ಸಾವಯವ ಕೃಷಿಯತ್ತ ಮರಳದಿದ್ದರೆ ಮನುಷ್ಯ  ವೈದ್ಯಕೀಯ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ
ಮೈಸೂರು

ಸಾವಯವ ಕೃಷಿಯತ್ತ ಮರಳದಿದ್ದರೆ ಮನುಷ್ಯ  ವೈದ್ಯಕೀಯ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ

November 14, 2018

ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಕಳವಳ
ಮೈಸೂರು:  ಪ್ರಸ್ತುತ ದಿನಗಳಲ್ಲಿ ಮಾನವ ಸಂಕುಲ ಸಾವಯವ ಕೃಷಿಯತ್ತ ಮುಖಮಾಡದೆ ಹೋದರೆ ಮುಂದಿನ ದಿನಗಳಲ್ಲಿ ವೈದ್ಯಕೀಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಕಳವಳ ವ್ಯಕ್ತಪಡಿಸಿದರು.
ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಹಾ.ಮಾ.ನಾ. ಪ್ರತಿಷ್ಠಾನದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಡಾ.ಹಾ.ಮಾ.ನಾಯಕ ಸ್ಮಾರಕ ಉಪನ್ಯಾಸ ಕಾರ್ಯ ಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೆ ಪ್ರತಿ ಹಳ್ಳಿಯಲ್ಲಿ ಕೆರೆ ಕಟ್ಟೆಗಳಿದ್ದವು. ಮಳೆಯ ನೀರು ಕಟ್ಟೆಗಳಲ್ಲಿ ಶೇಖರಣೆಯಾಗಿ ನೀರು ಭೂಮಿ ಯೊಳಕ್ಕೆ ಇಂಗುತ್ತಿತ್ತು. ಇದರಿಂದ ಅಂತರ್ಜಲದ ಮಟ್ಟವೂ ಹೆಚ್ಚಾಗುತ್ತಿತ್ತು. ಕೆರೆಯಲ್ಲಿ ಸಿಗುವ ಗೋಡ(ಗೊಬ್ಬರ) ಅನ್ನು ಕೃಷಿಗೆ ಬಳಸುತ್ತಿದ್ದರು. ಜತೆಗೆ ದನಗಳನ್ನು ಸಾಕಿ ಸಗಣಿ, ಗಂಜಲವನ್ನೂ ಬಳಸು ತ್ತಿದ್ದರು. ಇಂದು ಯಂತ್ರಗಳಿಂದ ಭೂಮಿ ಉಳುಮೆ ಮಾಡುತ್ತಿದ್ದು, ದನಗಳು ಇಲ್ಲವಾಗಿವೆ. ಈಗ ಎಲ್ಲದಕ್ಕೂ ಕೆಮಿಕಲ್ ಬಳಸುತ್ತಿದ್ದೇವೆ. ಕೆಮಿಕಲ್ಸ್ ಇಲ್ಲದೆ ಯಾವುದೂ ಇಲ್ಲ. ಮಾವಿನ ಗಿಡ, ಹಣ್ಣುಗಳಿಗೂ ಕೆಮಿಕಲ್ಸ್ ಹಾಕುತ್ತಾರೆ. ಹಾಗಾಗಿ ಯಾವುದೇ ತರಕಾರಿ, ಹಣ್ಣುಗಳನ್ನು ತಿನ್ನಲು ಆಗುವುದಿಲ್ಲ. ಇದೇ ರೀತಿ ಆದರೆ ಮಾನವ ಕುಲಕ್ಕೆ ವೈದ್ಯಕೀಯ ಸಮಸ್ಯೆ ತಲೆದೋರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೆಮಿಕಲ್ಸ್‍ನಿಂದ ಕ್ಯಾನ್ಸರ್: ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಮಿಕಲ್ಸ್ ಉಪಯೋಗಿಸುವುದರಿಂದ 4 ವರ್ಷ ಉತ್ತಮ ಬೆಳೆ ಬರುತ್ತದೆ. ಆದರೆ, ನಂತರ ದಲ್ಲಿ ಭೂಮಿ ಬರಡಾಗಿ ಬೆಳೆ ಬರುವುದಿಲ್ಲ. ಮತ್ತೆ ಸಾವಯವ ಕೃಷಿ ಎಡೆಗೆ ಬರಬೇಕಾಗುತ್ತದೆ. ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಮಿಕಲ್ಸ್ ಬಳಕೆ ಮಾಡುತ್ತಿರು ವುದರಿಂದ ಕ್ಯಾನ್ಸರ್ ಬರುತ್ತಿದೆ ಎಂದರು.

ತಮಿಳುನಾಡು ಆರ್ಥಿಕ ನೆರವು ನೀಡಬೇಕು: ಕೊಡಗಿ ನಲ್ಲಿ ಸಂಭವಿಸಿದ ಭೀಕರ ಮಳೆಯ ನೀರು ಹರಿದು ತಮಿಳುನಾಡಿಗೆ ಹೋಗುತ್ತದೆ. ಕರ್ನಾಟಕದಲ್ಲಿ ಉತ್ತಮ ಮಳೆಯಾದರೆ ನೀರು ಬಿಡಿಸುವಂತೆ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸುತ್ತದೆ. ಆದರೆ, ಭೀಕರತೆಯಿಂದ ನಲುಗಿರುವ ಕೊಡಗಿಗೆ ಆರ್ಥಿಕ ನೆರವು ನೀಡುತ್ತೇನೆಂದು ಹೇಳಿಲ್ಲ. ನಮ್ಮ ಸರ್ಕಾರವೂ ಕೇಳಿಲ್ಲ. ಯಾವ ಸರ್ಕಾರ ಬಂದರೂ ಬುದ್ಧಿ ಇಲ್ಲ. ಇನ್ನು ಮುಂದಾದರು ಈ ಕುರಿತು ಅಂದಾಜು ಪಟ್ಟಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ತಮಿಳುನಾಡಿ ನಿಂದ ಹಣ ತರಿಸಬೇಕು ಎಂದರು.

