ಮೈಸೂರು

ನಾನು ಮಾಡಿದ ಕೆಲಸವನ್ನು ತಾವು  ಮಾಡಿದ್ದು ಎನ್ನುವುದು ನ್ಯಾಯವೇ..
ಮೈಸೂರು

ನಾನು ಮಾಡಿದ ಕೆಲಸವನ್ನು ತಾವು ಮಾಡಿದ್ದು ಎನ್ನುವುದು ನ್ಯಾಯವೇ..

November 11, 2018

ಮೈಸೂರು:  ಶಾಸಕ ಎಸ್.ಎ.ರಾಮದಾಸ್ ಅವರು ನಾನು ಮಾಡಿದ ಕಾಮಗಾರಿಗಳನ್ನು ತಾವು ಮಾಡಿದ್ದೆಂದು ಹೇಳಿಕೊಳ್ಳುತ್ತಾ ಜನರನ್ನ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೃಷ್ಣ ರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ವಾಗ್ದಾಳಿ ನಡೆಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮದಾಸ್ ಅವರು ಗೆದ್ದು ಆರು ತಿಂಗಳಾದರೂ ಕ್ಷೇತ್ರಕ್ಕೆ ಒಂದು ರೂಪಾಯಿ ತರದಿದ್ದರೂ, ನಾನು ಮಾಡಿದ ಕಾಮ ಗಾರಿಯನ್ನೇ ತಾವು ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ. ಮೈಸೂರಿನ ಜೆಎಲ್‍ಬಿ ರಸ್ತೆಯ ತುಳಸಿದಾಸ್ ಮೋಹನ್‍ದಾಸ್…

ಮೈಸೂರಿಗೆ ಅಷ್ಟೊಂದು ಕೊಡುಗೆ ಕೊಟ್ಟರೂ ನಗರಪಾಲಿಕೆ ಚುನಾವಣೆಯಲ್ಲಿ ನಮಗೆ ಬಹುಮತ ಬರದಿದ್ದಕ್ಕೆ ನೋವಾಗಿದೆ
ಮೈಸೂರು

ಮೈಸೂರಿಗೆ ಅಷ್ಟೊಂದು ಕೊಡುಗೆ ಕೊಟ್ಟರೂ ನಗರಪಾಲಿಕೆ ಚುನಾವಣೆಯಲ್ಲಿ ನಮಗೆ ಬಹುಮತ ಬರದಿದ್ದಕ್ಕೆ ನೋವಾಗಿದೆ

November 11, 2018

ಮೈಸೂರು: ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ದ್ದಾಗ ಮೈಸೂರಿನ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದೆ. ಆದರೂ ಮೈಸೂ ರಿನ ಜನತೆ ನಗರ ಪಾಲಿಕೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದಿರು ವುದು ವೈಯಕ್ತಿಕವಾಗಿ ನನಗೆ ನೋವು ತರಿಸಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿಷಾದಿಸಿದರು. ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ ಪಕ್ಷ ದಿಂದ ನೂತನವಾಗಿ ಆಯ್ಕೆಯಾಗಿರುವ ಪಾಲಿಕೆ ಸದಸ್ಯರೊಂದಿಗೆ ಆಯೋಜಿಸಿದ್ದ ಔಪಚಾರಿಕ ಸಭೆಯಲ್ಲಿ ಮಾತನಾಡಿದ ಅವರು,…

ಕಾನೂನಿನ ಪೂರ್ಣ ಅರಿವಿಲ್ಲದಿದ್ದರೆ ಗೊಂದಲ ಸಹಜ
ಮೈಸೂರು

ಕಾನೂನಿನ ಪೂರ್ಣ ಅರಿವಿಲ್ಲದಿದ್ದರೆ ಗೊಂದಲ ಸಹಜ

November 11, 2018

ಮೈಸೂರು: ಕಾನೂ ನಿನ ಪೂರ್ಣ ಅರಿವಿಲ್ಲದಿದ್ದಾಗ ಗೊಂದಲ ಗಳು ಉಂಟಾಗುವುದು ಸಹಜ. ಇದೇ ರೀತಿ ಜಿಎಸ್‍ಟಿ-ಟಿಡಿಎಸ್ ಕುರಿತಂತೆಯೂ ಜನರು ಗೊಂದಲಕ್ಕೊಳಗಾಗಿದ್ದಾರೆ ಎಂದು ಬೆಂಗಳೂರು ವಾಣಿಜ್ಯ ತೆರಿಗೆ ಅಪರ ಆಯುಕ್ತ ಬಿ.ವಿ.ರವಿ ತಿಳಿಸಿದರು. ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಶನಿವಾರ ಮೈಸೂರು ಮಹಾನಗರಪಾಲಿಕೆ ಗುತ್ತಿಗೆದಾರರ ಸಂಘ, ಮೈಸೂರು ವೃತ್ತ ಡಾಂಬರ್ ಮಿಶ್ರಣ ಘಟಕ ಮಾಲೀಕರ ಸಂಘ, ಮತ್ತು ಮುಡಾ ಗುತ್ತಿಗೆದಾರರ ಸಂಘ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೈಸೂರು ನಗರ ಮತ್ತು ತಾಲೂಕು…

ಶಬರಿಮಲೆ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ: ಕೇರಳ ಸಿಎಂ
ಮೈಸೂರು

ಶಬರಿಮಲೆ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ: ಕೇರಳ ಸಿಎಂ

November 11, 2018

ತಿರುವನಂತಪುರ:  ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತ ವಿಚಾರದಿಂದ ರಾಜ್ಯ ಸರ್ಕಾರ ಹಿಂದಕ್ಕೆ ಸರಿಯುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ಸಂಪ್ರದಾಯಗಳು ಬದಲಾದಾಗ ವಿರೋಧಗಳು ವ್ಯಕ್ತವಾಗುವುದು ಸಾಮಾನ್ಯ. ಆದರೆ, ಶಬರಿಮಲೆ ವಿಚಾರದಲ್ಲಿ ಸರ್ಕಾರದ ಹಿಂದಕ್ಕೆ ಸರಿಯುವುದಿಲ್ಲ. ದೇವಾಲಯಕ್ಕೆ ಬರುವ ಮಹಿಳೆಯರಿಗೆ ಶೌಚಾಲಯ, ಸ್ನಾನ ವ್ಯವಸ್ಥೆಗಳು ಸೇರಿ ಇತರೆ ವ್ಯವಸ್ಥೆಗಳನ್ನು ನೀಡಲಾಗುತ್ತದೆ. ಪ್ರಸ್ತುತ ಎದ್ದಿರುವ ಬಿಕ್ಕಟ್ಟು ತಾತ್ಕಾಲಿಕವಷ್ಟೇ ಎಂದು ಹೇಳಿದ್ದಾರೆ.

ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್  ಕಾರ್ಮಿಕರಿಂದ ನಾಳೆ ಬೆಂಗಳೂರು ಜಾಥಾ
ಮೈಸೂರು

ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್  ಕಾರ್ಮಿಕರಿಂದ ನಾಳೆ ಬೆಂಗಳೂರು ಜಾಥಾ

November 11, 2018

ಮೈಸೂರು:  ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶ ದಲ್ಲಿರುವ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಕಂಪನಿಯ ಆಡಳಿತ ವರ್ಗದಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ರುವ ಕಾರ್ಮಿಕರು, ಕಾಲ್ನಡಿಗೆಯಲ್ಲಿ ಬೆಂಗಳೂರಿಗೆ ತೆರಳಿ, ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿsಸಿದ ಬಳಿಕ ಅಲ್ಲಿಯೇ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ. ಮೈಸೂರ್ ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯೀಸ್ ಯೂನಿಯನ್ ಸಂಘಟನೆ ನೇತೃತ್ವದ 94 ಕಾರ್ಮಿಕರು ಹಾಗೂ ಬೆಂಬಲಿಗರ ಕಾಲ್ನಡಿಗೆ ಜಾಥಾಗೆ ನ.12ರಂದು ಬೆಳಿಗ್ಗೆ 9 ಗಂಟೆಗೆ ಕೋಟೆ ಆಂಜ ನೇಯ ಸ್ವಾಮಿ ದೇವಾಲಯದ ಬಳಿ ಚಿತ್ರಕಲಾವಿದ…

