ತಿ.ನರಸೀಪುರ: ಅಪಘಾತ ಮತ್ತು ಅನಾರೋಗ್ಯದ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಜೀವ ರಕ್ಷಣೆಗೆ ರಕ್ತದ ಅಗತ್ಯವಾಗಿದ್ದು, ದಾನದಲ್ಲೇ ರಕ್ತದಾನ ಶ್ರೇಷ್ಠ ಎಂದು ಸಮಾಜ ಸೇವಕ ಹಾಗೂ ವರುಣಾ ಹಿರಿಯ ಕಾಂಗ್ರೆಸ್ ಮುಖಂಡ ಟಿ.ಮಹದೇವಸ್ವಾಮಿ ಹೇಳಿದರು. ತಾಲೂಕಿನ ಬನ್ನೂರು ಪಟ್ಟಣದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ರಾಜಕಾರಣಿ, ನಟ ಡಾ.ಅಂಬರೀಶ್ ಸ್ಮರಣಾರ್ಥವಾಗಿ ರಕ್ತ ದಾನಿಗಳ ಸಂಘ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಅನ್ನದಾನವನ್ನೇ…
ಡಿ.ದೇವರಾಜ ಅರಸು, ಅಶೋಕ ರಸ್ತೆಗಳಲ್ಲಿ ‘ಪೇ ಅಂಡ್ ಪಾರ್ಕ್’ ವ್ಯವಸ್ಥೆ ಜಾರಿಗೆ ನಿರ್ಧಾರ
December 4, 2018ಮೈಸೂರು: ಮೈಸೂರಿನ ಪ್ರಮುಖ ವಾಣಿಜ್ಯ ವಹಿವಾಟು ಮಾರ್ಗಗಳಾದ ಡಿ.ದೇವರಾಜ ಅರಸು ರಸ್ತೆ ಹಾಗೂ ಅಶೋಕ ರಸ್ತೆಯಲ್ಲಿ ತಮ್ಮ ವಾಹನ ನಿಲುಗಡೆ ಶುಲ್ಕ ಪಾವತಿಸಲು ಸಿದ್ಧರಾಗಿ ಮಾಲೀಕರೇ. ಏಕೆಂದರೆ ಈ ಎರಡೂ ರಸ್ತೆಗಳಲ್ಲಿ ಕಾರು ಹಾಗೂ ದ್ವಿಚಕ್ರವಾಹನಗಳಿಗೆ ‘ಪೇ ಅಂಡ್ ಪಾರ್ಕ್’ ವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಕಾರುಗಳನ್ನು ನಿಲ್ಲಿಸುವುದು, ಅಡ್ಡಾದಿಡ್ಡಿ ನಿಲುಗಡೆ ಹಾಗೂ ದ್ವಿಚಕ್ರವಾಹನಗಳ ಕಳ್ಳ ತನಗಳಂತಹ ಪ್ರಕರಣಗಳಿಂದ ಸಾರ್ವಜನಿಕರಿಗುಂಟಾ ಗುತ್ತಿರುವ ತೊಂದರೆ ತಪ್ಪಿಸಿ, ವ್ಯವಸ್ಥಿತ ಹಾಗೂ ಸುರಕ್ಷಿತ…
ರೈತರ ಕೃಷಿ ಉತ್ಪನ್ನ ದಾಸ್ತಾನಿಗೆ ಸರ್ಕಾರದಿಂದ ಸುಲಭ ಸೌಕರ್ಯ
December 4, 2018ಬೆಂಗಳೂರು: ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಅಗ್ಗದ ದರ ದಲ್ಲಿ ದಾಸ್ತಾನು ವ್ಯವಸ್ಥೆ ಕಲ್ಪಿಸುವುದಲ್ಲದೆ, ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ಮುಕ್ತ ಮಾಡುವ ಎಲ್ಲ ರೀತಿಯ ಬೆಳೆಗಳ ದಾಸ್ತಾನು ಯೋಜನೆಯನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ. ದಾಸ್ತಾನು ಯೋಜನೆಯಡಿ ರೈತರು ಉಗ್ರಾಣಗಳಲ್ಲಿಡುವ ಕೃಷಿ ಉತ್ಪನ್ನಗಳ ಸಂಗ್ರಹಕ್ಕೂ ಸರ್ಕಾರ ಮಾರುಕಟ್ಟೆ ದರದ ಶೇಕಡ 75ರಷ್ಟನ್ನು ಮುಂಗಡವಾಗಿ ನೀಡ ಲಿದೆ, ಅಲ್ಲದೆ, ದಾಸ್ತಾನು ಶುಲ್ಕವನ್ನೂ ಭರಿಸಲಿದೆ. ಕೃಷಿ ಉತ್ಪನ್ನಗಳ ದರ ಹೆಚ್ಚಳ ವಾಗುತ್ತಿದ್ದಂತೆ ರೈತ ಇಚ್ಛಿಸಿದಾಗ ತನ್ನ ಕೃಷಿ ಉತ್ಪನ್ನ ದಾಸ್ತಾನು…
ರೈತರ ಸಾಲ ಮನ್ನಾ ಮಾಹಿತಿಗೆ ಪ್ರತ್ಯೇಕ ವೆಬ್‍ಸೈಟ್
December 4, 2018ಬೆಂಗಳೂರು: ಕೃಷಿ ಸಾಲ ಮನ್ನಾ ಯೋಜನೆಯಡಿ ತಮ್ಮ ಸಾಲ ಮನ್ನಾ ಆದ ಬಗ್ಗೆ ರೈತರು ವಿವರ ಪಡೆಯಲು ರಾಜ್ಯ ಸರ್ಕಾರ ಪ್ರತ್ಯೇಕ ವಿಶೇಷ ವೆಬ್‍ಸೈಟ್ ಆರಂಭಿಸಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕೃಷಿ ಸಾಲ ಮನ್ನಾ ಯೋಜನೆ ರೈತರಿಗೆ ತಲುಪಬೇಕು ಹಾಗೂ ಕೃಷಿಕರು ಸಾಲದಿಂದ ಋಣಮುಕ್ತರಾಗಬೇಕು ಎನ್ನುವುದು ಮುಖ್ಯ ಉದ್ದೇಶವಾಗಿದೆ. ಅಂತರ್ಜಾಲ ತಾಣದ (ವೆಬ್‍ಸೈಟ್) ಮೂಲಕ ರೈತರು ತಮ್ಮ ಬೆಳೆ ಸಾಲ ಮನ್ನಾ ಆಗಿದೆಯೇ ಎಂಬ ವಿವರವನ್ನು ಸುಲಭವಾಗಿ ತಿಳಿಯಬಹುದಾಗಿದೆ. http://clws.karnataka.gov.in/clws/pacs/pacsreports/Pending Bankverification.aspx ಲಿಂಕ್ ಬಳಸಿ, ಸಾಲ ಮನ್ನಾ…
ಬೆಂಗಳೂರು-ಮೈಸೂರು ಹಾಲಿ ಹೆದ್ದಾರಿ ಕೇಂದ್ರ ಭೂ ಸಾರಿಗೆ ವಶಕ್ಕೆ
December 4, 2018ಬೆಂಗಳೂರು: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ನಡುವಿನ ಹೋಟೆಲ್ ಹಾಗೂ ವಾಣಿಜ್ಯ ಮಳಿಗೆಗಳು ಅಲ್ಲದೆ, ಬೃಹತ್ ಜಾಹೀರಾತು ಫಲಕಗಳಿಗೆ ಸಂಚಕಾರ ಬರಲಿದೆ. ಹಾಲಿ ರಸ್ತೆಯನ್ನು ವಿಶ್ವ ದರ್ಜೆಗೇರಿಸಲು ಕೇಂದ್ರ ಭೂ ಸಾರಿಗೆ ಇಲಾಖೆ ತನ್ನ ವಶಕ್ಕೆ ಪಡೆದಿದೆ. ಜನವರಿ 8, 2019ರಿಂದ ರಸ್ತೆ ಕಾಮಗಾರಿಗೆ ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿ, ಈ ಹೆದ್ದಾರಿ ದಶಪಥಕ್ಕೆ ಪರಿವರ್ತಿತವಾಗಲು ಅನುವಾಗುವಂತೆ ಎರಡೂ ಬದಿಯ ಹೋಟೆಲ್ ಸೇರಿದಂತೆ ಎಲ್ಲಾ ಉದ್ಯಮಗಳು ಹಾಗೂ ಕಟ್ಟಡಗಳ ತೆರವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಇಂತಹ ವಾಣಿಜ್ಯ…
ರಾತ್ರೋರಾತ್ರಿ ಮಂಡ್ಯ ಮನೆ ಖಾಲಿ ಮಾಡಿದ ಮಾಜಿ ಸಂಸದೆ ರಮ್ಯಾ
December 4, 2018ಮಂಡ್ಯ: ಮಾಜಿ ಸಂಸದೆ ರಮ್ಯಾ, ಮಂಡ್ಯ ವಿದ್ಯಾನಗರದ ಕೆ.ಆರ್.ರಸ್ತೆಯಲ್ಲಿದ್ದ ತಮ್ಮ ಬಾಡಿಗೆ ಮನೆ ಯನ್ನು ಭಾನುವಾರ ರಾತ್ರೋರಾತ್ರಿ ಖಾಲಿ ಮಾಡಿದ್ದಾರೆ. 2013ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದ ರಮ್ಯಾ ಅವರು, ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಸಾದತ್ ಆಲಿಖಾನ್ ಅವರ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆದರೆ ಕಳೆದ ಭಾನುವಾರ ತಡರಾತ್ರಿ 2 ಲಾರಿಗಳಲ್ಲಿ ಮನೆಯಲ್ಲಿದ್ದ ಪೀಠೋಪಕರಣಗಳು ಸೇರಿದಂತೆ ಇತರೆ ಸಾಮಾನು ಸರಂಜಾಮುಗಳನ್ನು ಬೆಂಗಳೂರಿಗೆ ಸಾಗಿಸಿದ್ದಾರೆ. ಭಾನುವಾರ ರಾತ್ರಿ ಹತ್ತು ಗಂಟೆ ಯಿಂದ…
ಮತ್ತೊಮ್ಮೆ ಆಪರೇಷನ್ ಕಮಲ ಕಸರತ್ತು…
December 4, 2018ಬೆಂಗಳೂರು: ಆಪರೇಷನ್ ಕಮಲ ನಡೆಸುವ ಮೂಲಕ ಕಾಂಗ್ರೆಸ್‍ನ 20 ರಿಂದ 25 ಶಾಸಕರನ್ನು ಸೆಳೆದು ಮೈತ್ರಿ ಸರ್ಕಾರವನ್ನು ಉರುಳಿಸಿ, ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತೊಮ್ಮೆ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದ್ದು, ಈ ಸಂಬಂಧ ಮಾಜಿ ಸಚಿವ ಶ್ರೀರಾಮುಲು ಆಪ್ತನೋರ್ವ ದುಬೈನ ಉದ್ಯಮಿ ಜೊತೆ ಮಾತನಾಡಿರುವ ಆಡಿಯೋ ಸುದ್ದಿವಾಹಿನಿ ಯೊಂದರಲ್ಲಿ ಪ್ರಸಾರವಾಗಿದ್ದು, ರಾಜ್ಯ ರಾಜ ಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್‍ನ 20 ರಿಂದ 25 ಶಾಸಕರು ಸಂಪರ್ಕದಲ್ಲಿರುವುದಾಗಿಯೂ ಅವರಿಗೆ ತಲಾ 25 ಕೋಟಿ ಕೊಡಲು ಮಾತುಕತೆ ನಡೆದಿದೆ…
ನಮೂನೆ-7ರಡಿ ಸ್ವೀಕೃತ 27000 ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಡಿ.6 ಅಂತಿಮ ಗಡುವು
December 4, 2018ಮೈಸೂರು: ಮತ ದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಮೈಸೂರು ನಗರ ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರ ಗಳಲ್ಲಿ ನಮೂನೆ-7ರ ಅಡಿಯಲ್ಲಿ ಸ್ವೀಕೃತ ವಾಗಿರುವ 27,722 ಮತದಾರರನ್ನು ಪಟ್ಟಿ ಯಿಂದ ಕೈಬಿಡುವ ಸಂಬಂಧ ಸೋಮ ವಾರ ಮೈಸೂರು ಮಹಾನಗರಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಸಭೆ ಕರೆಯಲಾಗಿತ್ತು. ಜೆಡಿಎಸ್‍ನ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಬೋರೇಗೌಡ ಹೊರತು ಪಡಿಸಿದರೆ, ಕಾಂಗ್ರೆಸ್, ಬಿಜೆಪಿ ಸೇರಿ ದಂತೆ ಇತರೆ ಪಕ್ಷಗಳ ಮುಖ್ಯಸ್ಥರು ಸಭೆಗೆ ಗೈರು ಹಾಜರಾಗಿದ್ದರು. ಮೈಸೂರಿನ…
