ಶ್ರೀ ಶ್ರೀಕಂಠೇಶ್ವಸ್ವಾಮಿ ವಿಜೃಂಭಣೆ ತೆಪ್ಪೋತ್ಸವ
ಮೈಸೂರು

ಶ್ರೀ ಶ್ರೀಕಂಠೇಶ್ವಸ್ವಾಮಿ ವಿಜೃಂಭಣೆ ತೆಪ್ಪೋತ್ಸವ

November 27, 2018

ನಂಜನಗೂಡು: ಚಿಕ್ಕ ಜಾತ್ರಾ ಅಂಗವಾಗಿ ನಗರದ ಪ್ರಸಿದ್ಧ ಶ್ರೀ ಶ್ರೀಕಂಠೇ ಶ್ವರಸ್ವಾಮಿ ತೆಪ್ಪೋತ್ಸವವು ಇಂದು ಸಂಜೆ ಕಪಿಲಾನದಿಯ ತೇಲುವ ಮಂಟಪ ದಲ್ಲಿ ವೈಭವಯುತವಾಗಿ ಜರುಗಿತು.

ಸಂಜೆ 7.20ಕ್ಕೆ ದೇಗುಲದ ಪ್ರಧಾನ ಅರ್ಚಕ ಸಿ.ನಾಗಚಂದ್ರ ದೀಕ್ಷಿತ್ ಅವರು ಹೊವಿನಲಂಕಾರ, ವಜ್ರ ಖಚಿತ ಆಭರಣ ಗಳಿಂದ ಸಿಂಗರಿಸಿದ್ದ ಸ್ವಾಮಿಯವರ ಉತ್ಸವ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ ಶ್ರೀಕಂಠೇಶ್ವರಸ್ವಾಮಿಯವರ ಉತ್ಸವ ಮೂರ್ತಿಯನ್ನು ವಿದ್ಯುತ್ ದೀಪದಿಂದ ಅಲಂಕೃತಗೊಂಡಿದ್ದ ತೆಲುವ ಮಂಟಪ ದಲ್ಲಿ ಇರಿಸಿ ನದಿಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ಮಾಡಲಾಯಿತು.

ಈ ವೈಭವ ಕಣ್ತುಂಬಿಕೊಂಡ ಸಾವಿ ರಾರು ಭಕ್ತಾದಿಗಳು ಭಕ್ತಿ ಪರವಶರಾದರು. ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ರೇವಣ್ಣ ಸಿದ್ದಯ್ಯ, ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಟ್ಟಲಿಂಗ ಶೆಟ್ಟಿ, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ, ಇಓ ಗಂಗಯ್ಯ, ಇನ್ನೂ ಅನೇಕ ಗಣ್ಯರಿದ್ದರು.

Translate »