ಅಪಘಾತ ಗಾಯಳು ಸಾವು
ಮೈಸೂರು

ಅಪಘಾತ ಗಾಯಳು ಸಾವು

January 6, 2019

ಮೈಸೂರು: ಅಪಘಾತದಲ್ಲಿ ಗಾಯಗೊಂಡಿದ್ದ ಯುವಕಯೊರ್ವ ಚಿಕಿತ್ಸೆ ಫಲಕಾರಿಯಾಗದೆ ತಿಂಗಳ ನಂತರ ಮೃತಪಟ್ಟಿದ್ದಾರೆ.

ಎನ್.ಆರ್.ಮೊಹಲ್ಲಾ ನಿವಾಸಿ ಅಫಾನ್ ಶರೀಫ್(28) ಮೃತಪಟ್ಟವರು. 2018ರ ನವೆಂಬರ್ 28ರಂದು ಮೈಸೂರು-ಬೆಂಗಳೂರು ರಸ್ತೆಯ ಕಳಸ್ತವಾಡಿ ಗ್ರಾಮದ ಕಡೆಯಿಂದ ಸಿದ್ದಲಿಂಗಪುರದ ಕಡೆಗೆ ಬರುತ್ತಿರುವಾಗ ನಾಗನಹಳ್ಳಿ ಕ್ರಾಸ್ ಬಳಿ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅಫಾನ್ ಶರೀಫ್ ಜ.4 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »