ಮೈಸೂರು

ಹಬ್ಬಕ್ಕೆ ನಾನಾ ತಿಂಡಿ ಮಾಡುವಾಗ ಸಿಲಿಂಡರ್ ಸಿಡಿದು ಗಾಯಗೊಂಡಿದ್ದ ಸಹೋದರಿಯರ ಸಾವು
ಮೈಸೂರು

ಹಬ್ಬಕ್ಕೆ ನಾನಾ ತಿಂಡಿ ಮಾಡುವಾಗ ಸಿಲಿಂಡರ್ ಸಿಡಿದು ಗಾಯಗೊಂಡಿದ್ದ ಸಹೋದರಿಯರ ಸಾವು

November 13, 2018

ಮೈಸೂರು: ಹಬ್ಬಕ್ಕೆ ವಿಶೇಷ ತಿಂಡಿ-ತಿನಿಸು ಮಾಡುತ್ತಿದ್ದಾಗ ಅಡುಗೆ ಗ್ಯಾಸ್ ಸಿಲಿಂಡರ್ ಸಿಡಿದು ತೀವ್ರ ಸುಟ್ಟ ಗಾಯಗಳಾಗಿದ್ದ ಸಹೋದರಿಯರು ಸಾವನ್ನಪ್ಪಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ನಿವಾಸಿ ಹೆಚ್.ಸಿ. ಸುರೇಶ ಪತ್ನಿ ಶ್ರೀಮತಿ ಭಾನುಮತಿ (44) ಹಾಗೂ ಕಟ್ಟೆ ಕ್ಯಾತನಹಳ್ಳಿ ಗ್ರಾಮದ ನಿವಾಸಿ ತಾತೇಗೌಡರು ಪತ್ನಿ ಶಶಿಕಲಾ (46) ಸಾವನ್ನಪ್ಪಿದವರು. ಕೆ.ಆರ್. ಪೇಟೆ ತಾಲೂಕು ಜೈನಹಳ್ಳಿಯವರಾದ ಭಾನುಮತಿ ಅವರನ್ನು ಹರಿಹರಪುರದ ಹೆಚ್.ಸಿ.ಸುರೇಶ ಅವರಿಗೂ, ಶಶಿಕಲಾ ಅವರನ್ನು ಕಟ್ಟೆ ಕ್ಯಾತನಹಳ್ಳಿ ತಾತೇಗೌಡರಿಗೆ ಮದುವೆ ಮಾಡಿಕೊಡಲಾಗಿತ್ತು. ಇಬ್ಬರಿಗೂ…

ಇಂದಿನಿಂದ ಡ್ರಗ್ ಕೆಮಿಸ್ಟ್ರಿ ಕುರಿತ ತರಬೇತಿ ಕಾರ್ಯಕ್ರಮ
ಮೈಸೂರು

ಇಂದಿನಿಂದ ಡ್ರಗ್ ಕೆಮಿಸ್ಟ್ರಿ ಕುರಿತ ತರಬೇತಿ ಕಾರ್ಯಕ್ರಮ

November 13, 2018

ಮೈಸೂರು: ಜೆಎಸ್‍ಎಸ್ ಫಾರ್ಮಸಿ ಕಾಲೇಜು ವತಿಯಿಂದ ನ.13ರಿಂದ `ಡ್ರಗ್ ಕೆಮಿಸ್ಟ್ರಿ’ ಕುರಿತ 1 ತಿಂಗಳ ಅವಧಿಯ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯ ಕ್ರಮದ ಸಂಚಾಲಕ ಹಾಗೂ ಕಾಲೇಜಿನ ಪ್ರಾಧ್ಯಾಪಕ ಡಾ.ಜಿ.ವಿ. ಪೂಜಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ನಡೆ ಯುವ ಈ 1 ತಿಂಗಳ ತರಬೇತಿ ಕಾರ್ಯಕ್ರಮಕ್ಕೆ ಕಾಲೇಜಿನ ಆರ್‍ಎ ಸೆಮಿನಾರ್ ಹಾಲ್‍ನಲ್ಲಿ ನ.13ರಂದು ಬೆಳಿಗ್ಗೆ 10.30ಕ್ಕೆ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಸಚಿವ ಡಾ.ಬಿ.ಮಂಜುನಾಥ್…

