ಮೈಸೂರು

ಶವಸಂಸ್ಕಾರಕ್ಕೆ ಹೋಗಿ ತಾವೇ ಶವವಾದರು!
ಮೈಸೂರು

ಶವಸಂಸ್ಕಾರಕ್ಕೆ ಹೋಗಿ ತಾವೇ ಶವವಾದರು!

October 17, 2018

ಬೆಟ್ಟದಪುರ: ಶವಸಂಸ್ಕಾರಕ್ಕೆಂದು ಹೋದ ಯುವಕರಿಬ್ಬರು ತಾವೇ ಶವವಾದ ದುರಂತ ಘಟನೆ ಬೆಟ್ಟದಪುರ ಸಮೀಪದ ಮಂಟಿ ಬಿಳಗುಲಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. 80 ವರ್ಷದ ಹಿರಿಯರೊಬ್ಬರು ಗ್ರಾಮದಲ್ಲಿ ಸಾವಿಗೀಡಾಗಿದ್ದು. ಅವರ ಶವಸಂಸ್ಕಾರ ಮುಗಿಸಿದ ನಂತರ ಸ್ನಾನ ಮಾಡಲೆಂದು ಕೆರೆಗೆ ಇಳಿದ ಯುವಕರಿಬ್ಬರು ನೀರು ಪಾಲಾಗಿದ್ದಾರೆ. ಒಂದು ಸಾವು ಸಂಭವಿಸಿ ಕೆಲವೇ ಗಂಟೆಗಳಲ್ಲಿ ಮತ್ತೆರಡು ದುರಂತ ಸಾವುಗಳಿಗೆ ಸಾಕ್ಷಿಯಾಗಿದ್ದಕ್ಕೆ ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ನೀರುಪಾಲಾಗಿರುವ ಮಂಟಿಬಿಳ ಗುಲಿಯ ಮಣಿಕಂಠ(30) ಹಾಗೂ ತಿಮ್ಮನಾಯಕ(28) ಇಬ್ಬರೂ ಕೃಷಿಕರು. ನೆರೆಹೊರೆಯವರಾದ ಇಬ್ಬರೂ…

ಇಂದು ತಲಕಾವೇರಿಯಲ್ಲಿ ತೀರ್ಥೋದ್ಭವ
ಮೈಸೂರು

ಇಂದು ತಲಕಾವೇರಿಯಲ್ಲಿ ತೀರ್ಥೋದ್ಭವ

October 17, 2018

ಮಡಿಕೇರಿ: ನಾಳೆ(ಅ.17) ತಲಕಾವೇರಿಯಲ್ಲಿ ಮಾತೆ ಕಾವೇರಿ ತೀರ್ಥೋದ್ಭವ ಆವಿರ್ಭವಿಸಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡು ಸನ್ನದ್ಧವಾಗಿದೆ. ಅ.17ರ ಸಂಜೆ 6.43 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಲಿದ್ದಾರೆ. ಈ ಬಾರಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದು, ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ತೀರ್ಥೋದ್ಭವದ ವೇಳೆ ಭಕ್ತರ ನೂಕು-ನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕೆಯಾಗಿ ತೀರ್ಥ ಕೊಳದ ಪ್ರವೇಶ ದ್ವಾರದ ಬಳಿ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದೆ. ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು, 3 ಬೃಹತ್ ಎಲ್‍ಇಡಿ ಪರದೆಯನ್ನು ಹಾಕಲಾಗಿದೆ. ಇದರಿಂದ ಸಾರ್ವಜನಿಕರಿಗೆ…

