ಮೈಸೂರು

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು
ಮೈಸೂರು

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

November 14, 2018

ಮೈಸೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗಿದೆ ಸೋಮವಾರ ಮೃತಪಟ್ಟಿದ್ದಾರೆ. Death of an injured personಮೈಸೂರಿನ ರಿಂಗ್ ರಸ್ತೆ ಭಾರತ್ ಕ್ಯಾನ್ಸರ್ ಆಸ್ಪತ್ರೆ ಸಮೀಪ ನ.9 ರಂದು ಬೈಕ್, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದ ತಮಿಳು ನಾಡಿನ ವಿಘ್ನೇಶ್ ಕುಮಾರ್ ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೇ ಮೃತಪಟ್ಟಿದ್ದಾರೆ ಎಂದು ವಿವಿಪುರಂ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬಟ್ಟೆ ಅಂಗಡಿಯಲ್ಲಿ 3.42 ಲಕ್ಷ ನಗದು ಕಳವು
ಮೈಸೂರು

ಬಟ್ಟೆ ಅಂಗಡಿಯಲ್ಲಿ 3.42 ಲಕ್ಷ ನಗದು ಕಳವು

November 14, 2018

ಮೈಸೂರು:  ಬಟ್ಟೆ ಅಂಗಡಿಯೊಂದರ ಮೇಲ್ಛಾವಣಿ ಶೀಟ್ ತೆಗೆದು ಒಳ ನುಗ್ಗಿರುವ ಖದೀಮರು, ಲಾಕರ್‍ನಲ್ಲಿದ್ದ ಸುಮಾರು 3.42 ಲಕ್ಷ ರೂ. ಹಣವನ್ನು ದೋಚಿರುವ ಘಟನೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ದೇವರಾಜ ಅರಸು ರಸ್ತೆಯಲ್ಲಿರುವ ಶೋ ಆಫ್ ಬಟ್ಟೆ ಅಂಗಡಿ, ಮೂರನೇ ಮಹಡಿಯ ಮೇಲ್ಛಾವಣಿ ಶೀಟ್ ತೆಗೆದು ಒಳಗಿಳಿದಿರುವ ಖದೀಮರು, ಶೌಚಾಲಯದ ಗಾಜು ತೆಗೆದು ಅಂಗಡಿ ಒಳ ಆವರಣದಲ್ಲಿದ್ದ ಲಾಕರ್ ಮುರಿದು ಅದರಲ್ಲಿದ್ದ 3,42130ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಲಾಕರ್ ಅನ್ನು ಮೇಲಂತಸ್ತಿಗೆ ತೆಗೆದುಕೊಂಡು…

ಮನೆ ಬಾಗಿಲು ಮೀಟಿ ಚಿನ್ನಾಭರಣ, ನಗದು ಕಳವು
ಮೈಸೂರು

ಮನೆ ಬಾಗಿಲು ಮೀಟಿ ಚಿನ್ನಾಭರಣ, ನಗದು ಕಳವು

November 14, 2018

ಮೈಸೂರು: ಮನೆಯ ಬಾಗಿಲು ಮೀಟಿ, ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿರುವ ಘಟನೆ ಮೈಸೂರಿನ ಅರವಿಂದನಗರದಲ್ಲಿ ನಡೆದಿದೆ. ಅರವಿಂದನಗರ 2ನೇ ಹಂತದ 1ನೇ ಕ್ರಾಸ್ ನಿವಾಸಿ ಸಿ.ಸುನಿಲ್ ಕುಮಾರ್ ಮನೆಯಲ್ಲಿ ಕಳ್ಳತನವಾಗಿದೆ. ಕ್ಯಾಲಿಕಟ್ ಮೂಲದ ಸುನಿಲ್, ನ.9ರಂದು ಊರಿಗೆ ತೆರಳಿದ್ದರು. ನ.12 ರಂದು ಅವರು ವಾಪಸ್ಸಾದಾಗ ಮನೆಯ ಮುಂಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ, ತೆರೆದಿದ್ದು ಬೆಳಕಿಗೆ ಬಂದಿತು. ಒಳಹೋಗಿ ನೋಡಿದಾಗ ಕೊಠಡಿಯಲ್ಲಿದ್ದ ಬೀರು ವನ್ನು ಒಡೆದು, 3 ಸಾವಿರ ಮೌಲ್ಯದ ಬೆಳ್ಳಿಯ ಕಾಲುಗೆಜ್ಜೆ, 14…

ಅನಂತಕುಮಾರ್ ಕೇಂದ್ರ ಸಚಿವ ಇನ್ನಿಲ್ಲ
ಮೈಸೂರು

ಅನಂತಕುಮಾರ್ ಕೇಂದ್ರ ಸಚಿವ ಇನ್ನಿಲ್ಲ

November 13, 2018

ಬೆಂಗಳೂರು:  ಕರ್ನಾಟಕದಲ್ಲಿ ಬಿಜೆಪಿಯ ಬೇರಿಗೆ ನೀರೆರೆದು ಪೋಷಿಸಿದ ಕೇಂದ್ರ ಸಚಿವ ಅನಂತಕುಮಾರ್ (59) ಇಂದಿಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಶ್ವಾಸಕೋಶ ಕ್ಯಾನ್ಸರ್‍ನಿಂದ ತೀವ್ರವಾಗಿ ಬಳಲುತ್ತಿದ್ದ ಅವರು ಇಂದು ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಪತ್ನಿ ತೇಜಸ್ವಿನಿ, ಮಕ್ಕಳಾದ ಐಶ್ವರ್ಯ, ವಿಜೇತ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿರುವ ಅನಂತಕುಮಾರ್ ಕಳೆದ 1996 ರಿಂದ ಸತತ ವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕ ಸಭೆಗೆ ಆಯ್ಕೆಯಾಗಿ ಉಭಯ ಸರ್ಕಾರ ಹಾಗೂ ಪಕ್ಷದಲ್ಲಿ ದೆಹಲಿ ಮತ್ತು ಕರ್ನಾಟಕದ ಕೊಂಡಿ…

ಎಂಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಜಿ.ಡಿ.ಹರೀಶ್‍ಗೌಡರ ಬಣ ಜಯಭೇರಿ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಜಿ.ಡಿ.ಹರೀಶ್‍ಗೌಡರ ಬಣ ಜಯಭೇರಿ

November 13, 2018

ಮೈಸೂರು: ಪ್ರತಿಷ್ಟಿತ ಮೈಸೂರು ಮತ್ತು ಚಾಮರಾಜನಗರ ಸಹಕಾರ ಕೇಂದ್ರ(ಎಂಸಿಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರ ಪುತ್ರ, ಜಿ.ಡಿ.ಹರೀಶ್‍ಗೌಡರ ಬಣ ಭರ್ಜರಿ ಜಯಭೇರಿ ಭಾರಿಸಿದೆ. ಹಾಲಿ ಅಧ್ಯಕ್ಷ ಎಸ್.ಚಂದ್ರಶೇಖರ್ ಭಾರೀ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಮೈಸೂರು ಹಾಗೂ ಚಾಮರಾಜ ನಗರ ಜಿಲ್ಲೆಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ(1)ದಲ್ಲಿ ತಿ.ನರಸೀಪುರ ಕ್ಷೇತ್ರದಿಂದ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಹುಣ ಸೂರಿನಿಂದ ಜಿಟಿಡಿ ಪುತ್ರ ಜಿ.ಡಿ.ಹರೀಶ್ ಗೌಡ, ಕೆ.ಆರ್.ನಗರದಿಂದ ಜೆಡಿಎಸ್ ರಾಜ್ಯಾಧ್ಯಕ್ಷ…

ಚಾಮುಂಡಿಬೆಟ್ಟದ ನಂದಿಗೆ ನೂರೊಂದು ಮಸ್ತಕಾಭಿಷೇಕ
ಮೈಸೂರು

ಚಾಮುಂಡಿಬೆಟ್ಟದ ನಂದಿಗೆ ನೂರೊಂದು ಮಸ್ತಕಾಭಿಷೇಕ

November 13, 2018

ಮೈಸೂರು:  ಕಾರ್ತಿಕ ಮಾಸದ ಮೊದಲ ಸೋಮವಾರವಾದ ಇಂದು ಚಾಮುಂಡಿಬೆಟ್ಟದ ನಂದಿಗೆ ಬೆಟ್ಟ ಹತ್ತುವ ಬಳಗದ ವತಿಯಿಂದ ನೂರೊಂದು ದ್ರವ್ಯಗಳಿಂದ ಶಾಸ್ತ್ರೋಕ್ತವಾಗಿ ಮಸ್ತಕಾಭಿಷೇಕ ನೆರವೇರಿಸಲಾಯಿತು. ಪ್ರತಿ ಶುಕ್ರವಾರ ಚಾಮುಂಡಿಬೆಟ್ಟ ಹತ್ತುವ ಭಕ್ತರು `ಬೆಟ್ಟ ಹತ್ತುವ ಬಳಗ’ ಸಂಘಟನೆ ಅಸ್ತಿತ್ವಕ್ಕೆ ತಂದು, ಕಳೆದ 8 ವರ್ಷದಿಂದ ಕಾರ್ತಿಕ ಮಾಸದ ಮೊದಲ ಸೋಮವಾರ ಬೆಟ್ಟದ ನಂದಿ ಮೂರ್ತಿಗೆ ಮಸ್ತಕಾಭಿಷೇಕ ನೆರವೇರಿಸುತ್ತಾ ಬಂದಿದ್ದಾರೆ. ಇಂದು ಬೆಳಿಗ್ಗೆ 10.30ಕ್ಕೆ ಆರಂಭವಾದ ಈ ಮಹಾಭಿಷೇಕ ಮಧ್ಯಾಹ್ನ 1.30ರವರೆಗೂ ನಡೆಯಿತು. ಶಾಸ್ತ್ರೋಕ್ತವಾಗಿ ನಡೆದ ಈ ಧಾರ್ಮಿಕ ಕಾರ್ಯದಲ್ಲಿ…

ಮಾಜಿ ಶಾಸಕ ಎಂ.ಕೆ.ಸೋಮಶೇಖರ್  ಕಾರು ಕದ್ದಿದ್ದ ಹೈಟೆಕ್ ಖದೀಮನ ಬಂಧನ
ಮೈಸೂರು

ಮಾಜಿ ಶಾಸಕ ಎಂ.ಕೆ.ಸೋಮಶೇಖರ್  ಕಾರು ಕದ್ದಿದ್ದ ಹೈಟೆಕ್ ಖದೀಮನ ಬಂಧನ

November 13, 2018

ಮೈಸೂರು: ಸರ್ವೀಸ್‍ಗೆ ಬಿಡಲಾಗಿದ್ದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ ಹೊಸ ಇನ್ನೋವಾ ಕಾರು ಸೇರಿದಂತೆ 50 ಲಕ್ಷ ರೂ. ಮೌಲ್ಯದ 3 ಕಾರು ಹಾಗೂ 2 ದ್ವಿಚಕ್ರ ವಾಹನಗಳ ಕದ್ದಿದ್ದ ಹೈಟೆಕ್ ಖದೀಮನನ್ನು ಮೈಸೂರು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬಿಟಿಎಂ ಲೇಔಟ್, 1ನೇ ಹಂತದ ಗುರಪ್ಪನಪಾಳ್ಯ ನಿವಾಸಿ ಪಿಲ್ಲಾಕಲ್ ನಜೀರ್ ಅಲಿಯಾಸ್ ಪಿ.ನಜೀರ್(56) ಬಂಧಿತ ಕಾರುಗಳ್ಳ. ನವೆಂಬರ್ 6ರಂದು ಬೆಂಗಳೂರಿನಲ್ಲಿ ಆತನನ್ನು ಸೆರೆ ಹಿಡಿದ ಪೊಲೀಸರು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ದೇವರಾಜ, ವಿಜಯನಗರ…

ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್  ನೌಕರರು ಬೆಂಗಳೂರಿಗೆ ಪಾದಯಾತ್ರೆ
ಮೈಸೂರು

ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್  ನೌಕರರು ಬೆಂಗಳೂರಿಗೆ ಪಾದಯಾತ್ರೆ

November 13, 2018

ಮೈಸೂರು: ನಿಯಮ ಉಲ್ಲಂಘಿಸಿ ಆಂಧ್ರ ಪ್ರದೇಶಕ್ಕೆ ಮಾಡಿರುವ ವರ್ಗಾವಣೆ ರದ್ದು ಮಾಡುವಂತೆ ಆಗ್ರಹಿಸಿ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಸಂಸ್ಥೆಯ ನೌಕರರು ಸೋಮವಾರ ಮೈಸೂರಿ ನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟರು. ಮೈಸೂರು ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಿಂದ ಆರಂಭವಾದ ಪಾದ ಯಾತ್ರೆಗೆ ಇಂದು ಬೆಳಿಗ್ಗೆ ಕಲಾವಿದ ಬಾದಲ್ ನಂಜುಂಡಸ್ವಾಮಿ ಹಸಿರು ನಿಶಾನೆ ತೋರಿ ದರು. ವಿನ್ಯಾಸ್ ಟೆಕ್ನಾಲಜೀಸ್ ಸಂಸ್ಥೆಯ ನೌಕರರು ನಡೆಸುತ್ತಿರುವ ನ್ಯಾಯಯುತ ಹೋರಾಟಕ್ಕೆ ತಾವು ಬೆಂಬಲ ನೀಡು ವುದಾಗಿ ಅವರು ಘೋಷಿಸಿದರು. ಇದೇ…

ಚಾಮರಾಜಪುರಂ ರೈಲ್ವೆ ನಿಲ್ದಾಣದಲ್ಲಿ ಅನಗತ್ಯವಾಗಿ ಅಳವಡಿಸಲಾಗಿದ್ದ ಕಸದ ತೊಟ್ಟಿ ತೆರವು
ಮೈಸೂರು

ಚಾಮರಾಜಪುರಂ ರೈಲ್ವೆ ನಿಲ್ದಾಣದಲ್ಲಿ ಅನಗತ್ಯವಾಗಿ ಅಳವಡಿಸಲಾಗಿದ್ದ ಕಸದ ತೊಟ್ಟಿ ತೆರವು

November 13, 2018

ಮೈಸೂರು:  ಮೈಸೂರಿನ ಚಾಮರಾಜಪುರಂ ರೈಲ್ವೆ ನಿಲ್ದಾಣದ ಆವರಣದಲ್ಲಿ ಅವೈಜ್ಞಾನಿಕವಾಗಿ ಅಳವಡಿಸಲಾಗಿದ್ದ ಹೆಚ್ಚುವರಿ ಕಸದ ಬುಟ್ಟಿಗಳನ್ನು ತೆರವುಗೊಳಿಸಲಾಗಿದೆ. ತಿಳಿ ನೀಲಿ ಹಾಗೂ ಗಾಢ ನೀಲಿಯ ಕಸದ ಬುಟ್ಟಿಗಳನ್ನು ನಿಲ್ದಾಣದ ಒಳಾವರಣ ಹಾಗೂ ಹೊರಾವರಣದಲ್ಲಿ ಹೆಜ್ಜೆ ಹೆಜ್ಜೆಗೂ ಅಳವಡಿಸಿ ನಿಲ್ದಾಣವೆಲ್ಲಾ ಕಸದ ಬುಟ್ಟಿಮಯವಾಗಿತ್ತು. ಇಂತಹ ಚಿಕ್ಕ ರೈಲ್ವೆ ನಿಲ್ದಾಣಕ್ಕೆ ಈ ಪರಿಯಲ್ಲಿ ಕಸದ ಬುಟ್ಟಿಗಳನ್ನು ಹಾಕಿರುವ ಬಗ್ಗೆ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂಬಂಧ `ಮೈಸೂರು ಮಿತ್ರ’ನ ನ.8ರ ಗುರು ವಾರದ ಸಂಚಿಕೆಯಲ್ಲಿ ಸಚಿತ್ರ ಸುದ್ದಿ ಪ್ರಕಟಿಸಿ, ಗಮನ…

ಡಿಸೆಂಬರ್‍ನಲ್ಲಿ ವಿಶೇಷ ಪ್ಯಾಕೇಜ್ ಪ್ರವಾಸ
ಮೈಸೂರು

ಡಿಸೆಂಬರ್‍ನಲ್ಲಿ ವಿಶೇಷ ಪ್ಯಾಕೇಜ್ ಪ್ರವಾಸ

November 13, 2018

ಮೈಸೂರು: ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೋರೇಶನ್ ವತಿ ಯಿಂದ ಡಿಸೆಂಬರ್‍ನಲ್ಲಿ `ಸ್ಪ್ಲೆಂಡೋರ್ಸ್ ಆಫ್ ಡೆಕ್ಕನ್’ ಶೀರ್ಷಿಕೆಯಡಿ ಹೈದರಾಬಾದ್, ಔರಂಗಾಬಾದ್, ಅಜಂತಾ, ಎಲ್ಲೋರಾ, ಮುಂಬೈ ಹಾಗೂ ಗೋವಾಕ್ಕೆ ರೈಲಿನಲ್ಲಿ ಪ್ಯಾಕೇಜ್ ಪ್ರವಾಸ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕಾರ್ಪೋರೇಶನ್‍ನ ಮೈಸೂರು ವಿಭಾಗದ ವ್ಯವಸ್ಥಾಪಕ ಶಿವಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಪ್ಯಾಕೇಜ್ ಪ್ರವಾಸಿ ಕಾರ್ಯಕ್ರಮವಾಗಿದ್ದು, ತಲಾ 10,100 ರೂ. ಪ್ರಯಾಣ ದರ ನಿಗದಿ ಮಾಡಲಾಗಿದೆ. ಐದು ವರ್ಷ ಮೇಲ್ಟಟ್ಟ…

1 1,283 1,284 1,285 1,286 1,287 1,611
Translate »