ಕೊಳಗಟ್ಟ ಹೊಸಕೆರೆ ಏತ ನೀರಾವರಿಗೆ ಅಪಸ್ವರ
ಮೈಸೂರು

ಕೊಳಗಟ್ಟ ಹೊಸಕೆರೆ ಏತ ನೀರಾವರಿಗೆ ಅಪಸ್ವರ

November 13, 2018

ಮಾರ್ಗ ಮಧ್ಯ ಬರುವ ಕೆರೆಗಳಿಗೆ ನೀರು ತುಂಬಿಸಲು ರೈತರ ಮನವಿ ಬನ್ನಿಕುಪ್ಪೆ: ಹುಣಸೂರು ತಾಲೂಕಿನ ಶ್ರವಣನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಲಕ್ಷ್ಮಣ ತೀರ್ಥ ನದಿಯಿಂದ ಕೊಳಗಟ್ಟ ಹೊಸ ಕೆರೆಗೆ ಎಸ್‍ಸಿಪಿ ಯೋಜನೆಯಡಿ 3 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದ್ದು, ಆರಂಭದಲ್ಲೇ ಅಪಸ್ವರ ಕೇಳಿ ಬರುತ್ತಿವೆ. ಲಕ್ಷ್ಮಣ ತೀರ್ಥನದಿಯಿಂದ ಹಲವು ಏತ ನೀರಾವರಿ ಯೋಜನೆ ಜಾರಿಯಾಗಿದ್ದರೂ ರೈತರ ಉಪಯೋಗಕ್ಕೆ ಬಂದ ನಿದರ್ಶನ ಗಳಿಲ್ಲ. ಇದೇ ಹಾದಿಯಲ್ಲೇ ಕೊಳಗಟ್ಟ ಹೊಸಕೆರೆ ಏತ ನೀರಾವರಿ ಕಾಮಗಾರಿ ಸಾಗಿದೆ. ಯೋಜನೆಯ…

ಮದ್ಯಪಾನ ತ್ಯಜಿಸಿ ಬದುಕು ಕಟ್ಟಿಕೊಳ್ಳಿ
ಮೈಸೂರು

ಮದ್ಯಪಾನ ತ್ಯಜಿಸಿ ಬದುಕು ಕಟ್ಟಿಕೊಳ್ಳಿ

November 13, 2018

ಬೈಲಕುಪ್ಪೆ: ಮದ್ಯ ವ್ಯಸನಿ ಗಳಾಗಿ ಕುಟುಂಬವನ್ನೇ ಸರ್ವನಾಶ ಮಾಡಿಕೊಳ್ಳದೇ ಮದ್ಯವರ್ಜನಾ ಶಿಬಿರ ಗಳಲ್ಲಿ ಪಾಲ್ಗೊಂಡರೆ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. ಪಿರಿಯಾಪಟ್ಟಣ ತಾಲೂಕು ಮಲ್ಲಿನಾಥ ಪುರ ಕಾಫಿ ಕ್ಯೂರಿಂಗ್ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲೆ ಕೊಪ್ಪ ವಲಯದಿಂದ ಆಯೋಜಿಸಿದ್ದ ಮದ್ಯ ವರ್ಜನಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಡೆ ಯವರು ಹಳ್ಳಿಗಾಡಿನಲ್ಲಿ ಕೆಲವರು ಕುಡಿತಕ್ಕೆ ಬಲಿಯಾಗಿ ತಮ್ಮ ಸಂಸಾರ ವನ್ನೇ ಬೀದಿಪಾಲು ಮಾಡಿಕೊಳ್ಳು…

