ಮೈಸೂರು

ರಾಮಮಂದಿರ ಕುರಿತ ಈಶ್ವರಪ್ಪ ಹೇಳಿಕೆಗೆ ಭಾರತೀಯ  ಹೊಸ ಕಾಂಗ್ರೆಸ್ ಪಕ್ಷ ಖಂಡನೆ
ಮೈಸೂರು

ರಾಮಮಂದಿರ ಕುರಿತ ಈಶ್ವರಪ್ಪ ಹೇಳಿಕೆಗೆ ಭಾರತೀಯ ಹೊಸ ಕಾಂಗ್ರೆಸ್ ಪಕ್ಷ ಖಂಡನೆ

December 6, 2018

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅಡ್ಡಿಪಡಿಸಿದರೂ ಅಯೋಧ್ಯೆ ಯಲ್ಲಿ ರಾಮಮಂದಿರ ನಿರ್ಮಾಣ ನಿಲ್ಲದು ಎಂಬ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪನವರ ಹೇಳಿಕೆಯನ್ನು ಭಾರತೀಯ ಹೊಸ ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯೂಬ್‍ಖಾನ್ ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಚುನಾವಣೆ ಬಂದಾಗ ಮಾತ್ರ ಬಿಜೆಪಿಯವರಿಗೆ ರಾಮಮಂದಿರದ ನೆನಪಾಗುತ್ತದೆ. ರಾಮಮಂದಿರ ನಿರ್ಮಾಣ ವಿಷಯದಲ್ಲಿ ಬಿಜೆಪಿ ಕೇವಲ ಸುಳ್ಳು ಆಶ್ವಾಸನೆಗಳನ್ನು ನೀಡಿ ದೇಶದ ಜನತೆಗೆ ದ್ರೋಹ ಬಗೆಯುತ್ತಿದೆ ಎಂದು…

ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ ಸರಣಿ ಅಪಘಾತ
ಮೈಸೂರು

ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ ಸರಣಿ ಅಪಘಾತ

December 6, 2018

ಮೈಸೂರು:  ಮೈಸೂರಿನ ಪಡುವಾರಹಳ್ಳಿ ಬಳಿ ಹುಣಸೂರು ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ಕು ಕಾರುಗಳು ಜಖಂಗೊಂಡಿದ್ದು ಚಾಲಕರು ಹಾಗೂ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಹುಂಡೈ ಕ್ರೆಟಾ (ಕೆಎಲ್58, ಆರ್.555), ಹುಂಡೈ ಐ-10 (ಕೆಎ.09, ಎಂಎ 9664), ಮಾರುತಿ ಸುಜುಕಿ ಇಕೋ (ಕೆಎ 09, ಎಂಬಿ 5063) ಹಾಗೂ ಫೋರ್ಡ್ ಫಿಯಸ್ಟಾ (ಕೆಎ 17, ಎಂ.9487) ಕಾರುಗಳು ಜಖಂಗೊಂಡಿವೆ. ಘಟನೆಯಿಂದಾಗಿ ಪಡುವಾರಹಳ್ಳಿ ಬಳಿ ಭೂದೇವಿ ಫಾರಂ ಎದುರು ಸುಮಾರು ಅರ್ಧ ಗಂಟೆ ವಾಹನ ಸಂಚಾರಕ್ಕೆ…

