ಮೈಸೂರು

ಅಪಘಾತ ಗಾಯಳು ಸಾವು
ಮೈಸೂರು

ಅಪಘಾತ ಗಾಯಳು ಸಾವು

January 6, 2019

ಮೈಸೂರು: ಅಪಘಾತದಲ್ಲಿ ಗಾಯಗೊಂಡಿದ್ದ ಯುವಕಯೊರ್ವ ಚಿಕಿತ್ಸೆ ಫಲಕಾರಿಯಾಗದೆ ತಿಂಗಳ ನಂತರ ಮೃತಪಟ್ಟಿದ್ದಾರೆ. ಎನ್.ಆರ್.ಮೊಹಲ್ಲಾ ನಿವಾಸಿ ಅಫಾನ್ ಶರೀಫ್(28) ಮೃತಪಟ್ಟವರು. 2018ರ ನವೆಂಬರ್ 28ರಂದು ಮೈಸೂರು-ಬೆಂಗಳೂರು ರಸ್ತೆಯ ಕಳಸ್ತವಾಡಿ ಗ್ರಾಮದ ಕಡೆಯಿಂದ ಸಿದ್ದಲಿಂಗಪುರದ ಕಡೆಗೆ ಬರುತ್ತಿರುವಾಗ ನಾಗನಹಳ್ಳಿ ಕ್ರಾಸ್ ಬಳಿ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅಫಾನ್ ಶರೀಫ್ ಜ.4 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಮಹಿಳೆ ಸರಕಳವು
ಮೈಸೂರು

ಮಹಿಳೆ ಸರಕಳವು

January 6, 2019

ಮೈಸೂರು: ಪಾದಚಾರಿ ಮಹಿಳೆಯೊಬ್ಬರ ಸರಕಸಿದು ಪರಾರಿ ಯಾಗಿರುವ ಘಟನೆ ಎನ್.ಆರ್.ಠಾಣಾ ವ್ಯಾಪ್ತಿಯ ಕರುಣಾಪುರದಲ್ಲಿ ಶನಿವಾರ ಸಂಜೆ ನಡೆದಿದೆ. ಮಹಿಳೆಯ ಹೆಸರು, ವಿಳಾಸ, ಎಷ್ಟು ತೂಕದ ಸರ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮಹಿಳೆಯೊಬ್ಬರು ಮಗುವಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬೈಕ್‍ನಲ್ಲಿ ಬಂದ ಖದೀಮರಿಬ್ಬರು ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

ಖದೀಮನ ಸೆರೆ, 3 ವಾಹನ ವಶ
ಮೈಸೂರು

ಖದೀಮನ ಸೆರೆ, 3 ವಾಹನ ವಶ

January 6, 2019

ಮೈಸೂರು: ಖದೀಮನೋರ್ವನನ್ನು ಬಂಧಿಸಿರುವ ದೇವರಾಜ ಠಾಣೆ ಪೊಲೀಸರು, 1 ಲಕ್ಷ ಬೆಲೆ ಬಾಳುವ 3 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ರಾಜೇಂದ್ರನಗರ ನಿವಾಸಿ ಶೇಖರ ಅಲಿಯಾಸ್ ಚಂದ್ರ(28) ಬಂಧಿತ ಆರೋಪಿ. ಆತನಿಂದ 3 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ದೇವರಾಜ ಮತ್ತು ಕೆ.ಆರ್.ಠಾಣೆ ವ್ಯಾಪ್ತಿಯ ಪಾರ್ಕಿಂಗ್ ಸ್ಥಳದಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪುರಭವನದ ಬಳಿ ಶುಕ್ರವಾರ ಬಂಧಿಸಲಾಗಿದೆ. ಇನ್ಸ್‍ಪೆಕ್ಟರ್ ಪ್ರಸನ್ನಕುಮಾರ್, ಸಬ್ ಇನ್ಸ್‍ಪೆಕ್ಟರ್ ಎಸ್.ರಾಜು, ಎಎಸ್‍ಐ ಉದಯಕುಮಾರ್, ಸಿಬ್ಬಂದಿಗಳಾದ ವೇಣುಗೋಪಾಲ, ಸೋಮಶೆಟ್ಟಿ, ಸುರೇಶ, ಉಮೇಶ,…