ಕೇಂದ್ರ ಸಚಿವ ಅನಂತ್‍ಕುಮಾರ್‍ಗೆ ಶ್ರದ್ಧಾಂಜಲಿ
ಮೈಸೂರು

ಕೇಂದ್ರ ಸಚಿವ ಅನಂತ್‍ಕುಮಾರ್‍ಗೆ ಶ್ರದ್ಧಾಂಜಲಿ

November 13, 2018

ನಂಜನಗೂಡು:  ಇಂದು ಮುಂಜಾನೆ ವಿಧಿವಶರಾದ ಕೇಂದ್ರ ಸಚಿವ ಅನಂತ್ ಕುಮಾರ್‍ಗೆ ಎಂಜಿಎಸ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು, ಮುಖಂಡರು ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ಸುಮಾರು 6 ಬಾರಿ ಗೆದ್ದಿದ್ದ ಅನಂತ್ ಕುಮಾರ್ ಅವರ ಅಗಲಿಕೆ ಪಕ್ಷ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ನಾನು ಶಾಸಕನಾಗಿ ಆಯ್ಕೆಯಾದಂತಹ ಸಂದರ್ಭದಲ್ಲಿ ಭೇಟಿ ಮಾಡಿದ್ದೆ. ಆ ವೇಳೆ ನಂಜನಗೂಡು ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಜನ ನಾಯಕರಾಗಿ ಕೆಲಸ ಮಾಡು ವಂತೆ ಸಲಹೆ ನೀಡಿದರು ಎಂದು ನೆನೆದರು….

ಬಿಜೆಪಿಗೆ ರಾಜಕೀಯ ಅಸ್ತಿತ್ವ ತಂದುಕೊಟ್ಟವರು ಅನಂತಕುಮಾರ್
ಮೈಸೂರು

ಬಿಜೆಪಿಗೆ ರಾಜಕೀಯ ಅಸ್ತಿತ್ವ ತಂದುಕೊಟ್ಟವರು ಅನಂತಕುಮಾರ್

November 13, 2018

ತಿ.ನರಸೀಪುರ:  ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿ ಜನಸಂಘದಲ್ಲಿ ದುಡಿದು ಸೇವೆಯ ಮೂಲಕವೇ ಬಿಜೆಪಿಗೆ ರಾಜಕೀಯ ಅಸ್ತಿತ್ವ ತಂದುಕೊಟ್ಟಂತಹ ಕೇಂದ್ರ ಸಚಿವ ಅನಂತಕುಮಾರ್ ಅವರು ಪಕ್ಷದ ಸಂಘಟನಾ ಚತುರರಾಗಿದ್ದರು ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಹೆಚ್.ಎಂ.ಪರಶಿವಮೂರ್ತಿ ಹೇಳಿದರು. ಪಟ್ಟಣದ ಕಾಲೇಜು ರಸ್ತೆಯ ವಿವೇಕಾ ನಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಭೆ ಯಲ್ಲಿ ಮಾತನಾಡಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ವಿವಿಧ ಹಂತದಲ್ಲಿ ರಾಜಕೀಯ ಅಧಿಕಾರವನ್ನು ಪಡೆದುಕೊಂಡು ಸಂಸದ, ಕೇಂದ್ರ…

ಅರಸೀಕೆರೆ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಅನಂತಕುಮಾರ್
ಮೈಸೂರು

ಅರಸೀಕೆರೆ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಅನಂತಕುಮಾರ್

November 13, 2018

ಅರಸೀಕೆರೆ: ಕೇಂದ್ರ ಸಚಿವ ಅನಂತಕುಮಾರ್ ತಮ್ಮ ಅಂದಿನ ಎಬಿವಿಪಿ ಸೇವಾ ಕಾರ್ಯಕ್ರಮಗಳಿಗೆ ಅರಸೀಕೆರೆ ನಗರವನ್ನು ಕೇಂದ್ರ ಸ್ಥಾನವನ್ನಾಗಿ ಆಯ್ಕೆ ಮಾಡಿಕೊಂಡು ನಮ್ಮೊಂದಿಗೆ ಅವಿನಾ ಭಾವ ಸಂಬಂಧವನ್ನು ತಮ್ಮ ರಾಜಕೀಯದ ಕೊನೆ ದಿನಗಳವರೆಗೂ ಇಟ್ಟುಕೊಂಡಿ ದ್ದರು ಎಂದು ಮಾಜಿ ಶಾಸಕ ಎ.ಎಸ್. ಬಸವರಾಜು ಹೇಳಿದರು. ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನಕ್ಕೆ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನಂತಕುಮಾರ್ ಮತ್ತು ಪಿ.ಜಿ.ಆರ್. ಸಿಂಧ್ಯಾ ಇವರಿಬ್ಬರೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ಲವ-ಕುಶರಂತೆ ಸಂಘಟನೆಗಾಗಿ…

