ಜ.8, 9ರಂದು ರಾಷ್ಟ್ರವ್ಯಾಪಿ   ಕಾರ್ಮಿಕರ ಮುಷ್ಕರ
ಮೈಸೂರು

ಜ.8, 9ರಂದು ರಾಷ್ಟ್ರವ್ಯಾಪಿ ಕಾರ್ಮಿಕರ ಮುಷ್ಕರ

January 6, 2019

ಮೈಸೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಜ.8 ಮತ್ತು 9ರಂದು ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ಸಂಚಾಲಕ ಹೆಚ್.ಬಿ. ರಾಮಕೃಷ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಸಾರ್ವತ್ರಿಕ ಮುಷ್ಕರದಲ್ಲಿ ಎಐಟಿಯುಸಿ, ಸಿಐಟಿಯು, ಐಎನ್‍ಟಿಯುಸಿ, ವಿಮಾ ಕಂಪನಿ, ಬ್ಯಾಂಕ್ ನೌಕರರು ಹಾಗೂ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಸೇರಿ 20 ಕೋಟಿಗೂ ಅಧಿಕ ಸಂಖ್ಯೆಯ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳುವರು ಎಂದು ವಿವರಿಸಿದರು.

ಮುಷ್ಕರ ಬೆಂಬಲಿಸಿ ಜ.8ರಂದು ಬೆಳಿಗ್ಗೆ 10.30ರಿಂದ ಎಐಟಿಯುಸಿ ಕಾರ್ಯಕರ್ತರು ಮೈಸೂರಿನ ರಾಮಸ್ವಾಮಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಪುರಭವನ ದಲ್ಲಿ ಅಂತ್ಯಗೊಳಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಬೃಹತ್ ಬಹಿರಂಗ ಸಭೆ ನಡೆಸಲಾಗು ವುದು. ಅಲ್ಲದೇ ಇದರ ಅಂಗವಾಗಿ ಮೊದಲ ದಿನ ಬೆಳಿಗ್ಗೆ 8ರಿಂದ ಮೇಟಗಳ್ಳಿ ಹಾಗೂ ಹೂಟಗಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರಿಂದ ಬೈಕ್ ರ್ಯಾಲಿ ನಡೆಸಲಾಗುವುದು ಎಂದರು. ಸಿಐಟಿಯುನ ಜಯರಾಂ, ಎಐಯುಟಿಯುಸಿನ ಚಂದ್ರಶೇಖರ್ ಮೇಟಿ, ಐಎನ್‍ಟಿಯುಸಿನ ಪುಟ್ಟಯ್ಯ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Translate »