ಕ್ರಿಕೆಟ್ ಬೆಟ್ಟಿಂಗ್: ನಾಲ್ವರ ಬಂಧನ
ಮೈಸೂರು

ಕ್ರಿಕೆಟ್ ಬೆಟ್ಟಿಂಗ್: ನಾಲ್ವರ ಬಂಧನ

January 6, 2019

ಮೈಸೂರು: ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ 28,910 ರೂ. ನಗದು, 13 ಮೊಬೈಲ್ ಫೋನ್ ಹಾಗೂ 1 ಟ್ಯಾಬ್ ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಶಾಂತಿನಗರದ ಕೈಸರ್ ಅಹಮದ್ (32), ರಾಜೀವ್ ನಗರದ ಸೈಯ್ಯದ್ ತನ್ವೀರ್ (31), ಕೆ.ಆರ್.ಮೊಹಲ್ಲಾದ ದಿಲೀಪ್ (27) ಹಾಗೂ ಕೊಳ್ಳೇಗಾಲದ ಮಹ್ಮದ್ ಶಕೀಲ್ (32) ಬಂಧಿತರು. ರಾಜೀವ್ ನಗರ 1ನೇ ಹಂತ, 1ನೇ ಕ್ರಾಸ್‍ನ 2965ನೇ ಸಂಖ್ಯೆಯ ಮನೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಖಚಿತ…

ಭತ್ತ, ಕಬ್ಬು ಬೆಳೆಗಾರರ ಬೇಡಿಕೆ ಈಡೆರಿಸದಿದ್ದರೆ ಹೋರಾಟ ಅನಿವಾರ್ಯ
ಮೈಸೂರು

ಭತ್ತ, ಕಬ್ಬು ಬೆಳೆಗಾರರ ಬೇಡಿಕೆ ಈಡೆರಿಸದಿದ್ದರೆ ಹೋರಾಟ ಅನಿವಾರ್ಯ

January 5, 2019

ನಂಜನಗೂಡು: ರಾಜ್ಯ ಸರ್ಕಾರ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯುವಲ್ಲಿ ವಿಳಂಬ ನೀತಿ ಅನುಸರಿ ಸುತ್ತಿದೆ. ತಾಲೂಕಿನಲ್ಲಿ ಶೇ.90ರಷ್ಟು ಭತ್ತ ಕಟಾವು ಆಗಿ ಕಡಿಮೆ ಬೆಲೆಗೆ ದಲ್ಲಾಳಿಗಳ ಪಾಲಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಬೆನ್ನೆಲುಬಾಗಿ ನಿಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಿ.ಬಿ.ಮಂಜುನಾಥ್ ಎಚ್ಚರಿಸಿದರು. ನಗರದ ಪತ್ರಿಕಾಭವದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಭತ್ತದ ಬೆಳೆಗಾರರ ನೆರವಿಗೆ ಬರಬೇಕು. 5000…

ಬೈಕ್‍ಗೆ ಪ್ಯಾಸೆಂಜರ್ ಆಟೋ ಡಿಕ್ಕಿ: ಪತಿ ಸಾವು, ಪತ್ನಿಗೆ ತೀವ್ರ ಗಾಯ
ಮೈಸೂರು

ಬೈಕ್‍ಗೆ ಪ್ಯಾಸೆಂಜರ್ ಆಟೋ ಡಿಕ್ಕಿ: ಪತಿ ಸಾವು, ಪತ್ನಿಗೆ ತೀವ್ರ ಗಾಯ

January 5, 2019

ತಿ.ನರಸೀಪುರ: ದಂಪತಿ ತೆರಳುತ್ತಿದ್ದ ಬೈಕ್‍ಗೆ ಎದುರಿಂದ ವೇಗವಾಗಿ ಬಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ ಗಂಡ ಸಾವನ್ನಪ್ಪಿ, ಪತ್ನಿ ಗಾಯಗೊಂಡ ಘಟನೆ ತಾಲೂಕಿನ ಹಸುವಟ್ಟಿ ಗ್ರಾಮದ ಬಳಿ ಪೂರೀಗಾಲಿ ಮುಖ್ಯ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ. ತಾಲೂಕಿನ ಪಟ್ಟೇಹುಂಡಿ ಗ್ರಾಮದ ದೊಡ್ಡ ಜವರಯ್ಯ ಎಂಬುವರ ಪುತ್ರ ಬಸವೇಶ್(45) ಮೃತಪಟ್ಟ ದುರ್ದೈವಿ ಯಾಗಿದ್ದು, ಆತನ ಪತ್ನಿ ಲಕ್ಷ್ಮೀ(35) ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮಾವಾಸ್ಯೆಯ ಹಿನ್ನಲೆ ಬೊಪ್ಪೇಗೌಡನ ಪುರ ಮಠಕ್ಕೆ ಪೂರೀಗಾಲಿ ಮಾರ್ಗವಾಗಿ ಟಿವಿಎಸ್…

