ಮೈಸೂರು

ಮೈಸೂರು ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ಬಾಕಿ ಇರುವ ಗ್ರಂಥಾಲಯ  ಕರ ಕುರಿತ ಮಾಹಿತಿ ಕೇಳಿದ ಸರ್ಕಾರ
ಮೈಸೂರು

ಮೈಸೂರು ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ಬಾಕಿ ಇರುವ ಗ್ರಂಥಾಲಯ ಕರ ಕುರಿತ ಮಾಹಿತಿ ಕೇಳಿದ ಸರ್ಕಾರ

December 8, 2018

ವಿಧಾನಸಭಾ ಸದಸ್ಯರ ಚುಕ್ಕೆ ಪ್ರಶ್ನೆಗಳಿಗೆ ಅವಕಾಶ ಮೈಸೂರು:  ಮೈಸೂರು ನಗರಪಾಲಿಕೆ ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ಬರಬೇಕಾದ ಗ್ರಂಥಾಲಯ ಕರ ಎಷ್ಟು? (ಗ್ರಂಥಾಲಯ ಕರದ ಬೇಡಿಕೆ, ಸಂಗ್ರಹ ಹಾಗೂ ಇದರ ಬಾಕಿ ಮೊತ್ತದ ಕುರಿತು) ಮಾಹಿತಿ ಒದಗಿಸುವಂತೆ ವಿಧಾನಸಭೆಯ ಕಾರ್ಯದರ್ಶಿಗಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ. ವಿಧಾನಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಲಿದ್ದು, ಡಿ.18ರಂದು ಅಧಿವೇಶನದಲ್ಲಿ ಉತ್ತರಿಸಬೇಕಾದ ಹಿನ್ನೆಲೆಯಲ್ಲಿ ಈ ಕುರಿತು ತಕ್ಷಣ ಮಾಹಿತಿ ನೀಡುವಂತೆ…

ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ  `ಕೋಟಿ ಜನ-ಮನ ಪ್ರಶಸ್ತಿ’ ವಿತರಣೆ
ಮೈಸೂರು

ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ `ಕೋಟಿ ಜನ-ಮನ ಪ್ರಶಸ್ತಿ’ ವಿತರಣೆ

December 8, 2018

ಮೈಸೂರು:  ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅವರ ಪ್ರಥಮ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರಿನ ಜನನಿ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾಧ್ಯಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ `ಕೋಟಿ ಜನ-ಮನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಮೊದಲಿಗೆ ರಾಜಶೇಖರ ಕೋಟಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ವಿವಿಧ ಕ್ಷೇತ್ರದ ಸಾಧಕರಾದ ಅಂಶಿ ಪ್ರಸನ್ನ ಕುಮಾರ್ (ಅತ್ಯುತ್ತಮ ವರದಿಗಾರ), ಪ್ರಗತಿ ಗೋಪಾಲಕೃಷ್ಣ (ಅತ್ಯು ತ್ತಮ ಪತ್ರಿಕಾ ಛಾಯಾಗ್ರಾಹಕ), ಆರ್.ಮಧುಸೂದನ್ (ಮಾಧ್ಯಮ ಛಾಯಾಗ್ರಾಹಕ),…

ಮೈಸೂರಲ್ಲಿ ನಾಳೆ ಸಾವಯವ, ನೈಸರ್ಗಿಕ ಕೃಷಿಕರ ಸಂತೆ
ಮೈಸೂರು

ಮೈಸೂರಲ್ಲಿ ನಾಳೆ ಸಾವಯವ, ನೈಸರ್ಗಿಕ ಕೃಷಿಕರ ಸಂತೆ

December 8, 2018

ಮೈಸೂರು: ರೈತರು ಬೆಳೆದ ಸಾವಯವ ತರಕಾರಿ, ಹಣ್ಣುಗಳನ್ನು ನೇರವಾಗಿ ನಾಗರಿಕರಿಗೆ ತಲುಪಿಸಲು ಸ್ವದೇಶಿ ಜಾಗರಣ್ ಮಂಚ್ ಮತ್ತು ಜನಚೇತನ ಟ್ರಸ್ಟ್ ವತಿಯಿಂದ ಡಿ.9ರಂದು ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೆ ಮೈಸೂರಿನ ಜೆ.ಪಿ.ನಗರ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿಕರ ಸಂತೆ ನಡೆಯಲಿದೆ. ಸ್ವದೇಶಿ ಜಾಗರಣ್ ಮಂಚ್‍ನ ರಾಜ್ಯ ಸಂಯೋಜಕ ಎನ್.ಆರ್. ಮಂಜುನಾಥ್ ಅವರು ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ವಿಷಮುಕ್ತ ಆಹಾರ ಸೇವನೆಯ ಲಾಭಗಳ ಕುರಿತು ಜನ…

ಕೆಂಚಲಗೂಡು ಸುತ್ತ ವಿದ್ಯುತ್ ಅಕ್ರಮ ಸಂಪರ್ಕ: ಕ್ರಮಕ್ಕೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ
ಮೈಸೂರು

ಕೆಂಚಲಗೂಡು ಸುತ್ತ ವಿದ್ಯುತ್ ಅಕ್ರಮ ಸಂಪರ್ಕ: ಕ್ರಮಕ್ಕೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

December 8, 2018

ಮೈಸೂರು: ಮೈಸೂರು ತಾಲೂಕಿನ ಜಯಪುರ ಹೋಬಳಿಯ ಕೆಂಚಲಗೂಡು ಗ್ರಾಮದ ಸುತ್ತಮುತ್ತ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವವರ ವಿರುದ್ಧ ಹಾಗೂ ಅಕ್ರಮಗಳಿಗೆ ಸಾಥ್ ನೀಡುತ್ತಿರುವ ಲೈನ್‍ಮನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ವಿಜಯನಗರ ಒಂದನೇ ಹಂತದಲ್ಲಿ ರುವ ಸೆಸ್ಕ್ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಕೆಂಚಲಗೂಡು ಗ್ರಾಮದ ಸರ್ಕಾರಿ ಭೂಮಿ ಸ.ನಂ.14ರ ಒತ್ತು ವರಿದಾರರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿ ದ್ದಾರೆ. ಅವರ ವಿರುದ್ಧ…

ಪರಿಷ್ಕøತ ವೇತನಕ್ಕಾಗಿ ಸರ್ಕಾರಿ ಆಸ್ಪತ್ರೆ ಹೊರ ಗುತ್ತಿಗೆ ನೌಕರರ ಪ್ರತಿಭಟನೆ
ಮೈಸೂರು

ಪರಿಷ್ಕøತ ವೇತನಕ್ಕಾಗಿ ಸರ್ಕಾರಿ ಆಸ್ಪತ್ರೆ ಹೊರ ಗುತ್ತಿಗೆ ನೌಕರರ ಪ್ರತಿಭಟನೆ

December 8, 2018

ಮೈಸೂರು: ಮೈಸೂರು ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನಾನ್ ಕ್ಲಿನಿಕಲ್ ಹಾಗೂ ಡಿ ಗ್ರೂಪ್ ನೌಕರ ರಿಗೆ ಪರಿಷ್ಕøತ ವೇತನ ಜಾರಿಗೊಳಿಸು ವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಹೊರ ಗುತ್ತಿಗೆ ಕಾರ್ಮಿಕರ ಸಂಘದ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ನಜರ್‍ಬಾದ್‍ನಲ್ಲಿರುವ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದ ನಾನ್ ಕ್ಲಿನಿಕಲ್ ಹಾಗೂ ಡಿ ಗ್ರೂಪ್ ನೌಕ ರರು, ಕೂಡಲೆ…

ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀಗಳು
ಮೈಸೂರು

ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀಗಳು

December 8, 2018

ಮೈಸೂರು: ಶತಾಯುಷಿಗಳಾದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರೇಲಾ ಆಸ್ಪತ್ರೆಗೆ ಕರೆದೊಯ್ದ ಹಿನ್ನೆಲೆಯಲ್ಲಿ ಆರೋಗ್ಯ ವಿಚಾರಿಸಲು ಸುತ್ತೂರು ಶ್ರೀಗಳು ವಿಮಾನದಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಶುಕ್ರವಾರ ಸಂಜೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ 7.30ರ ವಿಮಾನ ದಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಿದ್ದು, 9.20ರ ವೇಳೆಗೆ ಚೆನ್ನೈ ತಲುಪಿದ್ದಾರೆ. 9.30ರ ವೇಳೆಗೆ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಚೆನ್ನೈನ ತಜ್ಞ…

ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಂಬರೀಶ್ ಹೆಸರು ನಾಮಕರಣಕ್ಕೆ ಸಲಹೆ
ಮೈಸೂರು

ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಂಬರೀಶ್ ಹೆಸರು ನಾಮಕರಣಕ್ಕೆ ಸಲಹೆ

December 8, 2018

ಮೈಸೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೂಲ ಮಂಡ್ಯ ಆದರೂ ಅವರು ಹುಟ್ಟಿ, ಬೆಳೆದಿದ್ದೆಲ್ಲವೂ ಮೈಸೂರಿನಲ್ಲಿಯೇ. ಆದ್ದರಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಂಬರೀಶ್ ಹೆಸರು ನಾಮಕರಣ ಮಾಡುವ ಮೂಲಕ ಅವರನ್ನು ಗೌರವಿಸುವಂತಾಗಬೇಕು ಎಂದು ಸಾಹಿತಿ ಬನ್ನೂರು ರಾಜು ಸಲಹೆ ನೀಡಿದ್ದಾರೆ.ಮೈಸೂರಿನ ಶಿವರಾಂಪೇಟೆ ವಿನೋಬ ರಸ್ತೆಯಲ್ಲಿ ಅಂಬರೀಶ್ ಅಭಿಮಾನಿ ಬಳಗ ಶುಕ್ರವಾರ ಆಯೋಜಿಸಿದ್ದ ಅಂಬರೀಶ್ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬರೀಶ್ ಮಂಡ್ಯದ ಗಂಡು ನಿಜ. ಆದರೆ ಅವರು ಹುಟ್ಟಿದ್ದು ಮೈಸೂರಿನ ಜಯ ನಗರದಲ್ಲಿರುವ ಅವರ ತಾತ…

ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಇಬ್ಬರ ವಿರುದ್ಧ ಪ್ರಕರಣ ದಾಖಲು
ಮೈಸೂರು

ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಇಬ್ಬರ ವಿರುದ್ಧ ಪ್ರಕರಣ ದಾಖಲು

December 8, 2018

ಮೈಸೂರು: ಸುಳ್ಳು ದಾಖಲೆ ನೀಡಿ ಜಾತಿ ಪ್ರಮಾಣ ಪತ್ರ ಪಡೆದಿದ್ದ ಇಬ್ಬರ ವಿರುದ್ಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸರು, ತಿ.ನರಸೀ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಹುಣಸೂರು ಗ್ರಾಮದ ನಿವಾಸಿಗಳಾದ ಶೋಭ ಮತ್ತು ನಾಗರಾಜು ಎಂಬುವರ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾ ಲಯದ ಎಡಿಜಿಪಿ ನಾಹಜಾನಿ ಅವರ ನಿರ್ದೇಶನದ ಮೇರೆಗೆ ಡಿ.6ರಂದು ಮೈಸೂರಿನ ಸಬ್‍ಇನ್ಸ್‍ಪೆಕ್ಟರ್ ಲೋಕಾಕ್ಷಿ ಅವರು, ಶೋಭ ಮತ್ತು ನಾಗರಾಜು ಅವರ…

ಶಸ್ತ್ರ ಚಿಕಿತ್ಸೆ ನಂತರ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ
ಮೈಸೂರು

ಶಸ್ತ್ರ ಚಿಕಿತ್ಸೆ ನಂತರ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

December 8, 2018

ಮೈಸೂರು: ಮೈಸೂರಿನ ಸರಸ್ವತಿಪುರಂನಲ್ಲಿರುವ ಸಿಗ್ಮಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೊಳಗಾದ ರೋಗಿಯೊಬ್ಬರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯತೆಯಿಂದ ಅವರ ಸಾವು ಸಂಭವಿಸಿದೆ ಎಂದು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಮರಾಜನಗರ ತಾಲೂಕು ಕಟ್ನವಾಡಿ ಗ್ರಾಮದ ಶ್ರೀಮತಿ ಸುನಂದ ಎಂಬುವರು ತಮ್ಮ ತಂದೆ ನಿವೃತ್ತ ಶಿಕ್ಷಕ ಎಸ್.ನಾಗಯ್ಯ ಅವರು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ನೀಡಿದ ದೂರನ್ನು ಪೊಲೀಸರು ಅಸ್ವಾಭಾವಿಕ ಸಾವು ಎಂದು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ವಿವರ: ತಮ್ಮ ತಂದೆ ನಾಗಯ್ಯ ಅವರಿಗೆ ಮಲ ವಿಸರ್ಜನೆಯಲ್ಲಿ ರಕ್ತ ಬೀಳುತ್ತಿದ್ದ…

ಜಾಗ ವಿವಾದ: ದಂಪತಿ ಮೇಲೆ ಹಲ್ಲೆ
ಮೈಸೂರು

ಜಾಗ ವಿವಾದ: ದಂಪತಿ ಮೇಲೆ ಹಲ್ಲೆ

December 8, 2018

ಮೈಸೂರು: ಮನೆ ಪಕ್ಕದಲ್ಲಿರುವ ತಗ್ಗು ಪ್ರದೇಶಕ್ಕೆ ಮಣ್ಣು ತುಂಬಿ ಸುವ ವಿಚಾರಕ್ಕೆ ಗುಂಪೊಂದು ದಂಪತಿ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕು, ಆಲನಹಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಗ್ರಾಮದ ಜವರನಾಯ್ಕ ಹಾಗೂ ಪತ್ನಿ ಸುಂದರಮ್ಮ ತೀವ್ರವಾಗಿ ಗಾಯ ಗೊಂಡವರಾಗಿದ್ದು, ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾ ಗಿದೆ. ತಮ್ಮ ಮನೆಯ ಪಕ್ಕದಲ್ಲಿರುವ ತಗ್ಗು ಪ್ರದೇಶಕ್ಕೆ ಮಣ್ಣು ತುಂಬಿಸುತ್ತಿದ್ದ ತಮಗೆ ಅದೇ ಗ್ರಾಮದ ಗಿರೀಶ್, ಮನೋಜ್, ರವೀಶ ಹಾಗೂ ನವೀನ ಅಡ್ಡಿಪಡಿಸಿ ದೊಣ್ಣೆ,…

1 1,244 1,245 1,246 1,247 1,248 1,611
Translate »