ಬೆಂಗಳೂರು: ಹೊಸ ವರ್ಷದ ಸಂತಸದಲ್ಲಿದ್ದ ಕನ್ನಡ ಚಿತ್ರರಂಗದ ಹಲವು ದಿಗ್ಗಜರು ಇಂದು ಬೆಳಿಗ್ಗೆ ಕಣ್ತೆರೆಯುವ ಮುನ್ನವೇ ಆದಾಯ ತೆರಿಗೆ ಅಧಿಕಾರಿಗಳ ದಾಳಿಯಿಂದ ಆಘಾತಕ್ಕೆ ಒಳಗಾಗಿದ್ದಾರೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಪ್ರಮಾಣ ದಲ್ಲಿ, ಆದಾಯ ತೆರಿಗೆ (ಐಟಿ) ಅಧಿಕಾರಿಗಳು, ಖ್ಯಾತ ನಟರಾದ ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್, ಯಶ್ ಅವರ ತಾರಾ ಪತ್ನಿ ರಾಧಿಕಾ ಪಂಡಿತ್ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಜೊತೆಗೆ ಈ ಖ್ಯಾತ ನಟರನ್ನು ಹಾಕಿಕೊಂಡು ಭಾರೀ ಹಣ ಹೂಡಿಕೆ ಮಾಡಿ ದೊಡ್ಡ ಪ್ರಮಾಣದಲ್ಲಿ…
ಜ.16ರವರೆಗೆ ಇಮ್ಮಡಿ ಮಹದೇವಸ್ವಾಮಿ ಸೇರಿ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
January 4, 2019ಕೊಳ್ಳೇಗಾಲ: ಸುಳವಾಡಿ ವಿಷ ಪ್ರಸಾದ ದುರಂತಕ್ಕೆ ಸಂಬಂಧಿ ಸಿದ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜ.16ರವರೆಗೆ ವಿಸ್ತರಿಸಲಾಗಿದೆ. ಮೈಸೂರು ಕಾರಾಗೃಹದಲ್ಲಿದ್ದ ಆರೋಪಿಗಳಾದ ಸಾಲೂರು ಮಠದ ಕಿರಿಯ ಸ್ವಾಮೀಜಿಯಾಗಿದ್ದ ಇಮ್ಮಡಿ ಮಹದೇವಸ್ವಾಮಿ, ಆತನ ಪ್ರೇಯಸಿ ಅಂಬಿಕಾ, ಆಕೆಯ ಪತಿ ಮಾದೇಶ್ ಮತ್ತು ದೊಡ್ಡಯ್ಯ ಅವರನ್ನು ಗುರುವಾರ ಬೆಳಿಗ್ಗೆ 11.30 ಗಂಟೆ ವೇಳೆಗೆ ಜಿಲ್ಲಾ ಪೆÇಲೀಸರು ಬಿಗಿ ಪೊಲೀಸ್ ಬಂದೋ ಬಸ್ತ್‍ನೊಂದಿಗೆ ಕೊಳ್ಳೇಗಾಲದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿ ಗಳ ವಿಚಾರಣೆ ನಡೆಸಿದ ಹಿರಿಯ ಶ್ರೇಣಿ ನ್ಯಾಯಾ ಧೀಶ…
ಕೇರಳ ಬಂದ್: ರಾಜ್ಯ ಸಾರಿಗೆ ಬಸ್ ಸಂಚಾರ ಸಂಜೆವರೆಗೆ ಸ್ಥಗಿತ
January 4, 2019ಮೈಸೂರು: ಶಬರಿ ಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿ ಬ್ಬರು ಪ್ರವೇಶಿಸಿದ್ದನ್ನು ಖಂಡಿಸಿ ಕೆಲ ಸಂಘಟನೆ ಗಳು ಕೇರಳ ಬಂದ್‍ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಗುರುವಾರ ಮೈಸೂರಿನಿಂದ ಕೇರಳಕ್ಕೆ ತೆರಳಬೇಕಾ ಗಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳ ಸಂಚಾರವನ್ನು