ಬೆಂಗಳೂರಲ್ಲಿ ಹತ್ಯೆಯಾದ ಓಲಾ ಕ್ಯಾಬ್ ಚಾಲಕನಿಗೆ ಮೈಸೂರಲ್ಲಿ ಶ್ರದ್ಧಾಂಜಲಿ
ಮೈಸೂರು

ಬೆಂಗಳೂರಲ್ಲಿ ಹತ್ಯೆಯಾದ ಓಲಾ ಕ್ಯಾಬ್ ಚಾಲಕನಿಗೆ ಮೈಸೂರಲ್ಲಿ ಶ್ರದ್ಧಾಂಜಲಿ

December 6, 2018

ಮೈಸೂರು: ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಬಳಿ ದುಷ್ಕರ್ಮಿ ಗಳಿಂದ ಹತ್ಯೆಯಾದ ಮೋಹನ್ ಎಂಬ ಓಲಾ ಕ್ಯಾಬ್ ಚಾಲಕನಿಗೆ ಮೈಸೂರಿನ ಓಲಾ ಮತ್ತು ಊಬರ್ ಕ್ಯಾಬ್ ಚಾಲಕರು ಬುಧವಾರ ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಶ್ರದ್ಧಾಂಜಲಿ ಅರ್ಪಿಸಿದರು. ಮೈಸೂರು ಅರಮನೆ ನಗರಿ ಸಾರಥಿ ಸೇನೆ ಕಾರ್ಮಿಕರ ಸಂಘದ ಆಶ್ರಯದಲ್ಲಿ ಗಾಂಧಿ ಪುತ್ಥಳಿ ಬಳಿ ಜಮಾಯಿಸಿದ ಚಾಲಕರು, ಮೃತ ಮೋಹನ್ ಭಾವಚಿತ್ರದ ಎದುರು ಮೇಣದ ಬತ್ತಿಗಳನ್ನು ಹಚ್ಚಿ, ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ…

ಡಿ.16ರಂದು ಸಾಧಕರ ಸವಿ ಹೆಜ್ಜೆ, ಕಲಾನ್ವೇಷಕ  ತ್ರಯರು ಪುಸ್ತಕ ಬಿಡುಗಡೆ
ಮೈಸೂರು

ಡಿ.16ರಂದು ಸಾಧಕರ ಸವಿ ಹೆಜ್ಜೆ, ಕಲಾನ್ವೇಷಕ ತ್ರಯರು ಪುಸ್ತಕ ಬಿಡುಗಡೆ

December 6, 2018

ಮೈಸೂರು: ಮುದ್ರಣ ಮಾಧ್ಯಮಗಳ ಪ್ರೋತ್ಸಾಹದಿಂದ ಮೈಸೂರಿನ ರಾಮಾ ನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್ ಗ್ಯಾಲರಿಗೆ 10 ವರ್ಷ ಸಂದಿದೆ. ಈ ಗ್ಯಾಲರಿ ಯಲ್ಲಿ ಪ್ರತಿ ತಿಂಗಳ 2ನೇ ಶನಿವಾರದಂದು `ಸಾಧಕರೊಂದಿಗೆ ಸಂವಾದ’ ಹಾಗೂ ರಾಜ್ಯದ ಹಲವಾರು ಭಾಗದಿಂದ ಬಂದ ಕಲಾವಿ ದರು ಉಚಿತವಾಗಿ ಕಲಾ ಪ್ರದರ್ಶನ ಮಾಡು ತ್ತಾರೆ. ಮೈಸೂರು ಆರ್ಟ್ ಗ್ಯಾಲರಿಯ 10ನೇ ವಾರ್ಷಿಕೋತ್ಸವ ಸಮಾರಂಭವನ್ನು ಡಿ.16 ರಂದು ಏರ್ಪಡಿಸಲಾಗಿದೆ. ಇದೇ ವೇಳೆ ರಾಮಾನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್ ಗ್ಯಾಲರಿ ಹೊರತಂದಿರುವ ಲೇಖಕ ಎಲ್.ಶಿವಲಿಂಗಪ್ಪನವರ ‘ಕಲಾನ್ವೇಷಕ…

ಇಗ್ನೋದ ವಿವಿಧ ಕೋರ್ಸ್‍ಗಳಿಗೆ ಆನ್‍ಲೈನ್ ಪ್ರವೇಶಾತಿ ಆರಂಭ
ಮೈಸೂರು

ಇಗ್ನೋದ ವಿವಿಧ ಕೋರ್ಸ್‍ಗಳಿಗೆ ಆನ್‍ಲೈನ್ ಪ್ರವೇಶಾತಿ ಆರಂಭ

December 6, 2018

ಮೈಸೂರು: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲ ಯದ (ಐಜಿಎನ್‍ಓಯು) ವಿವಿಧ ಕೋರ್ಸ್‍ಗಳಿಗೆ ಆನ್‍ಲೈನ್ ಪ್ರವೇಶಾತಿ ಆರಂಭವಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಇಗ್ನೋದ ಬೆಂಗಳೂರು ಪ್ರಾದೇಶಿಕ ಕೇಂದ್ರ ವಲಯದ ಸಹಾಯಕ ನಿರ್ದೇಶಕಿ ಡಾ.ಹೇಮಾಮಾಲಿನಿ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಅಧೀನದಲ್ಲಿ 1985ರಿಂದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ವಿವಿ ಇಗ್ನೋ, ಶಿಕ್ಷಣ ವಂಚಿತರಿಗೆ, ದುರ್ಬಲರಿಗೆ ಹಾಗೂ…