ಪ್ರವಾಸಿ ತಾಣವಾಗಿ ಹೆಬ್ಬಾಳ ಕೆರೆ: ಸಚಿವ ಜಿಟಿಡಿ ಭರವಸೆ
ಮೈಸೂರು

ಪ್ರವಾಸಿ ತಾಣವಾಗಿ ಹೆಬ್ಬಾಳ ಕೆರೆ: ಸಚಿವ ಜಿಟಿಡಿ ಭರವಸೆ

October 16, 2018

ಮೈಸೂರು:  ಮೈಸೂರು ಹೆಬ್ಬಾಳ ಕೆರೆ ಸದ್ಯದಲ್ಲೇ ಮೈಸೂರಿನ ಮತ್ತೊಂದು ಪ್ರಮುಖ ಪ್ರವಾಸಿ ತಾಣವಾಗಲಿದೆ. 40 ಎಕರೆ ವಿಸ್ತಾರವಾದ, ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹಗೊಳ್ಳುವ ಹಸಿರು ವಲಯ. ನಗರದ ಪ್ರವಾಸೋದ್ಯಮ ಸ್ಥಳಗಳ ಪಟ್ಟಿಗೆ ಸೇರ್ಪಡೆ ಯಾಗುವ ಕಾಲ ದೂರವಿಲ್ಲ. ರಾಜ್ಯ ಸರ್ಕಾರ ಮತ್ತು ಇನ್ಫೋಸಿಸ್ ಫೌಂಡೇಷನ್ ಜಂಟಿಯಾಗಿ ಹೆಬ್ಬಾಳ ಕೆರೆಯನ್ನು ಅಭಿವೃದ್ಧಿಪಡಿಸಲಿವೆ. ಈಗಾಗಲೇ ಫೌಂಡೇಷನ್ ಕೋಟ್ಯಾಂತರ ರೂ. ಖರ್ಚು ಮಾಡಿ ಹೆಬ್ಬಾಳ ಕೆರೆಯನ್ನು ನವೀಕರಿಸಿದೆ. ಆದರೆ ಕೆರೆಗೆ ಕೈಗಾರಿಕೆಗಳಿಂದ ಹರಿದು ಬರುತ್ತಿರುವ ಕೊಳಚೆ ನೀರನ್ನು ತಡೆದು, ಪ್ರವಾಸಿ ತಾಣವಾಗಿ…

ದಸರಾ ಉತ್ಸಾಹಕ್ಕೆ ತಣ್ಣೀರೆರಚಿದ ಮಳೆರಾಯ
ಮೈಸೂರು, ಮೈಸೂರು ದಸರಾ

ದಸರಾ ಉತ್ಸಾಹಕ್ಕೆ ತಣ್ಣೀರೆರಚಿದ ಮಳೆರಾಯ

October 16, 2018

ಮೈಸೂರು:  ಮಹಿಳಾ ಮತ್ತು ಮಕ್ಕಳ ದಸರಾ ಹಮ್ಮಿಕೊಂಡಿದ್ದ ಮೈಸೂರಿನ ಜೆಕೆ ಮೈದಾನದಲ್ಲಿ ಮಳೆ ನೀರು ಭಾರೀ ಪ್ರಮಾಣದಲ್ಲಿ ನಿಂತಿದ್ದು, ಕೆಸರು ಗದ್ದೆಯಾದ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿಗೆ ಭೇಟಿ ನೀಡಿದ ನೂರಾರು ಮಂದಿ ಈ ಕೆಸರಿನಲ್ಲಿ ಹೆಜ್ಜೆ ಇಡಲಾಗದೇ ಪರಿತಪಿಸಬೇಕಾಯಿತು. ಭಾನುವಾರ ರಾತ್ರಿ ಸುರಿದ ಮಳೆಗೆ ಜೆಕೆ ಮೈದಾನದ ಬಹುಭಾಗದಲ್ಲಿ ನೀರು ನಿಂತಿದ್ದ ಹಿನ್ನೆಲೆಯಲ್ಲಿ ಒಂದಿಷ್ಟು ಸಂಭ್ರಮಿಸಲು ಬಂದಿದ್ದ ಸಾರ್ವಜನಿಕರು, ಪ್ರವಾಸಿಗರು, ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಅವ್ಯವಸ್ಥೆ ಕಂಡು, ತೀವ್ರ ಬೇಸರ ವ್ಯಕ್ತಪಡಿಸಿದರು. ಈ ಮೈದಾನದಲ್ಲಿ ಮಹಿಳಾ ಉದ್ಯಮಿಗಳು…

