ಇಂದು ಪಾಶ್ರ್ವಸಂಗೀತ’ ನಾಟಕ
ಮೈಸೂರು

ಇಂದು ಪಾಶ್ರ್ವಸಂಗೀತ’ ನಾಟಕ

January 6, 2019

ಮೈಸೂರು: ಮೈಸೂರಿನ ಕಲಾಮಂದಿರದಲ್ಲಿ ನಾಳೆ(ಜ.6) ಸಂಜೆ 7ಕ್ಕೆ ಸಾಹಿತಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನು ಆಧರಿಸಿದಪಾಶ್ರ್ವ ಸಂಗೀತ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಯುವ ಸಾಹಿತಿ ಬಿ.ಪಿ.ಅರುಣ್ ರಂಗರೂಪಕ್ಕಿಳಿಸಿರುವ ನಾಟಕವನ್ನು ರಂಗಾಯಣದ ಹಿರಿಯ ಕಲಾವಿದ ಪ್ರಶಾಂತ್ ಹಿರೇಮಠ ನಿರ್ದೇಶಿಸಿದ್ದಾರೆ. ಹೆಚ್.ಕೆ.ದ್ವಾರಕಾನಾಥ್ ರಂಗ ವಿನ್ಯಾಸದಲ್ಲಿ ಕಲಾವಿದರು ನಾಟಕ ಪ್ರದರ್ಶಿಸಲಿದ್ದಾರೆ. 1940ರಿಂದ 70ರ ದಶಕದ ಜನಪ್ರಿಯ ಹಿಂದಿ ಚಿತ್ರಗೀತೆಗಳೊಂದಿಗಿನ ಅವಿನಾಭಾವ ಸಂಬಂಧ ತೆರೆದಿಡುವ ಈ ನಾಟಕದಲ್ಲಿ, ಕೆ.ಎಲ್.ಸೈಗಲ್, ತಲತ್ ಮೊಹಮದ್, ಮೊಹಮದ್ ರಫಿ, ಕಿಶೋರ್‍ಕುಮಾರ್, ಶಂಸಾದ್ ಬೇಗಂ, ಲತಾ ಮಂಗೇಶ್ಕರ್, ಮನ್ನಾಡೆ ಅವರ ಪ್ರಸಿದ್ಧ ಗೀತೆಗಳು ಸಂಗೀತ ಲೋಕವನ್ನೂ ಸೃಷ್ಟಿಸಲಿವೆ. ನಾಟಕ ವೀಕ್ಷಣೆಗೆ 100 ರೂ. ಟಿಕೆಟ್ ದರವಿದ್ದು, ಹೆಚ್ಚಿನ ಮಾಹಿತಿಗೆ ಮೊ.ಸಂ. 9964656482, 9448871815 ಸಂಪರ್ಕಿಸಬಹುದು.

Translate »