ಮೈಸೂರು: ಮಲ ಹೊರುವ ಪದ್ಧತಿ ಬಗ್ಗೆ ಸಮಾಜ ಹೊಂದಿ ರುವ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮಲ ಹೊರುವ ಪದ್ಧತಿ ಯನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಿಲ್ಲ ಎಂದು ಸಫಾಯಿ ಕರ್ಮಚಾರಿ ಆಂದೋಲನ್‍ನ ಸಂಸ್ಥಾಪಕ, ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕøತ ಬೆಜವಾಡ್ ವಿಲ್ಸನ್ ಅಭಿಪ್ರಾಯಪಟ್ಟರು.
ಕಲಾಮಂದಿರದಲ್ಲಿ ಶ್ರೀಮತಿ ಡಿ. ರಮಾ ಬಾಯಿ ಚಾರಿಟಬಲ್ ಫೌಂಡೇಷನ್ ಮತ್ತು ಶ್ರೀ ಎಂ.ಗೋಪಿನಾಥ ಶೆಣೈ ಚಾರಿ ಟಬಲ್ ಟ್ರಸ್ಟ್ ಶನಿವಾರ ಆಯೋಜಿಸಿದ್ದ `ರಮಾಗೋವಿಂದ ಪುರಸ್ಕಾರ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲೂ ಮಲ ಹೊರುವ ಪದ್ಧತಿ ಇದೆ. ಜತೆಗೆ ಸುರಕ್ಷತಾ ರಕ್ಷಾ ಕವಚಗಳಿ ಲ್ಲದೆ ಮ್ಯಾನ್‍ಹೋಲ್‍ಗಳಲ್ಲಿ ಇಳಿದು ಕೆಲಸ ಮಾಡುತ್ತಿದ್ದಾರೆ. ಕೆಲವು ಪೌರಕಾರ್ಮಿ ಕರು ಈ ಕೆಲಸ ಬಿಟ್ಟು ಬೇರೆ ಕೆಲಸ ಮಾಡಬಹುದಲ್ಲ ಎಂದು ಹೇಳುತ್ತಾರೆ. ಆದರೆ, ಕೆಲಸ ಬಿಟ್ಟ ಪೌರಕಾರ್ಮಿಕರಿಗೆ ಸರ್ಕಾರ ಪುನರ್ವಸತಿ ಕಲ್ಪಿಸುವುದಿಲ್ಲ. ಪಂಜಾಬ್, ಹರಿಯಾಣದಲ್ಲಿ ಇದು ಸಾಧ್ಯವಾಗಿದ್ದು, ನಮ್ಮ ರಾಜ್ಯ ಸೇರಿದಂತೆ ಬೇರೆಡೆ ಸಾಧ್ಯ ವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಪುರಸ್ಕಾರ ನನ್ನ ಕೆಲಸಕ್ಕೆ ಸಿಕ್ಕ ಗೌರವ. ಸೇವೆ ಮಾಡುವುದು ನಮ್ಮ ಸಂಸ್ಕøತಿ. ಸೇವೆ ಮಾಡುವ ಮನೋಭಾವ ಇನ್ನೂ ಹೆಚ್ಚಾಗಬೇಕು. ಇದು ಹೆಚ್ಚಾಗಬೇಕಾದರೆ ಪೆÇ್ರೀತ್ಸಾಹ ಅಗತ್ಯ. ಆದರೆ, ಇಂದಿಗೂ ಮಲ ಹೊರುವ ಪದ್ಧತಿ ಇರುವುದನ್ನು ನೋಡಿದರೆ ಪುರಸ್ಕಾರ ಸ್ವೀಕರಿಸಿ ಸಂತೋಷ ಪಡಲು ಸಾಧ್ಯವೇ?. ಸಂಸತ್ತಿನಲ್ಲಿ ರಾಜ ಕಾರಣಿಗಳು ಬೇಡದ ವಿಷಯ ಕುರಿತು ಚರ್ಚಿಸುತ್ತಾರೆಯೇ ಹೊರತು, ಪೌರಕಾರ್ಮಿ ಕರ ಬಗ್ಗೆ ಒಂದೂ ಮಾತು ಆಡಿಲ್ಲ. ಇತ್ತೀ ಚೆಗೆ 5 ವರ್ಷದ ಮಗುವಿನ ಮೇಲೆ ಅತ್ಯಾ ಚಾರ ನಡೆಯುತ್ತಿದೆ. ಆದರೂ ನಾವುಗಳು ಸುಮ್ಮ ನಿz್ದÉೀವೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕøತ, ಖ್ಯಾತ ಗಾಯಕ ಟಿ.ಎಂ. ಕೃಷ್ಣ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕøತಿಕ ಪ್ರತಿನಿಧಿತ್ವಕ್ಕೆ ಭೌತಿಕ ಚೌಕಟ್ಟಿಲ್ಲ. ಅದು ಜೀವಂತಿಕೆಯಿಂದ, ಚಲನಶೀಲತೆಯಿಂದ ಎದುರಾಗುವ ಸಮಸ್ಯೆ, ಸವಾಲುಗಳನ್ನು ಎದುರಿಸಿ ಚಲನಶೀಲತೆ ಕಾಯ್ದಿರಿಸಿಕೊ ಳ್ಳುತ್ತದೆ ಎಂದು ಹೇಳಿದರು.
