ಹೆಚ್1ಎನ್1 ಸೋಂಕಿನಿಂದ ನರಳುತ್ತಿದ್ದ ಮಹಿಳೆಗೆ ನಾರಾಯಣ ಹೃದಯಾಲಯದಿಂದ ಮರುಜೀವ
ಮೈಸೂರು

ಹೆಚ್1ಎನ್1 ಸೋಂಕಿನಿಂದ ನರಳುತ್ತಿದ್ದ ಮಹಿಳೆಗೆ ನಾರಾಯಣ ಹೃದಯಾಲಯದಿಂದ ಮರುಜೀವ

January 5, 2019

ಮೈಸೂರು: ಹೆಚ್1ಎನ್1 ಸೋಂಕಿನಿಂದಾಗಿ ತೀವ್ರತರನಾದ ಉಸಿ ರಾಟದ ಸಮಸ್ಯೆ ಎದುರಿಸುತ್ತಿದ್ದ ಮಹಿಳೆ ಯೊಬ್ಬರಿಗೆ ಇದೇ ಮೊದಲ ಬಾರಿಗೆ ಎಕ್ಮೊ (ಎಕ್ಸ್‍ಟ್ರಾ ಕಾರ್ಪೊರಿಯಲ್ ಮೆಂಬ್ರೇನ್ ಆಕ್ಸಿಜನೇಷನ್) ಸಾಧನದ ಚಿಕಿತ್ಸೆ ನೀಡುವ ಮೂಲಕ ಆಕೆಗೆ ಮರುಜೀವ ನೀಡಲಾಗಿದೆ ಎಂದು ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ.ಎಂ.ಎನ್.ರವಿ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ, ಮೈಸೂರಿನ ಮಹಿಳೆಯೊಬ್ಬರಿಗೆ ಹೆಚ್1ಎನ್1 ಸೋಂಕು ತಗುಲಿತ್ತು. ಇದರಿಂದ ಆಕೆಗೆ ಉಸಿರಾಟದ ತೊಂದರೆ ಉಲ್ಬಣವಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಆಕೆಯ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಕೆಲ ದಿನ ಚಿಕಿತ್ಸೆ ನೀಡಲಾಯಿತು. ಆದರೂ ಆರೋಗ್ಯದಲ್ಲಿ ಸುಧಾರಣೆ ಕಾಣದೆ ಮತ್ತಷ್ಟು ಗಂಭೀರವಾದಾಗ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದು ವೆಂಟಿಲೇಟರ್ ಸ್ಥಿತಿಯಲ್ಲಿಯೇ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಯಿತು. ಅಲ್ಲಿಯೂ ಆರೋಗ್ಯ ಪರಿಸ್ಥಿತಿ ಹದಗೆಟ್ಟು, ಕೇವಲ 48 ಗಂಟೆ ಬದುಕುಳಿಯಬಹು ದೆಂಬ ಅಭಿಪ್ರಾಯ ವೈದÀ್ಯರಿಂದ ವ್ಯಕ್ತವಾಗಿತ್ತು.

ಇದರಿಂದ ಆತಂಕಗೊಂಡ ರೋಗಿಯ ಪೋಷಕರು ತೀರ ಗಂಭೀರ ಪರಿಸ್ಥಿತಿಯ ಲ್ಲಿದ್ದ ರೋಗಿಯನ್ನು ನಾರಾಯಣ ಹೃದ ಯಾಲಯಕ್ಕೆ ಕರೆತರಲು ನಿರ್ಧರಿಸಿ, ನಮ್ಮನ್ನು ಸಂಪರ್ಕಿಸಿದ್ದರು. ರೋಗಿಯ ಪರಿಸ್ಥಿತಿ ಬಗ್ಗೆ ಈ ಹಿಂದೆ ದಾಖಲಾಗಿದ್ದ ಆಸ್ಪತ್ರೆ ವೈದ್ಯರೊಂದಿಗೆ ಸಮಾಲೋಚಿಸಿದಾಗ ಸಾವು-ಬದುಕಿನ ನಡುವೆ ಹೋರಾಡು ತ್ತಿರುವುದು ಕಂಡು ಬಂದಿತು. ಆಕೆಯ ಪೋಷಕರ ಸಮ್ಮತಿ ಮೇರೆಗೆ ನಮ್ಮ ಆಸ್ಪತ್ರೆ ಯಿಂದ ಎಕ್ಮೊ ಸಾಧನವನ್ನು ಕೊಂಡೊಯ್ದು ರೋಗಿಗೆ ಅಳವಡಿಸಿದ ಬಳಿಕ ವೆಂಟಿಲೇ ಟರ್‍ನಲ್ಲಿಟ್ಟು ನಮ್ಮ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಆರಂಭಿಸಲಾಯಿತು.

ಎಕ್ಮೊ ಸಾಧನ ಅಳವಡಿಸಿದ್ದರಿಂದ ಇದೀಗ ರೋಗಿಯ ಆರೋಗ್ಯದಲ್ಲಿ, 15 ದಿನದಲ್ಲಿಯೇ ಅಮೂಲಾಗ್ರ ಬದಲಾವಣೆ ಕಂಡಿದೆ. ಈ ಚಿಕಿತ್ಸಾ ವಿಧಾನ ಮೈಸೂ ರಿನಲ್ಲಿಯೇ ಮೊಟ್ಟ ಮೊದಲಾಗಿದೆ. ಇದೀಗ ಹೆಚ್1ಎನ್1 ಸೋಂಕಿಗೆ ಒಳಗಾ ಗಿದ್ದ ಯುವತಿ ಸಾಮಾನ್ಯರಂತಾಗಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಸಂತ್ರಸ್ತ ಮಹಿಳೆ ಮಾತ ನಾಡಿ, ಹೆಚ್1ಎನ್1 ಸೋಂಕಿನಿಂದಾಗಿ ಒಂದೂವರೆ ತಿಂಗಳು ನನಗೆ ಪ್ರಜ್ಞೆಯೇ ಇರಲಿಲ್ಲ. ಗಂಭೀರ ಸ್ಥಿತಿಯಲ್ಲಿದ್ದ ನನ್ನ ಅನಾ ರೋಗ್ಯವನ್ನು ಕಂಡು ಪೋಷಕರು ಚಿಂತಾ ಕ್ರಾಂತರಾಗಿದ್ದರು. ನನಗೆ ನಾರಾಯಣ ಹೃದಯಾಲಯ ಅತ್ಯುತ್ತಮ ಚಿಕಿತ್ಸೆ ನೀಡಿ, ಮರುಜನ್ಮ ನೀಡಿತೆಂದು ಕೃತಜ್ಞತೆ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದ ಎಕ್ಮೊ ಸೇವಾ ಮುಖ್ಯಸ್ಥ ಡಾ.ರಿಯಾನ್ ಶೆಟ್ಟಿ, ಡಾ.ನವೀನ್ ಹಾಗೂ ಇನ್ನಿತರರು ಇದ್ದರು.

Translate »