ಮೈಸೂರು

ರಕ್ತದಾನ ಶಿಬಿರ ಮೂಲಕ ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಣೆ
ಮೈಸೂರು

ರಕ್ತದಾನ ಶಿಬಿರ ಮೂಲಕ ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಣೆ

December 7, 2018

ಬೇಲೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವನ್ನು ಉಚಿತ ರಕ್ತದಾನ ಶಿಬಿರ, ಕಣ್ಣಿನ ಹಾಗೂ ರಕ್ತ ದೊತ್ತಡ, ಮಧುಮೇಹ ತಪಾಸಣೆ ಮೂಲಕ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಬೇಲೂರು ತಾಲೂಕು ಘಟಕ, ಡಾ.ಅಂಬೇಡ್ಕರ್ ಯುವಕ ಸಂಘದಿಂದ ಆಚರಿಸುವುದು ಶ್ಲಾಘನೀಯವಾದ ಕೆಲಸವಾಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಡಾ.ಬಿ.ಆರ್.ಅಂಬೇಡ್ಕರ್‍ರವರ ಪರಿ ನಿಬ್ಬಾಣದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಬೇಲೂರು ತಾಲೂಕು ಘಟಕ ಹಾಗೂ ಡಾ.ಅಂಬೇಡ್ಕರ್ ಯುವಕ ಸಂಘದಿಂದ ಪಟ್ಟಣದ ಅಂಬೇಡ್ಕರ್ ನಗರದ ಸಮು ದಾಯ ಭವನದಲ್ಲಿ ಏರ್ಪಡಿಸಿದ್ದ…

ನಾಳೆ ವಿದ್ಯುತ್ ನಿಲುಗಡೆ
ಮೈಸೂರು

ನಾಳೆ ವಿದ್ಯುತ್ ನಿಲುಗಡೆ

December 7, 2018

ಮೈಸೂರು:  ನಂಜನಗೂಡು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಏಗಿ ಸಿಂಧುವಳ್ಳಿಪುರ, ತಾಂಡ್ಯ, ನಂಜನಗೂಡು ಕೇಂದ್ರ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಡಿ.8ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ದೇವೀರಮ್ಮನಹಳ್ಳಿ, ದೇವರಸನ ಹಳ್ಳಿ, ಕಳಲೆ, ನವಿಲೂರು, ಸಿಂಧುವಳ್ಳಿ, ಕೂಡ್ಲಾಪುರ, ಕಸುವಿನಹಳ್ಳಿ, ಗ್ರಾಪಂ ವ್ಯಾಪ್ತಿ, ಚಿಕ್ಕಯ್ಯನಛತ್ರ, ತಾಂಡ್ಯ ಕೈಗಾರಿಕಾ ಪ್ರದೇಶ, ಕೆಂಪಿಸಿದ್ದನಹುಂಡಿ, ಹುಳಿಮಾವು, ಹದಿನಾರು, ಹೊಸಕೋಟೆ, ತುಂಬುನೇರಳೆ, ಬಾಲಾಜಿ, ಇಂಡಸ್, ಗಣಪತಿ, ಕೆಐಎಡಿಬಿ 1&2. ಗ್ರಾಪಂ ವ್ಯಾಪ್ತಿ ಹಾಗೂ ನಂಜನಗೂಡು ಪಟ್ಟಣ, ಕಲ್ಲಳ್ಳಿ…

