ಮೈಸೂರು: ಇಂದು ಗ್ರಾಹಕರು ಎಚ್ಚೆತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ವಂತ ಪೈಪೋಟಿಗೆ ವ್ಯಾಪಾರಿಗಳು ಮುಂದಾ ಗಿದ್ದು, ಗುಣಾತ್ಮಕ ಆಹಾರ ಪದಾರ್ಥ ಗಳನ್ನು ನೀಡುತ್ತಿದ್ದಾರೆ. ಅದೇ ರೀತಿ ಮೀನು ಗಾರಿಕೆ ವ್ಯಾಪಾರವು ಇನ್ನಷ್ಟು ಅಭಿವೃದ್ಧಿ ಕಾಣಬೇಕಾಗಿದೆ ಎಂದು ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ. ರಾಜೀವ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಸಹಕಾರ ಭವನದ ಆವ ರಣದಲ್ಲಿ 65ನೇ ಅಖಿಲ ಭಾರತ ಸಹ ಕಾರ ಸಪ್ತಾಹದ ಉದ್ಘಾಟನಾ ಸಮಾ ರಂಭದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಸಹಕಾರಿ ಮಾರಾಟ,…
ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಆರಂಭ
November 15, 2018ಮೈಸೂರು: ಶಾಲೆಯಿಂದ ಹೊರಗುಳಿದ ಮಕ್ಕಳ ವಿಸ್ತøತ ಸಮೀಕ್ಷಾ ಕಾರ್ಯ ಇಂದಿನಿಂದ ರಾಜ್ಯಾದ್ಯಂತ ಆರಂಭ ವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕಿ ಮಮತಾ ತಿಳಿಸಿದ್ದಾರೆ. ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳ ನಿಖರ ಸಂಖ್ಯೆ, ಕಾರಣವನ್ನು ತಿಳಿಯಲೆಂದು ಪರಿ ಣಾಮಕಾರಿಯಾಗಿ ಸಮೀಕ್ಷೆ ನಡೆಸಲು ಮಕ್ಕಳ ಗ್ರಾಮಸಭೆ, ವಾರ್ಡ್ ಸಭೆಗಳನ್ನು ನಡೆಸುವುದಲ್ಲದೆ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಅವರು ತಿಳಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ,…
ಬೆಂಗಳೂರಲ್ಲಿ ಸಭೆ ನಡೆಸಿದ ಶೋಧ ಸಮಿತಿ
November 15, 2018ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ನೇಮಕ ಸಂಬಂಧ ಶೋಧನಾ ಸಮಿತಿಯು ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲ ಯದ ವಿಶ್ರಾಂತ ಕುಲಪತಿ ಪ್ರೊ. ಕೆ.ನಾರಾಯಣಗೌಡರ ನೇತೃತ್ವದ ಶೋಧನಾ ಸಮಿತಿಯ ಸದಸ್ಯರಾದ ಪ್ರೊ. ಬಿ.ಸಿ. ಚಪ್ಪರ್‍ವಾಲ್, ಪ್ರೊ. ಎಂ.ಜಗದೀಶ್‍ಕುಮಾರ್, ಪ್ರೊ. ಎಸ್.ಚಂದ್ರಶೇಖರ್ ಅವರು ಮಂಗಳ ವಾರ ಬೆಂಗಳೂರಿನ ಬಹುಮಹಡಿ ಗಳ ಕಟ್ಟಡದ ಉನ್ನತ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಸಭೆ ನಡೆಸಿದರು. ಕುಲಪತಿ ಸ್ಥಾನಕ್ಕೆ ಒಟ್ಟು 82 ಮಂದಿ ಪ್ರಾಧ್ಯಾಪಕರು ಅರ್ಜಿ ಸಲ್ಲಿಸಿದ್ದು, ಆ ಪೈಕಿ ಮೈಸೂರು ವಿಶ್ವವಿದ್ಯಾನಿಲಯದ ಪ್ರೊ….
ಪಂಚಭೂತಗಳಲ್ಲಿ ಅನಂತಕುಮಾರ್ ಲೀನ
November 14, 2018ಬೆಂಗಳೂರು: ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಅನಂತಕುಮಾರ್ ಅವರ ಪಾರ್ಥಿವ ಶರೀರ ಮಂಗಳವಾರ ಮಧ್ಯಾಹ್ನ ಪಂಚಭೂತಗಳಲ್ಲಿ ಲೀನವಾಯಿತು. ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಮುಂಜಾನೆ ಕೊನೆಯುಸಿರೆಳೆದಿದ್ದ ಅನಂತಕುಮಾರ್ ಅವರ ಅಂತ್ಯಕ್ರಿಯೆ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನೆರವೇರಿತು. ಋಗ್ವೇದ ಆಶ್ವಲಾಯನ ಸ್ಮಾರ್ತ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳು ನಡೆದವು. ಅನಂತಕುಮಾರ್ ಅವರ ಸೋದರ ನಂದಕುಮಾರ್, ಪುರೋಹಿತ ಶ್ರೀನಾಥ್ ಮಾರ್ಗದರ್ಶನದಲ್ಲಿ ವಿಧಿ-ವಿಧಾನ ನೆರವೇರಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. 45 ನಿಮಿಷಗಳ ಕಾಲ ಈ ಪ್ರಕ್ರಿಯೆಗಳು ನಡೆದವು. ಸರ್ಕಾರಿ…
ಇಂದಿನಿಂದ ರೈತರೊಂದಿಗೆ ಮುಖ್ಯಮಂತ್ರಿ ನೇರ ಸಂವಾದ
November 14, 2018ಬೆಂಗಳೂರು ನ.13 : ಗ್ರಾಮೀಣ ಜನತೆಯ ಸಮಸ್ಯೆಯನ್ನು ಸ್ಥಳ ದಲ್ಲೇ ಆಲಿಸಿ, ರೈತರ ಸಂಕಷ್ಟಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆಯಿಂದ ರೈತರೊಟ್ಟಿಗೆ ನೇರ ಸಂವಾದ ನಡೆಸಲಿದ್ದಾರೆ. ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿ, ಇಸ್ರೇಲ್ ಪದ್ಧತಿಯನ್ನು ಅನುಷ್ಠಾನಗೊಳಿಸಿ, ಅಲ್ಪ ವೆಚ್ಚದಲ್ಲಿ ಹೆಚ್ಚು ಬೆಳೆ ತೆಗೆಯುವ ಸಂಬಂಧ ಮುಖ್ಯಮಂತ್ರಿಯವರೇ ಖುದ್ದಾಗಿ ರೈತರಿಗೆ ಮನವರಿಕೆ ಮಾಡಿಕೊಡುವುದೇ ಸಂವಾದದ ಉದ್ದೇಶ. ಸ್ಥಳೀಯ ಸಮಸ್ಯೆಗಳನ್ನು ಆಲಿಸುವು ದರ ಜೊತೆಗೆ ರೈತರ ಕಷ್ಟಗಳಿಗೆ ಸ್ಥಳದಲ್ಲಿಯೇ ಸ್ಪಂದಿಸುವುದು ಒಂದೆಡೆಯಾದರೆ, ಸರ್ಕಾರದ ಯೋಜನೆಗಳನ್ನು ಬಳಕೆ ಮಾಡಿ ಹೆಚ್ಚು…
ಛಾವಣಿ ಮೇಲೇರಿ ಮಾಲೀಕನಿಂದ ಆತ್ಮಹತ್ಯೆ ಬೆದರಿಕೆ
November 14, 2018ಮೈಸೂರು: ನಿಯಮ ಉಲ್ಲಂಘಿಸಿ ನಿರ್ಮಿಸುತ್ತಿದ್ದ ಕಟ್ಟಡ ನೆಲಸಮಗೊಳಿಸಲು ಸಕಲ ಸಲಕರಣೆಗಳು, ಗ್ಯಾಂಗ್‍ಮನ್‍ಗಳೊಂದಿಗೆ ವೀರಾವೇಶದಿಂದ ತೆರಳಿದ್ದ ಮುಡಾ ಮತ್ತು ಪಾಲಿಕೆ ಅಧಿಕಾರಿಗಳು, ಮಾಲೀಕ ಛಾವಣಿ ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ ಕಾರಣಕ್ಕೆ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿದ ಪ್ರಸಂಗ ಮೈಸೂರಿನ ರಾಜೀವ್‍ನಗರ 2ನೇ ಹಂತದ ದೇವನೂರು ಕೆರೆ ಸಮೀಪ ಮಂಗಳವಾರ ಬೆಳಿಗ್ಗೆ ನಡೆಯಿತು. ಪೂರ್ವ ಯೋಜನೆ, ಸರಿಯಾದ ಸಿದ್ಧತೆ, ಭದ್ರತಾ ವ್ಯವಸ್ಥೆ ಮಾಡಿಕೊಳ್ಳದೇ ಕಟ್ಟಡ ನೆಲಸಮ ಮಾಡಲು ಹೋದ ಅಧಿಕಾರಿಗಳು, ಮಾಲೀಕ ಸುಮಾರು 20 ಅಡಿ ಎತ್ತರದ…
ಇಂದು ಜನಾರ್ಧನ ರೆಡ್ಡಿ ಜಾಮೀನು ಅರ್ಜಿ ಆದೇಶ
November 14, 2018ಬೆಂಗಳೂರು: ಆಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಜಾಮೀನು ಅರ್ಜಿ ಕಾಯ್ದಿರಿಸಲಾಗಿದೆ. ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾ ಲಯ ವಿಚಾರಣೆ ಮುಕ್ತಾಯ ಮಾಡಿ ನಾಳೆಗೆ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದೆ. ಹೀಗಾಗಿ ಮಂಗಳವಾರವೂ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಬೇಕಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ 1ನೇ ಎಸಿಎಂಎಂ ಕೋರ್ಟ್‍ನ ನ್ಯಾಯಾಧೀಶ ಜಗದೀಶ್ ವಾದ-ಪ್ರತಿವಾದ ಆಲಿಸಿ, ನಾಳೆಗೆ ಜಾಮೀನು ಅರ್ಜಿ ಆದೇಶ ನೀಡುವುದಾಗಿ ತಿಳಿಸಿದರು. ಇದರಿಂದ ಜನಾರ್ದನ ರೆಡ್ಡಿ ಮೂರನೇ ದಿನವೂ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕಳೆಯಬೇಕಾಗಿದೆ….
