ಇಂದು ಆರ್ಯ ವೈಶ್ಯ ಸಮಾಜದ   ಸಮಾವೇಶ, ಚಿಂತನಾ ಸಭೆ
ಮೈಸೂರು

ಇಂದು ಆರ್ಯ ವೈಶ್ಯ ಸಮಾಜದ ಸಮಾವೇಶ, ಚಿಂತನಾ ಸಭೆ

January 6, 2019

ಮೈಸೂರು: ಆರ್ಯವೈಶ್ಯ ಸಮಾಜದ ಮೈಸೂರು ಮತ್ತು ಚಾಮ ರಾಜನಗರ ಜಿಲ್ಲಾ ಮಂಡಳಿ ಸಮಾವೇಶ ಹಾಗೂ ಚಿಂತನಾ ಸಭೆಯನ್ನು ಜ.6ರಂದು ಜೆ.ಕೆ.ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ರಾಜ್ಯ ಕಾರ್ಯಾಧ್ಯಕ್ಷ ಗಿರೀಶ್ ಪೆಂಡಕೂರು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ವಿಧಾನ ಪರಿಷತ್ ಸದಸ್ಯ ಡಾ.ಟಿ.ಎ.ಶರವಣ ಸಮಾವೇಶಕ್ಕೆ ಚಾಲನೆ ನೀಡುವರು. ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕ ಎಲ್.ನಾಗೇಂದ್ರ ಮತ್ತಿತರರು ಭಾಗವಹಿಸುವರು ಎಂದರು. ಸಮಾವೇಶಕ್ಕೂ ಮುನ್ನ ಅಂದು ಬೆಳಿಗ್ಗೆ 8ರಿಂದ ಕನ್ಯಕಾ ಪರಮೇಶ್ವರಿ ದೇವಸ್ಥಾನದಿಂದ ಮೆರವಣಿಗೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಮಹಾಮಂಡಳಿ ಪದಾಧಿಕಾರಿಗಳಾದ ಹೆಚ್.ಎಸ್.ಮಂಜುನಾಥಶೆಟ್ಟಿ, ಕೆ.ಆರ್.ನಾರಾಯಣ ಮೂರ್ತಿ, ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಪಿ.ಜೆ.ನಿವೇದಿತಾ, ಜಿಲ್ಲಾ ಅಧ್ಯಕ್ಷೆ ಎಂ.ಎಸ್.ರಶ್ಮಿ ಆದೀಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »