ಮೈಸೂರು: ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(ಆಯಿಷ್)ಯಲ್ಲಿ ಐದು ದಿನಗಳ ಕಾಲ ಉಚಿತ ಶ್ರವಣ ಉಪಕರಣಗಳ ರಿಪೇರಿ ಶಿಬಿರ ಇಂದಿನಿಂದ ಆರಂಭವಾಯಿತು. ಸಂಸ್ಥೆಯ ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಏರ್ಪಡಿಸಿರುವ ಶಿಬಿರವನ್ನು ಮೈಸೂರಿನ ಸಾಯಿರಂಗ ವಿದ್ಯಾಸಂಸ್ಥೆಯ ಮಕ್ಕಳಿಗೆ ಶ್ರವಣೋಪಕರಣಗಳನ್ನು ವಿತರಿಸುವ ಮೂಲಕ ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ನಿರ್ದೇಶಕರು, ಶ್ರವಣ ದೋಷ ಉಳ್ಳ ಮಕ್ಕಳು, ಯುವ ಕರು, ಮಧ್ಯಮ ವಯಸ್ಸಿನವರು ಹಾಗೂ ಹಿರಿಯ ನಾಗರಿಕರಿಗೆ ಸಂಸ್ಥೆಯಲ್ಲಿ ತಪಾಸಣೆ, ಚಿಕಿತ್ಸೆ ಹಾಗೂ ಶ್ರವಣ…
ಬಿಎಸ್‍ಪಿಯಿಂದ ಅಂಬರೀಶ್, ಜಾಫರ್ ಷರೀಫ್‍ಗೆ ಶ್ರದ್ಧಾಂಜಲಿ
November 27, 2018ಮೈಸೂರು: ಅಗಲಿದ ಹಿರಿಯ ನಟ ಅಂಬರೀಶ್, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್, ಕನಗನ ಮರಡಿ ಬಳಿ ನಾಲೆಗೆ ಬಸ್ ಉರುಳಿ ಮೃತ ಪಟ್ಟ 30 ಮಂದಿಗೆ ಬಹುಜನ ಸಮಾಜ ಪಕ್ಷ ಶ್ರದ್ಧಾಂಜಲಿ ಸಲ್ಲಿಸಿತು. ಮೈಸೂರಿನ ಅಶೋಕ ಪುರಂ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾ ನವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ, ಅಗ ಲಿದ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ದಲ್ಲಿ ಮಾತನಾಡಿದ ಬಿಎಸ್‍ಪಿ ಮೈಸೂರು ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ಪಕ್ಷದ ವತಿ ಯಿಂದ…
ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಗೆ `ರಜತ’ ಸಂಭ್ರಮ
November 27, 2018ಮೈಸೂರು: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ `ರಜತ ಮಹೋತ್ಸವ’ ನ.28ರಂದು ಬೆಳಿಗ್ಗೆ 10ಕ್ಕೆ ಮೈಸೂರು -ಬನ್ನೂರು ಮುಖ್ಯ ರಸ್ತೆಯಲ್ಲಿರುವ ಸಂಸ್ಥೆಯ ಕ್ರೀಡಾಂಗಣದಲ್ಲಿ ನೆರವೇರಲಿದ್ದು, ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಾಸು ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1983ರಿಂದ 89ರವರೆಗೆ ಮೈಸೂರಿನಲ್ಲಿ ಶಿಕ್ಷಣ ಪಡೆಯಲು ಬೇಡಿಕೆ ಇತ್ತಾದರೂ ಶಿಕ್ಷಣ ಸಂಸ್ಥೆಗಳ ಕೊರತೆಯಿತ್ತು. ಈ…
ಡೆತ್‍ನೋಟ್ ಬರೆದಿಟ್ಟು ಪ್ರೇಮಿಗಳು ಆತ್ಮಹತ್ಯೆ
November 27, 2018ಬೆಟ್ಟದಪುರ: ಡೆತ್‍ನೋಟ್ ಬರೆದಿಟ್ಟು ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ನಡೆದಿದೆ. ನಾಗನಹಳ್ಳಿ ದೊಡ್ಡೆಗೌಡನಕೊಪ್ಪಲು ಗ್ರಾಮದ ನಿವಾಸಿ, ಪಿಯು ವಿದ್ಯಾರ್ಥಿನಿ ಡಿ.ಎಲ್.ವೀಣಾ(17) ಹಾಗೂ ಕೆಳಗನಹಳ್ಳಿ ದೊಡ್ಡಕೊಪ್ಪಲು ನಿವಾಸಿ ಕೆ.ಎನ್.ಸ್ವಾಮಿ (22) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಈ ಇಬ್ಬರೂ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ಬೆಟ್ಟದಲ್ಲಿ ಟಿಬೇಟಿಯನ್ ಬಾವುಟ ಕಟ್ಟಲು ಬಳಸಿದ್ದ ಹಗ್ಗದಿಂದ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮವಾರದಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ದೇವರ ದರ್ಶನಕ್ಕಾಗಿ…
ಜಿಲ್ಲಾ ಬ್ರಾಹ್ಮಣ ಸಮಾವೇಶ ಪೂರ್ವಭಾವಿ ಸಭೆ
November 27, 2018ಹುಣಸೂರು: ಮೈಸೂರು ನಗರದ ಶ್ರೀ ಗಣಪತಿ ಸಚ್ಚಿದಾ ನಂದ ಸ್ವಾಮಿಗಳ ಆಶ್ರಮದಲ್ಲಿ ಡಿ.15 ಮತ್ತು 16 ರಂದು ಎರಡು ದಿನಗಳ ಕಾಲ ಜಿಲ್ಲಾ ಬ್ರಾಹ್ಮಣ ಸಮಾವೇಶ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರರು ಭಾಗವಹಿ ಸುವಂತೆ ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮನವಿ ಮಾಡಿದರು. ನಗರದ ಬ್ರಾಹ್ಮಣರ ಬಡಾವಣೆಯ ಶ್ರೀರಾಘವೇಂದ್ರಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯದಲ್ಲಿ ಸಾಕಷ್ಟು ಮಂದಿ ಬಿಪಿಎಲ್ ರೇಖೆಗಿಂತ ಕೆಳಗಿನವರಿದ್ದರೂ ಸಹ ಮುಂದುವರೆದ ಜನಾಂಗವೆಂಬ ಹಣೆಪಟ್ಟಿ ಕಟ್ಟಿದ್ದರಿಂದಾಗಿ…
ಶ್ರೀ ಶ್ರೀಕಂಠೇಶ್ವಸ್ವಾಮಿ ವಿಜೃಂಭಣೆ ತೆಪ್ಪೋತ್ಸವ
November 27, 2018ನಂಜನಗೂಡು: ಚಿಕ್ಕ ಜಾತ್ರಾ ಅಂಗವಾಗಿ ನಗರದ ಪ್ರಸಿದ್ಧ ಶ್ರೀ ಶ್ರೀಕಂಠೇ ಶ್ವರಸ್ವಾಮಿ ತೆಪ್ಪೋತ್ಸವವು ಇಂದು ಸಂಜೆ ಕಪಿಲಾನದಿಯ ತೇಲುವ ಮಂಟಪ ದಲ್ಲಿ ವೈಭವಯುತವಾಗಿ ಜರುಗಿತು. ಸಂಜೆ 7.20ಕ್ಕೆ ದೇಗುಲದ ಪ್ರಧಾನ ಅರ್ಚಕ ಸಿ.ನಾಗಚಂದ್ರ ದೀಕ್ಷಿತ್ ಅವರು ಹೊವಿನಲಂಕಾರ, ವಜ್ರ ಖಚಿತ ಆಭರಣ ಗಳಿಂದ ಸಿಂಗರಿಸಿದ್ದ ಸ್ವಾಮಿಯವರ ಉತ್ಸವ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ ಶ್ರೀಕಂಠೇಶ್ವರಸ್ವಾಮಿಯವರ ಉತ್ಸವ ಮೂರ್ತಿಯನ್ನು ವಿದ್ಯುತ್ ದೀಪದಿಂದ ಅಲಂಕೃತಗೊಂಡಿದ್ದ ತೆಲುವ ಮಂಟಪ ದಲ್ಲಿ ಇರಿಸಿ ನದಿಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ಮಾಡಲಾಯಿತು….