ಕಾರು ಡಿಕ್ಕಿ: ಕಲ್ಲಿನ ಬ್ಯಾರಿಕೇಡ್‍ಗೆ ಹಾನಿ
ಮೈಸೂರು

ಕಾರು ಡಿಕ್ಕಿ: ಕಲ್ಲಿನ ಬ್ಯಾರಿಕೇಡ್‍ಗೆ ಹಾನಿ

November 13, 2018

ಮೈಸೂರು: ಮಾರುತಿ ಸ್ವಿಫ್ಟ್ ಡಿಸೈರ್ ಕಾರೊಂದು ಡಿಕ್ಕಿ ಹೊಡೆದು, ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಕಾವೇರಿ ಎಂಪೋರಿಯಂ ಎದುರಿನ ಕಲ್ಲಿನ ಬ್ಯಾರಿಕೇಡ್ ಮುರಿದು ಬಿದ್ದಿದೆ. ಈ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್ ಕಡೆಯಿಂದ ಬಂದ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನ ಚಾಲಕ ಪಾರ್ಕಿಂಗ್ ಮಾಡಲು ಹೋಗಿ ಕಾವೇರಿ ಎಂಪೋರಿಯಂ ಎದುರಿನಲ್ಲಿ ಪಾಲಿಕೆಯಿಂದ ಅಳವಡಿಸಿರುವ ಕಲ್ಲಿನ ಬ್ಯಾರಿಕೇಡ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಂಬವೊಂದು ಮುರಿದು ಬಿದ್ದಿದೆ. ಅದನ್ನು ಕಂಡ ಕಾರು ಚಾಲಕ ವಾಹನ…

ಹೃದಯಾಘಾತದಿಂದ ಮಹಿಳೆ ಸಾವು
ಮೈಸೂರು

ಹೃದಯಾಘಾತದಿಂದ ಮಹಿಳೆ ಸಾವು

November 13, 2018

ಮೈಸೂರು: ಮನೆಯ ಮೆಟ್ಟಿಲು ಹತ್ತುವಾಗ ತೀವ್ರ ಹೃದಯಾಘಾತ ಕ್ಕೊಳ ಗಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸೂರಿನ ರಾಮಕೃಷ್ಣನಗರದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಮೈಸೂರಿನ ರಾಮಕೃಷ್ಣನಗರ ನಿವಾಸಿ ಪುರುಷೋ ತ್ತಮ ಅವರ ಪತ್ನಿ ಶ್ರೀಮತಿ ಶೈಮಾ (45) ಸಾವನ್ನಪ್ಪಿದವರು. ಕೇರಳದ ತಲಚೇರಿ ಯಲ್ಲಿ ಸಂಬಂಧಿಕರ ಮದುವೆ ಸಮಾರಂಭ ಮುಗಿಸಿ ಕುಟುಂಬದವರೊಂದಿಗೆ ಆಗಮಿಸಿದ ಅವರು, ಕಾರಿನಿಂದಿಳಿದು ಬ್ಯಾಗು ಹಿಡಿದುಕೊಂಡು ಮನೆಯ ಮೆಟ್ಟಿಲು ಹತ್ತಿಕೊಂಡು ಮೊದಲ ಮಹಡಿಗೆ ಹೋಗುತ್ತಿದ್ದಾಗ ಇಂದು ಬೆಳಿಗ್ಗೆ 7.30 ಗಂಟೆ ವೇಳೆ ಹಠಾತ್ ಎದೆನೋವು ಕಾಣಿಸಿಕೊಂಡು ಕುಸಿದು…

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
ಮೈಸೂರು

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

November 13, 2018

ಮೈಸೂರು: ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ನಂಜನಗೂಡು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ನಂಜನಗೂಡು ತಾಲೂಕು, ಮರಳೂರು ಗ್ರಾಮದ ನಿವಾಸಿ ಕೆಂಪೇಗೌಡರ ಪತ್ನಿ ಶ್ರೀಮತಿ ಶಿವಮ್ಮ ಸಾವನ್ನಪ್ಪಿದವರು. ಭಾನುವಾರ ರಾತ್ರಿ ವಿಷ ಸೇವಿಸಿ ಅಸ್ವಸ್ಥರಾಗಿದ್ಧ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ಪ್ರಕರಣ ದಾಖ ಲಿಸಿಕೊಂಡಿರುವ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ…

1 1,284 1,285 1,286 1,287 1,288 1,611
Translate »