ವಿಜಯ ವಿಠ್ಠಲ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಮೈಸೂರು

ವಿಜಯ ವಿಠ್ಠಲ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

December 6, 2018

ಮೈಸೂರು:  ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ವಿಭಾಗ ಮಟ್ಟದ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅನೇಕ ಬಹುಮಾನಗಳನ್ನು ಪಡೆದು, ಚಿಕ್ಕಬಳ್ಳಾಪುರದಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಬಹುಮಾನ ವಿಜೇತರು: ಪ್ರಥಮ ಪಿಯುಸಿಯಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭರತ್ ಎಸ್. ಮತ್ತು ದೀಪಕ್ ಎಂ. (ಪ್ರಥಮ ಸ್ಥಾನ), ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಅನಘ.ಜಿ.ಅಡಿಗ (ಪ್ರಥಮ ಸ್ಥಾನ), ಜನಪದಗೀತೆ ಸ್ಪರ್ಧೆಯಲ್ಲಿ ಪ್ರಕೃತಿ ಎನ್.ಭಟ್ (ದ್ವಿತೀಯ ಸ್ಥಾನ),…

ತರಬೇತಿ, ಅಭಿವೃದ್ಧಿ ಡಿಪ್ಲೊಮಾ ಕೋರ್ಸ್ ಆರಂಭ
ಮೈಸೂರು

ತರಬೇತಿ, ಅಭಿವೃದ್ಧಿ ಡಿಪ್ಲೊಮಾ ಕೋರ್ಸ್ ಆರಂಭ

December 6, 2018

ಮೈಸೂರು: ದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಂಡಿ ಯನ್ ಸೊಸೈಟಿ ಫಾರ್ ಟ್ರೈನಿಂಗ್ ಅಂಡ್ ಡೆವಲಪ್‍ಮೆಂಟ್ ಸಂಸ್ಥೆಯು 2019ರ ಜನವರಿಯಲ್ಲಿ 18 ತಿಂಗಳ ತರಬೇತಿ ಮತ್ತು ಅಭಿವೃದ್ಧಿ ಡಿಪ್ಲೊಮಾ ಕೋರ್ಸ್ ಆರಂಭಿ ಸುತ್ತಿದ್ದು, ಈ ಸಂಬಂಧ ಡಿ.7 ಮತ್ತು 8ರಂದು ಮೈಸೂರಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಕಾರ್ತಿಕೇಯನ್ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿದೆ. ಸಂಸ್ಥೆಯ ಮೈಸೂರು ಶಾಖೆಯ ಅಧ್ಯಕ್ಷ ಪ್ರೊ.ಎ.ಆರ್.ದ್ವಾರಕಾನಾಥ್ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ…

ಮೊದಲ ಹಂತದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಡಿ.8ರಿಂದ ಪ್ರಕ್ರಿಯೆ ಪ್ರಾರಂಭ
ಮೈಸೂರು

ಮೊದಲ ಹಂತದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಡಿ.8ರಿಂದ ಪ್ರಕ್ರಿಯೆ ಪ್ರಾರಂಭ

December 5, 2018

ಬೆಂಗಳೂರು:  ಮೊದಲ ಹಂತ ದಲ್ಲಿ ರೈತರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ 50 ಸಾವಿರ ರೂಪಾಯಿವರೆಗಿನ ಕೃಷಿ ಸಾಲ ಮನ್ನಾ ಮಾಡುವುದಾಗಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ಸರ್ಕಾ ರಕ್ಕೆ ಆರ್ಥಿಕ ಕೊರತೆ ಇಲ್ಲ. ಸಾಲ ಮನ್ನಾಕ್ಕಾಗಿ 6,500 ಕೋಟಿ ರೂ. ಮೀಸಲಿಟ್ಟಿ ದ್ದೇವೆ. ರಾಷ್ಟ್ರೀಯ ಬ್ಯಾಂಕುಗಳಲ್ಲಿನ 17 ಲಕ್ಷ ರೈತರ 50 ಸಾವಿರದವರೆಗಿನ ಸಾಲ ಮನ್ನಾ ಮೊದಲ ಹಂತದಲ್ಲಿ ಆಗಲಿದೆ ಎಂದರು. ಡಿಸೆಂಬರ್ 8 ರಿಂದ…