ರಾಜ್ಯಮಟ್ಟದ ಪಿಯು ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ ಸಮಾಪನ
November 27, 2018ಮೈಸೂರು: ಮೈಸೂ ರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ 4 ದಿನಗಳ ಕಾಲ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿ ಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಆಟ ಪ್ರದರ್ಶಿಸಿದ ದಕ್ಷಿಣ ಕನ್ನಡ ತಂಡ `ಸಮಗ್ರ ಪ್ರಶಸ್ತಿ’ ತಮ್ಮದಾಗಿಸಿಕೊಂಡಿತು. ಪದವಿ ಪೂರ್ವ ಶಿಕ್ಷಣ ಇಲಾಖೆ, ವಿಜಯ ವಿಠಲ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಬಾಲಕ-ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ 90 ಮತ್ತು 82 ಅಂಕ ಗಳಿಸಿದ ದಕ್ಷಿಣ ಕನ್ನಡ ತಂಡ ಸಮಗ್ರ ಪ್ರಶಸ್ತಿ ಪಡೆಯಿತು. ವಿಜೇತರ ಪಟ್ಟಿ…
ತರಾತುರಿಯಲ್ಲಿ ಉದ್ಘಾಟನೆಯಾಗಿದ್ದ ಮೈಸೂರಿನ ಟ್ರಾಮಾ ಕೇರ್ ಸೆಂಟರ್: ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 3 ತಿಂಗಳು ಬೇಕು
November 27, 2018ಮೈಸೂರು: ಕಳೆದ ಮಾರ್ಚ್ ತಿಂಗಳಲ್ಲೇ ಉದ್ಘಾಟನೆಗೊಂಡ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿನ ಟ್ರಾಮಾ ಕೇರ್ ಸೆಂಟರ್‍ನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳ ಕಾಲಾವಕಾಶ ಬೇಕಾಗಿದೆ. ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಕರೆಯ ಲ್ಪಡುವ ಕೃಷ್ಣರಾಜೇಂದ್ರ (ಕೆಆರ್ ಆಸ್ಪತ್ರೆ) ಆಸ್ಪತ್ರೆಯಲ್ಲಿ ಅಪಘಾತ ತುರ್ತು ಚಿಕಿತ್ಸೆಗೆ ಸುಸಜ್ಜಿತ ಸೌಲಭ್ಯವಿಲ್ಲದ ಕಾರಣ ಹಾಗೂ ಅಪಘಾತ ಗಾಯಾಳುಗಳಿಗೆ ಪ್ರಮುಖವಾಗಿ ತಲೆಗೆ ಆದ ಗಾಯ (Head Injuries) ಗಳಿಗೆ ಅಗತ್ಯವಿರುವ ಶಸ್ತ್ರಚಿಕಿತ್ಸೆಗಳನ್ನು ನೀಡಿ ಪ್ರಾಣ ಉಳಿಸುವ ಸಲುವಾಗಿ ಈ ಹಿಂದಿನ…
ಕನ್ನಡ ಚಿತ್ರರಂಗದ ದಿಗ್ಗಜರ ಬಗ್ಗೆ ನಿಂದನೆ: ಸೈಬರ್ ಕ್ರೈಂ ಪೊಲೀಸರಿಗೆ ದೂರು
November 27, 2018ಮೈಸೂರು: ಕನ್ನಡದ ಮೇರು ನಟ ಅಂಬರೀಶ್ ಅವರ ಸಾವನ್ನು ಸಂಭ್ರಮಿಸಿ, ಡಾ.ರಾಜ್‍ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಅವರ ಬಗ್ಗೆ ಫೇಸ್ ಬುಕ್‍ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಮೈಸೂರಿನ ಬೆಳಕು ಸಂಸ್ಥೆಯ ಕಾರ್ಯಕರ್ತರು ಸೋಮವಾರ ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. `ದುಷ್ಟ ಸಂಹಾರ’ ಎಂಬ ಹೆಸರಿನ ಫೇಸ್‍ಬುಕ್ ಖಾತೆಯಲ್ಲಿ ಈ ಮೂವರು ದಿಗ್ಗಜರ ಭಾವಚಿತ್ರದೊಂದಿಗೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿ ಸಿರುವುದು ಈಗಾಗಲೇ ನೋವಿನಲ್ಲಿರುವ ಅಭಿಮಾನಿಗಳಿಗೆ ಗಾಯದ ಮೇಲೆ…
ನಾಳೆ ಕನಕದಾಸರ ಜಯಂತ್ಯುತ್ಸವ
November 27, 2018ಮೈಸೂರು: ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿ ವತಿಯಿಂದ ನ.28ರಂದು ಶ್ರೀ ಭಕ್ತ ಕನಕದಾಸರ 531ನೇ ಜಯಂತ್ಯುತ್ಸವ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 9ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಿಂದ ಸಭಾ ಕಾರ್ಯಕ್ರಮ ನಡೆಯಲಿ ರುವ ಜಗನ್ಮೋಹನ ಅರಮನೆವರೆಗೆ ಶ್ರೀ ಕನಕದಾಸರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಪ್ರತಿಷ್ಠಾಪಿಸಲಾಗುವುದು. ಕೆ.ಆರ್.ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ, ಚಾಮರಾಜ ಜೋಡಿ ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ರಮಾವಿಲಾಸ ರಸ್ತೆಗಳಲ್ಲಿ ಮೆರವಣಿಗೆ ಸಾಗಲಿದೆ.ಜಗನ್ಮೋಹನ ಅರಮನೆಯಲ್ಲಿ ಅಂದು ಸಂಜೆ 4ಕ್ಕೆ,…