ಮೈಸೂರು: ಹುಚ್ಚು ನಾಯಿಯೊಂದು ಮೂರು ಗ್ರಾಮಗಳಲ್ಲಿ ಸಿಕ್ಕ ಸಿಕವರಿಗೆ ಕಚ್ಚಿದ್ದರಿಂದ ಮಕ್ಕಳು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮೈಸೂರು ತಾಲೂಕಿನ ಮೂಡಲ ಹುಂಡಿ, ವರಕೋಡು ಹಾಗೂ ಪಿಲ್ಲಳ್ಳಿ ಗ್ರಾಮಸ್ಥರು ಹುಚ್ಚು ನಾಯಿಯ ಅಟ್ಟಹಾಸದಿಂದ ಭಯಭೀತರಾಗಿ ದ್ದಾರೆ. ಈ ಹುಚ್ಚು ನಾಯಿಯ ದಾಳಿಗೆ ಗ್ರಾಮಸ್ಥರು ತತ್ತರಿಸಿದ್ದಾರೆ. ಗುರುವಾರ ಸಂಜೆ ಏಕಾಏಕಿ ಈ ಹುಚ್ಚು ನಾಯಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದೆ. ಮೊದಲು ಸಂಜೆ 4.30ರಲ್ಲಿ ಪಿಲ್ಲಳ್ಳಿಯಲ್ಲಿ ಕಾಣಿಸಿಕೊಂಡು ಐದಾರು ಜನ ರಿಗೆ ಕಚ್ಚಿ ಗಾಯಗೊಳಿಸಿದೆ. ಗ್ರಾಮ ಸ್ಥರು ಹರಸಾಹಸ ಪಟ್ಟು ನಾಯಿ ಯನ್ನು ಓಡಿಸಿದ್ದಾರೆ. ಪಿಲ್ಲಳ್ಳಿಯಿಂದ ಐದಾರು ಕಿ.ಮಿ ದೂರದಲ್ಲಿರುವ ವರ ಕೋಡು ಗ್ರಾಮಕ್ಕೆ ಸಂಜೆ 5.45ಕ್ಕೆ ಬಂದು ಅಲ್ಲಿಯೂ ಐದಾರು ಜನರ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದೆ.
ಜನರ ಕಿರುಚಾಟದಿಂದ ಬೆದರಿದ ಆ ನಾಯಿ ವರಕೋಡಿನಿಂದ ಒಂದೂವರೆ ಕಿ.ಮೀ ದೂರದಲ್ಲಿರುವ ಮೂಡಲ ಹುಂಡಿ ಗ್ರಾಮಕ್ಕೆ ಸಂಜೆ 6.30ಕ್ಕೆ ಬಂದಿದೆ.
ಸಂಜೆಯಾಗಿದ್ದರಿಂದ ರಸ್ತೆಯಲ್ಲಿ ಆಟ ವಾಡುತ್ತಿದ್ದ ಮಕ್ಕಳು, ಗದ್ದೆ ಕೆಲಸ ಮುಗಿಸಿ ಬರುತ್ತಿದ್ದ ವಯಸ್ಕರ ಮೇಲೆ ದಾಳಿ ನಡೆ ಸಿದೆ. ಮೂಡಲಹುಂಡಿಯ ಸುಮಾರು 8 ಮಂದಿಯಲ್ಲಿ ಮೂವರು ಮಕ್ಕಳಿಗೆ ಮುಖ, ಪಕ್ಕೆ, ಕೈ, ತೊಡೆ ಸೇರಿದಂತೆ ವಿವಿಧೆಡೆ ಕಚ್ಚಿದ್ದು ಮಾಂಸ ಕಿತ್ತು ಬಂದಿದೆ.
ಮೂಡಲಹುಂಡಿ ಗ್ರಾಮದ ಮಾಕೇ ಗೌಡ(55), ಪುಟ್ಟೇಗೌಡ(50), ಮಕ್ಕ ಳಾದ ಸಂಪತ್‍ಕುಮಾರ್, ಪ್ರೀತಿ, ಕಿರಣ್ ಹಾಗೂ ಇನ್ನು ಮೂರ್ನಾಲ್ಕು ಮಂದಿಗೆ ತೀವ್ರ ಗಾಯವಾಗಿದೆ. ವರ ಕೋಡು ಗ್ರಾಮದ ಪ್ರೀತಮ್, ಯಶೋಧÀ ಹಾಗೂ ಇನ್ನು ಮೂವರು ಗಾಯ ಗೊಂಡಿದ್ದಾರೆ.
ಗುರುವಾರ ಸಂಜೆ ಗಾಯಾಳುಗಳು ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿ ದ್ದಾರೆ. ಆದರೆ ಸಂಜೆ ಚುಚ್ಚು ಮದ್ದು ನೀಡುವುದಿಲ್ಲ ಎಂದು ವಾಪಸ್ಸು ಕಳುಹಿಸಿದ್ದಾರೆ. ಹಾಗಾಗಿ ಇಂದು ಬೆಳಿಗ್ಗೆ ಎಂಟು ಮಂದಿಯೂ ಮೈಸೂ ರಿನ ಮೇಟಗಳ್ಳಿಯಲ್ಲಿರುವ ಸಾಂಕ್ರಮಿಕ ರೋಗಗಳ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರೆ, ಮತ್ತೆ ಕೆಲವರು ಕೆ.ಆರ್. ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದಾರೆ. ಮತ್ತೆ ಹುಚ್ಚು ನಾಯಿ ಬರಬಹುದೆಂಬ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ.