ಡಿಸೆಂಬರ್‍ನಲ್ಲಿ ವಿಶೇಷ ಪ್ಯಾಕೇಜ್ ಪ್ರವಾಸ
ಮೈಸೂರು

ಡಿಸೆಂಬರ್‍ನಲ್ಲಿ ವಿಶೇಷ ಪ್ಯಾಕೇಜ್ ಪ್ರವಾಸ

November 13, 2018

ಮೈಸೂರು: ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೋರೇಶನ್ ವತಿ ಯಿಂದ ಡಿಸೆಂಬರ್‍ನಲ್ಲಿ `ಸ್ಪ್ಲೆಂಡೋರ್ಸ್ ಆಫ್ ಡೆಕ್ಕನ್’ ಶೀರ್ಷಿಕೆಯಡಿ ಹೈದರಾಬಾದ್, ಔರಂಗಾಬಾದ್, ಅಜಂತಾ, ಎಲ್ಲೋರಾ, ಮುಂಬೈ ಹಾಗೂ ಗೋವಾಕ್ಕೆ ರೈಲಿನಲ್ಲಿ ಪ್ಯಾಕೇಜ್ ಪ್ರವಾಸ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕಾರ್ಪೋರೇಶನ್‍ನ ಮೈಸೂರು ವಿಭಾಗದ ವ್ಯವಸ್ಥಾಪಕ ಶಿವಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಪ್ಯಾಕೇಜ್ ಪ್ರವಾಸಿ ಕಾರ್ಯಕ್ರಮವಾಗಿದ್ದು, ತಲಾ 10,100 ರೂ. ಪ್ರಯಾಣ ದರ ನಿಗದಿ ಮಾಡಲಾಗಿದೆ. ಐದು ವರ್ಷ ಮೇಲ್ಟಟ್ಟ ಮಕ್ಕಳಿಗೂ ಪೂರ್ಣ ಪ್ರಮಾಣದ ದರ ಪಾವತಿ ಮಾಡ ಬೇಕಿರುತ್ತದೆ. ಪ್ರವಾಸದ ಅವಧಿಯು 9 ರಾತ್ರಿ ಹಾಗೂ 10 ಬೆಳಿಗ್ಗೆಯನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.

ಪ್ರವಾಸಿ ತಾಣಗಳಲ್ಲಿ ರೈಲ್ವೆ ನಿಲ್ದಾಣದಿಂದ ಸ್ಥಳಗಳನ್ನು ವೀಕ್ಷಿ ಸಲು ಸಾರಿಗೆ ವ್ಯವಸ್ಥೆ, ವಸತಿ, ತಿಂಡಿ-ಊಟದ ವ್ಯವಸ್ಥೆ ಪ್ಯಾಕೇಜ್ ನಲ್ಲೇ ಒಳಗೊಂಡಿರುತ್ತದೆ. ಹೀಗಾಗಿ ಇದಕ್ಕೆ ಯಾವುದೇ ಶುಲ್ಕ ಭರಿಸುವ ಅಗತ್ಯವಿಲ್ಲ. ಆದರೆ ಪ್ರವಾಸಿ ತಾಣ ಗಳಲ್ಲಿನ ಪ್ರವೇಶ ಶುಲ್ಕ ಸೇರಿದಂತೆ ಇನ್ನಿತರ ಶುಲ್ಕವನ್ನು ಪ್ರವಾಸಿಗರೇ ಭರಿಸಬೇಕು ಎಂದರು.

ಡಿ.2ರಂದು ತಡರಾತ್ರಿ ಮಧುರೈನಿಂದ ಪ್ರವಾಸಿ ರೈಲು ಸಂಚಾರ ಆರಂಭಿಸಲಿದೆ. ಅಂದು ಸಂಜೆ ಬೆಂಗಳೂರಿನ ವೈಟ್‍ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದ್ದು, ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಿಂದ ಪ್ರವಾಸಕ್ಕೆ ತೆರಳುವವರು ಈ ನಿಲ್ದಾಣದಿಂದ ತಮ್ಮ ಪ್ರಯಾಣ ಆರಂಭಿಸಬೇಕು. ಡಿ.3ರ ರಾತ್ರಿ ಹೈದರಾಬಾದ್‍ಗೆ ರೈಲು ತೆರಳಲಿದ್ದು, ಇಲ್ಲಿಂದ ಪ್ರವಾಸ ಪ್ರಾರಂಭಗೊಳ್ಳಲಿದೆ ಎಂದು ವಿವ ರಿಸಿದರು. ಈ ಪ್ರವಾಸಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ www. irctctourism.com ವೆಬ್‍ಸೈಟ್‍ಗೆ ಭೇಟಿ ನೀಡಬಹುದು. ಜೊತೆಗೆ ಮೈಸೂರು ರೈಲ್ವೆ ನಿಲ್ದಾಣದ ದೂ.ಸಂ.0821-2426001 ಹಾಗೂ ಮೊಬೈಲ್ ಸಂ.9741421486 ಸಂಪರ್ಕಿ ಸಬಹುದು ಎಂದರು. ಕಾರ್ಪೋರೇಶನ್‍ನ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಕಿಶೋರ್ ಸತ್ಯ, ಸಿಬ್ಬಂದಿ ಇಮ್ರಾನ್ ಗೋಷ್ಠಿಯಲ್ಲಿದ್ದರು.

Translate »