ಮೂಲ ಸೌಕರ್ಯ ಒದಗಿಸದ ಪಪಂ ವಿರುದ್ಧ ಪ್ರತಿಭಟನೆ
ಮೈಸೂರು

ಮೂಲ ಸೌಕರ್ಯ ಒದಗಿಸದ ಪಪಂ ವಿರುದ್ಧ ಪ್ರತಿಭಟನೆ

January 5, 2019

ಸರಗೂರು: ವಾಜಪೇಯಿ ನಗರಾಭಿವೃದ್ಧಿ ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡದ ಹಾಗೂ ಮೂಲಭೂತ ಸೌಕರ್ಯ ಒದಗಿಸದ ಪಟ್ಟಣ ಪಂಚಾಯಿತಿ ಕ್ರಮ ಖಂಡಿಸಿ ಫಲಾನುಭವಿಗಳು ಸರಗೂರು ಪಟ್ಟಣ ಪಂಚಾಯಿತಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಮುಖಂಡ ಎಸ್.ಎಲ್. ರಾಜಣ್ಣ ಮಾತನಾಡಿ, 216 ವಸತಿ ರಹಿತ ಫಲಾನುಭವಿಗಳು ತೀರ ಬಡವರಾಗಿದ್ದಾರೆ. ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ವಿದ್ದಾರೆ. ಅಷ್ಟೇ ಅಲ್ಲ ಬಾಡಿಗೆ ಕಟ್ಟಲೂ ಅಸಹಾಯಕ ರಾಗಿದ್ದಾರೆ ಎಂದು ಸಮಸ್ಯೆ ತೀವ್ರತೆ ವಿವರಿಸಿದರು. 15 ವರ್ಷಗಳ…

ನಮಗೆ ಗುಡಿಸಲೇ ಚೆನ್ನಾಗಿತ್ತು, ಮನೆ ಕೊಟ್ಟರು ಈಗ ನೆಮ್ಮದಿ ಇಲ್ಲದಂತಾಗಿದೆ
ಮೈಸೂರು

ನಮಗೆ ಗುಡಿಸಲೇ ಚೆನ್ನಾಗಿತ್ತು, ಮನೆ ಕೊಟ್ಟರು ಈಗ ನೆಮ್ಮದಿ ಇಲ್ಲದಂತಾಗಿದೆ

January 5, 2019

ಮೈಸೂರು: ಗುಡಿಸಲಿನಲ್ಲಿದ್ದಾಗಲೇ ಚೆನ್ನಾಗಿತ್ತು. ಈಗ ಮೂಲಸೌಲಭ್ಯಗಳಿಲ್ಲದೇ ಪರಿತಪಿಸುವಂತಾಗಿದೆ… ಸರ್ಕಾರದಿಂದ ಮನೆ ಕಟ್ಟಿಸಿಕೊಡುತ್ತೇ ವೆಂದು ಮಧ್ಯವರ್ತಿಗಳು ಹಣ ಪಡೆದಿದ್ದಾರೆ… ನಮಗೆ ಹಂಚಿಕೆಯಾದ ಮನೆಯಲ್ಲಿ ಅನ್ಯರು ವಾಸವಿದ್ದಾರೆ… ಹೀಗೆ ಹತ್ತು ಹಲವು ಸಮಸ್ಯೆಗಳು ಮೈಸೂರಿನ ಕೊಳಗೇರಿ ನಿವಾಸಿಗಳಿಂದ ಕೇಳಿ ಬಂದಿತು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇನ್ಸ್‍ಟಿ ಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಕೊಳಗೇರಿ ನಿವಾಸಿಗಳ ಕುಂದು ಕೊರತೆಗಳಿಗೆ ಸಂಬಂ ಧಿಸಿದಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧ್ಯ ಕ್ಷತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅದಾಲತ್‍ನಲ್ಲಿ ಈ ರೀತಿ ಹಲವಾರು ಸಮಸ್ಯೆಗಳು ಅನಾವರಣಗೊಂಡವು. ಧ್ವನಿ…