ಸರ್ಕಾರದ ಪರಿಹಾರ ಹಣದ ಆಮಿಷ ತೋರಿ  ವೃದ್ಧೆಯರ ಆಭರಣ, ನಗದು ದೋಚಿದ ಖದೀಮರು
ಮೈಸೂರು

ಸರ್ಕಾರದ ಪರಿಹಾರ ಹಣದ ಆಮಿಷ ತೋರಿ  ವೃದ್ಧೆಯರ ಆಭರಣ, ನಗದು ದೋಚಿದ ಖದೀಮರು

December 7, 2018

ಮೈಸೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಸಾವಿರ ರೂ ಸಾಲ ಕೊಡಿಸುತ್ತೇನೆಂದು ಆಮಿಷ ತೋರಿಸಿದ ಅಪರಿಚಿತ ವ್ಯಕ್ತಿಯೋರ್ವ ಹಾಡಹಗಲೇ ವೃದ್ಧೆಯೊಬ್ಬರಿಂದ 4 ಸಾವಿರ ರೂ ನಗದು ಹಾಗೂ 17 ಗ್ರಾಂ ಚಿನ್ನದ ಆಭರಣ ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನ ಸಿಟಿ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ. ಮೈಸೂರಿನ ಕೆ.ಆರ್.ಮೊಹಲ್ಲಾ ನಿವಾಸಿ ಕಮಲಾ ಬಾಯಿ (70) ಆಭರಣ ಮತ್ತು ನಗದು ಕಳೆದುಕೊಂಡವರು. ಬುಧವಾರ ಮಧ್ಯಾಹ್ನ 2.30 ಗಂಟೆ ವೇಳೆಗೆ ಸಿಟಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ಕುಳಿತಿದ್ದ ಕಮಲಾಬಾಯಿ ಬಳಿ…

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ
ಮೈಸೂರು

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ

December 6, 2018

ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಮಹತ್ವದ ನಿರ್ಧಾರವನ್ನು ಸಚಿವ ಸಂಪುಟ ಇಂದಿಲ್ಲಿ ತೆಗೆದುಕೊಂಡಿದೆ. ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣಭೈರೇಗೌಡ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಪಡೆಯುವ ಎಲ್ಲಾ ಹೆಣ್ಣು ಮಕ್ಕಳಿಗೆ ಸರ್ಕಾರದ ಈ ಸವಲತ್ತು ದೊರೆಯಲಿದೆ ಎಂದರು. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಉಚಿತ ಶಿಕ್ಷಣ ಅನ್ವಯವಾಗಲಿದ್ದು, ಇದರಿಂದ 3.17 ಲಕ್ಷ ವಿದ್ಯಾರ್ಥಿನಿಯರ ಬೋಧನಾ ಶುಲ್ಕವನ್ನು ಸರ್ಕಾರವೇ…

ಮೈಸೂರಿನ ಯುವ ವಿಜ್ಞಾನಿ ಮನೋಜ್‍ಕುಮಾರ್ ಸಾವು
ಮೈಸೂರು

ಮೈಸೂರಿನ ಯುವ ವಿಜ್ಞಾನಿ ಮನೋಜ್‍ಕುಮಾರ್ ಸಾವು

December 6, 2018

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ)ಯ ಪ್ರಯೋಗಾಲಯದಲ್ಲಿ ಸಿಲಿಂಡರ್ ಸ್ಫೋಟಗೊಂಡು ಮೈಸೂರಿನ ಯುವ ವಿಜ್ಞಾನಿಯೊಬ್ಬರು ಮೃತಪಟ್ಟ ದಾರುಣ ಘಟನೆ ಬುಧವಾರ ನಡೆದಿದೆ. ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ, ಏರೋಸ್ಪೇಸ್ ವಿಭಾಗದ ಮನೋಜ್‍ಕುಮಾರ್ ದುರಂತ ಸಾವಿಗೀಡಾಗಿದ್ದು, ಇವರು ಮೈಸೂರು ಕಲ್ಯಾಣಗಿರಿ ಸಮೀಪದ ರಾಜ್‍ಕುಮಾರ್ ರಸ್ತೆಯ ಜೆಎಸ್‍ಎಸ್ ಬಡಾವಣೆ ನಿವಾಸಿಯಾಗಿದ್ದಾರೆ. 28 ವರ್ಷದ ಮನೋಜ್‍ಕುಮಾರ್, ಮೈಸೂರಿನ ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಕೆ. ಪ್ರಕಾಶ್ ಅವರ ಪುತ್ರ. ಒಂದರಿಂದ 10ನೇ ತರಗತಿಯವರೆಗೆ ಮೈಸೂರಿನ ಸಿದ್ಧಾರ್ಥನಗರದ ಜೆಎಸ್‍ಎಸ್ ಪಬ್ಲಿಕ್…

ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ
ಮೈಸೂರು

ಡಿಸೆಂಬರ್ 22ಕ್ಕೆ ಸಂಪುಟ ವಿಸ್ತರಣೆ

December 6, 2018

ಬೆಂಗಳೂರು: ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆಯನ್ನು ಡಿ. 22ಕ್ಕೆ ಮಾಡಲಾ ಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ರಾತ್ರಿ ನಡೆದ ಸಮನ್ವಯ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ. 9 ರಂದು ಸಂಪುಟ ವಿಸ್ತರಣೆ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಮಾರನೇ ದಿನವೇ ಅಂದರೆ ಡಿ. 10 ರಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವ…

ವಾಯುಸೇನೆ ಸೇರಲು ಬಂದ `ಯುವಕರು’ 800ಮೀ.  ಓಟಕ್ಕೆ ಸುಸ್ತಾದರು!
ಮೈಸೂರು

ವಾಯುಸೇನೆ ಸೇರಲು ಬಂದ `ಯುವಕರು’ 800ಮೀ. ಓಟಕ್ಕೆ ಸುಸ್ತಾದರು!

December 6, 2018

ಮೈಸೂರು: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಮೂರು ದಿನಗಳ ಭಾರತೀಯ ವಾಯುಸೇನೆಯ ನೇಮಕಾತಿ ರ್ಯಾಲಿಯಲ್ಲಿ ಉತ್ತರ ಕರ್ನಾಟಕದ 9 ಜಿಲ್ಲೆಗಳ 1500ಕ್ಕೂ ಹೆಚ್ಚು ಯುವಕರು ಸಂದರ್ಶನದಲ್ಲಿ ಪಾಲ್ಗೊಂಡು ವಿವಿಧ ಪರೀಕ್ಷೆ ಎದುರಿಸಿದರು. ಅರ್ಧದಷ್ಟು ಮಂದಿ 800 ಮೀ. ಓಡುವಷ್ಟರಲ್ಲೇ ಸುಸ್ತು ಹೊಡೆದರು! ಬೆಂಗಳೂರಿನಲ್ಲಿರುವ 7ನೇ ಏರ್‍ಮನ್ ಸೆಲೆಕ್ಷನ್ ಸೆಂಟರ್ ವತಿಯಿಂದ ಇಂದು ಮುಂಜಾನೆ 5.30ರಿಂದಲೇ ಭಾರತೀಯ ವಾಯುಸೇನೆಯ ಗ್ರೂಪ್ `ವೈ’ ಟ್ರೇಡ್ ನಲ್ಲಿ ಖಾಲಿಯಿರುವ `ಏರ್‍ಮನ್’ ಹುದ್ದೆಗಳಿಗೆ ನೇಮಕಾತಿ ಮಾಡಲು ಅಭ್ಯರ್ಥಿಗಳ ಸಂದರ್ಶನ ಆರಂಭಿಸಲಾಯಿತು….

ನಿರ್ಮಾಣ ತಂತ್ರಜ್ಞಾನ ಪರಿಕರಗಳ ಪ್ರದರ್ಶನ ಮೈ ಬಿಲ್ಡ್-18ಕ್ಕೆ ಚಾಲನೆ
ಮೈಸೂರು

ನಿರ್ಮಾಣ ತಂತ್ರಜ್ಞಾನ ಪರಿಕರಗಳ ಪ್ರದರ್ಶನ ಮೈ ಬಿಲ್ಡ್-18ಕ್ಕೆ ಚಾಲನೆ

December 6, 2018

ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕದ ವತಿಯಿಂದ ಆಯೋ ಜಿಸಿದ್ದ ಮೈಬಿಲ್ಡ್-18 ಪ್ರದರ್ಶನಕ್ಕೆ ಚಾರ್ಟೆಡ್ ಹೌಸಿಂಗ್ ಪ್ರೈ (ಲಿ) ವ್ಯವ ಸ್ಥಾಪಕ ನಿರ್ದೇಶಕ ಬಾಲಕೃಷ್ಣ ಹೆಗ್ಡೆ ಬುಧವಾರ ಚಾಲನೆ ನೀಡಿದರು. ಮೈಸೂರು ವಿವಿ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಎಐ ಮೈಸೂರು ಘಟ ಕದ ವತಿಯಿಂದ ಇಂದಿನಿಂದ ಡಿ.10 ರವ ರೆಗೆ ನಡೆಯುವ ಮೈಬಿಲ್ಡ್-18 ನಿರ್ಮಾಣ ತಂತ್ರಜ್ಞಾನ ಪರಿಕರಗಳ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದರು. ಒಂದು ಸಂಘಟನೆ ಯಶಸ್ವಿಯಾಗಿ ನಡೆ ಯಬೇಕಾದರೆ, ಆ ಸಂಘಟನೆಯ ಮಹಿಳಾ…

