ಸಣ್ಣ ಸಣ್ಣ ವಿಚಾರಕ್ಕೂ ಜಾತಿ ತನ್ನದೇ ಆದ ಪಾತ್ರ ವಹಿಸುತ್ತಿದೆ
ಮೈಸೂರು

ಸಣ್ಣ ಸಣ್ಣ ವಿಚಾರಕ್ಕೂ ಜಾತಿ ತನ್ನದೇ ಆದ ಪಾತ್ರ ವಹಿಸುತ್ತಿದೆ

January 7, 2019

ಮೈಸೂರು: ಸಣ್ಣ ಸಣ್ಣ ವಿಚಾರಗಳಿಗೂ ಜಾತಿ ತನ್ನದೇ ಯಾದ ಪಾತ್ರವಹಿಸುತ್ತಿದೆ ಎಂದು ವಿಷಾದಿ ಸಿದ ಶಾಸಕ ಎಸ್.ಎ.ರಾಮದಾಸ್, ಈ ವೇಳೆ ಕುವೆಂಪುರವರ ವಿಶ್ವ ಮಾನವ ಕಲ್ಪನೆಯನ್ನು ನಾವೆ ಲ್ಲರೂ ಸ್ಮರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಜೆ.ಪಿ.ನಗರದ ಡಾ.ಪುಟ್ಟ ರಾಜಗವಾಯಿ ಕ್ರೀಡಾಂ ಗಣದ ಯೋಗ ಮಂದಿರದಲ್ಲಿ ವಿಶ್ವಮಾನವ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹುತೇಕ ಕವಿಗಳು, ಗಣ್ಯರ ಜನ್ಮದಿನ ವನ್ನು ಆಚರಿಸುತ್ತೇವೆ. ಆದರೆ, ಎಲ್ಲರನ್ನು ವಿಶ್ವಮಾನವರನ್ನಾಗಿ ನೋಡಲು ಸಾಧ್ಯ ವಿಲ್ಲ. ಈ ಪದವನ್ನು ಬಳಸಬೇಕಾದರೆ ಎಚ್ಚರಿಕೆ ಯಿಂದ ಬಳಸಬೇಕು. ಯಾಕೆಂದರೆ ಆ ಪದಕ್ಕೆ ಅಷ್ಟು ಗೌರವವಿದೆ ಎಂದು ಹೇಳಿದರು.
ಹಿಂದೆ ಧರ್ಮಗಳ ನಡುವೆ ಕಲಹ ನಡೆಯುತ್ತಿತ್ತು. ಆದರೆ. ಇಂದು ಸಣ್ಣ-ಸಣ್ಣ ವಿಚಾರಗಳಿಗೂ ಜಾತಿ ತನ್ನದೆಯಾದ ಪಾತ್ರ ವಹಿಸುತ್ತಿದೆ. ಈ ವೇಳೆ ಕುವೆಂಪು ಅವರ ವಿಶ್ವಮಾನವ ಸಂದೇಶ ನಮಗೆ ಸ್ಫೂರ್ತಿ ಆಗಬೇಕು. ಕುವೆಂಪು ಅವರು ವಿಶ್ವ ಮಾನವ ಸಂದೇಶವನ್ನು ಮಾತ್ರ ನೀಡಿಲ್ಲ. ಬದಲಾಗಿ ಅದರಂತೆ ಬದು ಕಿದ ಅವರ ಜೀವನ ಸಂದೇ ಶವೇ ನಮಗೆ ಬಹುದೊಡ್ಡ ವಿಶ್ವಮಾನವ ಸಂದೇಶ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕ ಮಹಿಳೆಗೂ ಮತ ನೀಡಿ ಗೆಲ್ಲಿಸಿರುವುದು ನಿಜವಾ ಗಿಯೂ ವಿಶ್ವ ಮಾನವತೆಯ ಸಂದೇಶವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶೀಘ್ರದಲ್ಲೇ ಅಕ್ಕಮಹಾದೇವಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸ ಲಾಗುವುದು. ಅಲ್ಲದೆ, ಮೈಸೂರನ್ನು 5 ವರ್ಷಗಳಲ್ಲಿ ಆರೋಗ್ಯವಂತ ನಗರ ಮಾಡುವ ಪರಿಕಲ್ಪನೆ ಇಟ್ಟುಕೊಂಡು ವಾಜ ಪೇಯಿ ಅವರ ಜನ್ಮ ದಿನದಂದು ಮಾತುಕತೆ ಆರಂಭಿಸಿದೆವು ಎಂದರು.

ಕ್ಷೇತ್ರದಿಂದ ಒಬ್ಬರು ನೀರಿನ ಸಮಸ್ಯೆ ಹೇಳಲು ಕರೆ ಮಾಡಿದ್ದರು. ಅದನ್ನು ಪರಿ ಶೀಲಿಸಿದಾಗ ಕ್ಷೇತ್ರದ 54 ಬೋರ್‍ವೆಲ್ ಗಳ ಪೈಕಿ 48 ಬೋರ್‍ವೆಲ್‍ಗಳಿಗೆ ಯುಜಿಡಿ ನೀರು ಸೇರುತ್ತಿರುವ ವಿಚಾರ ತಿಳಿದು ಗಾಬರಿಯಾಯಿತು. ಕೂಡಲೇ ಅವೆಲ್ಲವನ್ನೂ ಬಂದ್ ಮಾಡಿಸಿದ್ದೇನೆ. ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಆರೋಗ್ಯ ಪರಿಕಲ್ಪನೆಯಡಿಯಲ್ಲಿ ಫೆಬ್ರವರಿ ವೇಳೆಗೆ ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಿ, ಆರ್ಥಿಕವಾಗಿ ಕಷ್ಟದಲ್ಲಿರುವ ಮಂದಿಗೆ 5 ವರ್ಷ ಉಚಿತ ಆರೋಗ್ಯ ಸೇವೆ ಒದಗಿಸಲಾಗುವುದು. ಸ್ವಚ್ಛ ನಗರ ಉಳಿವಿಗೆ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕಿದೆ. ಪ್ಲಾಸ್ಟಿಕ್ ತಿಂದ 9 ಹಸುಗಳು ಕ್ಯಾನ್ಸರ್‍ನಿಂದ ಬಳಲು ತ್ತಿವೆ. ಜತೆಗೆ ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇ ಗೌಡ ಅವರು ಕುವೆಂಪು ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮೈವಿವಿ ಪ್ರಸಾರಾಂಗ ವಿಶ್ರಾಂತ ನಿರ್ದೇಶಕ ಡಾ.ಸಿ. ನಾಗಣ್ಣ, ನಗರಪಾಲಿಕೆ ಸದಸ್ಯರಾದ ಶಾರ ದಮ್ಮ ಈಶ್ವರ್, ಶಾಂತಮ್ಮ, ಸಮಾಜ ಸೇವಕ ಯಶಸ್ವಿನಿ ಸೋಮಶೇಖರ್, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪ್ರಸನ್ನ ಎನ್.ಗೌಡ, ವಿಶ್ವಮಾನವ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್.ಕೃಷ್ಣ ಉಪಸ್ಥಿತರಿದ್ದರು.

Translate »