ರಾಜ್ಯಮಟ್ಟದ ಪಿಯು ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ ಸಮಾಪನ
ಮೈಸೂರು

ರಾಜ್ಯಮಟ್ಟದ ಪಿಯು ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ ಸಮಾಪನ

November 27, 2018

ಮೈಸೂರು:  ಮೈಸೂ ರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ 4 ದಿನಗಳ ಕಾಲ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿ ಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಆಟ ಪ್ರದರ್ಶಿಸಿದ ದಕ್ಷಿಣ ಕನ್ನಡ ತಂಡ `ಸಮಗ್ರ ಪ್ರಶಸ್ತಿ’ ತಮ್ಮದಾಗಿಸಿಕೊಂಡಿತು.

ಪದವಿ ಪೂರ್ವ ಶಿಕ್ಷಣ ಇಲಾಖೆ, ವಿಜಯ ವಿಠಲ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಬಾಲಕ-ಬಾಲಕಿಯರ ವಿಭಾಗದಲ್ಲಿ ಕ್ರಮವಾಗಿ 90 ಮತ್ತು 82 ಅಂಕ ಗಳಿಸಿದ ದಕ್ಷಿಣ ಕನ್ನಡ ತಂಡ ಸಮಗ್ರ ಪ್ರಶಸ್ತಿ ಪಡೆಯಿತು.

ವಿಜೇತರ ಪಟ್ಟಿ ಇಂತಿದೆ: ಬಾಲಕರ ವಿಭಾಗ: ಶಾಟ್‍ಪುಟ್: ದಕ್ಷಿಣ ಕನ್ನಡದ ಸೌರವ್ ತನ್ವರ್(ಪ್ರ), ನಾಗೇಂದ್ರ ಅಣ್ಣಪ್ಪ ನಾಯ್ಕ (ದ್ವಿ), ಬೆಂಗಳೂರು ದಕ್ಷಿಣದ ಬಾಲಕುಂಡಿ ಕಾರ್ತಿಕ್(ತೃ). 1500 ಮೀ.ಓಟ: ದಕ್ಷಿಣ ಕನ್ನಡದ ಎಂ.ಸಿ.ಮಿಲನ್(ಪ್ರ), ಬೆಂಗ ಳೂರು ದಕ್ಷಿಣದ ಶ್ರೀಶೈಲ(ದ್ವಿ), ಚಿಕ್ಕೋ ಡಿಯ ಅಸ್ಲಮ್ ಮುಲ್ತಾನಿ(ತೃ). 4×100 ಮೀ. ರಿಲೆ: ಉಡುಪಿ(ಪ್ರ), ದಕ್ಷಿಣ ಕನ್ನಡ(ದ್ವಿ), ಬೆಂಗಳೂರು ದಕ್ಷಿಣ(ತೃ).

ಹೈ ಜಂಪ್: ಬೆಂಗಳೂರು ದಕ್ಷಿಣದ ಪಿ.ಯಶಸ್(ಪ್ರ), ದಕ್ಷಿಣ ಕನ್ನಡದ ಸೃಜನ್ ಜನಾರ್ಧನ್(ದ್ವಿ), ಉಡುಪಿಯ ಥಾಮಸ್ ರೋಮಾರಿಯೋ ಡಿಸೋಜ(ತೃ). 100 ಮೀ.ಓಟ: ಬೆಂಗಳೂರು ದಕ್ಷಿಣದ ಶಶಿ ಕಾಂತ್ ವಿ.ಅಂಗಡಿ(ಪ್ರ), ಉಡುಪಿಯ ಹೆಚ್. ಮಣಿಕಂಠ(ದ್ವಿ), ದಕ್ಷಿಣ ಕನ್ನಡದ ಎಲ್.ಕೆ. ಅಭಿಷೇಕ್(ತೃ). ಓಟದ ನಡಿಗೆ: ದಕ್ಷಿಣ ಕನ್ನಡದ ಡಿ.ದೇವರಾಜು(ಪ್ರ), ದೀಕ್ಷಿತ್ (ದ್ವಿ), ಧಾರವಾಡದ ಪ್ರವೀಣ್ ಬಸಪ್ಪ(ತೃ). 4×400 ಮೀ.ರಿಲೇ: ದಕ್ಷಿಣ ಕನ್ನಡ(ಪ್ರ), ಉಡುಪಿ(ದ್ವಿ), ಬೆಂಗಳೂರು ದಕ್ಷಿಣ(ತೃ).
ಬಾಲಕಿಯರ ವಿಭಾಗ: ಶಾಟ್‍ಪುಟ್: ಚಿಕ್ಕೋಡಿಯ ದಿವ್ಯಾಶ್ರೀ(ಪ್ರ), ದಕ್ಷಿಣ ಕನ್ನಡದ ಅಕ್ಷತಾ ಪ್ರಭುಲಿಂಗ ಬರ್ಲಿ(ದ್ವಿ), ಧಾರವಾಡದ ತರ್ಜಿನ್ ಎಂ.ಸೌದಗರ್ (ತೃ). ಹೈ ಜಂಪ್: ಬೆಂಗಳೂರು ಉತ್ತರದ ಹೆಚ್.ಜಿ.ಕವನ(ಪ್ರ), ದಕ್ಷಿಣ ಕನ್ನಡದ ಫ್ಲಾರಿಷ್ ವೆಲಿಕ ಮಾಂಟೆರೊ(ದ್ವಿ), ಪಲ್ಲವಿ ಪಾಟೀಲ್(ತೃ).

