ಮೈಸೂರು

ಚಿಕ್ಕಮಗಳೂರಿನಲ್ಲಿ ಮಲಬಾರ್ ಗೋಲ್ಡ್   ಅಂಡ್ ಡೈಮಂಡ್ಸ್ ಹೊಸ ಶೋರೂಂ ಆರಂಭ
ಮೈಸೂರು

ಚಿಕ್ಕಮಗಳೂರಿನಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಹೊಸ ಶೋರೂಂ ಆರಂಭ

January 6, 2019

ಚಿಕ್ಕಮಗಳೂರು: ವಿಶ್ವದ ಟಾಪ್ 5 ಆಭರಣಗಳ ಬ್ರ್ಯಾಂಡ್‍ನಲ್ಲಿ ಒಂದಾಗಿ ರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಚಿಕ್ಕಮಗಳೂರಿನಲ್ಲಿ ತನ್ನ ಹೊಸ ಮಳಿಗೆಯನ್ನು ಆರಂಭಿಸಿದೆ. ಈ ಹೊಸ ಶೋರೂಂ ಅನ್ನು ಕನ್ನಡದ ಹೆಸರಾಂತ ಚಿತ್ರನಟ ಶ್ರೀಮುರಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ, ಮಲಬಾರ್ ಗ್ರೂಪ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಜೀದ್, eóÉೂೀನಲ್ ಹೆಡ್-ಕರ್ನಾಟಕ ಪಲ್ಸರ್ ಬಾಬು, ಹಲವಾರು ಗಣ್ಯರು, ಮಲಬಾರ್ ಗ್ರೂಪ್‍ನ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಉಪಸ್ಥಿತ ರಿದ್ದರು. ಈ ಹೊಸ ಮಳಿಗೆ ಚಿಕ್ಕಮಗಳೂ ರಿನ, ಕೆ.ಎಂ…

ರೋಜ್ಗಾರ್ ಉದ್ಯೋಗ ಮೇಳದಲ್ಲಿ 60 ಮಂದಿ ಆಯ್ಕೆ
ಮೈಸೂರು

ರೋಜ್ಗಾರ್ ಉದ್ಯೋಗ ಮೇಳದಲ್ಲಿ 60 ಮಂದಿ ಆಯ್ಕೆ

January 6, 2019

ಮೈಸೂರು: ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದಿಂದ ಮೈಸೂರು ತಾಲೂಕು ಇಲವಾಲದಲ್ಲಿ ಶನಿವಾರ ನಡೆದ ರೋಜ್ಗಾರ್ ಮೇಳದಲ್ಲಿ 60 ಮಂದಿಗೆ ಉದ್ಯೋಗ ದೊರೆಯಿತು. ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ, ಸ್ಕಿಲ್ ಇಂಡಿಯಾ ಹಾಗೂ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗ ಮದ ಸಂಯುಕ್ತಾಶ್ರಯದಲ್ಲಿ ಇಲವಾಲದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಏರ್ಪಡಿ ಸಿದ್ದ ಉದ್ಯೋಗ ಮೇಳವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು. ತೇಜಸ್ವಿನಿ ಎಂಟರ್‍ಪ್ರೈಸಸ್, ಯಂಗ್ ಇಂಡಿಯಾ, ಯುರೇಕಾ ಫೋಬ್ರ್ಸ್ ರಿಲಯನ್ಸ್ ಸ್ಮಾರ್ಟ್, ಟಾಲೆಂಟ್ ಹಂಟರ್ಸ್, ಎಸ್‍ಎಸ್ ಪ್ರಮೋಟರ್ಸ್ ಸೇರಿದಂತೆ 25ಕ್ಕೂ ಹೆಚ್ಚು…

ಬಂಟ್ವಾಳದಲ್ಲಿ ಸಿಪಿಐ ಕಚೇರಿ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ
ಮೈಸೂರು

ಬಂಟ್ವಾಳದಲ್ಲಿ ಸಿಪಿಐ ಕಚೇರಿ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

January 6, 2019

ಮೈಸೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಸಿಪಿಐ ಕಚೇರಿಗೆ ಬೆಂಕಿ ಹಚ್ಚಿ, ಧ್ವಂಸ ಗೊಳಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಗಾಂಧಿ ವೃತ್ತದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಇಂದು ಪ್ರತಿ ಭಟನೆ ನಡೆಸಿದ ಸಿಪಿಐ ಕಾರ್ಯಕರ್ತರು, ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾ ಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶಿ ಸಿದ ಹಿನ್ನೆಲೆಯಲ್ಲಿ ಸಿಪಿಐ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಉದ್ದೇಶಪೂರ್ವಕ ವಾಗಿ ಈ…

ಕಾಂಗ್ರೆಸ್ ಅಸ್ಮಿತೆ, ಅಸ್ತಿತ್ವ ಕಾಪಾಡಿ;  ಚುನಾವಣೆಗೆ ಸಿದ್ಧರಾಗಿ: ರಾಣಿ ಸತೀಶ್ ಕರೆ
ಮೈಸೂರು

ಕಾಂಗ್ರೆಸ್ ಅಸ್ಮಿತೆ, ಅಸ್ತಿತ್ವ ಕಾಪಾಡಿ; ಚುನಾವಣೆಗೆ ಸಿದ್ಧರಾಗಿ: ರಾಣಿ ಸತೀಶ್ ಕರೆ

January 6, 2019

ಮೈಸೂರು: ಕಾರ್ಯ ಕರ್ತರು ಪಕ್ಷದ ಅಸ್ಮಿತೆ ಹಾಗೂ ಅಸ್ತಿತ್ವವನ್ನು ಕಾಪಾಡಿಕೊಂಡು ಕಾಂಗ್ರೆಸ್ ಬಲಪಡಿಸು ವುದರೊಂದಿಗೆ ಲೋಕಸಭಾ ಚುನಾವಣೆ ಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸ ಬೇಕೆಂದು ಮಾಜಿ ಸಚಿವೆ ರಾಣಿ ಸತೀಶ್ ಸಲಹೆ ನೀಡಿದ್ದಾರೆ. ಜಿಲ್ಲಾ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ವತಿಯಿಂದ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಮಧ್ಯಾಹ್ನ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ, ಜಿಲ್ಲಾ ಸೇವಾದಳದ ಕಾರ್ಯಕಾರಿಣಿ ಸಭೆ ಮತ್ತು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ…

ಪಾಲಿಕೆಯಿಂದ ಹನುಮಂತನಗರದಲ್ಲಿ   ಫುಟ್‍ಪಾತ್ ತೆರವು ಕಾರ್ಯಾಚರಣೆ
ಮೈಸೂರು

ಪಾಲಿಕೆಯಿಂದ ಹನುಮಂತನಗರದಲ್ಲಿ ಫುಟ್‍ಪಾತ್ ತೆರವು ಕಾರ್ಯಾಚರಣೆ

January 6, 2019

ಮೈಸೂರು: ಮೈಸೂರಿನ ಬನ್ನಿಮಂಟಪದ ಹನುಮಂತನಗರದಲ್ಲಿ ಫುಟ್‍ಪಾತ್ ಮೇಲೆ ನಾಯಿಕೊಡೆಯಂತೆ ತಲೆ ಎತ್ತಿದ್ದ ಅನಧಿಕೃತ ಅಂಗಡಿಗಳನ್ನು ನಗರಪಾಲಿಕೆ ಅಧಿಕಾರಿಗಳು ಇಂದು ಬೆಳಿಗ್ಗೆ ತೆರವುಗೊಳಿಸಿದರು. ಪಾಲಿಕೆ ವಲಯಾಧಿಕಾರಿ ಮಹೇಶ ಹಾಗೂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ನೇತೃತ್ವ ದಲ್ಲಿ ಬೆಳಿಗ್ಗೆ 6ರಿಂದ 11.30 ಗಂಟೆವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಹನು ಮಂತನಗರದ ಮುಖ್ಯ ರಸ್ತೆಯ ಇಕ್ಕೆಲಗಳ ಲ್ಲಿನ ಸುಮಾರು 300 ಅಂಗಡಿಗಳನ್ನು ತೆರವುಗೊಳಿಸಲಾಯಿತು. ಪಾಲಿಕೆ ಅಧಿಕಾರಿಗಳು ಜೆಸಿಬಿ, ಟ್ರಾಕ್ಟರ್ ಗಳೊಂದಿಗೆ ಮುಂಜಾನೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಕೆಲವರು ತಾವೇ ಅಂಗಡಿಗಳನ್ನು ಸ್ಥಳಾಂತರಿಸಿಕೊಂಡರೆ, ಇನ್ನು ಕೆಲವರು…