ಹೆಚ್1ಎನ್1 ಸೋಂಕಿನಿಂದ ನರಳುತ್ತಿದ್ದ ಮಹಿಳೆಗೆ ನಾರಾಯಣ ಹೃದಯಾಲಯದಿಂದ ಮರುಜೀವ
ಮೈಸೂರು

ಹೆಚ್1ಎನ್1 ಸೋಂಕಿನಿಂದ ನರಳುತ್ತಿದ್ದ ಮಹಿಳೆಗೆ ನಾರಾಯಣ ಹೃದಯಾಲಯದಿಂದ ಮರುಜೀವ

January 5, 2019

ಮೈಸೂರು: ಹೆಚ್1ಎನ್1 ಸೋಂಕಿನಿಂದಾಗಿ ತೀವ್ರತರನಾದ ಉಸಿ ರಾಟದ ಸಮಸ್ಯೆ ಎದುರಿಸುತ್ತಿದ್ದ ಮಹಿಳೆ ಯೊಬ್ಬರಿಗೆ ಇದೇ ಮೊದಲ ಬಾರಿಗೆ ಎಕ್ಮೊ (ಎಕ್ಸ್‍ಟ್ರಾ ಕಾರ್ಪೊರಿಯಲ್ ಮೆಂಬ್ರೇನ್ ಆಕ್ಸಿಜನೇಷನ್) ಸಾಧನದ ಚಿಕಿತ್ಸೆ ನೀಡುವ ಮೂಲಕ ಆಕೆಗೆ ಮರುಜೀವ ನೀಡಲಾಗಿದೆ ಎಂದು ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ.ಎಂ.ಎನ್.ರವಿ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ, ಮೈಸೂರಿನ ಮಹಿಳೆಯೊಬ್ಬರಿಗೆ ಹೆಚ್1ಎನ್1 ಸೋಂಕು ತಗುಲಿತ್ತು. ಇದರಿಂದ ಆಕೆಗೆ ಉಸಿರಾಟದ ತೊಂದರೆ ಉಲ್ಬಣವಾಗಿ ಸಾವು-ಬದುಕಿನ…

ಹುಚ್ಚು ನಾಯಿ ದಾಳಿ: 15ಕ್ಕೂ ಹೆಚ್ಚು ಮಂದಿಗೆ ಗಾಯ
ಮೈಸೂರು

ಹುಚ್ಚು ನಾಯಿ ದಾಳಿ: 15ಕ್ಕೂ ಹೆಚ್ಚು ಮಂದಿಗೆ ಗಾಯ

January 5, 2019

ಮೈಸೂರು: ಹುಚ್ಚು ನಾಯಿಯೊಂದು ಮೂರು ಗ್ರಾಮಗಳಲ್ಲಿ ಸಿಕ್ಕ ಸಿಕವರಿಗೆ ಕಚ್ಚಿದ್ದರಿಂದ ಮಕ್ಕಳು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೈಸೂರು ತಾಲೂಕಿನ ಮೂಡಲ ಹುಂಡಿ, ವರಕೋಡು ಹಾಗೂ ಪಿಲ್ಲಳ್ಳಿ ಗ್ರಾಮಸ್ಥರು ಹುಚ್ಚು ನಾಯಿಯ ಅಟ್ಟಹಾಸದಿಂದ ಭಯಭೀತರಾಗಿ ದ್ದಾರೆ. ಈ ಹುಚ್ಚು ನಾಯಿಯ ದಾಳಿಗೆ ಗ್ರಾಮಸ್ಥರು ತತ್ತರಿಸಿದ್ದಾರೆ. ಗುರುವಾರ ಸಂಜೆ ಏಕಾಏಕಿ ಈ ಹುಚ್ಚು ನಾಯಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದೆ. ಮೊದಲು ಸಂಜೆ 4.30ರಲ್ಲಿ ಪಿಲ್ಲಳ್ಳಿಯಲ್ಲಿ ಕಾಣಿಸಿಕೊಂಡು ಐದಾರು ಜನ ರಿಗೆ ಕಚ್ಚಿ ಗಾಯಗೊಳಿಸಿದೆ. ಗ್ರಾಮ…

1 1,195 1,196 1,197 1,198 1,199 1,611
Translate »