ಮೈಸೂರು: ಮೈಸೂರಿನ ಅರಸು ಬೋರ್ಡಿಂಗ್ ಶಾಲಾ ಆವರಣ ದಲ್ಲಿ ಹವೀಕ ಸಂಘದ ವತಿಯಿಂದ ಏರ್ಪಡಿಸಿದ್ದ ಎರಡು ದಿನಗಳ `ಅಮೃತಪಾಕ’ ಮಲೆನಾಡು-ಕರಾವಳಿ ಪಾಕೋತ್ಸವವನ್ನು ಕಿರುತೆರೆ ನಟಿ ದೀಪಾ ರವಿಶಂಕರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮನುಷ್ಯ ತನ್ನ ಬದುಕು ಕಟ್ಟಿಕೊಳ್ಳಲು ಜೀವನ ಶೈಲಿ ಮತ್ತು ಆಹಾರ ಬಹುಮುಖ್ಯವಾಗಿದ್ದು, ಇಂದಿಗೂ ನಮ್ಮ ಆಹಾರ ಪದ್ಧತಿ ಸಮಾ ಜದ ವಿಕಾಸಕ್ಕೆ ಅನುಗುಣವಾಗಿ ಬೆಳೆದು ಬಂದಿದೆ. ನಾವು ಸಾಂಸ್ಕøತಿಕವಾಗಿ ಗುರುತಿಸಿ ಕೊಳ್ಳಲು ಆಹಾರ ಕ್ರಮಗಳು ಕೂಡ ಸಹ ಕಾರಿಯಾಗಿದ್ದು, ಸಾಮಾಜಿಕವಾಗಿ ನಮ್ಮನ್ನು ಪ್ರತಿನಿಧಿಸುತ್ತಿವೆ…
ಮೈಸೂರು ಪಾಲಿಕೆಯಲ್ಲಿ `ಪ್ರಮಾಣ ಪತ್ರ’ ಪರದಾಟ
January 6, 2019ಮೈಸೂರು: ತ್ವರಿತವಾಗಿ ಜನನ-ಮರಣ ಪ್ರಮಾಣ ಪತ್ರ ಪಡೆಯಲೆಂದೇ ಇ-ಜನ್ಮ ಆ್ಯಪ್ ಪರಿಚಯಿಸಲಾಗಿದ್ದರೂ, ಮೈಸೂರು ಮಹಾನಗರ ಪಾಲಿಕೆಯಲ್ಲಿ ಪ್ರಯೋಜನಕ್ಕೆ ಬಾರದೆ, ಪ್ರಮಾಣ ಪತ್ರ ಪಡೆಯುವುದು ಬಹಳ ಕಷ್ಟಕರವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಪಾಲಿಕೆಯ `ಜನನ-ಮರಣ’ ಪ್ರಮಾಣ ಪತ್ರ ವಿತರಣಾ ಕೌಂಟರ್ ಮುಂದೆ ಶನಿವಾರ ಸಾಲುಗಟ್ಟಿ ನಿಂತಿದ್ದ ವೃದ್ಧರು, ಮಹಿಳೆಯರು ಸೇರಿದಂತೆ ಹಲವರು, ಪ್ರಮಾಣ ಪತ್ರ ಪಡೆಯಲು ಪಾಡು ಪಡುತ್ತಿರುವ ಬಗ್ಗೆ ಶಾಸಕ ಎಸ್.ಎ.ರಾಮದಾಸ್ ಬಳಿ ಅಲವತ್ತುಕೊಂಡರು. ಆಶ್ರಯ ಸಮಿತಿ ಸಭೆಗೆ ಹಾಜರಾಗಲೆಂದು ಪಾಲಿಕೆಗೆ ಬಂದಿದ್ದ ಶಾಸಕರು ವೃದ್ಧರು, ಮಹಿಳೆಯರ…
ಇಸ್ಕಾನ್ ಶ್ರೀ ಕೃಷ್ಣ ಬಲರಾಮ ರಥಯಾತ್ರೆಗೆ ಚಾಲನೆ
January 6, 2019ಮೈಸೂರು: ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ 21ನೇ ವಾರ್ಷಿಕ ಇಸ್ಕಾನ್ ಶ್ರೀ ಕೃಷ್ಣ ಬಲರಾಮ ರಥಯಾತ್ರೆಗೆ ಶನಿವಾರ ಚಾಲನೆ ನೀಡಲಾಯಿತು. ಈ ವೇಳೆ ಚೆನ್ನೈ ಇಸ್ಕಾನ್ ಅಧ್ಯಕ್ಷ ಸ್ತೋಕ ಕೃಷ್ಣಸ್ವಾಮಿ ಅವರು ಮಾತನಾಡಿ, 500 ವರ್ಷಗಳ ಹಿಂದೆ ಚೈತನ್ಯ ಮಹಾಪ್ರಭುಗಳು ಕೃಷ್ಣನ ನಾಮ ಸಂದೇಶ, ಕೀರ್ತನೆಯ ಉದ್ದೇಶವನ್ನು ಸಾರುವುದಕ್ಕೆ ಈ ರಥಯಾತ್ರೆಯು ಪ್ರಾರಂಭಗೊಂಡಿತು ಎಂದು ರಥಯಾತ್ರೆಯ ಇತಿಹಾಸ ಮಹತ್ವವನ್ನು ತಿಳಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂಧನ್ ಮಾತ ನಾಡಿ, ಕೃಷ್ಣನ ಲೆಕ್ಕ ಎಂಬ ಮಾತನ್ನು ಸುಲಭವಾಗಿ…
ಜಿಲ್ಲಾ ಯೋಜನಾ ಸಮಿತಿ ನಿಷ್ಕ್ರಿಯಕ್ಕೆ ಕಾರಣ ಯಾರು?
January 6, 2019ಮೈಸೂರು: ಜಿಲ್ಲಾ ಯೋಜನಾ ಸಮಿತಿ ನಿಷ್ಕ್ರಿಯಗೊಳ್ಳಲು ಯಾರು ಕಾರಣ ಎಂಬ ವಿಚಾರದಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಆಡಳಿತ ಪಕ್ಷವಾದ ಜೆಡಿಎಸ್ ಹಾಗೂ ವಿಪಕ್ಷವಾದ ಕಾಂಗ್ರೆಸ್ ಸದಸ್ಯರ ನಡುವೆ ಆರೋಪ, ಪ್ರತ್ಯಾರೋಪದೊಂದಿಗೆ ಮಾತಿನ ಚಕಮಕಿಗೂ ಶನಿವಾರ ನಡೆದ ಜಿಪಂ ಸಾಮಾನ್ಯ ಸಭೆ ವೇದಿಕೆಯಾಯಿತು. ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಮೈತ್ರಿ ಯಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್ ಹಾಗೂ ವಿರೋಧ ಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಸದಸ್ಯರ ನಡುವೆ ಯೋಜನಾ…
ವಿಶಿಷ್ಟ ಮಾದರಿ ನಿರ್ಮಾಣವಾಗುತ್ತಿದೆ ವಿಶ್ವಮಾನವ ಜೋಡಿ ರಸ್ತೆಯ ವೃತ್ತ
January 6, 2019ಮೈಸೂರು: ಮೈಸೂರಿನ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ವೃತ್ತವೊಂದು ವಿಶಿಷ್ಟ ಮಾದರಿಯಲ್ಲಿ ಅಭಿವೃದ್ಧಿಯಾಗುತ್ತಿದೆ. ಕುವೆಂಪುನಗರ ವಿಶ್ವಮಾನವ ಜೋಡಿರಸ್ತೆ, ಬೇಕ್‍ಪಾಯಿಂಟ್ ಜಂಕ್ಷನ್ ಮಧ್ಯದಲ್ಲಿ ಆರೇಳು ತಿಂಗಳ ಹಿಂದೆಯೇ ಪಾರಂಪರಿಕ ಮಾದರಿ ವಿದ್ಯುತ್ ಕಂಬ ಅಳವಡಿಸಲಾಗಿದೆ. ಇದೀಗ ಕಂಬದಿಂದ ಆರೇಳು ಮೀಟರ್ ಸುತ್ತಳತೆ ಪ್ರದೇಶಕ್ಕೆ ಬೆಣಚುಕಲ್ಲು(ಪೆಬ್ಬೆಲ್)ಗಳನ್ನು ಅಳವಡಿಸುವ ಕಾಮಗಾರಿ ಭರದಿಂದ ಸಾಗಿದೆ. ಸುಮಾರು 15 ಲಕ್ಷ ಅಂದಾಜು ಮೊತ್ತದ ಈ ಕಾಮಗಾರಿ ಇನ್ನು 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯುತ್ ಕಂಬದ ಸುತ್ತ ಆರೇಳು ಮೀಟರ್ ವ್ಯಾಪ್ತಿ…
ಬಿಪಿಎಲ್ ಕುಟುಂಬಗಳಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ
January 6, 2019ಮೈಸೂರು: ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ನೆರವಿ ನೊಂದಿಗೆ ಜಾರಿಗೆ ತಂದಿರುವ ‘ಆಯುಷ್ಮಾನ್ ಭಾರತ’-ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕಾರ್ಡು ಹೊಂದಿ ರುವ ಎಲ್ಲ ಕುಟುಂಬಗಳಿಗೆ ಆರೋಗ್ಯ ವಿಮಾ ಕಾರ್ಡ್‍ಗಳನ್ನು ವಿತರಿಸಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರತಿಯೊಬ್ಬ ಪ್ರಜೆಗೂ ಉಚಿತ ಆರೋಗ್ಯ ಸೇವೆ ಒದಗಿಸಬೇ ಕೆಂಬ ಸದುದ್ದೇಶದಿಂದ ಜಾರಿಗೆ ತಂದಿ ರುವ ಯೋಜನೆಗೆ…
ಜ.28 ರಿಂದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಟಿ.ಯೋಗೇಶ್
January 6, 2019ಮೈಸೂರು: ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಮೈಸೂರು ಜಿಲ್ಲೆಯಲ್ಲಿ ಜ.28 ರಿಂದ 30ರವರೆಗೆ ಸಂಘಟಿಸಲಾಗುವುದು. ಕ್ರೀಡಾಕೂಟ ವನ್ನು ಉತ್ತಮ ರೀತಿಯಲ್ಲಿ ಆಯೋಜಿ ಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ತಿಳಿಸಿದರು. ಅವರು ಇಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆ ಉದ್ದೇಶಿಸಿ ಮಾತನಾಡಿದರು. ಜ.28ರಂದು ಸಂಜೆ 4 ಗಂಟೆಗೆ ಉದ್ಘಾಟನಾ ಸಮಾರಂಭ ವನ್ನು ಚಾಮುಂಡಿ ವಿಹಾರ ಕ್ರೀಡಾಂಗಣ, ಮೈಸೂರು ಇಲ್ಲಿ ನಡೆಸಲು ಮತ್ತು ಜ.29 ಮತ್ತು 30ರಂದು ಕ್ರೀಡಾ ಸ್ಪರ್ಧೆ ಮತ್ತು…
ಮೈಸೂರಲ್ಲಿ ರೌಡಿಗಳ ಮೇಲೆ ತೀವ್ರ ನಿಗಾ
January 6, 2019ಮೈಸೂರು: ರೌಡಿಗಳ ಮೇಲೆ ತೀವ್ರ ನಿಗಾವಹಿಸಿರುವ ಪೊಲೀಸರು, ರೌಡಿ ಚಟುವಟಿಕೆಗಳಲ್ಲಿ ಭಾಗಿಯಾದರೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ಮೈಸೂರು ನಗರದಲ್ಲಿ ರೌಡಿ ಚಟುವಟಿಕೆಯನ್ನು ಸಂಪೂರ್ಣ ಹತ್ತಿಕ್ಕಲು ಕಾರ್ಯರೂಪಕ್ಕೆ ಬಂದಿರುವ ರೌಡಿ ಪ್ರತಿಬಂಧಕ ದಳವು ರೌಡಿಶೀಟರ್‍ಗಳ ಚಲನ-ವಲನಗಳ ಮೇಲೆ ನಿಗಾ ವಹಿಸಿದೆಯಲ್ಲದೆ, ಪ್ರತೀ ತಿಂಗಳು ಪರೇಡ್ ನಡೆಸಿ ಕಟ್ಟೆಚ್ಚರ ನೀಡುತ್ತಿದೆ ಎಂದು ನಗರ ಪೊಲೀಸ್ ಕಮೀಷ್ನರ್ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ. ಕಾನೂನು ರೀತ್ಯಾ ಕ್ರಮ ಜರುಗಿಸಿದ ನಂತರವೂ ಪದೇ ಪದೆ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗುವವರ…