ಮೈಸೂರು ಅರಮನೆ ಪ್ರವೇಶ ದ್ವಾರಗಳಲ್ಲಿ   ಅತ್ಯಾದುನಿಕ ಮೆಟಲ್ ಡಿಟೆಕ್ಟರ್‍ಗಳ ಅಳವಡಿಕೆ
ಮೈಸೂರು

ಮೈಸೂರು ಅರಮನೆ ಪ್ರವೇಶ ದ್ವಾರಗಳಲ್ಲಿ ಅತ್ಯಾದುನಿಕ ಮೆಟಲ್ ಡಿಟೆಕ್ಟರ್‍ಗಳ ಅಳವಡಿಕೆ

January 6, 2019

ಮೈಸೂರು: ಮೈಸೂರಿನ ಅಂಬಾವಿಲಾಸ ಅರಮನೆ ಪ್ರವೇಶ ದ್ವಾರಗಳಲ್ಲಿ ಭದ್ರತೆ ದೃಷ್ಟಿಯಿಂದ ಅತ್ಯಾಧುನಿಕ ಮಾದರಿ ಮೆಟಲ್ ಡಿಟೆಕ್ಟರ್‍ಗಳನ್ನು ಅಳವಡಿಸಲಾಗುತ್ತಿದೆ. ಹಳೇ ಮಾದರಿ ಡಿಟೆಕ್ಟರ್‍ಗಳನ್ನು ಬದಲಿಸಿ, ಅತ್ಯಾಧುನಿಕ `ಮಲ್ಟಿ ಜೋನ್ ಡೋರ್ ಫ್ರೇಮ್ ಡಿಟೆಕ್ಟರ್’ ಅಳವಡಿಸ ಲಾಗು ತ್ತಿದೆ. ಇದನ್ನು ನೈನ್(9) ಜೋನ್ ಡಿಟೆಕ್ಟರ್ ಎಂತಲೂ ಕರೆಯ ಲಾಗುತ್ತದೆ. ಹಳೆಯ ಡಿಟೆಕ್ಟರ್‍ಗಳು ಕೇವಲ ಲೋಹವನ್ನು ಮಾತ್ರ ಗುರುತಿಸುತ್ತಿದ್ದವು. ಆದರೆ ನೂತನ ತಂತ್ರಜ್ಞಾನ ಒಳಗೊಂಡಿರುವ ಮಲ್ಟಿ ಜೋನ್ ಡಿಟೆಕ್ಟರ್‍ಗಳು ಎಲ್ಲಾ ಮಾದರಿ ವಸ್ತುಗಳನ್ನೂ ಶೋಧಿಸುತ್ತವೆ. ಈ ಡಿಟೆಕ್ಟರ್‍ಗಳಲ್ಲಿ ಕ್ಯಾಮರಾ ಅಳವಡಿಸಿರುವುದ ರಿಂದ…

ಜ.8, 9ರಂದು ರಾಷ್ಟ್ರವ್ಯಾಪಿ   ಕಾರ್ಮಿಕರ ಮುಷ್ಕರ
ಮೈಸೂರು

ಜ.8, 9ರಂದು ರಾಷ್ಟ್ರವ್ಯಾಪಿ ಕಾರ್ಮಿಕರ ಮುಷ್ಕರ

January 6, 2019

ಮೈಸೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಜ.8 ಮತ್ತು 9ರಂದು ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ಸಂಚಾಲಕ ಹೆಚ್.ಬಿ. ರಾಮಕೃಷ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಸಾರ್ವತ್ರಿಕ ಮುಷ್ಕರದಲ್ಲಿ ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ವಿಮಾ ಕಂಪನಿ, ಬ್ಯಾಂಕ್ ನೌಕರರು ಹಾಗೂ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಸೇರಿ 20 ಕೋಟಿಗೂ ಅಧಿಕ ಸಂಖ್ಯೆಯ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳುವರು ಎಂದು…

ಇಂದು ಆರ್ಯ ವೈಶ್ಯ ಸಮಾಜದ   ಸಮಾವೇಶ, ಚಿಂತನಾ ಸಭೆ
ಮೈಸೂರು

ಇಂದು ಆರ್ಯ ವೈಶ್ಯ ಸಮಾಜದ ಸಮಾವೇಶ, ಚಿಂತನಾ ಸಭೆ

January 6, 2019

ಮೈಸೂರು: ಆರ್ಯವೈಶ್ಯ ಸಮಾಜದ ಮೈಸೂರು ಮತ್ತು ಚಾಮ ರಾಜನಗರ ಜಿಲ್ಲಾ ಮಂಡಳಿ ಸಮಾವೇಶ ಹಾಗೂ ಚಿಂತನಾ ಸಭೆಯನ್ನು ಜ.6ರಂದು ಜೆ.ಕೆ.ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ರಾಜ್ಯ ಕಾರ್ಯಾಧ್ಯಕ್ಷ ಗಿರೀಶ್ ಪೆಂಡಕೂರು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ವಿಧಾನ ಪರಿಷತ್ ಸದಸ್ಯ ಡಾ.ಟಿ.ಎ.ಶರವಣ ಸಮಾವೇಶಕ್ಕೆ ಚಾಲನೆ ನೀಡುವರು. ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕ ಎಲ್.ನಾಗೇಂದ್ರ…

ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜಲ್ಲಿ ಜುಡೋ, ಕರಾಟೆ ಕಲಿಕೆ ಕಡ್ಡಾಯವಾಗಲಿ
ಮೈಸೂರು

ವಿದ್ಯಾರ್ಥಿನಿಯರಿಗೆ ಶಾಲಾ-ಕಾಲೇಜಲ್ಲಿ ಜುಡೋ, ಕರಾಟೆ ಕಲಿಕೆ ಕಡ್ಡಾಯವಾಗಲಿ

January 6, 2019

ಮೈಸೂರು: ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ ವತಿಯಿಂದ ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಮಹಿಳಾ ಸಮ್ಮೇ ಳನದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯು ತ್ತಿರುವ ದೌರ್ಜನ್ಯ ತಡೆಗೆ ವಿದ್ಯಾರ್ಥಿನಿ ಯರಿಗೆ ಶಾಲಾ-ಕಾಲೇಜುಗಳಲ್ಲಿ ಆತ್ಮ ರಕ್ಷಣಾ ಕಲೆಗಳಾದ ಜುಡೋ, ಕರಾಟೆ ಯನ್ನು ಕಲಿಸುವುದರೊಂದಿಗೆ ಕಡ್ಡಾಯ ವಾಗಿ ಅಶ್ಲೀಲ ಸಿನಿಮಾ ಹಾಗೂ ಮದ್ಯ, ಮಾದಕ ವಸ್ತುಗಳನ್ನು ನಿಷೇಧಿಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು. ಇಂದು ಬೆಳಿಗ್ಗೆ ನಡೆದ 4ನೇ ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ…

ಇಂದು ಪಾಶ್ರ್ವಸಂಗೀತ’ ನಾಟಕ
ಮೈಸೂರು

ಇಂದು ಪಾಶ್ರ್ವಸಂಗೀತ’ ನಾಟಕ

January 6, 2019

ಮೈಸೂರು: ಮೈಸೂರಿನ ಕಲಾಮಂದಿರದಲ್ಲಿ ನಾಳೆ(ಜ.6) ಸಂಜೆ 7ಕ್ಕೆ ಸಾಹಿತಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನು ಆಧರಿಸಿದಪಾಶ್ರ್ವ ಸಂಗೀತ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಯುವ ಸಾಹಿತಿ ಬಿ.ಪಿ.ಅರುಣ್ ರಂಗರೂಪಕ್ಕಿಳಿಸಿರುವ ನಾಟಕವನ್ನು ರಂಗಾಯಣದ ಹಿರಿಯ ಕಲಾವಿದ ಪ್ರಶಾಂತ್ ಹಿರೇಮಠ ನಿರ್ದೇಶಿಸಿದ್ದಾರೆ. ಹೆಚ್.ಕೆ.ದ್ವಾರಕಾನಾಥ್ ರಂಗ ವಿನ್ಯಾಸದಲ್ಲಿ ಕಲಾವಿದರು ನಾಟಕ ಪ್ರದರ್ಶಿಸಲಿದ್ದಾರೆ. 1940ರಿಂದ 70ರ ದಶಕದ ಜನಪ್ರಿಯ ಹಿಂದಿ ಚಿತ್ರಗೀತೆಗಳೊಂದಿಗಿನ ಅವಿನಾಭಾವ ಸಂಬಂಧ ತೆರೆದಿಡುವ ಈ ನಾಟಕದಲ್ಲಿ, ಕೆ.ಎಲ್.ಸೈಗಲ್, ತಲತ್ ಮೊಹಮದ್, ಮೊಹಮದ್ ರಫಿ, ಕಿಶೋರ್‍ಕುಮಾರ್, ಶಂಸಾದ್ ಬೇಗಂ, ಲತಾ ಮಂಗೇಶ್ಕರ್, ಮನ್ನಾಡೆ…

1 1,194 1,195 1,196 1,197 1,198 1,611
Translate »