4×100 ಮೀ.ರಿಲೇ: ಮೈಸೂರು(ಪ್ರ), ಉಡುಪಿ(ದ್ವಿ), ದಕ್ಷಿಣ ಕನ್ನಡದ(ತೃ). 100 ಮೀ ಓಟ: ದಕ್ಷಿಣ ಕನ್ನಡದ ಜೋಶ್ನ ಸಿಮೋವ್ ಮಂಗಳವಡಕರ್(ಪ್ರ), ವರ್ಷ (ದ್ವಿ), ಮೈಸೂರಿನ ಆರ್.ಹರ್ಷಿಣಿ(ತೃ). ಓಟದ ನಡಿಗೆ: ದಕ್ಷಿಣ ಕನ್ನಡದ ಜಿ.ಧನುಷ ಶೆಟ್ಟಿ(ಪ್ರ), ಚಿಕ್ಕೊಡಿಯ ಚೈತ್ರ ಐ.ಕಲ್ಯಾಣಿ (ದ್ವಿ), ಉಡುಪಿಯ ರಕ್ಷ ಆಂಚನ್(ತೃ) ಬಹುಮಾನ ಪಡೆದುಕೊಂಡರು.
ಅಲ್ಲದೆ, ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡದ ಜೋಶ್ನ, ಬೆಂಗಳೂರು ಉತ್ತ ರದ ಅರ್ಪಿತಾ ಮತ್ತು ಬೆಂಗಳೂರು ದಕ್ಷಿ ಣದ ದೀಪಾಂಕ ಸಿಂಗ್ ಹಾಗೂ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣದ ನವೀನ್, ದಕ್ಷಿಣ ಕನ್ನಡದ ಮಿಲನ್ ಅವರು `ವೈಯ ಕ್ತಿಕ ಪ್ರಶಸ್ತಿ’ ಪಡೆದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇ ಗೌಡ ಬಹುಮಾನ ವಿತರಿಸಿ ಮಾತನಾಡಿ, ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಡಿ.8ರಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಅಭಿನಂದಿ ಸಲಿದ್ದು, ಈ ವೇಳೆ ಎಲ್ಲಾ ಉಪನ್ಯಾಸಕರು ಪಾಲ್ಗೊಂಡು ಬೇಡಿಕೆ, ಶೈP್ಷÀಣಿಕ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ದಯಾನಂದ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಕೆ.ರಾಮು, ಮೈಸೂರು ವಿವಿ ದೈಹಿಕ ಶಿP್ಷÀಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಜಿಲ್ಲಾ ಪಿಯು ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯP್ಷÀ ಎಸ್.ಎಂ.ತುಳಸಿದಾಸ್, ಕ್ರೀಡಾ ಸಮಿತಿ ಸಂಚಾಲಕ ನಾಗಮಲ್ಲೇಶ್, ದೈಹಿಕ ಶಿಕ್ಕ್ಷಿಣ ಉಪನ್ಯಾಸಕರ ಸಂಘದ ಅಧ್ಯP್ಷÀ ಬಸವರಾಜು, ವಿಜಯ ವಿಠಲ ಪಿಯು ಕಾಲೇಜು ಪ್ರಾಚಾರ್ಯ ಹೆಚ್.ಸತ್ಯಪ್ರಸಾದ್ ಮತ್ತಿತರರಿದ್ದರು.

Translate »