿ ನಮ್ಮ ಸಮಾಜದ ಬೃಹತ್ ಸಮಾವೇಶ ಏರ್ಪಡಿಸಿದಾಗ ಒಂದು ಲಕ್ಷ ಮಂದಿ ಸೇರಿ ಸಮಾಜಕ್ಕೆ ನಿಗಮ ಅಗತ್ಯವಿರುವ ಬಗ್ಗೆ ಬೇಡಿಕೆ ಮಂಡಿಸಿದೆವು. ಮೈತ್ರಿ ಸರ್ಕಾ ರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಆರ್ಯ ವೈಶ್ಯ ನಿಗಮ ರಚನೆ ಮಾಡುವ ಘೋಷಣೆ ಮಾಡಿ 10 ಕೋಟಿ ರೂ.ಗಳನ್ನು ಮೀಸಲಿಡುವ ಮೂಲಕ ನಮ್ಮ ಸಮಾಜದ ಬಗ್ಗೆ ಕಳಕಳಿ ತೋರಿ ದ್ದಾರೆ ಎಂದು ಹೇಳಿದರು.
ಜಾತಿ ಪಟ್ಟಿಯಲ್ಲಿ ಸಮಾಜದ ಹೆಸರಿಲ್ಲ ದಿರುವ ಬಗ್ಗೆ ಸರ್ಕಾರದ ಗಮನ ಸೆಳೆ ದಾಗ ಪಟ್ಟಿಯಲ್ಲಿ ನಮ್ಮ ಸಮಾಜದ ಹೆಸರು ಮೊದಲ ಸಾಲಿನಲ್ಲಿಯೇ ಸೇರ್ಪಡೆ ಗೊಂಡಿತು. ಸಮಾಜದ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ತಂದಿದ್ದೇವೆ. ಸರ್ಕಾರದ ವತಿಯಿಂದ ವಾಸವಿ ಜಯಂತಿ ಆಚ ರಣೆಗೆ ಬೇಡಿಕೆ ಇಟ್ಟಿದ್ದೇವೆ. ಇದೂ ಕೂಡ ಈಡೇರುವ ಭರವಸೆ ಸರ್ಕಾರದಿಂದ ದೊರೆತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಹಾಗೂ ಚಾಮರಾಜನಗರ ಜಿಲ್ಲಾ ಸಮಾಜ ಭೂಷಣ ಪ್ರಶಸ್ತಿ ವಿತರಣೆ ಹಾಗೂ ಸಮಾಜದ ಬಡವರ್ಗದವರಿಗೆ ಸಹಾಯ ಹಸ್ತ ವಿತರಣೆ ನಡೆಸಲಾಯಿತು.
ಮೈಸೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಿನೇಶ್ ನೇತೃತ್ವದಲ್ಲಿ ವಾಸವಿ ನವರತ್ನ ಮಾಲಿಕಾ ಸಾಮೂಹಿಕ ಗಾಯನ ನಡೆಯಿತು.
ಮಹಾಮಂಡಲದ ಮೈಸೂರು ಜಿಲ್ಲಾಧ್ಯಕ್ಷ ಕೆ.ಆರ್.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ರಾಜ್ಯ ಕಾರ್ಯಾ ಧ್ಯಕ್ಷ ಗಿರೀಶ್ ಪೆಂಡಕೂರು, ಸಂಘಟನಾ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ, ಡಿ.ವಿ.ಸತ್ಯನಾರಾ ಯಣ, ಮೈಸೂರು ವಿಭಾಗೀಯ ಉಪಾ ಧ್ಯಕ್ಷ ಹೆಚ್.ಎಸ್.ಮಂಜುನಾಥಶೆಟ್ಟಿ, ಕಾರ್ಯದರ್ಶಿ ರವೀಂದ್ರ, ಉಪಾಧ್ಯಕ್ಷ ಕಾವೇರಿಪಟ್ನಂ ನಾಗೇಂದ್ರ, ಚಾಮರಾಜ ನಗರ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಶೆಟ್ಟಿ, ಕಾರ್ಯದರ್ಶಿ ಸಂಪತ್, ಪದಾಧಿಕಾರಿ ಗಳಾದ ಸಂಪತ್‍ಕುಮಾರ್, ಜಿ.ವಿ.ರಾಜೇಶ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪಿ.ಜೆ. ನಿವೇದಿತಾ, ಕಾರ್ಯದರ್ಶಿ ಶೋಭಾ ಶ್ರೀಧರ್ ಇನ್ನಿತರರು ಉಪಸ್ಥಿತರಿದ್ದರು.