ಸಂಜೆವರೆಗೂ ತಡೆಹಿಡಿಯಲಾಗಿತ್ತು. ಅಯ್ಯಪ್ಪಸ್ವಾಮಿ ದೇವಾಲಯ ಹಿತರಕ್ಷಣಾ ಸಮಿತಿ ಗುರುವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕೇರಳ ಬಂದ್‍ಗೆ ಕರೆ ನೀಡಿತ್ತು. ಹಾಗಾಗಿ ಮೈಸೂರು ನಗರದಿಂದ ಕೇರಳದ ವಿವಿಧೆಡೆ ತೆರಳಬೇಕಾಗಿದ್ದ ಕರ್ನಾಟಕ ಹಾಗೂ ಕೇರಳ ರಾಜ್ಯ ರಸ್ತೆ ಸಾರಿಗೆ…
ಕೇರಳ ಬಂದ್ ವೇಳೆ ಹಿಂಸಾಚಾರ
January 4, 2019ತಿರುವನಂತಪುರಂ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿರುವುದನ್ನು ಖಂಡಿಸಿ ಶಬರಿಮಲೆ ಕರ್ಮ ಸಮಿತಿ ಮತ್ತು ಬಿಜೆಪಿ ಇಂದು ಕರೆ ನೀಡಿದ್ದ ಕೇರಳ ಬಂದ್ ವೇಳೆ ಹಿಂಸಾಚಾರ ನಡೆದಿದೆ. ಪ್ರತಿಭಟನೆ ವೇಳೆ ಕಲ್ಲು ತೂರಾಟದಲ್ಲಿ ಶಬರಿಮಲೆ ಕರ್ಮ ಸಮಿತಿಯ ಕಾರ್ಯಕರ್ತ ಸಾವನ್ನಪ್ಪಿದ್ದು, ಮೂವರು ಬಿಜೆಪಿ ಕಾರ್ಯ ಕರ್ತರು ಇರಿತಕ್ಕೊಳಗಾಗಿದ್ದಾರೆ. 7 ಪೊಲೀಸ್ ವಾಹನಗಳು ಹಾಗೂ 79 ಕೇರಳ ರಾಜ್ಯ ಸಾರಿಗೆ ಬಸ್‍ಗಳನ್ನು ಧ್ವಂಸಗೊಳಿಸಲಾಗಿದೆ. ತಿರುವನಂತಪುರಂನ ನೆಡುಮಂಗಡವಿನಲ್ಲಿ ದುಷ್ಕರ್ಮಿಗಳು ಬಾಂಬ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಯಾವುದೇ ಸಾವು-ನೋವು…
ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಕ್ಕೆ ವಿರಾಜಪೇಟೆ ಲಾಡ್ಜ್ ನಲ್ಲಿ ಸಿದ್ಧತೆ ನಡೆಸಿದ್ದ ಬಿಂದು, ಕನಕದುರ್ಗಾ!
January 4, 2019ಮಡಿಕೇರಿ: ಶ್ರೀ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾ ಲಯ ಪ್ರವೇಶಿಸಿ, 800 ವರ್ಷದ ಸಂಪ್ರದಾಯ ಮುರಿದ ಬಿಂದು ಮತ್ತು ಕನಕದುರ್ಗಾ ಈ ಸಾಹಸಕ್ಕೆ ಎರಡು ದಿನಗಳ ಮುಂಚೆ ವಿರಾಜಪೇಟೆಯಲ್ಲಿ ತಂಗಿದ್ದರು ಎಂಬ ಸ್ಫೋಟಕ ಮಾಹಿತಿ ‘ಮೈಸೂರು ಮಿತ್ರ’ನಿಗೆ ಲಭಿಸಿದೆ. ಈ ಇಬ್ಬರೂ ಕೇರಳ ಪೊಲೀಸರ ಜತೆ ವಿರಾಜಪೇಟೆಗೆ ಬಂದು, ಇಲ್ಲಿಯೇ ಶ್ರೀ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ ಕಾರ್ಯತಂತ್ರ ರೂಪಿಸಿದ್ದರೆಂದು ತಿಳಿದು ಬಂದಿದೆ. ಕೋಯಕ್ಕೊಡು ನಿವಾಸಿಯೂ ಆದ ಉಪನ್ಯಾಸಕಿ ಮಾತ್ರವಲ್ಲ ದಲಿತ ಹಕ್ಕು ಹೋರಾಟಗಾರ್ತಿ ಬಿಂದು, ತನ್ನೊಂದಿಗೆ ಮಲಪ್ಪುರಂ ನಿವಾಸಿ,…
ಹಗಲು ಬಿರುಬಿಸಿಲು, ರಾತ್ರಿ ಮೈಕೊರೆವ ಚಳಿ…
January 4, 2019ಮೈಸೂರು: ಹಗಲಿನಲ್ಲಿ ಬಿರು ಬಿಸಿಲು, ರಾತ್ರಿಯಲ್ಲಿ ಮೈಕೊರೆಯುವ ಚಳಿ. ಇದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಹವಾಮಾನ. ಉತ್ತರದಿಂದ ದಕ್ಷಿಣಕ್ಕೆ ವಿಪರೀತ ಶೀತಗಾಳಿ ಬೀಸು ತ್ತಿರುವ ಪರಿಣಾಮ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ದಾಖಲೆಯ ಚಳಿ ಉಂಟಾಗಿದೆ. ಹಾಗೆಯೇ ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಚಳಿ ಹೆಚ್ಚಾಗಿದೆ. ಅಲ್ಲದೆ ವಾತಾವರಣದಲ್ಲಿ ಮೋಡ ಗಳು ಇಲ್ಲದಿರುವ ಕಾರಣ ಚಳಿಯ ಪ್ರಮಾಣ ಮತ್ತಷ್ಟು ಜಾಸ್ತಿಯಾಗಿದೆ. ಚಳಿಯಿಂದ ನಡುಗಿರುವ ಜನ, ಸ್ವೆಟರ್, ಟೊಪ್ಪಿ ಇನ್ನಿತರ ರಕ್ಷಣಾ ಪರಿಕರಗಳ ಮೊರೆ ಹೋಗಿದ್ದಾರೆ. ಭಾರತೀಯ ಹವಾಮಾನ…
ಮೈಸೂರಲ್ಲಿ ಬಿಜೆಪಿ, ಹಿಂದೂಪರ ಸಂಘಟನೆಗಳ ಪ್ರತಿಭಟನೆ
January 4, 2019ಮೈಸೂರು: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿಬ್ಬರು ಪ್ರವೇಶ ಮಾಡಿದ್ದನ್ನು ಖಂಡಿಸಿ ಗುರುವಾರ ಕೇರಳದಲ್ಲಿ ಆಕ್ರೋಶ ಭುಗಿಲೆದ್ದಿದ್ದರೆ, ರಾಜ್ಯದ ವಿವಿಧ ಭಾಗ ಗಳಲ್ಲೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಮೈಸೂರಿನಲ್ಲೂ ವಿವಿಧ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯ ಕಹಳೆ ಮೊಳಗಿಸಿದರು. ಕರ್ನಾಟಕ ದಕ್ಷಿಣ ಪ್ರಾಂತದ ಶ್ರೀ ಶಬರಿ ಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ನೇತೃತ್ವ ದಲ್ಲಿ ಮೈಸೂರಿನ ಗಾಂಧಿ ಚೌಕದಲ್ಲಿ ಜಮಾಯಿಸಿದ ವಿಶ್ವ ಹಿಂದೂ ಪರಿಷತ್, ಬಿಜೆಪಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ…
ಪ್ರತಿ ತಿಂಗಳ ಮೊದಲ, 3ನೇ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ
January 4, 2019ಮೈಸೂರು: ಮೈಸೂರು ನಾಗರಿಕರ ಆರೋಗ್ಯ ಕಾಪಾ ಡುವ ನಿಟ್ಟಿನಲ್ಲಿ `ಆರೋಗ್ಯ ಮೈಸೂರು’ ಕಾರ್ಯಕ್ರಮದಡಿ ಪ್ರತಿ ತಿಂಗಳ ಮೊದಲ ಮತ್ತು 3ನೇ ಭಾನುವಾರಗಳಂದು ಮೈಸೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮೈಸೂರು ಕೃಷ್ಣರಾಜಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮೈಸೂರಿನ ಅನೇಕರು ಮಕ್ಕಳಿಂದ ವೃದ್ಧ ರವರೆಗೆ ಅವರಿಗೇ ಅರಿವಿಲ್ಲದೆ ಕಾಡುತ್ತಿ ರುವ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಹಾಗೂ ನಾನಾ ರೋಗಗಳಿಂದ ಮೈಸೂರಿಗರನ್ನು…
ಮೈಸೂರಿನ ಶಿಕ್ಷಕ ನಾಗರಾಜ್ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಯ್ಕೆ
January 4, 2019ಮೈಸೂರು: ಮನಸ್ಸಿನಲ್ಲಿ ಮೂಡಿದ ಭಾವನೆಗೆ ಕುಂಚದ ಮೂಲಕ ಚಿತ್ರರೂಪ ನೀಡುವುದು ಕಷ್ಟಕರ ವಾದರೂ ಆ ಕಷ್ಟದ ಕೆಲಸಕ್ಕೆ ಇಷ್ಟದ ಲೇಪನಕೊಡುವವರೇ ಚಿತ್ರ ಕಲಾವಿದರು. ಇತರ ಸನ್ನಿವೇಶ, ಸಂಗತಿಗಳು ಇವರ ಕೈಯ್ಯಲ್ಲಿ ಅದ್ಭುತ ಕಲಾಕೃತಿಯಾಗಿ ಮೂಡುತ್ತವೆ. ತಮ್ಮ ಕಲಾ ನೈಪುಣ್ಯತೆಯಿಂದ ಎಲ್ಲರ ಮನಗೆದ್ದ ಮೈಸೂರಿನ ಶ್ರೀಪರಮಹಂಸ ವಿದ್ಯಾನಿಕೇತನ ಶಾಲೆಯ ಶಿಕ್ಷಕ ನಾಗ ರಾಜ್ ಕೂಡ ಒಬ್ಬರು.ಇವರು ತಮ್ಮ ಕಲಾಪ್ರತಿಭೆಯಿಂದ ಜ.11 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಯ್ಕೆಯಾ ಗಿದ್ದು, ತಮ್ಮ ಕಲೆಯನ್ನು ಅನಾವರಣ ಗೊಳಿಸಲು…
ಸ್ವಚ್ಛತೆ ಸಂದೇಶದೊಂದಿಗೆ ಪ್ರಮುಖ ಮಾಹಿತಿ ಒಳಗೊಂಡ ಕ್ಯಾಲೆಂಡರ್ ಬಿಡುಗಡೆ
January 4, 2019ಮೈಸೂರು: ಸ್ವಚ್ಛತೆಯ ಸಂದೇಶ ದೊಂದಿಗೆ ಹಲವು ಮಾಹಿತಿ ಹೊಂದಿರುವ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‍ನ ವಿಶಿಷ್ಟ ಕ್ಯಾಲೆಂಡರ್ ಅನ್ನು ಗುರು ವಾರ ಪೌರಕಾರ್ಮಿಕರಿಂದ ಬಿಡುಗಡೆ ಮಾಡಿಸಲಾಯಿತು. ಮೈಸೂರಿನ ಚಾಮುಂಡಿಪುರಂನ ತಗಡೂರು ರಾಮ ಚಂದ್ರರಾವ್ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಸಮಾ ರಂಭದಲ್ಲಿ 2019ರ ಸಾಲಿನ ವಿಶಿಷ್ಟ ಕ್ಯಾಲೆಂಡರ್ ಅನ್ನು ಪೌರಕಾರ್ಮಿಕರು ಬಿಡುಗಡೆಗೊಳಿಸಿದರು. ಹಸಿ ಮತ್ತು ಒಣ ಕಸಗಳ ವಿಧಗಳು ಹಾಗೂ ಅವುಗಳ ವಿಂಗಡಿಸುವುದ ರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರ ಹೊಂದಿ ರುವ ಕ್ಯಾಲೆಂಡರ್ ಇದಾಗಿದೆ. ಇದರೊಂದಿಗೆ ಮೈಸೂರು ಮಹಾನಗರ ಪಾಲಿಕೆಯ…