ಮಹಾರಾಜ ಸಂಜೆ ಕಾಲೇಜಲ್ಲಿ ಮೈಸೂರು ನೂತನ ಮೇಯರ್ ಪುಷ್ಪಲತಾ,  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪ್ರೊ. ಚ.ಸರ್ವಮಂಗಳಾರಿಗೆ ಅಭಿನಂದನೆ
ಮೈಸೂರು

ಮಹಾರಾಜ ಸಂಜೆ ಕಾಲೇಜಲ್ಲಿ ಮೈಸೂರು ನೂತನ ಮೇಯರ್ ಪುಷ್ಪಲತಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪ್ರೊ. ಚ.ಸರ್ವಮಂಗಳಾರಿಗೆ ಅಭಿನಂದನೆ

December 6, 2018

ಮೈಸೂರು: ಮೈಸೂರು ವಿವಿ ಸಂಜೆ ಕಾಲೇಜು ಹಾಗೂ ವಿವಿ ನೌಕ ರರ ವೇದಿಕೆ ವತಿಯಿಂದ ಮೇಯರ್ ಪುಷ್ಪ ಲತಾ ಜಗನ್ನಾಥ್ ಮತ್ತು ವಿವಿ ಸಂಜೆ ಕಾಲೇಜು ನಿವೃತ್ತ ಪ್ರಾಂಶುಪಾಲರೂ ಆದ ಕರ್ನಾ ಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಪ್ರೊ.ಚ.ಸರ್ವಮಂಗಳಾ ಅವರನ್ನು ಬುಧವಾರ ಅಭಿನಂದಿಸಲಾಯಿತು. ಮೈಸೂರು ಮಹಾರಾಜ ಕಾಲೇಜು ಆವ ರಣದಲ್ಲಿರುವ ಸಂಜೆ ಕಾಲೇಜಿನಲ್ಲಿ ಏರ್ಪ ಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕ ರಿಸಿ ಮಾತನಾಡಿದ ಪ್ರೊ.ಚ.ಸರ್ವ ಮಂಗಳಾ, ನಾವಿಂದು ಕೆಟ್ಟ ಕಾಲಘಟ್ಟದಲ್ಲಿ ದ್ದೇವೆ ಎಂಬ ಮಾತು ಆಗಾಗ್ಗೆ ಕೇಳಿ…

ಡಿಸೆಂಬರ್ ಕಡೇ ವಾರ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ
ಮೈಸೂರು

ಡಿಸೆಂಬರ್ ಕಡೇ ವಾರ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ

December 6, 2018

ಮೈಸೂರು: ಮೈಸೂರಿನ ಅರಮನೆ ಆವರಣದಲ್ಲಿ ಡಿಸೆಂಬರ್ ಕಡೇ ವಾರ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅರಮನೆ ಮಂಡಳಿ ಉಪನಿರ್ದೇ ಶಕ ಟಿ.ಎಸ್. ಸುಬ್ರ ಹ್ಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದೇ ವೇಳೆ ಬೊಂಬೆಗಳ ಪ್ರದರ್ಶನ, ಸಾಂಸ್ಕøತಿಕ ಕಾರ್ಯ ಕ್ರಮ ಏರ್ಪಡಿಸಲಾಗುವುದು. ಬೊಂಬೆಗಳ ಪ್ರದರ್ಶನದಲ್ಲಿ ಭಾಗವಹಿಸಲಿಚ್ಛಿಸುವವರು, ಈಗಾಗಲೇ ಬೊಂಬೆ ಪ್ರದರ್ಶನ ಮಾಡಿರುವ ಛಾಯಾಚಿತ್ರ, ವಿಡಿಯೋಗಳನ್ನು ಅರಮನೆ ಮಂಡಳಿ ಕಚೇರಿಗೆ ತಲುಪಿಸಿದಲ್ಲಿ ಬೊಂಬೆಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಆಯ್ಕೆ ಮಾಡಿದ ತಂಡಗಳ ಪೈಕಿ ಉತ್ತಮ ಪ್ರದರ್ಶನ…

1 1,246 1,247 1,248 1,249 1,250 1,611
Translate »