ಕಾನೂನಿನ ಪೂರ್ಣ ಅರಿವಿಲ್ಲದಿದ್ದರೆ ಗೊಂದಲ ಸಹಜ
ಮೈಸೂರು

ಕಾನೂನಿನ ಪೂರ್ಣ ಅರಿವಿಲ್ಲದಿದ್ದರೆ ಗೊಂದಲ ಸಹಜ

November 11, 2018

ಮೈಸೂರು: ಕಾನೂ ನಿನ ಪೂರ್ಣ ಅರಿವಿಲ್ಲದಿದ್ದಾಗ ಗೊಂದಲ ಗಳು ಉಂಟಾಗುವುದು ಸಹಜ. ಇದೇ ರೀತಿ ಜಿಎಸ್‍ಟಿ-ಟಿಡಿಎಸ್ ಕುರಿತಂತೆಯೂ ಜನರು ಗೊಂದಲಕ್ಕೊಳಗಾಗಿದ್ದಾರೆ ಎಂದು ಬೆಂಗಳೂರು ವಾಣಿಜ್ಯ ತೆರಿಗೆ ಅಪರ ಆಯುಕ್ತ ಬಿ.ವಿ.ರವಿ ತಿಳಿಸಿದರು.

ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಶನಿವಾರ ಮೈಸೂರು ಮಹಾನಗರಪಾಲಿಕೆ ಗುತ್ತಿಗೆದಾರರ ಸಂಘ, ಮೈಸೂರು ವೃತ್ತ ಡಾಂಬರ್ ಮಿಶ್ರಣ ಘಟಕ ಮಾಲೀಕರ ಸಂಘ, ಮತ್ತು ಮುಡಾ ಗುತ್ತಿಗೆದಾರರ ಸಂಘ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೈಸೂರು ನಗರ ಮತ್ತು ತಾಲೂಕು ಗುತ್ತಿಗೆ ದಾರರ ಸಂಘ, ಭವಾನಿ ಅಸೋಸಿ ಯೇಟ್ಸ್ ಜಂಟಿ ಸಹಯೋಗದಲ್ಲಿ ಸರಕು ಮತ್ತು ಸೇವಾ ತೆರಿಗೆ ಮತ್ತು ಜಿಎಸ್‍ಟಿ-ಟಿಡಿಎಸ್ ಕುರಿತ ಮುಕ್ತ ಸಮಾಲೋಚನೆ ಯಲ್ಲಿ ಅವರು ಮಾತನಾಡಿದರು.

ಜಿಎಸ್‍ಟಿ ಬರುವ ಮೊದಲು ವ್ಯಾಟ್, ಅದಕ್ಕೂ ಮೊದಲು ಕರ್ನಾಟಕ ಮಾರಾಟ ತೆರಿಗೆ ಇದ್ದಾಗಲೂ ಇದೇ ರೀತಿಯ ಗೊಂದಲ ಗಳು ಸಹಜವಾಗಿತ್ತು. ಇದಕ್ಕೆ ಪ್ರಮುಖ ಕಾರಣವೆಂದರೆ ಆ ಬಗೆಗಿನ ಕಾನೂನಿನ ಅರಿವು ಇಲ್ಲದಿರುವುದು. ಹಾಗಾಗಿ, ಎಲ್ಲರೂ ಕಾನೂನಿನ ಅರಿವು ಪಡೆದುಕೊಂಡರೆ ಯಾವುದೇ ಗೊಂದಲಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ಜಿಎಸ್‍ಟಿ-ಟಿಡಿಎಸ್ ಕುರಿತಂತೆ ಸಾಕಷ್ಟು ಕಾರ್ಯಾಗಾರಗಳನ್ನು ಆಯೋಜಿಸಿ, ಗೊಂದಲ ನಿವಾರಿಸುವ ಪ್ರಯತ್ನ ಮಾಡಿ ದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ, ಜಿಎಸ್‍ಟಿ ಜಾರಿ ನಂತರದ ತೊಂದರೆಗಳ ಬಗ್ಗೆ ಸಭೆಯ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಉಪ ಆಯುಕ್ತ ಡಿ.ಪಿ. ಪ್ರಕಾಶ್, ಸಂಘದ ಕಾರ್ಯದರ್ಶಿಗಳಾದ ಸಿ.ಕರಿಗೌಡ, ಎಂ.ಎನ್.ಹರ್ಷವರ್ಧನ್, ಸಿ.ಡಿ.ಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.

Translate »