ಮೈಸೂರು

ಕಾವ್ಯ ನನ್ನನ್ನು ಬದುಕಿಸಿದೆ
ಮೈಸೂರು

ಕಾವ್ಯ ನನ್ನನ್ನು ಬದುಕಿಸಿದೆ

November 12, 2018

ಮೈಸೂರು: ನನ್ನ ಜೀವನದಲ್ಲಿ ಆದಂತಹ ನೋವು ಮರೆಯಲು ನಾನು ಆಯ್ದುಕೊಂಡದ್ದೇ ಕಾವ್ಯ. ಹೀಗಾಗಿ ಕಾವ್ಯ ನನ್ನನ್ನು ಬದುಕಿಸಿದೆ. ಹೀಗೆಂದು ಹೇಳಿದವರು ಕನ್ನಡದ ಹಿರಿಯ ಸಾಹಿತಿ, ಪ್ರೊರಾಗೌ ಎಂದು ಪರಿಚಿತರಾಗಿರುವ ಪ್ರೊ.ಎಂ.ರಾಮೇಗೌಡ. ಕನ್ನಡ ರಾಜ್ಯೋತ್ಸವ ಅಂಗವಾಗಿ ಮೈಸೂರಿನ ಸಂವಹನ ಟ್ರಸ್ಟ್ ಜೆಎಸ್‍ಎಸ್ ರಾಜೇಂದ್ರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಹಿರಿಯ ಸಾಹಿತಿಗಳಿಗೆ ಸನ್ಮಾನ ಮತ್ತು ಸಂವಹನ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ತಮ್ಮ ನೋವಿನ ಹಲವು ಸಂಗತಿಗಳನ್ನು ಹಂಚಿಕೊಂಡರು. ನನ್ನ ಮೊದಲ ಆಸಕ್ತಿ ಕಾವ್ಯ. ಅದು ಕೊನೆಯ…

ಡಾಕ್ಟರ್ ಆಫ್ ಪ್ಲಾಂಟ್ ಮೆಡಿಸಿನ್ ಕೋರ್ಸ್ ಆರಂಭಿಸಿ
ಮೈಸೂರು

ಡಾಕ್ಟರ್ ಆಫ್ ಪ್ಲಾಂಟ್ ಮೆಡಿಸಿನ್ ಕೋರ್ಸ್ ಆರಂಭಿಸಿ

November 12, 2018

ಮೈಸೂರು:  ಮೈಸೂರು ವಿಶ್ವವಿದ್ಯಾ ನಿಲಯದಲ್ಲಿ `ಡಾಕ್ಟರ್ ಆಫ್ ಪ್ಲಾಂಟ್ ಮೆಡಿಸಿನ್’ ವಿಷಯ ಕುರಿತಂತೆ ಐದು ವರ್ಷಗಳ ಕೋರ್ಸ್ ಆರಂಭಿಸುವ ಸಂಬಂಧ ಯೋಜನೆಯ ರೂಪುರೇಷೆ ಸಿದ್ಧಪಡಿಸುವಂತೆ ಮೈಸೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ ಸಲಹೆ ನೀಡಿದರು. ಮೈಸೂರಿನ ಎಂಎಎಸ್‍ವಿಎಸ್ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಮೈಸೂರು ವಿವಿಯ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ಲಾಂಟ್ ಕ್ಲಿನಿಕ್ ವತಿಯಿಂದ `ಸಸ್ಯಾರೋಗ್ಯ ತಪಾಸಣೆ ಮತ್ತು ಸಮಗ್ರ ರೋಗ ನಿರ್ವ ಹಣೆ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಾ ಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು….

ಇಂದೂಧರ ಹೊನ್ನಾಪುರ ಮೈಸೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ
ಮೈಸೂರು

ಇಂದೂಧರ ಹೊನ್ನಾಪುರ ಮೈಸೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ

November 12, 2018

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿ ಯಿಂದ ಡಿ.22, 23ರಂದು ಪಿರಿಯಾಪಟ್ಟಣದಲ್ಲಿ ನಡೆಯುವ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇ ಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಸಂಸ್ಕøತಿ ಚಿಂತಕ ಇಂದೂಧರ ಹೊನ್ನಾಪುರ ಅವರನ್ನು ಆಯ್ಕೆ ಮಾಡಲಾಗಿದೆ.ನಗರದ ಜಿಲ್ಲಾ ಕಸಾಪ ಸಭಾಂ ಗಣದಲ್ಲಿ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ಸರ್ವಾನುಮತದಿಂದ ಈ ನಿರ್ಣಯವನ್ನು ಕೈಗೊಳ್ಳಲಾಯಿತು.

ಶಿಕ್ಷಿತರೆ ನಿಸರ್ಗ ಹಾಳು ಮಾಡುತ್ತಿದ್ದಾರೆ
ಮೈಸೂರು

ಶಿಕ್ಷಿತರೆ ನಿಸರ್ಗ ಹಾಳು ಮಾಡುತ್ತಿದ್ದಾರೆ

November 12, 2018

ಮೈಸೂರು:  ಕಲೆ, ಸಾಹಿತ್ಯ, ನೃತ್ಯ ಕೇವಲ ಮನ ರಂಜನೆಗಲ್ಲ, ಮನೋವಿಕಾಸಕ್ಕೆ. ನನ್ನ ಜಲ, ನನ್ನದು ಸಂಸ್ಕøತಿ ಎಂಬ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಸಂಸ್ಕøತಿ ಚಿಂತಕ ಹಾಗೂ ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಇಂಜಿನಿಯರ್ ಶಂಕರ್ ದೇವನೂರು ಅಭಿಪ್ರಾಯಪಟ್ಟರು. ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆದ ನೃತ್ಯ ವಿದ್ಯಾಪೀಠ ಸಂಸ್ಥೆಯ 9ನೇ ವಾರ್ಷಿಕೋತ್ಸವವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಈ ಮಣ್ಣಿನಲ್ಲಿ ನಾವು ಹುಟ್ಟಿ, ನೆಲದ ಫಲವನ್ನು ತಿಂದು ಬದುಕಿದ್ದೇವೆ. ಇಲ್ಲಿನ ಗಾಳಿ ಮತ್ತು ಜಲ ದಿಂದ…

ನಾಗರಿಕ ಸಮಾಜ ನಾಚುವಂತಾ ಸಂಗತಿ!
ಮೈಸೂರು

ನಾಗರಿಕ ಸಮಾಜ ನಾಚುವಂತಾ ಸಂಗತಿ!

November 12, 2018

ಮೈಸೂರು:  ಸಮಾಜಕ್ಕೆ ಒಳಿತು ಮಾಡಲಾಗದಿದ್ದರೂ ಕೆಡುಕು ಮಾಡಬಾರದು. ಈ ಪರಿಜ್ಞಾನವಿಲ್ಲದವ ರಿಂದ ಒಂದಿಲ್ಲೊಂದು ದುಷ್ಕøತ್ಯಗಳು ನಡೆ ಯುತ್ತಿರುತ್ತವೆ. ಮೈಸೂರಿನಲ್ಲಿ ರಸ್ತೆ ಮಧ್ಯೆ ಮರದ ತುಂಡುಗಳನಿಟ್ಟು ಬೆಂಕಿ ಹೊತ್ತಿಸಿರು ವುದು ಇದಕ್ಕೊಂದು ನಿದರ್ಶನ. 45ನೇ ವಾರ್ಡ್ ವ್ಯಾಪ್ತಿಯ ಬಸವೇಶ್ವರನಗರ, ಅರಳಿಕಟ್ಟೆ ಬಲಮುರಿ ಗಣಪತಿ ರಸ್ತೆಯಲ್ಲಿ ಯಾರೋ ಅನಾಗರಿಕರು ತೆಂಗಿನ ಮರದ ಮೂರು ತುಂಡುಗಳನ್ನು ಒಲೆ ಮಾದರಿಯಲ್ಲಿ ಜೋಡಿಸಿ, ಬೆಂಕಿ ಹೊತ್ತಿಸಿದ್ದಾರೆ. ಇದಾಗಿ ಮೂರ್ನಾಲ್ಕು ದಿನಗಳಾಗಿದ್ದು, ಅರೆಬರೆ ಬೆಂದಿರುವ ಅವು ಹಾಗೆಯೇ ನಿಂತಿವೆ. ಯಾವ ಮಹಾನುಭಾವರು, ಯಾವ ಉದ್ದೇಶಕ್ಕಾಗಿ ಹೀಗೆ…

ಇನ್ನರ್ ವ್ಹೀಲ್ ಕ್ಲಬ್‍ನಿಂದ ಗ್ರಾಮೀಣ ಶಿಕ್ಷಕರಿಗೆ ಸನ್ಮಾನ
ಮೈಸೂರು

ಇನ್ನರ್ ವ್ಹೀಲ್ ಕ್ಲಬ್‍ನಿಂದ ಗ್ರಾಮೀಣ ಶಿಕ್ಷಕರಿಗೆ ಸನ್ಮಾನ

November 12, 2018

ಮೈಸೂರು : ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಹೆಚ್.ಡಿ.ಕೋಟೆ ತಾಲೂಕಿನ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 15ಕ್ಕೂ ಹೆಚ್ಚು ಶಿಕ್ಷಕರನ್ನು ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಂಸ್ಥೆ ಸನ್ಮಾನಿಸಿತು. ಮೈಸೂರಿನ ರೇಸ್‍ಕೋರ್ಸ್ ಆವರಣದಲ್ಲಿ ಶನಿವಾರ ಸಂಜೆ ನಡೆದ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಂಸ್ಥೆಯ ಸಮಾಜ ಸೇವಾ ಕಾರ್ಯಕ್ರಮ ಗಳ ಜಿಲ್ಲಾಧ್ಯಕ್ಷರಿಗೆ ವರದಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ಗ್ರಾಮೀಣ ಪ್ರದೇಶದ…

ಜಯಪುರದಲ್ಲಿ ಉಚಿತ ನೇತ್ರ ತಪಾಸಣೆ
ಮೈಸೂರು

ಜಯಪುರದಲ್ಲಿ ಉಚಿತ ನೇತ್ರ ತಪಾಸಣೆ

November 12, 2018

ಮೈಸೂರು: ಮೈಸೂರು ತಾಲೂಕಿನ ಜಯಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 63ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರಿನ ಬೆಳಕು ಸೇವಾ ಸಂಸ್ಥೆ ಚಾರಿಟಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ಕೆ.ಆರ್. ಆಸ್ಪತ್ರೆ ವತಿಯಿಂದ ಉಚಿತ ನೇತ್ರ ಮತ್ತು ಸಾಮಾನ್ಯ ತಪಾಸಣಾ ಶಿಬಿರ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ಅಮೃತ, ಡಾ. ಪ್ರಮೋದ್ ಗೌಡ, ಡಾ.ಬಸವರಾಜು ಮತ್ತು ಬೆಳಕು ಸೇವಾ ಸಂಸ್ಥೆಯ ಪದಾಧಿಕಾರಿಗಳಾದ ಅಂಜಲಿ, ಮಂಜುನಾಥ್ ಉದ್ಘಾಟಿಸಿದರು. ಜಯಪುರ ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಉಚಿತ…

ಸಂಸದರಿಂದ ನೂತನ ಬಿಎಂಸಿ ಕೇಂದ್ರ ಪರಿಶೀಲನೆ
ಮೈಸೂರು

ಸಂಸದರಿಂದ ನೂತನ ಬಿಎಂಸಿ ಕೇಂದ್ರ ಪರಿಶೀಲನೆ

November 12, 2018

ತಿ.ನರಸೀಪುರ: ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ ಅಭಿವೃದ್ಧಿ ಹಾಗೂ ಹಾಲು ಸಂಸ್ಕರಣೆಗೆ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಡೈರಿ ಯೋಜನೆಯಡಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬಿಎಂಸಿ ಕೇಂದ್ರ ಆರಂಭಿಸಲಾಯಿತು ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು. ತಾಲೂಕಿನ ನಂಜಾಪುರ ಗ್ರಾಮದಲ್ಲಿ ಉದ್ಘಾಟನೆಯಾದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಕೇಂದ್ರ ವನ್ನು ಪರಿಶೀಲಿಸಿ ಅವರು ಮಾತನಾಡಿದರು. ಯುಪಿಎ ಕೇಂದ್ರ ಸರ್ಕಾರದಲ್ಲಿ ಕೃಷಿ ಮತ್ತು ಪಶು ಸಂಗೋಪನೆ ಸಚಿವರಾಗಿದ್ದ ಶರದ್ ಪವಾರ್ ಅವರು ರಾಷ್ಟ್ರೀಯ ಡೈರಿ ಯೋಜನೆ…

ಬೈಲಕುಪ್ಪೆ ಪ್ರೌಢಶಾಲಾ ಮಕ್ಕಳಿಗೆ ಸೈಕಲ್ ವಿತರಣೆ
ಮೈಸೂರು

ಬೈಲಕುಪ್ಪೆ ಪ್ರೌಢಶಾಲಾ ಮಕ್ಕಳಿಗೆ ಸೈಕಲ್ ವಿತರಣೆ

November 12, 2018

ಬೈಲಕುಪ್ಪೆ: ಪೋಷಕರು ಶಿಕ್ಷಕರೊಂದಿಗೆ ಸಹಕರಿಸಿದಾಗ ಮಾತ್ರ ಮಕ್ಕಳು ಉನ್ನತ ವ್ಯಾಸಂಗದ ಕಡೆ ಹೆಚ್ಚು ಗಮನಹರಿಸಲು ಸಾಧ್ಯ ಎಂದ ಜಿಪಂ ಸದಸ್ಯ ವಿ.ರಾಜೇಂದ್ರ ಅಭಿಪ್ರಾಯಪಟ್ಟರು. ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಪ್ರೌಢಶಾಲೆ ಆವರಣದಲ್ಲಿ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು. ಸರ್ಕಾರ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಮಧ್ಯಾಹ್ನದ ಬಿಸಿಯೂಟ, ಕೆನೆಭರಿತ ಹಾಲು, ಸಮವಸ್ತ್ರ, ಪಠ್ಯಪುಸ್ತಕ, ಶೂ ಸೇರಿದಂತೆ ಶೈಕ್ಷಣಿಕ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಿಸುತ್ತಿದ್ದು. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಶಾಲೆಯ ಎಸ್‍ಎಲ್‍ಎಲ್‍ಸಿ ಮಕ್ಕಳು…

ಸರ್ಕಾರಿ ಶಾಲೆ ಬೀಗ ಮುರಿದು ಕಳವು
ಮೈಸೂರು

ಸರ್ಕಾರಿ ಶಾಲೆ ಬೀಗ ಮುರಿದು ಕಳವು

November 12, 2018

ಮೈಸೂರು: ದೀಪಾವಳಿ ಹಬ್ಬದ ರಜೆಯ ಹಿನ್ನಲೆಯಲ್ಲಿ ಶಾಲಾ ಕೊಠಡಿಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು, 12,476 ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಮೈಸೂರಿನ ರಾಮಾನುಜ ರಸ್ತೆಯ ಕನಕಗಿರಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಕೊಠಡಿಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, 1,900 ರೂ. ಮೌಲ್ಯದ ಒಂದು ಸೈಡ್ ಡ್ರಮ್, ಎರಡು ಬ್ಯೂಗಲ್, ಬೇಸ್ ಡ್ರಮ್, ಎರಡು ಡ್ರಮ್ ಸ್ಟಿಕ್, ಐದು ಊಟದ ತಟ್ಟೆ, 25 ಹಾಲು ಕುಡಿಯುವ…

1 1,286 1,287 1,288 1,289 1,290 1,611
Translate »