ಕಾಂಗ್ರೆಸ್ ಅಸ್ಮಿತೆ, ಅಸ್ತಿತ್ವ ಕಾಪಾಡಿ;  ಚುನಾವಣೆಗೆ ಸಿದ್ಧರಾಗಿ: ರಾಣಿ ಸತೀಶ್ ಕರೆ
ಮೈಸೂರು

ಕಾಂಗ್ರೆಸ್ ಅಸ್ಮಿತೆ, ಅಸ್ತಿತ್ವ ಕಾಪಾಡಿ; ಚುನಾವಣೆಗೆ ಸಿದ್ಧರಾಗಿ: ರಾಣಿ ಸತೀಶ್ ಕರೆ

January 6, 2019

ಮೈಸೂರು: ಕಾರ್ಯ ಕರ್ತರು ಪಕ್ಷದ ಅಸ್ಮಿತೆ ಹಾಗೂ ಅಸ್ತಿತ್ವವನ್ನು ಕಾಪಾಡಿಕೊಂಡು ಕಾಂಗ್ರೆಸ್ ಬಲಪಡಿಸು ವುದರೊಂದಿಗೆ ಲೋಕಸಭಾ ಚುನಾವಣೆ ಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸ ಬೇಕೆಂದು ಮಾಜಿ ಸಚಿವೆ ರಾಣಿ ಸತೀಶ್ ಸಲಹೆ ನೀಡಿದ್ದಾರೆ.

ಜಿಲ್ಲಾ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ವತಿಯಿಂದ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಮಧ್ಯಾಹ್ನ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ, ಜಿಲ್ಲಾ ಸೇವಾದಳದ ಕಾರ್ಯಕಾರಿಣಿ ಸಭೆ ಮತ್ತು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷವನ್ನು ಕಟ್ಟಿ ಬೆಳೆಸಲು ಹಲವರ ಶ್ರಮ ವಿದೆ. ಪಕ್ಷಕ್ಕಾಗಿ ತ್ಯಾಗ ಮಾಡಿದವರನ್ನು ಸ್ಮರಿಸಿಕೊಳ್ಳಬೇಕು. ಚುನಾವಣಾ ರಾಜ ಕೀಯದಲ್ಲಿ ಸೋಲು-ಗೆಲುವು ಮುಖ್ಯ ವಲ್ಲ. ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಲೋಕಸಭಾ ಚುನಾವಣೆ ಸಮೀಪಿಸುತ್ತಿರು ವುದರಿಂದ ಪಕ್ಷದ ಎಲ್ಲಾ ಘಟಕಗಳ ಕಾರ್ಯ ಕರ್ತರು ಸನ್ನದ್ಧರಾಗಬೇಕು ಎಂದರು.

ಮೈಸೂರು ಭಾಗದ ಪುಷ್ಪಾ ಅಮರನಾಥ್ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ದ್ದಾರೆ. ಸಿಕ್ಕಿರುವ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ಅಧಿಕಾರವಾದರೂ ಯಶಸ್ವಿಯಾಗಿ ನಿರ್ವ ಹಿಸಲು ಬದ್ಧತೆ, ಪ್ರಾಮಾಣಿಕತೆ, ನಿಷ್ಟೆ, ತಾಳ್ಮೆ ಮುಖ್ಯ ಎಂದರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಪುಷ್ಪಾ ಅವರು ಮಹಿಳೆ ಯರನ್ನು ಹೆಚ್ಚು ಸಂಘಟಿಸಿ, ಪಕ್ಷದ ಮಹತ್ವ ವನ್ನು ಸಾರುವರೆಂಬ ವಿಶ್ವಾಸವಿದೆ ಎಂದರು.
ಮಾಜಿ ಸಚಿವ ಸಿ.ಹೆಚ್.ವಿಜಯ ಶಂಕರ್ ಮಾತನಾಡಿ, ಇಂದೇ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆದರೂ ಕಾಂಗ್ರೆಸ್ ಗೆಲುವು ಶತಸಿದ್ಧ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪುಷ್ಪಾ ಅಮರನಾಥ್, ಪಕ್ಷದ ಸಂಘಟನೆ ದೃಷ್ಟಿ ಯಿಂದ ಶೀಘ್ರದಲ್ಲಿಯೇ ಮಹಿಳಾ ಸಹಾಯ ವಾಣಿ ಆರಂಭಿಸಿ ಸಮಸ್ಯೆಗಳನ್ನು ಆಲಿಸುತ್ತೇನೆ. ಮಹಿಳಾ ಘಟಕಗಳನ್ನು ಗಟ್ಟಿಗೊಳಿಸುತ್ತೇನೆ. ಮಹಿಳೆಯರ ಹಕ್ಕು ಗಳಿಗಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ಮಾಜಿ ಶಾಸಕ ಹೆಚ್.ಪಿ.ಮಂಜು ನಾಥ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಕೆ.ಆರ್.ನಗರದ ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್, ಕಾಂಗ್ರೆಸ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ನಂದಿನಿ ಮತ್ತಿತರರು ಇದ್ದರು.

Translate »