ಜಿಲ್ಲಾ ಬ್ರಾಹ್ಮಣ ಸಮಾವೇಶ ಪೂರ್ವಭಾವಿ ಸಭೆ
ಮೈಸೂರು

ಜಿಲ್ಲಾ ಬ್ರಾಹ್ಮಣ ಸಮಾವೇಶ ಪೂರ್ವಭಾವಿ ಸಭೆ

November 27, 2018

ಹುಣಸೂರು: ಮೈಸೂರು ನಗರದ ಶ್ರೀ ಗಣಪತಿ ಸಚ್ಚಿದಾ ನಂದ ಸ್ವಾಮಿಗಳ ಆಶ್ರಮದಲ್ಲಿ ಡಿ.15 ಮತ್ತು 16 ರಂದು ಎರಡು ದಿನಗಳ ಕಾಲ ಜಿಲ್ಲಾ ಬ್ರಾಹ್ಮಣ ಸಮಾವೇಶ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರರು ಭಾಗವಹಿ ಸುವಂತೆ ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮನವಿ ಮಾಡಿದರು.

ನಗರದ ಬ್ರಾಹ್ಮಣರ ಬಡಾವಣೆಯ ಶ್ರೀರಾಘವೇಂದ್ರಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯದಲ್ಲಿ ಸಾಕಷ್ಟು ಮಂದಿ ಬಿಪಿಎಲ್ ರೇಖೆಗಿಂತ ಕೆಳಗಿನವರಿದ್ದರೂ ಸಹ ಮುಂದುವರೆದ ಜನಾಂಗವೆಂಬ ಹಣೆಪಟ್ಟಿ ಕಟ್ಟಿದ್ದರಿಂದಾಗಿ ಸೌಲಭ್ಯಗಳಿಂದ ವಂಚಿತ ರಾಗಿದ್ದೇವೆ. ದೇಶದಲ್ಲಿ ಎಲ್ಲಾ ಸಮು ದಾಯಗಳು ಸಂಘಟಿತರಾಗುವ ಮೂಲಕ ಓಟ್‍ಬ್ಯಾಂಕ್ ಆಗಿ ಪರಿವರ್ತನೆಗೊಂಡಿ ರುವುದರಿಂದಾಗಿ ಸರ್ಕಾರಗಳು ಆ ಸಮು ದಾಯಗಳಿಗೆ ಸೌಲಭ್ಯ ನೀಡುತ್ತಿವೆ, ಅನಾದಿ ಕಾಲದಿಂದಲೂ ದೇಶಕ್ಕೆ ಸಾಕಷ್ಟು ಕೊಡುಗೆ ನೀಡುತ್ತಾ ಬಂದಿರುವ ಬ್ರಾಹ್ಮಣ ಸಮು ದಾಯದವರು ಸಂಘಟನೆಯಲ್ಲಿ ಹಿಂದುಳಿ ದಿದ್ದು, ಆ ದೃಷ್ಟಿಯಿಂದ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಆಯೋಜಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗ ಬೇಕಿದೆ ಎಂದು ತಿಳಿಸಿದರು.

ಸಭಾದ ಉಪಾಧ್ಯಕ್ಷ ಶಂಕರನರಾಯಣ ಮಾತನಾಡಿ, ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಡಿ.15 ಮತ್ತು 16 ರಂದು ಎರಡು ದಿನಗಳ ಕಾಲ ನಡೆಯ ಲಿರುವ ಸಮಾವೇಶವು ಮುಂಜಾನೆ 6 ರಿಂದ ರಾತ್ರಿ 10ರ ವರೆಗೆ ನಿರಂತರವಾಗಿ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳಿಂದಲೂ ಉಚಿತ ವಾಗಿ ವಾಹನ ಸೌಕರ್ಯ ಕಲ್ಪಿಸಲು ಸಮ್ಮತಿ ಸಿದ್ದು, ಆಶ್ರಮದಲ್ಲಿ ವಸತಿ ವ್ಯವಸ್ಥೆ ಕಲ್ಪಿಸ ಲಾಗಿದೆ. ಯತಿವರ್ಯರಿಂದ ಆಶೀರ್ವಚನ, ಪ್ರತಿಭಾ ಪುರಸ್ಕಾರ, ಸಮಾಜದ ಹಿರಿಯರಿಗೆ ಗೌರವ ಸಮರ್ಪಣೆ ನೆರವೇರಿಸಲಾಗುವುದು. ಸಮಾವೇಶದ ಅಂಗವಾಗಿ ಡಿ.15ರಂದು ನಗರದ ಯೋಗಾನರಸಿಂಹಸ್ವಾಮಿ ದೇಗುಲ ದಿಂದ ಆಶ್ರಮದವರೆಗೆ ಬೈಕ್ ರ್ಯಾಲಿ ಆಯೋ ಜಿಸಲಾಗಿದೆ ಎಂದರು. ಇದೇ ವೇಳೆ ಸಮಾವೇಶದ ಪೋಷ್ಟರ್ ಬಿಡುಗಡೆ ಮಾಡಲಾಯಿತು. ತಾಲೂಕು ವಿಪ್ರ ವನಿತಾ ಪ್ರತಿಷ್ಠಾನ ಅಧ್ಯಕ್ಷೆ ಸತ್ಯವತಿ, ಕಾರ್ಯದರ್ಶಿ ಕಮಲಾ, ಸಾವಿತ್ರಿ ಸಂಪತ್, ಸಮಾವೇಶದ ಕಾರ್ಯಾಧ್ಯಕ್ಷ ಗೋಪಾಲರಾವ್, ಸ್ಮರಣ ಸಂಚಿಕೆ ಸಂಪಾದಕ ಡಿ.ಎನ್.ಕೃಷ್ಣಮೂರ್ತಿ, ಸಂಯೋಜಕರಾದ ಹರೀಶ್, ಜಗದೀಶ್ ವೇಣುಗೋಪಾಲ್ ಸೇರಿದಂತೆ ಅನೇಕರಿದ್ದರು.

Translate »