ಚಿತ್ರ ತಾರೆಯರ ಮಸ್ತ್ ಡ್ಯಾನ್ಸ್‍ಗೆ ಕುಣಿದು ಕುಪ್ಪಳಿಸಿದ ಯುವಜನ
ಮೈಸೂರು, ಮೈಸೂರು ದಸರಾ

ಚಿತ್ರ ತಾರೆಯರ ಮಸ್ತ್ ಡ್ಯಾನ್ಸ್‍ಗೆ ಕುಣಿದು ಕುಪ್ಪಳಿಸಿದ ಯುವಜನ

October 16, 2018

ಮೈಸೂರು: ಚಿತ್ರ ತಾರೆಯರ ಮನಮೋಹಕ ನೃತ್ಯ, ಹಿನ್ನೆಲೆ ಗಾಯಕರ ಸಂಗೀತ ನಿನಾದ, ಹಾಸ್ಯ ಕಲಾವಿದರ ಝಲಕ್‍ನಿಂದ ಇಂದಿನ ಯುವ ದಸರಾ ರಂಗೇರಿತ್ತು. ಮೈಸೂರಿನ ಮಹಾ ರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಯುವ ದಸರಾದ 4ನೇ ದಿನವಾದ ಸೋಮವಾರ, ಸ್ಯಾಂಡಲ್‍ವುಡ್ ನೈಟ್ಸ್ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಆರಂಭದಲ್ಲಿ ಯಕ್ಷಗಾನದ ಪೋಷಾಕು ಧರಿಸಿದ್ದ ಕಲಾವಿದರು, ವಿಶಿಷ್ಟ ನೃತ್ಯ ಪ್ರದರ್ಶನದೊಂದಿಗೆ ವಿಘ್ನ ವಿನಾಯಕನನ್ನು ಸ್ಮರಿಸಿದರು. ಬಳಿಕ ವೇದಿಕೆಗೆ ಬಂದ ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ನಟಿ ರಜಿನಿ, `ಆಡು ಆಟ ಆಡು…

ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ಹುತಾತ್ಮ ಆರು ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರೂ. ನೆರವು
ಮೈಸೂರು

ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಂದ ಹುತಾತ್ಮ ಆರು ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರೂ. ನೆರವು

October 16, 2018

ಮೈಸೂರು:  ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರ ಕುಟುಂಬಕ್ಕೆ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ತಲಾ 10 ಲಕ್ಷ ರೂ. ನೆರವು ನೀಡಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರು ಹೆಚ್.ಡಿ.ಕೋಟೆ ತಾಲೂಕಿನ ಮಹೇಶ್, ಮೈಸೂರಿನ ರಮೇಶ್, ಹಾಸನದ ನಾಗೇಶ್, ಯೋಗಾನಂದ್, ಸಂದೀಪ್ ಕುಮಾರ್ ಹಾಗೂ ಸಾಗರ್ ಅವರ ಕುಟುಂಬ ಸದಸ್ಯರಿಗೆ ತಲಾ 10 ಲಕ್ಷ ರೂ.ಗಳ ಚೆಕ್ ವಿತರಿಸಿದರು. ನಂತರ ಡಾ.ಸುಧಾಮೂರ್ತಿ ಅವರು ಮಾತನಾಡಿ, ಹೋದ ಪ್ರಾಣವನ್ನು ನಮ್ಮಿಂದ…

ಉಪ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ: ಮುಖ್ಯಮಂತ್ರಿ ಕುಮಾರಸ್ವಾಮಿ ಅಬ್ಬರ
ಮೈಸೂರು

ಉಪ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ: ಮುಖ್ಯಮಂತ್ರಿ ಕುಮಾರಸ್ವಾಮಿ ಅಬ್ಬರ

October 16, 2018

ಬೆಂಗಳೂರು:  ಮೈತ್ರಿ ಸರ್ಕಾರ ಪತನದ ಕನಸು ಕಾಣುತ್ತಿರುವ ಬಿಜೆಪಿಗೆ ರಾಜ್ಯದಲ್ಲಿ ಈಗ ನಡೆಯುತ್ತಿರುವ ಉಪಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇದು ಸೆಮಿಫೈನಲ್ ಆಗಿದ್ದು ಮುಂದಿನ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇದು ಕೈಗನ್ನಡಿ. ತಮ್ಮ ಸರ್ಕಾರವನ್ನು ಅಪವಿತ್ರ ಮೈತ್ರಿ ಅಂತ ಟೀಕಿಸುತ್ತಿ ರುವವರಿಗೆ ಫಲಿತಾಂಶ ಪ್ರಜಾಪ್ರಭುತ್ವದಲ್ಲಿ ಜನ ಕೊಡುವ ನಿರ್ಧಾರವಾಗಿರುತ್ತದೆ. ಜೆಡಿಎಸ್ ಪಕ್ಷದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ದಿನದಿಂದಲೂ ಸರ್ಕಾರ ಉರುಳಿಸಲು…

ಗ್ರಾಮೀಣ ಜನರಿಗೆ `ದಸರಾ ದರ್ಶನ’
ಮೈಸೂರು, ಮೈಸೂರು ದಸರಾ

ಗ್ರಾಮೀಣ ಜನರಿಗೆ `ದಸರಾ ದರ್ಶನ’