ಸಾಧಕರಾದ ಬೆಜವಾಡ್ ವಿಲ್ಸನ್, ಪ್ರಹ್ಲಾದ್ ಸಿಂಗ್ ಟಿಪಾನಿಯಾರಿಗೆ `ರಮಾಗೋವಿಂದ ಪುರಸ್ಕಾರ’ ಪ್ರದಾನ
January 6, 2019ಮೈಸೂರು: ಮಲ ಹೊರುವ ಪದ್ಧತಿ ಬಗ್ಗೆ ಸಮಾಜ ಹೊಂದಿ ರುವ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮಲ ಹೊರುವ ಪದ್ಧತಿ ಯನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಿಲ್ಲ ಎಂದು ಸಫಾಯಿ ಕರ್ಮಚಾರಿ ಆಂದೋಲನ್‍ನ ಸಂಸ್ಥಾಪಕ, ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕøತ ಬೆಜವಾಡ್ ವಿಲ್ಸನ್ ಅಭಿಪ್ರಾಯಪಟ್ಟರು. ಕಲಾಮಂದಿರದಲ್ಲಿ ಶ್ರೀಮತಿ ಡಿ. ರಮಾ ಬಾಯಿ ಚಾರಿಟಬಲ್ ಫೌಂಡೇಷನ್ ಮತ್ತು ಶ್ರೀ ಎಂ.ಗೋಪಿನಾಥ ಶೆಣೈ ಚಾರಿ ಟಬಲ್ ಟ್ರಸ್ಟ್ ಶನಿವಾರ ಆಯೋಜಿಸಿದ್ದ `ರಮಾಗೋವಿಂದ ಪುರಸ್ಕಾರ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲೂ ಮಲ…
ಸಮ್ಮಿಶ್ರ ಸರ್ಕಾರದ ನಿಜಬಣ್ಣ ಬಯಲು ಬಿಜೆಪಿ ಮೈಸೂರು ನಗರಾಧ್ಯಕ್ಷ ಡಾ.ಮಂಜುನಾಥ್ ವ್ಯಂಗ್ಯ
January 6, 2019ಮೈಸೂರು: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಮೂಲಕ ರಾಜ್ಯದ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ನಿಜಬಣ್ಣ ಬಯಲು ಮಾಡಿಕೊಂಡಿದೆ. ಜನರ ಬಗ್ಗೆ ಈ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಬಿಜೆಪಿ ಮೈಸೂರು ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, 2 ತಿಂಗಳ ಹಿಂದೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತ ದಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುತ್ತಿತ್ತು. ನಂತರ ತೈಲ ಬೆಲೆ ಇಳಿತವಾಗಿದ್ದರಿಂದ ಪೆಟ್ರೋಲ್, ಡೀಸೆಲ್ ದರ…