ನೂಪುರ ಕಲಾವಿದರಿಂದ ಸಮೂಹ ಭರತನಾಟ್ಯ
ಮೈಸೂರು

ನೂಪುರ ಕಲಾವಿದರಿಂದ ಸಮೂಹ ಭರತನಾಟ್ಯ

November 11, 2018

ಮೈಸೂರು: ನಾಟ್ಯಾ ಚಾರ್ಯ ಪ್ರೊ.ಕೆ.ರಾಮ ಮೂರ್ತಿರಾವ್ ಅವರ ನೂಪುರ ಕಲಾವಿದರು ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ಮಕ್ಕಳ ದಿನಾ ಚರಣೆಯ ಅಂಗವಾಗಿ ಅದರ ಹಿಂದಿನ ದಿನವಾದ ನ.13ರ ಸಂಜೆ 6 ಗಂಟೆಗೆ ನಾದಬ್ರಹ್ಮ ಸಂಗೀತ ಸಭೆಯ ವಾಸುದೇವಾ ಚಾರ್ಯ ಭವನದಲ್ಲಿ ಮಕ್ಕಳ ವಿಶೇಷ ಸಮೂಹ ಭರತನಾಟ್ಯ ಪ್ರದರ್ಶನವೊಂ ದನ್ನು ಏರ್ಪಡಿಸಿದೆ. ಇದರಲ್ಲಿ ಜೆ.ಪಿ.ನಗರದ ನೂಪುರ ನೃತ್ಯ ಶಾಲೆಯ 25 ಮಂದಿ ಪುಟಾಣಿ ಕಲಾವಿದರು ಸುಮಾರು 15 ನೃತ್ಯಗಳನ್ನು ಸಾದರಪಡಿಸಲಿದ್ದಾರಲ್ಲದೆ ಬೆಂಗಳೂರಿನ ನೃತ್ಯ ವಿದೂಷಿ ರಾಜಶ್ರೀ ನಾಯ್ಕ್ ಅವರ ಇಬ್ಬರು…

ಸಾವಯವ ಕೃಷಿ ಉತ್ಪನ್ನಗಳ  ‘ರೈತ ಸಂತೆ’ಗೆ ಉತ್ತಮ ಪ್ರತಿಕ್ರಿಯೆ
ಮೈಸೂರು

ಸಾವಯವ ಕೃಷಿ ಉತ್ಪನ್ನಗಳ  ‘ರೈತ ಸಂತೆ’ಗೆ ಉತ್ತಮ ಪ್ರತಿಕ್ರಿಯೆ

November 11, 2018

ಮೈಸೂರು:  ಸಾವಯವ ಕೃಷಿಗೆ ಪ್ರತ್ಯೇಕ ಮಾರುಕಟ್ಟೆ ಒದಗಿಸುವ ಸಲುವಾಗಿ ನಿಸರ್ಗ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರೈತ ಸಂತೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೈಸೂರಿನ ಕಾಮಾಕ್ಷಿ ಆಸ್ಪತ್ರೆ ರಸ್ತೆಯ ಹ್ಯಾಪಿಮ್ಯಾನ್ ಉದ್ಯಾನವನದ ಬಳಿ ಟ್ರಸ್ಟ್‍ನ ಮಾರಾಟ ಕೇಂದ್ರದ ಎದುರು ಏರ್ಪಡಿಸಿದ್ದ ರೈತ ಸಂತೆಯಲ್ಲಿ ಗ್ರಾಹಕರು ನೇರವಾಗಿ ರೈತರಿಂದ ಧಾನ್ಯ ಹಾಗೂ ತರಕಾರಿ ಸೇರಿದಂತೆ ಸಿರಿಧಾನ್ಯಗಳಿಂದ ತಯಾರಾದ ತಿಂಡಿ ತಿನಿಸುಗಳನ್ನು ಖರೀದಿಸಿದರು. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ `ನೈಸರ್ಗಿಕ ಸಾವಯವ ರೈತ ಗ್ರಾಹಕ ಒಕ್ಕೂಟ’ದ `ನಿಸರ್ಗ…

ಉದ್ದಿಮೆ ಪರವಾನಗಿ ನವೀಕರಣಕ್ಕೆ  ಪಾಲಿಕೆ ಅಧಿಕಾರಿಗಳಿಂದ ಕಿರುಕುಳ
ಮೈಸೂರು

ಉದ್ದಿಮೆ ಪರವಾನಗಿ ನವೀಕರಣಕ್ಕೆ  ಪಾಲಿಕೆ ಅಧಿಕಾರಿಗಳಿಂದ ಕಿರುಕುಳ

November 11, 2018

ಮೈಸೂರು: ಉದ್ದಿಮೆ ಪರವಾನಗಿ ನವೀಕರಣಕ್ಕೆ ಜಿಎಸ್‍ಟಿ ಪ್ರಮಾಣ ಪತ್ರವೊಂದಿ ದ್ದರೆ ಸಾಕು. ಆದರೆ ಮೈಸೂರು ಮಹಾ ನಗರಪಾಲಿಕೆಯ ಕೆಲ ಅಧಿಕಾರಿ ಗಳು ಅನಗತ್ಯವಾದ ದಾಖಲೆಗಳನ್ನು ಕೇಳುವ ಮೂಲಕ ಉದ್ದಿಮೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಸಂದೇಶ್‍ಸ್ವಾಮಿ ಆರೋಪಿಸಿದರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ವಲಯ ಕಚೇರಿ ಗಳಲ್ಲಿ ವಲಯ ಆಯುಕ್ತರೇ ಇಲ್ಲದೇ ಮಧ್ಯವರ್ತಿಗಳ ಮೂಲಕ ಉದ್ದಿಮೆ ಪರವಾನಗಿ ಕೊಡುವಂತಹ ವ್ಯವಸ್ಥೆ ನಿರ್ಮಾಣ ವಾಗಿದೆ. ಮೈಸೂರು…