ಡಿ ನೋಟಿಫಿಕೇಷನ್ ಪ್ರಕರಣ: ಯಡಿಯೂರಪ್ಪ ವಿರುದ್ಧದ 5 ಪ್ರಕರಣಗಳ ವಜಾಗೊಳಿಸಿದ ಸುಪ್ರೀಂಕೋರ್ಟ್
ಮೈಸೂರು

ಡಿ ನೋಟಿಫಿಕೇಷನ್ ಪ್ರಕರಣ: ಯಡಿಯೂರಪ್ಪ ವಿರುದ್ಧದ 5 ಪ್ರಕರಣಗಳ ವಜಾಗೊಳಿಸಿದ ಸುಪ್ರೀಂಕೋರ್ಟ್

December 5, 2018

ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಬಿಗ್ ರಿಲೀಫ್ ನೀಡಿದೆ. ಅಕ್ರಮ ಭೂಕಬಳಿಕೆ, ಡಿ ನೋಟಿಫಿಕೇಷನ್ ಸಂಬಂಧಿ ಸಿದ ಐದು ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯ ಇಂದು ವಜಾಗೊಳಿಸಿದೆ. ಬಿಎಸ್‍ವೈ ಹಾಗೂ ಕುಟುಂಬದ ವಿರುದ್ಧ ಸಿರಾಜಿನ್ ಬಾಷಾ ಎಂಬ ವಕೀಲರು ದಾಖಲಿಸಿದ್ದ ಐದು ಪ್ರಕರಣಗಳ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಐದು ಕೇಸ್‍ಗಳನ್ನು ವಜಾಗೊಳಿಸಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಡಿನೋಟಿಫಿಕೇಷನ್ ನಡೆಸಿದ್ದರೆಂದು ವಕೀಲ, ಸಾಮಾಜಿಕ ಕಾರ್ಯಕರ್ತ ಸಿರಾಜಿನ್ ಬಾಷಾ ಹೈಕೋರ್ಟ್‍ನಲ್ಲಿ…

ಡಿ.8ರಂದು ಮಡಿಕೇರಿಯಲ್ಲಿ ಬೃಹತ್ ರ‍್ಯಾಲಿ
ಮೈಸೂರು

ಡಿ.8ರಂದು ಮಡಿಕೇರಿಯಲ್ಲಿ ಬೃಹತ್ ರ‍್ಯಾಲಿ

December 5, 2018

ಮೈಸೂರು:  ಕೊಡಗು ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಚತುಷ್ಪಥ ಹೆದ್ದಾರಿ ನಿರ್ಮಾಣ ಸೇರಿದಂತೆ 10 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳು ಜಿಲ್ಲೆಯ ವಿನಾಶಕ್ಕೆ ಕಾರಣವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿರುವ ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ, ಈ ಸಂಬಂಧ ಡಿ.8 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲು ನಿರ್ಧರಿಸಿದೆ. ಕೊಡಗಿನಲ್ಲಿ ಎರಡು ರೈಲ್ವೆ ಮಾರ್ಗ ಹಾಗೂ ಮೈಸೂರು-ಕುಶಾಲನಗರ-ಮಡಿಕೇರಿ ಮಾರ್ಗದಲ್ಲಿ ಚತುಷ್ಪಥ ರಸ್ತೆ ನಿರ್ಮಿಸುವುದು ಸೇರಿದಂತೆ ಒಟ್ಟು ನಾಲ್ಕು ಬಹುಪಥ ಹೆದ್ದಾರಿಗಳನ್ನು ನಿರ್ಮಿಸಲು ಸರ್ಕಾರ ಯೋಜನೆ…

1 1,248 1,249 1,250 1,251 1,252 1,611
Translate »