ಕಬೀರದಾಸ್ ಎಂಬುವರು ವ್ಯಕ್ತಿಯಲ್ಲ, ಚಿಂತನೆಯ ಪ್ರತೀಕ. ಪ್ರಹ್ಲಾದ್ ಸಿಂಗ್ ಟಿಪಾನಿಯಾ ಅವರು ಕಬೀರನ ಹಾಡು ಗಳನ್ನು ಹಾಡಲಿದ್ದಾರೆ. ಅದೇ ರೀತಿ ಬದು ಕುವ ಜೀವನಶೈಲಿ ರೂಪಿಸಿಕೊಂಡ ಬೆಜವಾಡ್ ವಿಲ್ಸನ್, ಮಾನವೀಯತೆಗೆ ಹೆಚ್ಚು ಜಾಗ ನೀಡಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜದ ಉದ್ಧಾರದ ಕಾರ್ಯ ದಲ್ಲಿ ತೊಡಗಿದ್ದಾರೆ. ಪ್ರe್ಞÁವಂತರು ನಿದ್ದೆ ಹೋದರೆ ಸಮಾಜ ಮೇಲೇಳುವುದಿಲ್ಲ. ಹಾಗಾಗಿ ನಾವುಗಳು ಸಮಾಜವನ್ನು ಎಚ್ಚರಿಸುತ್ತಲೇ ಇರಬೇಕು ಎಂದರು.
ಉದ್ಯಮಿ ಜಗನ್ನಾಥ ಶೆಣೈ ಮಾತನಾಡಿ, ಕಳೆದ 4 ವರ್ಷಗಳಿಂದ ರಮಾ ಗೋವಿಂದ ಪುರಸ್ಕಾರವನ್ನು ಸಮಾಜ ಸೇವೆ ಮಾಡಿದವರಿಗೆ ನೀಡುತ್ತಾ ಬಂದಿ z್ದÉೀವೆ. ಕಳೆದ ಬಾರಿ ಮೂವರು ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು. ಈ ಬಾರಿ ಇಬ್ಬರಿಗೆ ಪ್ರಶಸ್ತಿ ನೀಡುತ್ತಿದ್ದು, ಮೈಸೂರಿನ ಜನತೆಗೆ ಸಾಧಕರನ್ನು ಪರಿಚಯಿಸುವ ಉz್ದÉೀಶ ವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಫಾಯಿ ಕರ್ಮ ಚಾರಿ ಆಂದೋಲನ್‍ನ ಸಂಸ್ಥಾಪಕ, ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕøತ ಬೆಜವಾಡ್ ವಿಲ್ಸನ್, ಕಬೀರ್ ಸ್ಮಾರಕ ಸೇವಾ ಶೋಧ ಸಂಸ್ಥಾನ್ ಸ್ಥಾಪಕರು ಹಾಗೂ ಪದ್ಮಶ್ರೀ ಪುರಸ್ಕøತ ಪ್ರಹ್ಲಾದ್ ಸಿಂಗ್ ಟಿಪಾನಿಯ ಅವರಿಗೆ `ರಮಾಗೋವಿಂದ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶೆಣೈ ಕುಟುಂಬದವರಾದ ಶ್ರೀಮತಿ ಮತ್ತು ಎಂ.ರಮಾನಾಥ ಶೆಣೈ, ಶ್ರೀಮತಿ ಮತ್ತು ಜಗನ್ನಾಥ ಶೆಣೈ, ಶ್ರೀಮತಿ ಮತ್ತು ಎಂ.ಗೋಪಿನಾಥ ಶೆಣೈ ಉಪಸ್ಥಿತರಿದ್ದರು. ನಂತರ ಶ್ರೀ ಪ್ರಹ್ಲಾದ್ ಸಿಂಗ್ ಟಿಪಾನಿಯಾ ಮತ್ತು ತಂಡದವರು ಕಬೀರರ ಗಾಯನ ನಡೆಸಿಕೊಟ್ಟರು.