ಡಿ.29, 30ರಂದು ಮೈಸೂರಲ್ಲಿ 5ನೇ ರಾಷ್ಟ್ರೀಯ ಕಳರಿ ಪಯಟ್ಟು ಚಾಂಪಿಯನ್‍ಶಿಪ್
ಮೈಸೂರು

ಡಿ.29, 30ರಂದು ಮೈಸೂರಲ್ಲಿ 5ನೇ ರಾಷ್ಟ್ರೀಯ ಕಳರಿ ಪಯಟ್ಟು ಚಾಂಪಿಯನ್‍ಶಿಪ್

November 11, 2018

ಮೈಸೂರು:  ಶತಮಾನಗಳಿಂದ ಕೇರಳದಲ್ಲಿ ನೆಲೆಸಿರುವ ಒಂದು ಪ್ರತ್ಯೇಕ ಶಾರೀರಿಕ ಸಾಧನೆಯ ಕೊಡುಗೆಯೇ ಕಳರಿ ಪಯಟ್ಟು ಎಂಬ ಯುದ್ಧ ಕಲೆ. ನಶಿಸುತ್ತಿರುವ ಈ ದೇಹಾಭ್ಯಾಸ ವಿಧಾನ, ಆರ್ಯ ದ್ರಾವಿಡ ಜನಾಂಗದಷ್ಟೆ ಪುರಾತನವಾದದ್ದು. ಇಂತಹ ಕಲೆಗೆ ಸಂಬಂಧಿಸಿದಂತೆ ಡಿ.29 ಮತ್ತು 30ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ 5ನೇ ರಾಷ್ಟ್ರೀಯ ಕಳರಿ ಪಯಟ್ಟು ಚಾಂಪಿಯನ್‍ಶಿಪ್ ನಡೆಯಲಿದೆ. ಭಾರತೀಯ ಕಳರಿ ಪಯಟ್ಟು ಫೆಡರೇಷನ್ ಸಹಾಯಕ ಕಾರ್ಯ ದರ್ಶಿ ಡಾ.ಶಾಜಿ ಎಸ್.ಕೊಟ್ಯಾನ್ ಶನಿವಾರ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ…

ಮೈಸೂರಲ್ಲಿ ನ.21ರಿಂದ 25ರವರೆಗೆ 15  ವರ್ಷದೊಳಗಿನವರ ಮುಕ್ತ ಚೆಸ್ ಪಂದ್ಯಾವಳಿ
ಮೈಸೂರು

ಮೈಸೂರಲ್ಲಿ ನ.21ರಿಂದ 25ರವರೆಗೆ 15  ವರ್ಷದೊಳಗಿನವರ ಮುಕ್ತ ಚೆಸ್ ಪಂದ್ಯಾವಳಿ

November 11, 2018

ದೇಶದ 300ಕ್ಕೂ ಹೆಚ್ಚು ಚೆಸ್ ಪಟುಗಳು ಭಾಗವಹಿಸುವ ನಿರೀಕ್ಷೆ ಮೈಸೂರು: ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ನ.21ರಿಂದ 25ರವರೆಗೆ ಅಖಿಲ ಭಾರತ 15 ವರ್ಷದೊಳಗಿನವರ ಮುಕ್ತ ಚೆಸ್ ಪಂದ್ಯಾವಳಿ ಮೈಸೂರು ವಿಶ್ವವಿದ್ಯಾನಿಲಯದ ಜಿಮ್ನಾಸ್ಟಿಕ್ ಹಾಲ್‍ನಲ್ಲಿ ನಡೆಯಲಿದೆ ಎಂದು ಮೈಸೂರು ಚೆಸ್ ಕ್ಲಬ್‍ನ ಉಪಾಧ್ಯಕ್ಷ ನಾಗೇಂದ್ರ ಮುರಳೀಧರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪಂದ್ಯಾ ವಳಿಯ ವಿವರಗಳನ್ನು ನೀಡಿದ ಅವರು, 5 ದಿನಗಳ ಚೆಸ್ ಪಂದ್ಯಾವಳಿಗೆ ನ.21ರಂದು ಬೆಳಿಗ್ಗೆ 9.30 ಗಂಟೆಗೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಶಿಕ್ಷಣ…

1 1,288 1,289 1,290 1,291 1,292 1,611
Translate »