ಸಾವಯವ ಕೃಷಿಯತ್ತ ಮರಳದಿದ್ದರೆ ಮನುಷ್ಯ ವೈದ್ಯಕೀಯ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ
November 14, 2018ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಕಳವಳ ಮೈಸೂರು: ಪ್ರಸ್ತುತ ದಿನಗಳಲ್ಲಿ ಮಾನವ ಸಂಕುಲ ಸಾವಯವ ಕೃಷಿಯತ್ತ ಮುಖಮಾಡದೆ ಹೋದರೆ ಮುಂದಿನ ದಿನಗಳಲ್ಲಿ ವೈದ್ಯಕೀಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಕಳವಳ ವ್ಯಕ್ತಪಡಿಸಿದರು. ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಹಾ.ಮಾ.ನಾ. ಪ್ರತಿಷ್ಠಾನದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಡಾ.ಹಾ.ಮಾ.ನಾಯಕ ಸ್ಮಾರಕ ಉಪನ್ಯಾಸ ಕಾರ್ಯ ಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದೆ ಪ್ರತಿ ಹಳ್ಳಿಯಲ್ಲಿ ಕೆರೆ ಕಟ್ಟೆಗಳಿದ್ದವು. ಮಳೆಯ ನೀರು ಕಟ್ಟೆಗಳಲ್ಲಿ ಶೇಖರಣೆಯಾಗಿ…
ನದಿಗಳ ಜೋಡಣೆಗೆ ಮುಂದಾಗುವುದು ಅಪರಾಧ ಪರಿಸರ ತಜ್ಞ ಡಾ.ಎ.ಎನ್.ಯಲ್ಲಪ್ಪರೆಡ್ಡಿ ಎಚ್ಚರಿಕೆ
November 14, 2018ಮೈಸೂರು: ನದಿಗಳನ್ನು ಮನುಷ್ಯ ಸೃಷ್ಟಿಸಿಲ್ಲ. ಹಾಗಾಗಿ ನೈಸರ್ಗಿಕವಾಗಿ ಹರಿಯು ತ್ತಿರುವ ನದಿಗಳ ಜೋಡಣೆಗೆ ಮುಂದಾಗುವುದು ಮಹಾಪರಾಧ ಎಂದು ಖ್ಯಾತ ಪರಿಸರ ತಜ್ಞ ಡಾ.ಎ.ಎನ್. ಯಲ್ಲಪ್ಪರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಹಾ.ಮಾ.ನಾ. ಪ್ರತಿಷ್ಠಾನದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಡಾ.ಹಾ.ಮಾ.ನಾಯಕ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ `ಭಾರತದ ಪ್ರಸ್ತುತ ಸಾಮಾಜಿಕ ಮತ್ತು ಪರಿಸರ ವಿದ್ಯಮಾನಗಳು’ ವಿಷಯ ಕುರಿತು ಮಾತನಾಡಿದ ಅವರು, ನದಿ ಜೋಡಣೆ ಮತ್ತು ನದಿ ತಿರುಗಿಸುವಿಕೆ ಪರಿಸರ ವಿರೋಧಿಯಾಗಿದೆ. ನದಿಗಳು ಎಲ್ಲಿ…
ಮಾರಕಾಸ್ತ್ರಗಳಿಂದ ಹಲ್ಲೆ: ಮೂವರ ಬಂಧನ
November 14, 2018ಮೈಸೂರು: ಸ್ನೇಹಿತೆಯನ್ನು ಗುರಾಯಿಸಿದನೆಂದು ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ 6 ಮಂದಿ ಪೈಕಿ ಮೂವರನ್ನು ಮೈಸೂರಿನ ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಕೀರ್ತಿ, ರಾಜು ಮತ್ತು ಮೋಕ್ಷನ್ ಬಂಧಿತರು. ನ.7 ರಂದು ರಾತ್ರಿ ಸತ್ಯನಗರದ ಆರ್.ಕೆ.ಪ್ಯಾಲೇಸ್ ಎದುರಿನ ಚಹಾ ಅಂಗಡಿಯಲ್ಲಿ ವಿನಯ್ ಮತ್ತು ಸ್ನೇಹಿತರು ಚಹಾ ಸೇವಿಸುತ್ತಿದ್ದರು. ಈ ವೇಳೆ ಆರೋಪಿ ಕೀರ್ತಿ ಮತ್ತು ಸ್ನೇಹಿತರು ಗುಂಪಾಗಿ ಬಂದು ವಿನಯ್ ಬಳಿ ತನ್ನ ಸ್ನೇಹಿತೆ ಯನ್ನು ಏಕೆ ಗುರಾಯಿಸಿದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ…