ಪಾಲಿಕೆಯಿಂದ ಹನುಮಂತನಗರದಲ್ಲಿ   ಫುಟ್‍ಪಾತ್ ತೆರವು ಕಾರ್ಯಾಚರಣೆ
ಮೈಸೂರು

ಪಾಲಿಕೆಯಿಂದ ಹನುಮಂತನಗರದಲ್ಲಿ ಫುಟ್‍ಪಾತ್ ತೆರವು ಕಾರ್ಯಾಚರಣೆ

January 6, 2019

ಮೈಸೂರು: ಮೈಸೂರಿನ ಬನ್ನಿಮಂಟಪದ ಹನುಮಂತನಗರದಲ್ಲಿ ಫುಟ್‍ಪಾತ್ ಮೇಲೆ ನಾಯಿಕೊಡೆಯಂತೆ ತಲೆ ಎತ್ತಿದ್ದ ಅನಧಿಕೃತ ಅಂಗಡಿಗಳನ್ನು ನಗರಪಾಲಿಕೆ ಅಧಿಕಾರಿಗಳು ಇಂದು ಬೆಳಿಗ್ಗೆ ತೆರವುಗೊಳಿಸಿದರು.

ಪಾಲಿಕೆ ವಲಯಾಧಿಕಾರಿ ಮಹೇಶ ಹಾಗೂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ನೇತೃತ್ವ ದಲ್ಲಿ ಬೆಳಿಗ್ಗೆ 6ರಿಂದ 11.30 ಗಂಟೆವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಹನು ಮಂತನಗರದ ಮುಖ್ಯ ರಸ್ತೆಯ ಇಕ್ಕೆಲಗಳ ಲ್ಲಿನ ಸುಮಾರು 300 ಅಂಗಡಿಗಳನ್ನು ತೆರವುಗೊಳಿಸಲಾಯಿತು.

ಪಾಲಿಕೆ ಅಧಿಕಾರಿಗಳು ಜೆಸಿಬಿ, ಟ್ರಾಕ್ಟರ್ ಗಳೊಂದಿಗೆ ಮುಂಜಾನೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಕೆಲವರು ತಾವೇ ಅಂಗಡಿಗಳನ್ನು ಸ್ಥಳಾಂತರಿಸಿಕೊಂಡರೆ, ಇನ್ನು ಕೆಲವರು ಒಂದು ದಿನ ಕಾಲಾವ ಕಾಶ ಕೇಳಿದರು. ಯಾವುದಕ್ಕೂ ಕಿವಿ ಗೊಡದ ಪಾಲಿಕೆ ಸಿಬ್ಬಂದಿ ಪಾದಚಾರಿ ಗಳಿಗೆ ಅನುಕೂಲ ಮಾಡಿಕೊಡುವ ಸಲು ವಾಗಿ ಫುಟ್‍ಪಾತ್ ಮೇಲಿನ ನಿರ್ಮಾಣ ಗಳನ್ನು ತೆರವುಗೊಳಿಸಿದರು.

ಅಂಗಡಿ, ಟೀಶಾಪ್, ಮೆಕ್ಯಾನಿಕ್ ಶಾಪ್ ಗಳು, ತರಕಾರಿ, ಬಜ್ಜಿ-ಬೋಂಡಾ ಮಾರು ವವರು. ಇನ್ನಿತರೆ ಪದಾರ್ಥಗಳ ಮಾರಾಟ ಗಾರರು ಫುಟ್‍ಪಾತ್‍ನಲ್ಲೇ ವ್ಯಾಪಾರ ವಹಿ ವಾಟು ನಡೆಸುತ್ತಿದ್ದರಿಂದ ಪಾದಚಾರಿಗಳು ರಸ್ತೆಗಿಳಿಯಬೇಕಾಗಿ ಬಂದು ಇದರಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದ್ದವು.

ಪಾಲಿಕೆ ಅಧಿಕಾರಿಗಳು ಫುಟ್‍ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸು ವಂತೆ ಹಲವು ಬಾರಿ ಮೌಖಿಕವಾಗಿ ಹೇಳು ತ್ತಿದ್ದರೂ ಪ್ರಯೋಜನವಾಗದ ಕಾರಣ ಇಂದು ಜೆಸಿಬಿಗಳ ಮೂಲಕ 40 ಮಂದಿ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ತೆರವುಗೊಳಿಸಿದರು.

ಎನ್‍ಆರ್ ಉಪವಿಭಾಗದ ಎಸಿಪಿ ಸಿ.ಗೋಪಾಲ್ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಗಳಾದ ಬಸವರಾಜು, ರಾಘವೇಂದ್ರ ಗೌಡ, ಗುರುಪ್ರಸಾದ, ಬಿಜಿ.ಕುಮಾರ್, ಸೂರಜ್ ಹಾಗೂ ಬಿಜಿ.ಪ್ರಕಾಶ್ ಸೇರಿದಂತೆ 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಫುಟ್ ಫಾತ್ ತೆರವು ಕಾರ್ಯಾಚರಣೆ ಬಂದೋ ಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಅದೇ ರೀತಿ ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಸಮೀಪ ಬೆಂಗಳೂರು-ಮೈಸೂರು ರಸ್ತೆಯಲ್ಲಿಯೂ ಫಂಕ್ಷನ್ ಹಾಲ್‍ಗಳ ಮುಂದೆ ಅಕ್ರಮವಾಗಿ ಫುಟ್‍ಪಾತ್ ಮೇಲೆ ತಲೆ ಎತ್ತಿದ್ದ ನಿರ್ಮಾಣಗಳನ್ನು ಸಹ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.
ಎಚ್ಚರಿಕೆ: ಫುಟ್‍ಪಾತ್ ತೆರವು ಕಾರ್ಯಾ ಚರಣೆ ಮುಂದುವರೆಯಲಿದ್ದು, ಮೈಸೂರು ನಗರದಾದ್ಯಂತ ಅನಧಿಕೃತ ಒತ್ತುವರಿ ತೆರವು ಗೊಳಿಸುವುದರಿಂದ ಸಾರ್ವಜನಿಕರು ತಾವೇ ಅಂಗಡಿ-ಮುಂಗಟ್ಟುಗಳನ್ನು ತೆಗೆದುಕೊಳ್ಳ ಬೇಕು, ತಪ್ಪಿದಲ್ಲಿ ಜೆಸಿಬಿ ಮೂಲಕ ನೆಲ ಸಮಗೊಳಿಸುವುದು ಖಚಿತ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

Translate »