ಸುಯೋಗ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
December 4, 2018ಮೈಸೂರು: ವೈದ್ಯಕೀಯ ಸೇವೆ ಸಮಾಜಮುಖಿಯಾದರೆ ಆರೋಗ್ಯವಂತ ಸಮಾಜ ನಿರ್ಮಾಣ ಆಗಲು ಸಾಧ್ಯ ಎಂದು `ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ರಾದ ಕೆ.ಬಿ.ಗಣಪತಿ (ಕೆಬಿಜಿ) ಅಭಿಪ್ರಾಯಪಟ್ಟರು. ಮೈಸೂರಿನ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ 18 ದಿನಗಳ ಕಾಲ ಹಮ್ಮಿಕೊಂಡಿರುವ ಉಚಿತ ಹೊರ ರೋಗಿ ತಪಾಸಣಾ ಸೇವಾ ಶಿಬಿರಕ್ಕೆ ಆಸ್ಪತ್ರೆ ಆವರಣದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಆಸ್ಪತ್ರೆಗಳು ನಾಗರಿಕ ಸಮಾಜದ ಮೊಟ್ಟಮೊದಲ ಲಕ್ಷಣ. ಇಂತಹ ಆಸ್ಪತ್ರೆಗಳು ಸಮಾಜಮುಖಿಯಾಗಿ, ಅನಾರೋಗ್ಯ ಪೀಡಿತರಿಗೆ ಸ್ಪಂದಿಸಿದರೆ ಆರೋಗ್ಯವಂತ…
ಗ್ರಂಥಾಲಯ ಕರ ಪಾವತಿಸದ ಸ್ಥಳೀಯ ಸಂಸ್ಥೆಗಳ ಪಟ್ಟಿಯಲ್ಲಿ ಮೈಸೂರು ಪಾಲಿಕೆಗೆ ಮೊದಲ ಸ್ಥಾನ
December 4, 2018ಮೈಸೂರು: ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಕಾಯ್ದೆ 1984ರ ಪ್ರಕಾರ ಎಲ್ಲಾ ಸ್ಥಳೀಯ ಸಂಸ್ಥೆಗಳು ಶೇ.6ರಷ್ಟು ಗ್ರಂಥಾಲಯ ಕರ ವನ್ನು ವಸೂಲಿ ಮಾಡುತ್ತವೆ. ಆ ಹಣದಲ್ಲಿಯೇ ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳ ಎಲ್ಲಾ ಅಗತ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಆದರೆ ಸ್ಥಳೀಯ ಸಂಸ್ಥೆಗಳು ವಸೂಲಿ ಮಾಡಿರುವ ಗ್ರಂಥಾಲಯ ಕರವನ್ನು ಇಲಾ ಖೆಗೆ ಪಾವತಿಸದಿದ್ದರೆ ಸಾರ್ವಜನಿಕ ಗ್ರಂಥಾಲಯ ಗಳ ಅಭಿವೃದ್ಧಿ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ. ಗ್ರಂಥಾಲಯಗಳ ಶ್ರೇಯೋಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರಿಂದ ಸಂಗ್ರಹಿಸುವ ಶೇ.6ರಷ್ಟು ತೆರಿಗೆ ಯನ್ನು ಶಾಸನಬದ್ಧವಾಗಿ ಗ್ರಂಥಾಲಯಗಳ ಅಭಿ ವೃದ್ಧಿಗೆ…