ಜ.16ರವರೆಗೆ ಇಮ್ಮಡಿ ಮಹದೇವಸ್ವಾಮಿ ಸೇರಿ   ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
ಮೈಸೂರು

ಜ.16ರವರೆಗೆ ಇಮ್ಮಡಿ ಮಹದೇವಸ್ವಾಮಿ ಸೇರಿ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

January 4, 2019

ಕೊಳ್ಳೇಗಾಲ: ಸುಳವಾಡಿ ವಿಷ ಪ್ರಸಾದ ದುರಂತಕ್ಕೆ ಸಂಬಂಧಿ ಸಿದ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜ.16ರವರೆಗೆ ವಿಸ್ತರಿಸಲಾಗಿದೆ.

ಮೈಸೂರು ಕಾರಾಗೃಹದಲ್ಲಿದ್ದ ಆರೋಪಿಗಳಾದ ಸಾಲೂರು ಮಠದ ಕಿರಿಯ ಸ್ವಾಮೀಜಿಯಾಗಿದ್ದ ಇಮ್ಮಡಿ ಮಹದೇವಸ್ವಾಮಿ, ಆತನ ಪ್ರೇಯಸಿ ಅಂಬಿಕಾ, ಆಕೆಯ ಪತಿ ಮಾದೇಶ್ ಮತ್ತು ದೊಡ್ಡಯ್ಯ ಅವರನ್ನು ಗುರುವಾರ ಬೆಳಿಗ್ಗೆ 11.30 ಗಂಟೆ ವೇಳೆಗೆ ಜಿಲ್ಲಾ ಪೆÇಲೀಸರು ಬಿಗಿ ಪೊಲೀಸ್ ಬಂದೋ ಬಸ್ತ್‍ನೊಂದಿಗೆ ಕೊಳ್ಳೇಗಾಲದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿ ಗಳ ವಿಚಾರಣೆ ನಡೆಸಿದ ಹಿರಿಯ ಶ್ರೇಣಿ ನ್ಯಾಯಾ ಧೀಶ ಎಸ್.ಜೆ.ಕೃಷ್ಣ ಅವರು ಜ. 16 ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ, ಆದೇಶಿಸಿದರು. ಪ್ರಕರಣ ಸಂಬಂಧ ಕಳೆದ ಡಿ.22 ರಂದು ನ್ಯಾಯಾ ಧೀಶರ ಮನೆಗೆ ಆರೋಪಿಗಳನ್ನು ಹಾಜರುಪಡಿಸಿದ್ದ ವೇಳೆ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅವಧಿ ಇಂದು ಅಂತ್ಯ ವಾದ ಹಿನ್ನೆಲೆಯಲ್ಲಿ ಗುರುವಾರ ನ್ಯಾಯಾಲ ಯಕ್ಕೆ ಹಾಜರುಪಡಿಸಲಾಯಿತು.

ಬಿಗಿ ಬಂದೋಬಸ್ತ್: ಆರೋಪಿಗಳನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸುವ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ವಿಶೇಷ ಪೆÇಲೀಸ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ನ್ಯಾಯಾಲಯದ ಸುತ್ತಲೂ ಸಾರ್ವಜನಿಕರು ಸೇರಿದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ನ್ಯಾಯಾಲಯ ಈ ಪ್ರಕರಣದ ಆರೋಪಿಗಳಿಗೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಮತ್ತೆ ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಮೂವರು ಸಿಪಿಐ, ಎಸ್‍ಐ, 7 ಮಂದಿ ಎಎಸ್‍ಐ ಹಾಗೂ ಎರಡು ಡಿಆರ್ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಇಮ್ಮಡಿ ಮಹದೇವಸ್ವಾಮಿ ವರ್ತನೆಗೆ ವಕೀಲರ ಅಸಮಾಧಾನ: ಸುಳವಾಡಿ ವಿಷ ಪ್ರಸಾದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದಾಗ ಮೊದಲನೇ ಆರೋಪಿ ಕಟಕಟೆಯಲ್ಲಿ ಚಪ್ಪಲಿ ಹಾಕಿಕೊಂಡು ನಿಂತಿದ್ದಾರೆ ಎಂದು ವಕೀಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಮ್ಮಡಿ ಮಹದೇವಸ್ವಾಮಿ ನ್ಯಾಯಾಲಯಕ್ಕೆ ಅಗೌರವ ತೋರಿಸಿದರು. ಅವರು ನ್ಯಾಯಾಲಯದಲ್ಲಿ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ವಕೀಲರ ಸಂಘದ ಕಾರ್ಯದರ್ಶಿ ಎನ್.ಬಸವರಾಜು ಆಕ್ಷೇಪ ವ್ಯಕ್ತಪಡಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದೊಳಗೆ ಆಗಮಿಸುವ ವೇಳೆ ಯಾವುದೇ ವಕೀಲರು ಸೇರಿದಂತೆ ಪ್ರತಿಯೊಬ್ಬರು ತಲೆ ತಗ್ಗಿಸಿ ಕೈಮುಗಿದು ಒಳ ಬರುತ್ತಾರೆ. ಆದರೆ, ನಾಲ್ವರು ಆರೋಪಿಗಳ ಪೈಕಿ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ಆ ರೀತಿಯಲ್ಲಿ ನಡೆದುಕೊಳ್ಳದೇ ಅಗೌರವ ತೋರಿಸಿದ್ದಾರೆ. ನಾವು ಪಾದರಕ್ಷೆಯನ್ನು ಕಳಚಿಟ್ಟು ನಡೆಯಿರಿ ಎಂದು ಹೇಳಿದರೂ ಕೇಳದೆ ಕಟಕಟೆಗೆ ಚಪ್ಪಲಿ ಹಾಕಿಕೊಂಡು ಹೋಗಿ ನಿಂತರು ಎಂದು ದೂರಿದರು.

Translate »