ಮೈಸೂರು ಅರಮನೆ ಪ್ರವೇಶ ದ್ವಾರಗಳಲ್ಲಿ   ಅತ್ಯಾದುನಿಕ ಮೆಟಲ್ ಡಿಟೆಕ್ಟರ್‍ಗಳ ಅಳವಡಿಕೆ
ಮೈಸೂರು

ಮೈಸೂರು ಅರಮನೆ ಪ್ರವೇಶ ದ್ವಾರಗಳಲ್ಲಿ ಅತ್ಯಾದುನಿಕ ಮೆಟಲ್ ಡಿಟೆಕ್ಟರ್‍ಗಳ ಅಳವಡಿಕೆ

January 6, 2019

ಮೈಸೂರು: ಮೈಸೂರಿನ ಅಂಬಾವಿಲಾಸ ಅರಮನೆ ಪ್ರವೇಶ ದ್ವಾರಗಳಲ್ಲಿ ಭದ್ರತೆ ದೃಷ್ಟಿಯಿಂದ ಅತ್ಯಾಧುನಿಕ ಮಾದರಿ ಮೆಟಲ್ ಡಿಟೆಕ್ಟರ್‍ಗಳನ್ನು ಅಳವಡಿಸಲಾಗುತ್ತಿದೆ.

ಹಳೇ ಮಾದರಿ ಡಿಟೆಕ್ಟರ್‍ಗಳನ್ನು ಬದಲಿಸಿ, ಅತ್ಯಾಧುನಿಕ `ಮಲ್ಟಿ ಜೋನ್ ಡೋರ್ ಫ್ರೇಮ್ ಡಿಟೆಕ್ಟರ್’ ಅಳವಡಿಸ ಲಾಗು ತ್ತಿದೆ. ಇದನ್ನು ನೈನ್(9) ಜೋನ್ ಡಿಟೆಕ್ಟರ್ ಎಂತಲೂ ಕರೆಯ ಲಾಗುತ್ತದೆ. ಹಳೆಯ ಡಿಟೆಕ್ಟರ್‍ಗಳು ಕೇವಲ ಲೋಹವನ್ನು ಮಾತ್ರ ಗುರುತಿಸುತ್ತಿದ್ದವು. ಆದರೆ ನೂತನ ತಂತ್ರಜ್ಞಾನ ಒಳಗೊಂಡಿರುವ ಮಲ್ಟಿ ಜೋನ್ ಡಿಟೆಕ್ಟರ್‍ಗಳು ಎಲ್ಲಾ ಮಾದರಿ ವಸ್ತುಗಳನ್ನೂ ಶೋಧಿಸುತ್ತವೆ. ಈ ಡಿಟೆಕ್ಟರ್‍ಗಳಲ್ಲಿ ಕ್ಯಾಮರಾ ಅಳವಡಿಸಿರುವುದ ರಿಂದ ಇಲ್ಲಿ ಹಾದುಹೋಗುವವರ ಭಾವಚಿತ್ರ ಸೆರೆಯಾಗುತ್ತದೆ. ಇದರಲ್ಲಿ ಎಲ್‍ಇಡಿ ಪದರೆಯೂ ಇದೆ. ಒಟ್ಟಾರೆ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಇನ್ನಿತರ ಸೂಕ್ಷ್ಮ ಪ್ರದೇಶಗಳಲ್ಲಿ ಬಳಸುವ ಅತ್ಯಾಧು ನಿಕ ಮಾದರಿ ಮಲ್ಟಿ ಜೋನ್ ಮೆಟಲ್ ಡಿಟೆಕ್ಟರ್‍ಗಳನ್ನು ಭದ್ರತಾ ದೃಷ್ಟಿಯಿಂದ ಅರಮನೆ ಆವರಣದಲ್ಲಿ ಅಳವಡಿಸುತ್ತಿರುವುದು ಸೂಕ್ತವಾಗಿದೆ. ಈಗಾಗಲೇ 2 ಡಿಟೆಕ್ಟರ್ ಅಳವಡಿಸಲಾಗಿದೆ.

Translate »