October 16, 2018

ಮೈಸೂರು: ಗ್ರಾಮೀಣ ಮಹಿಳೆಯರು, ವೃದ್ಧರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ದಸರಾ ದರ್ಶನಕ್ಕೆ ಅನುವಾಗುವಂತೆ ಕನಿಷ್ಠ ದರದಲ್ಲಿ ಬಸ್ ಸೌಕರ್ಯಕ್ಕೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೋಮವಾರ ಮೈಸೂರಲ್ಲಿ ಚಾಲನೆ ನೀಡಿದರು. ಇದ ರೊಂದಿಗೆ ಚಾಮುಂಡಿಬೆಟ್ಟ, ಮೃಗಾ ಲಯ, ಅರಮನೆ ತೋರಿಸಿ ಮತ್ತೆ ಊರಿಗೆ ಕರೆದೊಯ್ದು ಬಿಡಲಾಗುವುದು. ಮೈಸೂರಿನ ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಬಳಿ ಮೈಸೂರು ದಸರಾ ದರ್ಶನ ಉಪ ಸಮಿತಿ ಆಯೋಜಿ ಸಿರುವ ಕಾರ್ಯಕ್ರಮದಲ್ಲಿ ಮೈಸೂರು ತಾಲೂಕಿನ ದಸರಾ ದರ್ಶನದ 8 ಕೆಎಸ್ ಆರ್‍ಟಿಸಿ…

ರಸ್ತೆ ಅಗಲೀಕರಣ: ಟಿಪ್ಪು ವೃತ್ತದ ಬಳಿ ಅವೈಜ್ಞಾನಿಕ ಕಾಮಗಾರಿ
ಮೈಸೂರು

ರಸ್ತೆ ಅಗಲೀಕರಣ: ಟಿಪ್ಪು ವೃತ್ತದ ಬಳಿ ಅವೈಜ್ಞಾನಿಕ ಕಾಮಗಾರಿ

October 16, 2018

ಮೈಸೂರು:  ಮೈಸೂ ರಿನ ಫೌಂಟೇನ್ ವೃತ್ತದಿಂದ ಕೊಲಂ ಬಿಯಾ ಏಷ್ಯಾ ಆಸ್ಪತ್ರೆ ಬಳಿ ಹಳೆ ಟೋಲ್ ಗೇಟ್ ವರೆಗೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಟಿಪ್ಪು ವೃತ್ತದ ಬಳಿ ರಸ್ತೆ ವಿಭಜಕ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಅರ್ಧಕ್ಕೆ ಮೊಟಕು ಗೊಳಿಸಿರುವುದರಿಂದ ಅಪಘಾತಕ್ಕೆ ಆಹ್ವಾನ ನೀಡುವಂತಾಗಿದೆ. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ರಿಂಗ್‍ರಸ್ತೆಯ ಜಂಕ್ಷನ್ ನಿಂದ ಮೈಸೂರು ನಗರದ ಹಳೆ ಟೋಲ್ ಗೇಟ್‍ವರೆಗೆ ಈಗಾಗಲೇ 10 ಪಥವುಳ್ಳ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಹಳೆಯ ಟೋಲ್‍ಗೇಟ್‍ನಿಂದ ಫೌಂಟೇನ್ ವೃತ್ತದ ವರೆಗೆ (2…

ನಂಜನಗೂಡಿನಲ್ಲಿ ಅದ್ಧೂರಿ ಗ್ರಾಮೀಣ ದಸರಾ
ಮೈಸೂರು

ನಂಜನಗೂಡಿನಲ್ಲಿ ಅದ್ಧೂರಿ ಗ್ರಾಮೀಣ ದಸರಾ

October 16, 2018

ನಂಜನಗೂಡು:  ಸ್ಥಳೀಯ ಸಂಸ್ಕೃತಿಯನ್ನು ಸಾರುವ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಸ್ಟ್ರೀಟ್ ಫೆಸ್ಟಿವಲ್ ನಂತಹ ಪಾಶ್ಚಿಮಾತ್ಯ ಆಚರಣೆಯನ್ನು ಸೇರಿಸುವ ಮೂಲಕ ಪಾರಂಪರಿಕ ದಸರಾ ಹೊರತಾದ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇದು ಸರಿಯಲ್ಲ ಎಂದು ಶಾಸಕ ಬಿ. ಹರ್ಷವರ್ಧನ್ ಬೇಸರಿಸಿದ್ದಾರೆ. ಅವರು ಶ್ರೀಕಂಠೇಶ್ವರ ದೇವಾಲಯದ ಕಲಾಮಂದಿರದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದರು. ರಾಜರ ಕಾಲದ ದಸರಾ ನಾಡಿನ ಕಲೆ, ಸಂಸ್ಕೃತಿ ಗ್ರಾಮೀಣ ಸೊಗಡನ್ನು ಬಿಂಬಿಸುವ, ಅದನ್ನು ಸಂರಕ್ಷಿಸುವಂತಹ ಹಬ್ಬವಾಗಿ ಆಚರಿಸಲ್ಪಡುತ್ತಿತ್ತು. ಆದರೆ ಇತ್ತೀಚಿನ…

1 1,325 1,326 1,327 1,328 1,329 1,611
Translate »