2 ಲಕ್ಷ ವರ್ಷ ಮಾತ್ರ: ಭೂಮಿ ಮೇಲೆ ಮನುಷ್ಯರು 2 ಲP್ಷÀ ವರ್ಷ ಮಾತ್ರ ಇರಬಹುದು. ಅಷ್ಟರೊಳಗೆ ಸಮುದ್ರ ಉಕ್ಕಬಹುದು. ಹವಾಮಾನ ವೈಪರೀತ್ಯಗಳು, ಅಣುಯುದ್ಧ ಸಂಭವಿಸಬಹುದು ಎಂದು ವಿe್ಞÁನಿ ಗಳು ಹೇಳಿದ್ದಾರೆ. ಹಾಗಾಗಿ ಇನ್ನು ಹೆಚ್ಚುಕಾಲ ಭೂಮಿ ಮೇಲೆ ಜೀವಿಸಬೇಕಾದರೆ ಆಧ್ಯಾತ್ಮ ಬೆಳೆಸಿ, ಸಾವಯವ ಕೃಷಿ ನಡೆಸಬೇಕು. ಗಿಡಮರಗಳನ್ನು ಹೆಚ್ಚು ಬೆಳೆಸಬೇಕು ಎಂದು ಕರೆ ನೀಡಿದರು.

ಕೆರೆಗಳ ಜೀರ್ಣೋದ್ಧಾರ: ಮೊದಲ ಬಾರಿಗೆ ನರೇಂದ್ರ ಮೋದಿ ಅವರು ಗುಜರಾತ್‍ನ ಮುಖ್ಯಮಂತ್ರಿ ಯಾದಾಗ ಕೆರೆ-ಕಟ್ಟೆಗಳನ್ನು ಜೀರ್ಣೋದ್ಧಾರ ಮಾಡಲು ಪ್ರಾರಂಭಿಸಿದರು. ಕೆರೆಯ ಗೋಡನ್ನು(ಗೊಬ್ಬರ) ಕೃಷಿಗೆ ಬಳಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸ ಬೇಕೆಂದು ಕರೆ ನೀಡಿದ್ದರು. ಇಂದು ನಮ್ಮ ರಾಜ್ಯ ದಲ್ಲೂ ಕೆರೆ-ಕಟ್ಟೆಗಳ ಹೂಳೆತ್ತುವ ಕೆಲಸಕ್ಕೆ ಸರ್ಕಾರ ಮನಸ್ಸು ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತ್ಯ ಲೋಕದ ಮಹಾ ಪ್ರತಿಭಾಶಾಲಿ ಕವಿಗಳಾದ ಕಾಳಿದಾಸ ಮತ್ತು ಷೇಕ್ಸ್‍ಪಿಯರ್ ಅವರು ಪರಿಸರ ಕುರಿತ ಬರೆದಿರುವುದನ್ನು ನೋಡಿದರೆ, ಕಾಳಿದಾಸನ ಕವಿತೆಗಳಲ್ಲಿ ಶಾಕುಂತಲೆಯ ನಾಟಕದಲ್ಲಿ ಪ್ರಕೃತಿ-ಮನುಷ್ಯನಿಗೂ ಇರುವ ಸಂಬಂಧ ಕೇವಲ ಸಸ್ಯಶಾಸ್ತ್ರದ ಸಂಬಂಧವಲ್ಲ. ಸಸ್ಯಗಳ ಮೂಲಕವಾಗಿ ಆಧ್ಯಾತ್ಮಿಕ ಸಂಬಂಧವಿದೆ. ಅಷ್ಟು ಚೆನ್ನಾಗಿ ವರ್ಣಿಸಿದ್ದಾರೆ. ಹಾಗೆಯೇ ಷೇಕ್ಸ್‍ಪಿಯರ್‍ನ ಸಾಹಿತ್ಯದಲ್ಲಿ ಪರಿಸರ ವಿರುದ್ಧವಿರುವ ಮನುಷ್ಯನ ತಲ್ಲಣ, ಹಿಂಸೆ, ದುರಾಸೆ ಉಲ್ಲೇಖಿಸಿದ್ದಾರೆ. ಯಾಕೆಂದರೆ ಜುಡಾಯಿಸಂ, ಕ್ರಿಶ್ಚಿಯನ್, ಇಸ್ಲಾಂ ಧರ್ಮಗಳಲ್ಲಿ ಅದು ಅಡಗಿದೆ. ನಮ್ಮ ದೇಶದ ಸಂಸ್ಕøತಿ ಯಲ್ಲಿ ಕಾಳಿದಾಸನ ಚಿಂತನೆ ಅಡಗಿದೆ ಎಂದರು.

Translate »